ತಬ್ಕೊಂಡು ಮಲಗಿದ್ಲು..ಮದುವೆ ದಿನವೇ ದೊಡ್ಡ ಪರದೆಯಲ್ಲಿ ಬೆತ್ತಲಾದಳು!

By Suvarna News  |  First Published Jan 2, 2020, 6:26 PM IST

ಭಾವನೊಂದಿಗೆ ಸಂಬಂಧ ಹೊಂದಿದ್ದ ನಾದಿನಿ/ ಗುಟ್ಟು ಗೊತ್ತಾದರೂ ಮದುವೆ ದಿನದವರೆಗೆ ಕಾದ ವರ/ ಮದುವೆ ಮಂಟಪದಲ್ಲಿಯೇ ಸೆಕ್ಸ್ ವಿಡಿಯೋ ರಿಲೀಸ್


ಬೀಜಿಂಗ್(ಡಿ. 02)  ಪ್ರೀತಿಸಿದ ಹುಡುಗನ ಜೊತೆ ಮದುವೆ ನಿಶ್ಚಯವಾಗಿ ಆಕೆ ಬಾಳಿ ಬದುಕಬೇಕಿತ್ತು. ಆದರೆ ಮದುವೆಗೆ ಮುನ್ನವೇ ವಾಂಛೆ ತೀರಿಸಿಕೊಳ್ಳಲು ತನ್ನ ಅಕ್ಕನ ಗಂಡನೊಂದಿಗೆ ಆಕೆ ಹಾಸಿಗೆ ಹಂಚಿಕೊಂಡಿದ್ದಳು.

ಈ ವಿಷಯ ವರನಿಗೆ ಗೊತ್ತಿದ್ದರೂ  ಆತ ದಿನವೊಂದಕ್ಕೆ ಕಾಯುತ್ತಿದ್ದ. ಇದನ್ನು ತಿಳಿದು ವರ ಮದುವೆಯ ಮಂಟಪದಲ್ಲಿಯೇ ಅವರಿಬ್ಬರ ಸೆಕ್ಸ್ ವಿಡಿಯೋವನ್ನು ಬಹಿರಂಗಪಡಿಸಿ ಸೇಡು ತೀರಿಸಿಕೊಂಡಿದ್ದಾನೆ.

ಬಸ್ ನಲ್ಲಿಯೇ ನಾಚಿಕೆ ಬಿಟ್ಟ ಜೋಡಿಯ ಸಂಭೋಗ ವೈಭವ

Tap to resize

Latest Videos

ಚೀನಾದ ಫೂಜಿಯಾನ್ ಪ್ರದೇಶದಲ್ಲಿ ನಡೆದ ಪ್ರಕರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್.  ವಧು ವೇದಿಕೆ ಮೇಲೆ ಬಂದು ನಿಲ್ಲುತ್ತಾಳೆ.  ನೆಂಟರಿಷ್ಟರು ಹಾರೈಸುತ್ತಿರುತ್ತಾರೆ.  ಅಷ್ಟರಲ್ಲಿ ಒಂದು ವಿಡಿಯೋ ದೊಡ್ಡ ಪರದೆ ಮೇಲೆ ಪ್ಲೇ ಆಗುತ್ತದೆ!

ಈಗ ಶಾಕ್ ಆಗಬೇಕಾದ ಸರದಿ ವಧುವಿನದ್ದು. ನೆಂಟರಿಷ್ಟರ ಎದುರೇ ಆಕೆಯ ಮಾನ ಹರಾಜಾಗುತ್ತದೆ. ವಧು ತನ್ನ ಕೈಯಲ್ಲಿದ್ದ ಹೂಗುಚ್ಛವನ್ನು ಎಸೆದು ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ.

ಹಾಸನ:  ಕೆಎಸ್‌ಆರ್ ಟಿಸಿ ಬಸ್ ನಲ್ಲಿಯೇ ವಿದ್ಯಾರ್ಥಿಗಳ ರೊಮಾನ್ಸ್

ಅಕ್ರಮ ಸಂಬಂಧ ವರನಿಗೆ ಗೊತ್ತಾಗಿದ್ದು ಹೇಗೆ?  ವರ ಮತ್ತು ವಧು ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕಳೆದ ಆರು ತಿಂಗಳು ಹಿಂದೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರ ತಮ್ಮ ಭವಿಷ್ಯ ಚೆನ್ನಾಗಿರಲಿ ಎಂದು ಮನೆಯೊಂದನ್ನು ಕಟ್ಟಿಸಿದ್ದನು. ಅಲ್ಲದೇ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ ಹಾಕಿಸಿದ್ದ.

ವಧುವಿನ ಅಕ್ಕ ಗರ್ಭಿಣಿಯಾಗಿದ್ದಳು. ಈ ಸಂದರ್ಭ ವಧು ಮತ್ತು ಆಕೆಯ ಭಾವನ ನಡುವೆ ಕುಚ್ ಕುಚ್ ಆರಂಭವಾಗಿದೆ.  ವರ ಕಟ್ಟಿಸಿದ್ದ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಭಾವನೊಂದಿಗೆ ಸೇರಿ ವಾಂಛೆ ತೀರಿಸಿಕೊಳ್ಳುತ್ತಿದ್ದಳು. ಸಿಸಿ ಕ್ಯಾಮೆರಾದಲ್ಲಿ ಇವರ ರಹಸ್ಯ ಸಂಬಂಧ ರೆಕಾರ್ಡ್ ಆಗಿತ್ತು.

ಅದೊಂದು ದಿನ ವಿಡಿಯೋ ಹುಡುಗನ ಕೈಗೆ ಸಿಗುತ್ತದೆ. ದಿನವೊಂದಕ್ಕೆ ಕಾದ ಹುಡುಗ ಮದುವೆ ಮಂಟಪದಲ್ಲಿಯೇ ಸೇಡು ತೀರಿಸಿಕೊಳ್ಳುತ್ತಾನೆ. ಮದುವೆ ಕ್ಯಾನ್ಸಲ್ ಮಾಡಿ ಹೆಜ್ಜೆ ಇಡುತ್ತಾನೆ.


 

click me!