
ಇಂಡೋನೇಷಿಯಾ: ಇಂದು ಮದುವೆ ಅಂದ್ರೆ ಮೊದಲು ಡೇಟಿಂಗ್ ಮಾಡಬೇಕು ಎಂದು ಯುವ ಜನತೆ ಹೇಳುತ್ತಾರೆ. ಯುವಕ/ತಿಯರನ್ನು ಭೇಟಿ ಮಾಡಿಸಲು ಹೊಸ ಹೊಸ ಆಪ್‌ಗಳು ಇಂಟರ್ನೆಟ್ ಲೋಕಕ್ಕೆ ದಾಂಗುಡಿ ಇಡುತ್ತಿವೆ. ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಮದುವೆಯಾದ 26 ವರ್ಷದ ಯುವಕ ಇಂದು ತಲೆ ಮೇಲೆ ಕೈ ಹೊತ್ತುಕೊಂಡು ಕಣ್ಣೀರು ಹಾಕುತ್ತಿದ್ದಾನೆ. ಕೊನೆಗೆ ಈ ನಿಗೂಢ ಮದುವೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ
ಏನಿದು ಘಟನೆ?
26 ವರ್ಷದ ಎಕೆ ಹೆಸರಿನ ಯುವಕನಿಗೆ ಸೋಶಿಯಲ್ ಮೀಡಿಯಾದಲ್ಲಿ ಅದಿಂಡಾ ಕಂಜಾ ಅಜ್ಜಹರಾ ಹೆಸರಿನ ಯುವತಿ ಪರಿಚಯವಾಗಿತ್ತು. ಎಕೆಗೆ ಮೊದಲ ಭೇಟಿಯಲ್ಲಿಯೇ ಅದಿಂಡಾ ಮೇಲೆ ಲವ್ ಆಗಿತ್ತು. ಅದಿಂಡಾ ಯಾವಾಗಲೂ ಹಿಜಾಬ್ ಧರಿಸುತ್ತಿರುವ ಕಾರಣ ಎಕೆಗೆ ಮದುವೆಗೂ ಮೊದಲು ಗೆಳತಿಯನ್ನ ಪೂರ್ಣವಾಗಿ ನೋಡಲು ಸಾಧ್ಯವಾಗಿರಲಿಲ್ಲ.
ಕೆಲವು ಬಾರಿ ಭೇಟಿಯಾದ್ರೂ ಸಂಪೂರ್ಣವಾಗಿ ಮುಖ ನೋಡಲು ಆಗಿರಲಿಲ್ಲ. ಭೇಟಿ ವೇಳೆ ಗೆಳತಿಯಲ್ಲಿ ಕೆಲ ವಿಚಿತ್ರ ಬದಲಾವಣೆಗಳು ಕಂಡು ಬಂದ್ರೂ ಎಕೆ ಯಾವುದನ್ನು ಸೂಕ್ಷ್ಮವಾಗಿ ಗಮನಿಸಿರಲಿಲ್ಲ.
ಸಂಪೂರ್ಣ ಮುಖ ತೋರಿಸದೇ ಮೋಸ
ಕೆಲ ಡೇಟ್ ಬಳಿಕ ಎಕೆ ಮತ್ತು ಅದಿಂಡಾ ಮದುವೆಯಾಗಲು ನಿರ್ಧರಿಸಿದರು. ಈ ವೇಳೆ ಯುವತಿ ತನ್ನ ತಾಯಿ ಸಾವನ್ನಪ್ಪಿದ್ದು, ತಂದೆ ಬಹುದಿನಗಳ ಹಿಂದೆಯೇ ನಮ್ಮಿಂದ ದೂರವಾಗಿದ್ದಾರೆ ಎಂದು ಹೇಳಿಕೊಂಡಿದ್ದಳು. ಮದುವೆ ಬಳಿಕವೂ ತಾನು ನಾಚಿಕೆ ಸ್ವಭಾವದವಳು ಎಂದು ಹೇಳುತ್ತಲೇ ತನ್ನ ಮುಖವನ್ನು ಸಂಪೂರ್ಣವಾಗಿ ತೋರಿಸಲು ಹಿಂದೇಟು ಹಾಕುತ್ತಿದ್ದಳು. ಇಷ್ಟು ಮಾತ್ರವಲ್ಲದೇ ಪತಿಯ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ಭೇಟಿಯಾಗಲು ಒಪ್ಪುತ್ತಿರಲಿಲ್ಲ.
ಅದಿಂಡಾ ಮಾತುಗಳು ಮತ್ತು ಆಕೆಯ ವರ್ತನೆ ಬಗ್ಗೆ ಎಕೆ ಕುಟುಂಬಸ್ಥರಿಗೆ ಅನುಮಾನ ಬಂದಿದೆ. ಕೂಡಲೇ ಅದಿಂಡಾ ಮೂಲವನ್ನು ಪತ್ತೆ ಹಚ್ಚಲು ಎಕೆ ಪೋಷಕರು ಮುಂದಾಗಿದ್ದರು. ಈ ವೇಳೆ ಅದಿಂಡಾ ಹೆಣ್ಣಲ್ಲ ಗಂಡು ಎಂಬ ಆತಂಕಕಾರಿ ವಿಷಯ ಗೊತ್ತಾಗಿದೆ.
ಇಂಡೋನೇಷಿಯಾದಲ್ಲಿ 'ಎಂಚ ಉಲ್ಲರ್… ಎಂಚ ಉಲ್ಲರ್' ಎಂದು ಹೇಳುತ್ತಲೇ ಹವಾ ಸೃಷ್ಟಿಸಿದ ಡಾ.ಬ್ರೋ
ಅದಿಂಡಾ ಹೆಸರು ಎಶ್ ಎಂದು ಗೊತ್ತಾಗಿದೆ. ಈ ವಿಷಯ ತಿಳಿಯುತ್ತಲೇ ಎಶ್ ಪೋಷಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಹಣಕ್ಕಾಗಿ ಈ ರೀತಿ ಮಾಡಿರೋದಾಗಿ ತಪ್ಪು ಮಾಡಿಕೊಂಡಿದ್ದಾಳೆ. ಆರೋಪ ಸಾಬೀತಾದ ಹಿನ್ನೆಲೆ ಎಶ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದೆ. ಹೆಣ್ಣು ಅಂತೇಳಿ ಸುಳ್ಳು ಹೇಳಿ ಮದುವೆಯಾದದ ಎಶ್ ಕತ್ತಲಕೋಣೆ ಸೇರಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ