ಉಕ್ರೇನ್ ಸೇನಾಪಡೆಗಳು ರಷ್ಯಾದ ಯುದ್ಧ ನೌಕೆ ಮಾಸ್ಕೋವಾವನ್ನು ಧ್ವಂಸ ಮಾಡಿದ ಒಂದೇ ದಿನದಲ್ಲಿ ರಷ್ಯಾ ಸೇನೆ ಇದಕ್ಕೆ ಪ್ರತೀಕಾರ ತೀರಿಸಿಕೊಂಡಿದೆ. ಕೈವ್ ನತ್ತ ರಷ್ಯಾ ಹಾರಿಸಿದ ಕ್ಷಿಪಣಿಗಳು ನೇರವಾಗಿ ನೇಪ್ಚೂನ್ ಕ್ಷಿಪಣಿ ಉತ್ಪಾದಣಾ ಘಟಕವನ್ನು ಧ್ವಂಸ ಮಾಡಿದೆ.
ನವದೆಹಲಿ (ಏ. 15): ರಷ್ಯಾ ( Russia ) ಹಾಗೂ ಉಕ್ರೇನ್ ( Ukraine ) ನಡುವಿನ ಭೀಕರ ಯುದ್ಧ ಇನ್ನೂ ಚಾಲ್ತಿಯಲ್ಲಿದೆ. ಆರ್ಥಿಕ ನಿರ್ಬಂಧ, ವಿಶ್ವಸಂಸ್ಥೆಯಲ್ಲಿನ ಖಂಡನಾ ನಿರ್ಣಯಗಳು ಯಾವುದಕ್ಕೂ ರಷ್ಯಾ ಬಗ್ಗುತ್ತಿಲ್ಲ. ಯುದ್ಧದಲ್ಲಿ ಬಹುದೊಡ್ಡ ತಿರುವು ಕಂಡುಬಂದಿದ್ದು ಕೆಲ ದಿನಗಳ ಹಿಂದೆ. ಅಲ್ಲಿಯವರೆಗೂ ರಷ್ಯಾದ ಆಕ್ರಮಣದ ಸುದ್ದಿಗಳನ್ನು ಕೇಳಿದ್ದ ಜಗತ್ತು, ಮೊದಲ ಬಾರಿಗೆ ಉಕ್ರೇನ್ ಸೇನೆಯ (Ukriane Army) ದೊಡ್ಡ ಮಟ್ಟದ ಹೋರಾಟದ ಭಾಗವಾಗಿ, ರಷ್ಯಾದ ಯುದ್ಧ ನೌಕೆ, ಮಾಸ್ಕೋವಾವನ್ನು (Moskva)ಧ್ವಂಸ ಮಾಡಿದ ಸುದ್ದಿ ಪ್ರಸಾರವಾಗಿತ್ತು.
ಆದರೆ, ಯುದ್ಧನೌಕೆ ಧ್ವಂಸವಾದ ಒಂದೇ ದಿನದಲ್ಲಿ ರಷ್ಯಾ ಇದಕ್ಕೆ ಪ್ರತೀಕಾರ ತೀರಿಸಿಕೊಂಡಿದೆ. ಉಕ್ರೇನ್ ನ ರಾಜಧಾನಿ ಕೀವ್ (Kyiv) ಅನ್ನು ಗುರಿಯಾಗಿಸಿಕೊಂಡು ರಷ್ಯಾ ಸೇನೆಯು (Russia Army) ಕ್ಷಿಪಣಿ ದಾಳಿ ( Missile Attack ) ನಡೆಸಿದ್ದು, ಉಕ್ರೇನ್ ನ ನೆಪ್ಚೂನ್ ಕ್ಷಿಪಣಿ ಉತ್ಪಾದನಾ ಘಟಕವನ್ನು (Neptune Missile Manufacturing Unit ) ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ರಷ್ಯಾ ಸೇನೆಯು ನೆಪ್ಚೂನ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಧ್ವಂಸ ಮಾಡಿದ್ದರ ಹಿಂದೆ ಸ್ಪಷ್ಟ ಕಾರಣವೂ ಇದೆ. ಉಕ್ರೇನ್ ಸೇನೆಯು ಮಾಸ್ಕೋವಾ ಯುದ್ಧ ನೌಕೆಯನ್ನು ಧ್ವಂಸ ಮಾಡಲು ನೆಪ್ಚೂನ್ ಕ್ಷಿಪಣಿಯನ್ನು ಬಳಕೆ ಮಾಡಿತ್ತು. ಇನ್ನೆಂದೂ ಉಕ್ರೇನ್ ಈ ವಿಧ್ವಂಸಕಾರಿ ಕ್ಷಿಪಣಿಯನ್ನು ಬಳಸಿ ದಾಳಿ ಮಾಡಬಾರದು ಎನ್ನುವ ಉದ್ದೇಶ ಇಟ್ಟುಕೊಂಡು, ಈ ಕ್ಷಿಪಣಿಯ ಉತ್ಪಾದನಾ ಘಟಕವನ್ನೇ ಉಡೀಸ್ ಮಾಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ 51 ದಿನಗಳು ಕಳೆದಿವೆ. ಎರಡೂ ಕಡೆಯಿಂದ ಭಾರೀ ದಾಳಿ ಹಾಗೂ ಪ್ರತಿದಾಳಿ ಮುಂದುವರಿದಿದೆ. ಇದರಿಂದಾಗಿ ಉಕ್ರೇನ್ ನೆಲದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿರುವುದು ಕಂಡು ಬಂದಿದೆ. ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಉಕ್ರೇನ್ ವಿಚಾರದಲ್ಲಿ ರಷ್ಯಾ ಪಟ್ಟು ಬಿಡಲು ಸಿದ್ಧವಾಗಿಲ್ಲ, ಇನ್ನೊಂದೆಡೆ ಉಕ್ರೇನ್ ತಾನು ಸುಲಭವಾಗಿ ಶರಣಾಗೋದಿಲ್ಲ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಯುದ್ಧವು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಭಯಾನಕವಾಗುತ್ತಿದೆ.
ಮೂರನೇ ವಿಶ್ವಯುದ್ಧ ಆರಂಭಿಸಿದ್ದೀರಿ: ಉಕ್ರೇನ್ ಯುದ್ಧದಲ್ಲಿ ತನ್ನ ಯುದ್ಧ ನೌಕೆ ಮಾಸ್ಕೋವಾ ಮುಳುಗಿದ ನಂತರ ಮೂರನೇ ವಿಶ್ವಯುದ್ಧ ಆರಂಭವಾಗಿದೆ ಎಂದು ರಷ್ಯಾದ ಪ್ರಧಾನ ಟಿವಿ ಘೋಷಣೆ ಮಾಡಿದೆ. ಬೆಂಕಿಯ ನಂತರ ಇದು ಹಾನಿಗೊಳಗಾಗಿದೆ ಎಂದು ರಷ್ಯಾ ಹೇಳಿದ್ದರೂ, ಉಕ್ರೇನ್ ತನ್ನ ನೆಪ್ಚೂನ್ ಕ್ಷಿಪಣಿಯ ಮೂಲಕ ಮಾಸ್ಕೋದ ಕಪ್ಪು ಸಮುದ್ರದ ಫ್ಲೀಟ್‌ನ ಪ್ರಮುಖ ಹಡಗನ್ನು ನಾಶಪಡಿಸಿದ ಕೀರ್ತಿಯನ್ನು ಪಡೆದುಕೊಂಡಿದೆ.
ಉಕ್ರೇನ್ ರಷ್ಯಾ ಬಿಕ್ಕಟ್ಟು, ಚೀನಾ ಲಾಕ್‌ಡೌನ್: ಭಾರತದಲ್ಲಿ ಟಿವಿ ಬೆಲೆ ಏರಿಕೆ ಸಾಧ್ಯತೆ
ಆದರೆ ಯುದ್ಧನೌಕೆಯ ಮುಳುಗಡೆಯಿಂದ ಕ್ರೆಮ್ಲಿನ್‌ನ ಮುಖ್ಯ ಮುಖವಾಣಿ ತನ್ನ ಆಕ್ರೋಶ ಹೊರಹಾಕಿದೆ. "ಈಗ ಉಲ್ಬಣಗೊಂಡಿರುವ ಪರಿಸ್ಥಿತಿಯನ್ನು ನೇರವಾಗಿ ಮೂರನೇ ವಿಶ್ವ ಸಮರ ಎಂದು ಕರೆಯಬಹುದು' ಎಂದು ನಿರೂಪಕಿ ಓಲ್ಗಾ ಸ್ಕಬೇಯೆವಾ ( Olga Skabeyeva ) ಹೇಳಿದ್ದು, ಬಹುಶಃ ಕೆಲ ದಿನಗಳನ್ನೇ ಇದು ಖಚಿತವಾಗಲಿದೆ ಎಂದು ಹೇಳಿದ್ದಾರೆ.
ಯುದ್ಧಕ್ಕೆ 50 ದಿನ: ಉಕ್ರೇನ್ ದಾಳಿಗೆ ರಷ್ಯಾ ನೌಕೆ ಧ್ವಂಸ
"ಈಗ ನಾವು ಖಂಡಿತವಾಗಿಯೂ ನ್ಯಾಟೋ ( Nato ) ಅಲ್ಲದೇ ಇದ್ದರೂ ನ್ಯಾಟೋ ಮೂಲಸೌಕರ್ಯದ ವಿರುದ್ಧ ಹೋರಾಡುತ್ತಿದ್ದೇವೆ, ನಾವು ಅದನ್ನು ಗುರುತಿಸಬೇಕಾಗಿದೆ, ”ಎಂದು ಸ್ಕಬೆಯೆವಾ ಹೇಳಿದ್ದಾರೆ. ಸಂದರ್ಶನದಲ್ಲಿ ಅತಿಥಿಯೊಬ್ಬರು ಮಾಸ್ಕ್ವಾ ಮುಳುಗುವಿಕೆಯನ್ನು ರಷ್ಯಾದ ನೆಲದ ಮೇಲಿನ ದಾಳಿಗೆ ಹೋಲಿಸಿದ್ದರೆ, ಇನ್ನೊಂದೆಡೆ ರಷ್ಯಾ ಬೆಂಕಿಯಿಂದಾಗಿ ಯುದ್ಧ ನೌಕೆ ಮುಳುಗಿದೆ ಎಂದು ಹೇಳಿದೆ.