ಈ ದ್ವೀಪದಲ್ಲಿ ರೆಡಿಯಾಗುತ್ತೆ ಬುಸುಗುಡುವ ಹಾವಿನಿಂದ ಕಿಕ್ಕೇರುವ ವಿಸ್ಕಿ: ಹೇಗಿರುತ್ತೆ ನೋಡಿ

Published : Dec 07, 2023, 06:53 PM ISTUpdated : Dec 08, 2023, 10:36 AM IST
ಈ ದ್ವೀಪದಲ್ಲಿ ರೆಡಿಯಾಗುತ್ತೆ ಬುಸುಗುಡುವ ಹಾವಿನಿಂದ ಕಿಕ್ಕೇರುವ ವಿಸ್ಕಿ: ಹೇಗಿರುತ್ತೆ ನೋಡಿ

ಸಾರಾಂಶ

 ಕೊಳೆತ ಹಣ್ಣುಗಳ ಜೊತೆ ಚರಂಡಿ ನೀರಿನಿಂದಲೂ ವೈನ್ ತಯಾರಿಸುವ ವಿಚಾರ ನಿಮಗೆ ತಿಳಿದಿರಬಹುದು. ಆದರೆ ಬುಸುಗುಡುವ Snakeನ ದೇಹದಿಂದ Whiskey ತಯಾರಿಸುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ? ಕೇಳುವುದಕ್ಕೆ ಶಾಕಿಂಗ್ ಎನಿಸಿದರು ಇದು ಸತ್ಯ

ದ್ರಾಕ್ಷಿ, ಹಲಸಿನಹಣ್ಣು ವೀಳ್ಯದೆಲೆ, ಭತ್ತ, ಗೋಧಿ, ಸಣ್ಣ ಮೆಣಸು ಮುಂತಾದವುಗಳಿಂದ ವೈನ್ ತಯಾರಿಸುವುದು ನಿಮಗೆ ತಿಳಿದಿರಬಹುದು. ನೀವು ತಯಾರಿಸಿರಲೂಬಹುದು. ಮಾಗಿದ, ಕೊಳೆತ ಹಣ್ಣುಗಳ ಜೊತೆ ಚರಂಡಿ ನೀರಿನಿಂದಲೂ ವೈನ್ ತಯಾರಿಸುವ ವಿಚಾರ ನಿಮಗೆ ತಿಳಿದಿರಬಹುದು. ಆದರೆ ಬುಸುಗುಡುವ ಹಾವಿನ ದೇಹದಿಂದ ವೈನ್ ತಯಾರಿಸುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ? ಕೇಳುವುದಕ್ಕೆ ಶಾಕಿಂಗ್ ಎನಿಸಿದರು ಇದು ಸತ್ಯ.

ಹಾವಿನ ವಿಷದ (Snake venom)ಸಣ್ಣದೊಂದು ಡ್ರಾಪ್ ನಮ್ಮನ್ನು ಪರಲೋಕಕ್ಕೆ ಕಳುಹಿಸುವುದು. ಇದೇ ಕಾರಣಕ್ಕೆ ಹಾವು ನೋಡಿದ ಕೂಡಲೇ ನಾವೆಲ್ಲಾ ಹಾವು ಎಂದು ಹೌಹಾರಿ ಬಹುದೂರ ಓಡಿದರೆ, ವಿದೇಶವೊಂದರಲ್ಲಿ ಈ ಹಾವುಗಳನ್ನು ಹಿಡಿದು ಬಾಟಲೊಳಗೆ ತುಂಬಿಸಿ ಅದರ ವೈನ್ ಮಾಡುತ್ತಾರೆ. ಕಲ್ಪಿಸಿಕೊಳ್ಳಲು ಅಸಹ್ಯ ಆಘಾತಕಾರಿ ಎನಿಸಿದರು ಈ ವಿಚಾರ ಸತ್ಯ. 

ಮೀನುಗಾರರ ಬಲೆ ಸೇರಿ, ತೀರಕ್ಕೆ ಬಂದ ಅಪರೂಪದ ಅತೀ ವಿಷಕಾರಿ ಸಮುದ್ರ ಹಾವು

ಜಪಾನ್‌ನಲ್ಲಿ ಈ ಹಾವಿನ ವಿಸ್ಕಿಯನ್ನು ತಯಾರಿಸಲಾಗುತ್ತದೆ.  ಹಬುಶು ಎಂದು ಈ ಹಾವಿನ ವೈನ್‌ನ್ನು (Snake Whisky)ಕರೆಯಲಾಗುತ್ತದೆ. ಜಪಾನ್‌ನ ಒಕಿನವಾ ದ್ವೀಪದಲ್ಲಿ ಇದನ್ನು ತಯಾರಿಸಲಾಗುತ್ತದೆಯಂತೆ. ಆದರೆ ಹೇಗೆ ತಯಾರಿಸಲಾಗುತ್ತದೆ ಎಂದು ವಿವರವಿಲ್ಲ, ಆದರೆ ಇದು ಕೇವಲ ಪಾನೀಯವಲ್ಲ, ಇದೊಂದು ಆರೋಗ್ಯಕರ ಟಾನಿಕ್ ಎಂದು ಇದರ ತಯಾರಕರು ಹೇಳುತ್ತಾರೆ. ಕೇವಲ ಜಪಾನ್ ಮಾತ್ರವಲ್ಲದೇ ವಿಯೆಟ್ನಾಂನ ದ್ವೀಪವೊಂದರಲ್ಲೂ ಪ್ರವಾಸಿಗರಿಗೆ ಹಾವಿನ ವೈನ್‌ ಅನ್ನು ಸರ್ವ್‌ ಮಾಡುತ್ತಾರೆ. 

ದ್ವೀಪಗಳಲ್ಲಿ ಮಾತ್ರ ಕಾಣಸಿಗುವ  ಫಾಂಗ್-ಬೇರಿಂಗ್ ಪಿಟ್ ವೈಪರ್ (fang-bearing pit viper)ಎಂದು ಕರೆಯಲ್ಪಡುವ ಹಾವನ್ನು ತಿಂಗಳ ಕಾಲ ವಿಸ್ಕಿಯಲ್ಲಿ ಮುಳುಗಿಸಿಡಲಾಗುತ್ತದೆ. ಅವಮೊರಿ ಎಂದು ಕರೆಯಲಾಗುವ ಒಕಿನವನ್ ಅಕ್ಕಿಯಿಂದ ತಯಾರಿಸಿದ ಸ್ಪಿರಿಟ್‌ನಲ್ಲಿಯೂ ಈ ಹಾವನ್ನು  ಒಂದು ದಿನದ ಕಾಲ ನೆನೆಸಿಡಲಾಗುತ್ತದೆಯಂತೆ. ಇದು ಆ ಹಾವಿನ ವಿಷವನ್ನು ತಟಸ್ಥಗೊಳಿಸುತ್ತದೆಯಂತೆ. ಇದರಿಂದ ಹಾವು ಮಾತ್ರ ರಬ್ಬರ್‌ ಹಾವಿನಂತೆ ಆಗುತ್ತದೆಯಂತೆ. ನಂತರ ಈ ಹಾವನ್ನು ಮುಳುಗಿಸಿಟ್ಟ ವೈನ್ ಅನ್ನು ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತದೆ. ಸಿಪ್ ಲೆಕ್ಕದಲ್ಲಿ ಸಾವಿರಾರು ರೂ ವಸೂಲಿ ಮಾಡಲಾಗುತ್ತದೆ. 

ಹಾವಿಗೂ ಟ್ರಾಫಿಕ್ ಪೊಲೀಸರ ಕಾಟನಾ? ಹೆಲ್ಮೆಟ್ ಒಳಗಿನಿಂದಲೇ ಹೆಡೆಯೆತ್ತಿ ಬುಸುಗುಟ್ಟಿದ ನಾಗರಹಾವು

ಹಾವು ಎಂದರೆ ಹೆದರುವವರು ಕೂಡ ಅದರ ವೈನ್ ಬಗ್ಗೆ ಮಾತ್ರ ಆಕರ್ಷಿತರಾಗುತ್ತಿದ್ದು, ಇದರಿಂದ ವಿಶ್ವದಾದ್ಯಂತ ಇರುವ ಪ್ರವಾಸಿಗರು ಈ ಹಾವಿನ ವಿಷದ ರುಚಿ ನೋಡಲು ಹಾತೊರೆಯುತ್ತಾರೆ. ಟ್ರಾವೆಲ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು,  ನೀವು ಈ ಜಪಾನೀಸ್ ಸ್ನೇಕ್ ವಿಸ್ಕಿಯನ್ನು ಕುಡಿಯಲು ಬಯಸುವಿರಾ ಎಂದು ಕೇಳಿದ್ದಾರೆ. ಇದನ್ನು ನೋಡಿದ ಒಬ್ಬರು ಕನಿಷ್ಠ ಒಮ್ಮೆ ಆದರೂ ಈ ಸ್ನೇಕ್ ವಿಸ್ಕಿಯನ್ನು ಪ್ರಯತ್ನಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

ಅನೇಕರು ಹಾವನ್ನು ಈ ರೀತಿ ಬಳಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಕೆಲ ಕ್ಷಣದ ಸುಖಕ್ಕಾಗಿ ಹಾವನ್ನು ಶವ ಮಾಡುತ್ತಿದ್ದಾರೆ ಎಂದು ಅನೇಕರು ಕಿಡಿ ಕಾರಿದ್ದಾರೆ. ಹಾವಿನ ವಿಷಕ್ಕಾಗಿಯೇ ಹಾವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಇವುಗಳ ವಿಷಕ್ಕೆ ಕೋಟ್ಯಾಂತರ ರೂ ಬೆಲೆ ಇದೆ. ಇತ್ತೀಚೆಗಷ್ಟೇ ರೇವ್‌ ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸುತ್ತಿದ್ದರು ಎಂದು ದೆಹಲಿ ಪೊಲೀಸರು ಹಿಂದಿ ಬಿಗ್ಬಾಸ್ (Hindi Bigboss) ವಿನ್ನರ್ ಎಲ್ವೀಸ್ ಯಾದವ್ ಸೇರಿದಂತೆ ಹಲವರನ್ನು ಬಂಧಿಸಿದ್ದನ್ನು ನೀವು ಗಮನಿಸಿರಬಹುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ