Fertility Awareness Campaign: 29 ವರ್ಷ ಆಗ್ತಿದ್ದಂತೆ ಸರ್ಕಾರದಿಂದ ಬರಲಿದೆ ಫರ್ಟಿಲಿಟಿ ಲೆಟರ್

Published : Feb 12, 2026, 12:41 PM IST
Fertility

ಸಾರಾಂಶ

fertility problems : ವಯಸ್ಸು 40ಕ್ಕೆ ಬಂದ್ರೂ ಜನರು ಮಕ್ಕಳನ್ನು ಮಾಡಿಕೊಲ್ತಿಲ್ಲ. ಭವಿಷ್ಯದ ಬಗ್ಗೆ, ಬೆಲೆ ಏರಿಕೆ ಬಗ್ಗೆ ಪ್ರತಿಯೊಬ್ಬರಲ್ಲೂ ಆತಂಕ ಕಾಡ್ತಿದೆ. ಆದ್ರೆ ಜನಸಂಖ್ಯೆ ಹೆಚ್ಚಳ ಅನಿವಾರ್ಯವಾಗಿರೋದ್ರಿಂದ ಜನರನ್ನು ಹುರಿದುಂಬಿಸುವ ಕೆಲಸಕ್ಕೆ ಸರ್ಕಾರವೇ ಇಳಿದಿದೆ. 

ಒಂದೇ ಸಮನೆ ಜನನ ಪ್ರಮಾಣದಲ್ಲಿ ಇಳಿಕೆ, ಸಾವಿನ ಸಂಖ್ಯೆ ಏರಿಕೆಯಾಗ್ತಿರೋದು ಫ್ರಾನ್ಸ್ (Franc) ಸರ್ಕಾರದ ಚಿಂತೆಗೆ ಕಾರಣವಾಗಿದೆ. ದೇಶದಲ್ಲಿ ಜನನ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಫ್ರಾನ್ಸ್ ಸರ್ಕಾರ 16 ಅಂಶಗಳ ಪ್ಲಾನ್ ರೆಡಿ ಮಾಡಿದೆ. ಅದ್ರಲ್ಲಿ 29 ವರ್ಷದ ಯುವಕರಿಗೆ ಪತ್ರಕಳಿಸೋದು ಸೇರಿದೆ. ಯಾವುದೇ ಬಿಲ್ ಪಾವತಿ ಅಥವಾ ತಪ್ಪಿನ ಬಗ್ಗೆ ಸರ್ಕಾರ ಪತ್ರ ನೀಡ್ತಿಲ್ಲ. ಫರ್ಟಿಲಿಟಿ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಈ ಪ್ಲಾನ್ ಜಾರಿಗೆ ತಂದಿದೆ. ಬಂಜೆತನ ಸಮಸ್ಯೆ ಬಗೆಹರಿಸುವ ಪ್ಲಾನ್ ಅಡಿಯಲ್ಲಿ 29 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕುಟುಂಬ ಯೋಜನೆಯ ಬಗ್ಗೆ ಮಾಹಿತಿ ಒದಗಿಸಲು ಸರ್ಕಾರ ಯೋಚಿಸಿದೆ. ಅದ್ರಲ್ಲಿ ತುಂಬಾ ತಡವಾಗುವ ಮೊದಲು ಮಕ್ಕಳನ್ನು ಪಡೆಯುವ ಬಗ್ಗೆ ಯುವಕರನ್ನು ಪ್ರೋತ್ಸಾಹಿಸಲಿದೆ.

ಸರ್ಕಾರದಿಂದ ಫರ್ಟಿಲಿಟಿ (fertility) ಲೆಟರ್

ಸರ್ಕಾರ ಈಗಾಗಲೇ ತನ್ನ ಕೆಲ್ಸ ಶುರು ಮಾಡಿದೆ. ಫ್ರಾನ್ಸ್ ನಲ್ಲಿರುವ ಲಕ್ಷಾಂತರ ಮಂದಿ ಈಗಾಗಲೇ ಸರ್ಕಾರದ ನೊಟೀಸ್ ಸ್ವೀಕರಿಸಿದ್ದಾರೆ. ಇದು ಸೆ*ಕ್ಸ್, ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಉದ್ದೇಶಿತ, ಸಮತೋಲಿತ ಮತ್ತು ವೈಜ್ಞಾನಿಕವಾಗಿ ಆಧಾರಿತ ಮಾಹಿತಿಯನ್ನು ಒದಗಿಸುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಯಸ್ಕರಿಗೆ ಮುಂದೆ ಕಾಡಬಹುದಾದ ಫರ್ಟಿಲಿಟಿ ಸಮಸ್ಯೆ ಬಗ್ಗೆ ಈಗ್ಲೇ ಜಾಗೃತಿ ಮೂಡಿಸುವ ಕೆಲಸವನ್ನು ಇದು ಮಾಡಲಿದೆ. ಸರ್ಕಾರದ ಈ ಕ್ರಮ ಫ್ರಾನ್ಸ್ನ ಎಂಟು ದಂಪತಿಗಳಲ್ಲಿ ಒಬ್ಬರ ಮೇಲೆ ಪರಿಣಾಮ ಬೀರಲಿದೆ. 2022 ರಲ್ಲಿ ಬಿಡುಗಡೆಯಾದ ಸರ್ಕಾರಿ ವರದಿಯು ದೇಶಾದ್ಯಂತ ಸುಮಾರು 3.3 ಮಿಲಿಯನ್ ಜನರು ಫರ್ಟಿಲಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ನೀಡಿತ್ತು.

ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ ವಧುವಿನ ಸೋದರ; ವಿಡಿಯೋ ನೋಡಿ ನೆಟ್ಟಿಗರಿಂದ ಮನವಿ

ಫ್ರಾನ್ಸ್ನಲ್ಲಿ, ಈ ವಯಸ್ಸಿನಲ್ಲಿ ಮಹಿಳೆಯರು ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ತಮ್ಮ ಎಗ್ ಫ್ರೀಜ್ ಮಾಡಬಹುದು ಎಂಬ ಕಾರಣದಿಂದಾಗಿ 29 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಈ ಪತ್ರವನ್ನು ಕಳುಹಿಸಲಾಗುತ್ತಿದೆ. 29 ರಿಂದ 37 ವರ್ಷದೊಳಗಿನ ಎಗ್ ಫ್ರೀಜ್ ಮಾಡುವ ವೆಚ್ಚ ಸಾಮಾಜಿಕ ಭದ್ರತೆ ಅಡಿಯಲ್ಲಿ ಬರುತ್ತೆ, ಇದಕ್ಕೆ ಮಹಿಳೆಯರು ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ ಎಂಬುದನ್ನು ನೆನಪಿಸಲು ಈ ಪತ್ರ ಕಳುಹಿಸಲಾಗ್ತಿದೆ.

ಸರ್ಕಾರ ಜನರಿಗೆ ಮಕ್ಕಳನ್ನು ಹೆರಲು ಯಾವುದೇ ಒತ್ತಡ ಹೇರುತ್ತಿಲ್ಲ. ಸಂತಾನೋತ್ಪತ್ತಿ ಆಯ್ಕೆಗಳ ಅರಿವು ಮತ್ತು ಲಭ್ಯತೆ ಬಗ್ಗೆ ಮಾಹಿತಿ ನೀಡ್ತಿದೆ. ಆದ್ರೆ ಫ್ರಾನ್ಸ್ ಸರ್ಕಾರದ ಈ ರೂಲ್ಸ್ ಅನೇಕರ ವಿರೋಧಕ್ಕೆ ಕಾರಣವಾಗಿದೆ. ಬರೀ ಫರ್ಟಿಲಿಟಿ ಬಗ್ಗೆ ಮಾಹಿತಿ ನೀಡಿದ್ರೆ ಸಾಲದು, ಹೆರಿಗೆ ರಜೆಯನ್ನು 16 ವಾರಗಳಿಂದ 26 ವಾರಗಳಿಗೆ ಹೆಚ್ಚಿಸುವುದು ಜನನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮನಶ್ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

Trump-Netanyahu: ಇಸ್ರೇಲ್ ಪ್ರಧಾನಿ ಮಾತು ಕೇಳದ ಟ್ರಂಪ್! ಇರಾನ್ ಜೊತೆ ಮಾತುಕತೆ ಮುಂದುವರೆಯಲಿದೆ ಎಂದ ಅಮೆರಿಕ ಅಧ್ಯಕ್ಷ

ಫ್ರಾನ್ಸ್‌ನ ರಾಷ್ಟ್ರೀಯ ಅಂಕಿಅಂಶ ಸಂಸ್ಥೆ ಇನ್ಸೀ ಪ್ರಕಾರ, 2025 ರಲ್ಲಿ 645,000 ಶಿಶುಗಳು ಜನಿಸಿದ್ದವು. 2024 ಕ್ಕೆ ಹೋಲಿಸಿದರೆ ಇದು ಶೇಕಡಾ 2.1 ರಷ್ಟು ಇಳಿದಿದೆ. 2010 ಕ್ಕೆ ಹೋಲಿಸಿದರೆ ಶೇಕಡಾ 24 ರಷ್ಟು ಇಳಿದಿದೆ. 2025 ರಲ್ಲಿ, ಫ್ರಾನ್ಸ್ನಲ್ಲಿ 651,000 ಜನರು ಸಾವನ್ನಪ್ಪಿದ್ದರು. ಇದು 2024 ಕ್ಕೆ ಹೋಲಿಸಿದರೆ ಶೇಕಡಾ 1.5ರಷ್ಟು ಹೆಚ್ಚಳ ಕಂಡಿದೆ. ಜನನ ಪ್ರಮಾಣ ಇಳಿಕೆ ಹಾಗೂ ಸಾವಿನ ಪ್ರಮಾಣ ಏರಿಕೆಯೇ ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಕಾರಣ.

ಬೆಲೆ ಏರಿಕೆಯಿಂದಾಗಿ ಮಕ್ಕಳನ್ನು ಪಡೆಯುವವರ ಸಂಖ್ಯೆ ಕಡಿಮೆಯಾಗ್ತಿದೆ, ಗರ್ಭಧಾರಣೆಯನ್ನು ಇದೇ ಕಾರಣಕ್ಕೆ ವಿಳಂಬ ಮಾಡ್ತಿದ್ದಾರೆ. ಇದು ಬರೀ ಫ್ರಾನ್ಸ್ ನಲ್ಲಿ ಮಾತ್ರವಲ್ಲ ಭಾರತದಲ್ಲೂ ಹೆಚ್ಚಾಗ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ ವಧುವಿನ ಸೋದರ; ವಿಡಿಯೋ ನೋಡಿ ನೆಟ್ಟಿಗರಿಂದ ಮನವಿ
Trump-Netanyahu: ಇಸ್ರೇಲ್ ಪ್ರಧಾನಿ ಮಾತು ಕೇಳದ ಟ್ರಂಪ್! ಇರಾನ್ ಜೊತೆ ಮಾತುಕತೆ ಮುಂದುವರೆಯಲಿದೆ ಎಂದ ಅಮೆರಿಕ ಅಧ್ಯಕ್ಷ