ವಿಶ್ವದ ಅತೀ ಹಿರಿಯ ಶ್ವಾನ: ಗಿನ್ನೆಸ್ ಪುಟ ಸೇರಿದ ಅಮೆರಿಕಾದ ಡಾಗ್

Published : Jun 03, 2022, 11:07 AM IST
ವಿಶ್ವದ ಅತೀ ಹಿರಿಯ ಶ್ವಾನ: ಗಿನ್ನೆಸ್ ಪುಟ ಸೇರಿದ ಅಮೆರಿಕಾದ ಡಾಗ್

ಸಾರಾಂಶ

ಶ್ವಾನವೊಂದು ಗಿನ್ನೆಸ್ ಪುಟ ಸೇರಿದೆ. ಜೀವಂತವಿರುವ ಅತ್ಯಂತ ಹಿರಿಯ ಶ್ವಾನ ಎಂಬ ಹೆಗ್ಗಳಿಕೆಗೆ ಅಮೆರಿಕಾದ ಶ್ವಾನವೊಂದು 22 ವರ್ಷದ ಶ್ವಾನವೊಂದು ಪಾತ್ರವಾಗಿದೆ. 

ಶ್ವಾನವೊಂದು ಗಿನ್ನೆಸ್ ಪುಟ ಸೇರಿದೆ. ಜೀವಂತವಿರುವ ಅತ್ಯಂತ ಹಿರಿಯ ಶ್ವಾನ ಎಂಬ ಹೆಗ್ಗಳಿಕೆಗೆ ಅಮೆರಿಕಾದ ಶ್ವಾನವೊಂದು 22 ವರ್ಷದ ಶ್ವಾನವೊಂದು ಪಾತ್ರವಾಗಿದೆ. ಸಾಮಾನ್ಯವಾಗಿ ಶ್ವಾನಗಳ ಜೀವಿತಾವಧಿ 10 ರಿಂದ 13 ವರ್ಷಗಳು. ಆದರೆ ಅಮೆರಿಕಾದ ಶ್ವಾನವೊಂದು 22 ವರ್ಷ ಪೂರ್ಣಗೊಳಿಸಿದ್ದು, ಜಗತ್ತಿನ ಅತ್ಯಂತ ಹಿರಿಯ ಆರೋಗ್ಯಯುತ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಗಿನ್ನೆಸ್‌ ಬುಕ್ ಆಪ್‌ ರೆಕಾರ್ಡ್ ಪುಟವನ್ನು ಶ್ವಾನ ಸೇರಿದೆ. 

ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಗುರುತಿಸಿರುವಂತೆ ಅಮೆರಿಕಾದ ಸೌತ್ ಕೆರೊಲಿನಾದ 22 ವರ್ಷದ ಟಾಯ್ ಫಾಕ್ಸ್ ಟೆರಿಯರ್ ಈಗ  ಜೀವಂತವಾಗಿರುವ ಅತ್ಯಂತ ಹಳೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳು ಫಾಕ್ಸ್ ಟೆರಿಯರ್ ಪೆಬಲ್ಸ್ ಅನ್ನು 22 ವರ್ಷ ವಯಸ್ಸಿನ ವಿಶ್ವದ ಅತ್ಯಂತ ಹಳೆಯ ನಾಯಿ ಎಂದು ಪ್ರಮಾಣೀಕರಿಸಿದೆ. ನಾಲ್ಕು ಪೌಂಡ್ ತೂಗುವ ಈ ಶ್ವಾನಕ್ಕೆ ಪ್ರಸ್ತುತ 22 ವರ್ಷ 59 ದಿನಗಳ ಪ್ರಾಯವಾಗಿದೆ. 

ಪೆಬಲ್ಸ್ ಅಧಿಕೃತವಾಗಿ ಜೀವಂತವಾಗಿರುವ ಅತ್ಯಂತ ಹಳೆಯ ನಾಯಿ. ಈ ಪ್ರಚಂಡ ಗೌರವ ಮತ್ತು ನೀವು ನಮಗೆ ಕಳುಹಿಸಿದ ಸುಂದರವಾದ ಫಲಕಕ್ಕಾಗಿ ಗಿನ್ನೆಸ್‌ಗೆ ಧನ್ಯವಾದಗಳು. ಇದಕ್ಕಿಂತ ಹೆಚ್ಚು ಪೆಬಲ್ಸ್‌ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ಶ್ವಾನ ಪೆಬಲ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಫೋಟೋವನ್ನು ಫೋಸ್ಟ್ ಮಾಡಲಾಗಿದೆ. 

ಮಾಲೀಕನ ಸಾವಿನಿಂದ ಆಘಾತಕ್ಕೀಡಾದ ಶ್ವಾನ: ಆಹಾರ ತಿನ್ನದ ಸಿಧು ಮೂಸೆವಾಲಾ ನಾಯಿ

ಕೆಲವು ದಿನಗಳ ಹಿಂದೆ  21 ವರ್ಷದ ಚಿಹೋವಾ ಟೋಬಿಕೀತ್‌ಗೆ (chihuahua TobyKeith) ಎಂಬ ಶ್ವಾನಕ್ಕೆ ಅತ್ಯಂತ ಹಿರಿಯ ಶ್ವಾನ ಎಂಬ ಬಿರುದನ್ನು ಗಿನ್ನೆಸ್ ನೀಡಿತ್ತು. ಆದರೆ ಈ ಸುದ್ದಿ ಕೇಳಿದ ನಂತರ ಈ ಪೆಬಲ್‌ನ ಪೋಷಕರಾದ ಗ್ರೆಗೊರಿಸ್ ಅವರು ತಮ್ಮ ಶ್ವಾನಕ್ಕೆ ಅದಕ್ಕಿಂತ ಹೆಚ್ಚು ವಯಸ್ಸಾಗಿದೆ ಎಂದು ಅರಿತುಕೊಂಡರು.

ನಮ್ಮ ಸ್ನೇಹಿತರು ಮತ್ತು ಕುಟುಂಬವು 21 ವರ್ಷದ ನಾಯಿಯೊಂದು ದಾಖಲೆಯನ್ನು ಪಡೆದ ಬಗ್ಗೆ ಅವರು ನೋಡಿದ ವಿಚಾರವನ್ನು  ನಮಗೆ ಸಂದೇಶ ಕಳುಹಿಸಲು ಮತ್ತು ಕರೆ ಮಾಡಲು ಪ್ರಾರಂಭಿಸಿದರು. ಈ ವೇಳೆ ನಾನು ಅದಕ್ಕಿಂತ ಹೆಚ್ಚು ಪ್ರಾಯದ ನಮ್ಮ ಶ್ವಾನ ಇರುವುದರ ಬಗ್ಗೆ ಅರ್ಜಿ ಸಲ್ಲಿಸಿದೆ ಜೂಲಿ ಗ್ರೆಗೊರಿ (Julie Gregory) ಹೇಳಿದರು.

50 ವರ್ಷಗಳಿಂದ ನಿರಂತರ ಬರ್ಗರ್ ತಿಂದು ಗಿನ್ನೆಸ್ ಪುಟ ಸೇರಿದ

ಈ ಶ್ವಾನ ಪೆಬಲ್ ರಾಕಿ ಎಂಬ ಪಾರ್ಟನರ್‌ ಅನ್ನು ಹೊಂದಿದ್ದ ಆದರೆ ಆತ 16ನೇ ವಯಸ್ಸಿಗೆ ಪ್ರಾಣ ಬಿಟ್ಟ ಇಬ್ಬರು ಜೊತೆಯಾಗಿ ಒಟ್ಟು 24 ನಾಯಿಮರಿಗಳಿಗೆ ಫೋಷಕರಾಗಿದ್ದರು ಎಂದು ಗ್ರೆಗೋರಿ ಹೇಳಿದರು. ಆರಂಭದಲ್ಲಿ, ಗ್ರೆಗೋರಿ ಅವರ ಕುಟುಂಬವು ದೊಡ್ಡ ತಳಿಯ ನಾಯಿಯನ್ನು ದತ್ತು ತೆಗೆದುಕೊಳ್ಳಲು ಆಶಿಸಿತ್ತು. ಆದರೆ ಅವರು ಸಣ್ಣ ಗಾತ್ರದ ನಾಯಿಮರಿಯನ್ನು ಅದರ ದೊಡ್ಡ ವ್ಯಕ್ತಿತ್ವದಿಂದ ಕೊಳ್ಳಲು ಬಯಸಿದರು ಎಂದು ವೆಬ್‌ಸೈಟ್ ತಿಳಿಸಿದೆ.  ಅವಳು ಹಳ್ಳಿಗಾಡಿನ ಸಂಗೀತವನ್ನು ಕೇಳುತ್ತಾ ತನ್ನ ದಿನಗಳನ್ನು ಕಳೆಯುತ್ತಾಳೆ ಮತ್ತು ಸಂಜೆ 5 ಗಂಟೆಯವರೆಗೆ ಮಲಗುತ್ತಾಳೆ ಮತ್ತು ರಾತ್ರಿಯಿಡೀ ಎಚ್ಚರವಾಗಿರುತ್ತಾಳೆ.

ಪಶುವೈದ್ಯರು ಆಕೆಗೆ ಬೆಕ್ಕಿನ ಆಹಾರವನ್ನು ನೀಡಿದ್ದರು. ಇದು ನಾಯಿಯ ಆಹಾರಕ್ಕಿಂತ ಹೆಚ್ಚು ಮಾಂಸ ಆಧಾರಿತ ಪ್ರೋಟೀನ್‌  ಹೊಂದಿದೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಈ ದಾಖಲೆಯಿಂದ ನಮಗೆ ತುಂಬಾ ಖುಷಿಯಾಗಿದೆ. ಪೆಬಲ್ ನಮ್ಮ ಏಳು ಬೀಳುಗಳ ಮಧ್ಯೆ ಸದಾ ಜೊತೆಗಿದೆ ನಮ್ಮ ಬದುಕಿಗೆ ದಾರಿ ದೀಪವಾಗಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!