ನ್ಯೂಯಾರ್ಕ್(ಏ.15): ಭದ್ರತಾ ಪಡೆಗಳು ತೆಲೆಯಲ್ಲಿ ಹುಳಬಿಟ್ಟ, ಜನರಲ್ಲಿ ಆತಂಕ ತರಿಸಿದ ಘಟನೆಯೊಂದನ್ನು ಗೂಗಲ್ ಮ್ಯಾಪ್ ಪತ್ತೆ ಹಚ್ಚಿದೆ. ಹೌದು ನ್ಯೂಯಾರ್ಕ್‌ನಲ್ಲಿ ತಲೆ ಇಲ್ಲದ, ಕೈ ಹಾಗೂ ಕಾಲು ಇಲ್ಲದ ಮನುಷ್ಯ ಅತ್ತಿಂದಿತ್ತ ಓಡಾತ್ತಿರುವ ಮಾನವನ ಗೂಗಲ್‌ನಲ್ಲಿ ಪತ್ತೆಯಾಗಿದೆ. ಇದು ಹಲವು ಅನುಮಾನ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ನ್ಯೂಯಾರ್ಕ್‌ನ ಬ್ಲೂಕ್ಲಿನ್ ನೌಕಾ ಪಡೆ ನೆಲೆ ಬಳಿ ಈ ವಿಚಿತ್ರ ವ್ಯಕ್ತಿ ಪತ್ತೆಯಾಗಿದೆ. ನಡು ರಸ್ತೆಯಲ್ಲಿ ನಡೆದಾಡುತ್ತಿರುವ ವ್ಯಕ್ತಿಯನ್ನು ಗೂಗಲ್ ಮ್ಯಾಪ್ ಪತ್ತೆ ಹಚ್ಚಿದೆ. ಬಿಳಿ ಬಣ್ಣದ ಹಜ್ಮತ್ ಸ್ಯೂಟ್‌ನಲ್ಲಿ ಪತ್ತೆಯಾಗಿರುವ ಈ ವ್ಯಕ್ತಿ ನಿರ್ಜನ ಪ್ರದೇಶದಲ್ಲಿ ನಡೆದಾತ್ತಿರುವ ಹಾಗೂ ಡ್ಯಾನ್ಸ್ ಮಾಡುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Bizarre Alien : ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದ "ಏಲಿಯನ್" ಥರದ ಜೀವಿ!
ಈ ಹಜ್ಮತ್ ಸ್ಯೂಟ್ ವಿಚ್ರಿತ್ರ ಮನುಷ್ಯನ ಚಿತ್ರವನ್ನು ಗೂಗಲ್ ಮ್ಯಾಪ್ 2021ರ ಮೇ ತಿಂಗಳಲ್ಲಿ ಕ್ಲಿಕ್ ಮಾಡಿದೆ. ಆದರೆ ಇದು ಹೇಗೆ ಸಾಧ್ಯ? ಇದರ ಹಿಂದಿನ ಕೂತೂಹಲವೇನು ಅನ್ನೋದು ತಿಳಿದಿಲ್ಲ ಎಂದು ಗೂಗಲ್ ಮ್ಯಾಪ್ ಹೇಳಿದೆ.
ಇದೀಗ ಪ್ರಶ್ನೆ ಇದು ಬೇಕಂತೆ ಮಾಡಿದ್ದಾರೋ ಅಥವಾ ನಿಜಕ್ಕೂ ಚಮತ್ಕಾರ ನಡೆದಿದೆಯಾ ಅನ್ನೋದು ಚರ್ಚೆಯಾಗುತ್ತಿದೆ. ಇದರ ನಡುವೆ ಅತೀ ಗರಿಷ್ಠ ಭದ್ರತೆ ಇರುವ ಅಮೆರಿಕದ ನ್ಯೂಯಾರ್ಕ್‌ನ ನೌಕಾ ನೆಲೆ ಪ್ರದೇಶದಲ್ಲೇ ಈ ರೀತಿ ವಿಚಿತ್ರ ಮಾನವ ಪತ್ತೆಯಾಗಿರುವುದು ಭದ್ರತಾ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
ತಮಾಷೆಯಲ್ಲ..
ಕೆಲವರು ನಿತ್ಯ ತಲೆಸ್ನಾನ ಮಾಡುತ್ತಾರೆ. ಇನ್ನು ಕೆಲವರು ವಾರಕ್ಕೊಮ್ಮೆ. ಆದರೆ ಈತ 6 ವರ್ಷಗಳಿಂದ ತಲೆಸ್ನಾನ ಮಾಡೇ ಇಲ್ಲವಂತೆ. ಇದಕ್ಕೆ ಕಾರಣವನ್ನೂ ಆತ ನೀಡಿದ್ದಾನೆ. ‘6 ವರ್ಷಗಳ ಹಿಂದೆ ತಲೆಸ್ನಾನ ಮಾಡುವುದನ್ನು ನಿಲ್ಲಿಸಿದ ಬಳಿಕ ನನ್ನ ಒಂದೂ ತಲೆಕೂದಲು ಉದುರಿಲ್ಲ’ ಎಂದು ನಿಕ್ ಕೋಟ್ಜಿ ಎಂಬ ಈ ವ್ಯಕ್ತಿ ಸಮರ್ಥಿಸಿಕೊಂಡಿದ್ದಾನೆ. ‘ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕೂದಲು ಉದುರುವಿಕೆ ಸಮಸ್ಯೆ ಎದುರಾಯಿತು. ಪ್ರತಿದಿನ ಕಾಲೇಜು ಬ್ಯಾಗ್‌ನಲ್ಲಿ ಒಂದು ಶರ್ಚ್ ಇಟ್ಟುಕೊಂಡು ಹೋಗುತ್ತಿದ್ದೆ. ಯಾಕೆಂದರೆ ಮೊದಲ ಕ್ಲಾಸ್ ಮುಗಿಸುವ ಹೊತ್ತಿಗೆ ಅವರ ಶರ್ಚ್ ಕೂದಲುಗಳಿಂದ ತುಂಬಿಹೋಗಿರುತ್ತಿತ್ತು, ಉದುರುವಿಕೆ ಸಮಸ್ಯೆ ಅಷ್ಟುತೀವ್ರವಾಗಿತ್ತು. ಹೀಗಾಗಿ ಶರ್ಚ್ ಬದಲಿಸುತ್ತಿದ್ದೆ. ಕೂದಲಿಗೆ ಬಳಸುವ ಶ್ಯಾಂಪೂ, ಕಂಡೀಷನರ್‌ನಲ್ಲಿ ಬಳಸುವ ರಸಾಯನಿಕಗಳಿಂದ ಕೂದಲು ಉದುರುತ್ತಿರಬಹುದು ಎಂದು ಭಾವಿಸಿ ತಲೆಸ್ನಾನ ನಿಲ್ಲಿಸಿದೆ. ಆಗ ಕೂದಲು ಉದುರುವಿಕೆ ನಿಂತು ದಟ್ಟವಾಗಿ ಬೆಳೆಯಲು ಆರಂಭಿಸಿತು’ ಎಂದಿದ್ದಾನೆ.
'ಕಿಡ್ನಾಪ್ ಮಾಡಿದ್ದಾರೆ ಬನ್ನಿ' ಅಲ್ಲಿ ಹೋಗಿ ನೋಡಿದಾಗ ಗೊತ್ತಾಗಿದ್ದೇ ಬೇರೆ
ತಮಾಷೆಯಲ್ಲ
ರೈಲಿನಲ್ಲಿ ಪ್ರಾಣಿಗಳನ್ನು ಕೊಂಡೊಯ್ಯುವುದಕ್ಕೆ ನಿರ್ಬಂಧವಿದೆ. ಅಂಥದ್ದರಲ್ಲಿ ಕೆಲವರು ಪುಟ್ಟಬೆಕ್ಕು-ನಾಯಿಮರಿ ಕೊಂಡೊಯ್ಯುವುದು ಉಂಟು. ಆದರೂ ಪ.ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಕುದುರೆಯನ್ನು ರೈಲಿನಲ್ಲಿ ಸಾಗಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ವೈರಲ್ ಆಗಿದೆ. ಕುದುರೆ ರೇಸ್‌ಗೆ ಕುದುರೆ ಕೊಂಡೊಯ್ದು ಮರಳಿ ಊರಿಗೆ ಹೋಗುವಾಗ ಸಿಯಾಲ್‌ದಹ-ಡೈಮಂಡ್ ಹಾರ್ಬರ್ ರೈಲಿನಲ್ಲಿ ಅದನ್ನು ರೈಲಲ್ಲಿ ಸಾಗಿಸಿದ್ದಾರೆ ಎನ್ನಲಾಗಿದೆ. ಈ ಫೋಟೋ ಸಾಚಾತನ ಹಾಗೂ ಘಟನೆ ಬಗ್ಗೆ ರೈಲ್ವೇಸ್, ತನಿಖೆಗೆ ಆದೇಶಿದೆ.
ತಮಾಷೆಯಲ್ಲ
ಕುಟುಂಬಸ್ಥರು ಧೂಮಪಾನ ಹಾಗೂ ಮದ್ಯಪಾನ ಮಾಡದಂತೆ ತಾಕೀತು ಮಾಡಿದ್ದಕ್ಕೆ ಕೋಪಗೊಂಡು ಮನೆ ಬಿಟ್ಟು ಬಂದು ಚೀನಾದ ವ್ಯಕ್ತಿಯೋರ್ವ ಕಳೆದ 14 ವರ್ಷಗಳಿಂದ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲೇ ಜೀವಿಸುತ್ತಿದ್ದಾನೆ. 2008ರಿಂದಲೂ ಬೀಜಿಂಗ್ ಏರ್‌ಪೋರ್ಟಲ್ಲಿ ವಾಸವಿರುವ ವೀ ಜಿಯಾಂಗೊ (60) ಅವರಿಗೆ ಮನೆಗೆ ಹಿಂತಿರುಗಲು ಇಷ್ಟವಿಲ್ಲವಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಯಾಂಗೊ, ‘ನೀನು ನಮ್ಮ ಜೊತೆ ಇರಬೇಕು ಎಂದರೆ ಸಿಗರೇಟ್ ಹಾಗೂ ಮದ್ಯ ಬಿಡು. ಒಂದು ವೇಳೆ ಅವುಗಳನ್ನು ಬಿಡಲಿಲ್ಲ ಎಂದರೆ ಪ್ರತಿ ತಿಂಗಳು ಸರ್ಕಾರದಿಂದ ನಿನಗೆ ಲಭಿಸುವ 150 ಡಾಲರ್ ಹಣ ನಮಗೆ ಕೊಡು’ ಎಂದು ಕುಟುಂಬದವರು ಹೇಳಿದರು. ‘ಆದರೆ ದುಡ್ಡನ್ನು ಮನೆಗೆ ಕೊಟ್ಟರೆ ನಾನು ಸಿಗರೇಟ್, ಮದ್ಯ ಹೇಗೆ ಕೊಳ್ಳಲಿ? ಅದಕ್ಕೆ ಮನೆ ಬಿಟ್ಟು ಬಂದೆ’ ಎಂದಿದ್ದಾನೆ.