ಪಾಕಿಸ್ತಾನದಲ್ಲಿ  8 ಸಾವಿರ ಕೋಟಿ ಮೌಲ್ಯದ ಚಿನ್ನ ನಿಕ್ಷೇಪ ಪತ್ತೆ; ಇವುಗಳ ತೂಕ ಎಷ್ಟಿದೆ?

By Mahmad Rafik  |  First Published Jan 14, 2025, 11:45 AM IST

ಪಾಕಿಸ್ತಾನದಲ್ಲಿ 80 ಸಾವಿರ ಕೋಟಿ ಪಾಕಿಸ್ತಾನಿ ಮೌಲ್ಯದ 28 ಲಕ್ಷ ತೊಲಾ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಪಂಜಾಬ್ ಪ್ರಾಂತ್ಯದ ಸಿಂಧೂ ನದಿ ದಡದ 32 ಕಿಮೀ ದೂರದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದು ರಾಷ್ಟ್ರದ ಆರ್ಥಿಕ ಪ್ರಗತಿಗೆ ನೆರವಾಗಬಹುದು.


ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನದಲ್ಲಿ ಬರೋಬ್ಬರಿ 80 ಸಾವಿರ ಕೋಟಿ ಪಾಕಿಸ್ತಾನಿ ಮೌಲ್ಯದ 28 ಲಕ್ಷ ತೊಲಾ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು ರಾಷ್ಟ್ರದ ಆರ್ಥಿಕ ಪ್ರಗತಿಗೆ ನೆರವಾಗಬಹುದು ಎಂದು ಬಣ್ಣಿಸಲಾಗುತ್ತಿದೆ.  ಪಂಜಾಬ್ ಪ್ರಾಂತ್ಯದ ಅಟ್ಟೋಕ್ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ. ಪತ್ತೆಯಾಗಿರುವ ಚಿನ್ನದ ತೂಕ 653 ಟನ್ ಎಂದು ವರದಿಯಾಗಿದೆ. ಈ ಕುರಿತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಜಿ ಗಣಿ ಸಚಿವ ಇಬ್ರಾಹಿಂ ಹಸನ್ ಮರಾದ್ ಪ್ರತಿಕ್ರಿಯಿಸಿದ್ದು, 127 ಸ್ಥಳಗಳಲ್ಲಿನ ಮಾದರಿಯನ್ನು  ಸಂಗ್ರಹಿಸಲಾಗಿ ಪರಿಶೀಲನೆ  ನಡೆಸಿರುವ ಭೂವೈಜ್ಞಾನಿಕ ಸರ್ವೇಕ್ಷನಾ ಇಲಾಖೆ ಚಿನ್ನವಿರೋದನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ. ಪಂಜಾಬ್ ಪ್ರಾಂತ್ಯದ ಸಿಂಧೂ ನದಿ ದಡದ 32 ಕಿಮೀ ದೂರದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. 

ಹಿಮಾಲಯದಲ್ಲಿ ಹುಟ್ಟುವ ಸಿಂಧೂ ನದಿ ಭಾರತದ ಮೂಲಕ ಪಾಕಿಸ್ತಾನ ಪ್ರವೇಶಿಸುತ್ತದೆ. ಸಿಂಧೂ ನದಿ ಪ್ರವೇಶಿಸುವ ನಿಖರ  ಸ್ಥಳದಲ್ಲಿಯೇ ಚಿನ್ನದ  ಭಂಡಾರ ಸಿಕ್ಕಿದೆ ಎಂದು ಪಾಕಿಸ್ತಾನದ ನಾಯಕರು ಹೇಳಿದ್ದಾರೆ.

Tap to resize

Latest Videos

ಖಾಸಗಿ ಮಾಧ್ಯಮದ  ಜೊತೆ  ಮಾತನಾಡಿರುವ ಭೂವಿಜ್ಞಾನಿ ರತ್ನೇಶ್ ಪಾಂಡೆ, ಸೋನಾ ನದಿಯ ಉದಾಹರಣೆಯನ್ನು ನೀಡುತ್ತಾರೆ. ಭಾರತದಲ್ಲಿ ಸೋನಾ ನದಿಯಲ್ಲಿಯೂ ಸಹ ಚಿನ್ನ  ಹರಿಯುತ್ತದೆ. ಸ್ಥಳೀಯರು ನದಿಯಲ್ಲಿನ  ಮರಳನ್ನು ಜರಡಿ ಹಿಡಿದು ಚಿನ್ನದ  ಕಣಗಳನ್ನು ಶೋಧಿಸುತ್ತಾರೆ. ವೈಜ್ಞಾನಿಕವಾಗಿಯೂ  ಸೋನಾ ನದಿಯಲ್ಲಿ ಚಿನ್ನದ ನಿಕ್ಷೇಪಗಳಿರೋದು ದೃಢವಾಗಿದೆ. ಈ ಪ್ರದೇಶದಲ್ಲಿ Quartz ಕಲ್ಲುಗಳು ಸಿಗುತ್ತವೆ ಎಂದು  ಹೇಳುತ್ತಾರೆ.

ಜ್ವಾಲಾಮಖಿ ಸ್ಪೋಟಗೊಂಡಾದ ಚಿನ್ನ ಭೂಮಿ ಮೇಲೆ ಹರಿಯುತ್ತದೆ. ಕೆಲವೊಮ್ಮೆ ನದಿಯೊಂದಿಗೆ ಸೇರ್ಪಡೆಯಾಗಿ ದೂರದವರೆಗೂ ಹರಿದುಕೊಂಡು ಹೋಗಿರುವ ಉದಾಹರಣೆಗಳಿವೆ. ವೈಜ್ಞಾನಿಕ ಸಮೀಕ್ಷೆಯ ವಿಧಾನದಿಂದ ಇಲ್ಲಿ 10-20 ಮೀಟರ್ ನೆಲದಡಿಯಲ್ಲಿ ಚಿನ್ನದ ಗಣಿ ಪತ್ತೆಯಾಗಿದ್ದು, ಇದು ಸ್ವಾಭಾವಿಕ ಎಂದರು. ಇದು ನೆಲದಡಿಯಲ್ಲಿ ಕಂಡುಬರುತ್ತದೆ ಮತ್ತು ನೀರಿನ ಮೂಲಕ ಕೆಳಗಿನ ಪ್ರದೇಶಗಳಿಂದ ಬರುತ್ತದೆ. ಈ ರೀತಿಯಾಗಿ ಆಫ್ರಿಕಾದಲ್ಲಿ ಬಹಳಷ್ಟು ಚಿನ್ನವನ್ನು ಪತ್ತೆ ಮಾಡಲಾಗುತ್ತಿದೆ ಎಂದು ರತ್ನೇಶ್ ಪಾಂಡೆ ವಿವರಿಸುತ್ತಾರೆ.

ಇದನ್ನೂ ಓದಿ: ವಿವಾಹಕ್ಕೆ ಅತಿಯಾದ ಖರ್ಚು ಉಳಿಸಲು ಒಂದೇ ಮಂಟಪದಲ್ಲಿ 6 ಸೋದರರೊಂದಿಗೆ 6 ಸೋದರಿಯರ ಮದುವೆ!

ಜಾರ್ಖಂಡ್‌ನಲ್ಲಿ ಹರಿಯುವ ಸ್ವರ್ಣ ರೇಖಾ ನದಿಯಲ್ಲಿಯೂ ಚಿನ್ನ ಕಂಡು ಬಂದಿದೆ. ಇಲ್ಲಿಯ ಸ್ಥಳೀಯರು ನೀರು ಮತ್ತು  ಮರಳಿನಲ್ಲಿ ಇಂದಿಗೂ ಚಿನ್ನವನ್ನು ಹುಡುಕುತ್ತಾರೆ. ಇದೀಗ ಸಿಂಧೂ ನದಿಯ ತೀರದಲ್ಲಿ ಸಿಕ್ಕಿರುವ ಚಿನ್ನದ ನಿಕ್ಷೇಪ ಪಾಕಿಸ್ತಾನದ ಆರ್ಥಿಕ ಭವಿಷ್ಯವನ್ನು ಸುಧಾರಿಸಬಹುದು ಎಂದು ಪಾಕ್ ನಾಯಕ ಇಬ್ರಾಹಿಂ ಹಸನ್ ಮುರಾದ್ ಹೇಳುತ್ತಾರೆ. ಇಂದು ಮುಂದಿನ ಪೀಳಿಗೆಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲು ಇದು ಅವಶ್ಯಕವಾಗಿದೆ.  ಸುಮಾರು 18 ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಈ ಚಿನ್ನ ಸಿಗುತ್ತಿದೆ. ಸಿಂಧೂ ನದಿಯಲ್ಲಿ ಚಿನ್ನಾಭರಣಗಳು ಸಿಗುತ್ತವೆ  ಎಂದು ಸ್ಥಳೀಯರು  ಹೇಳುತ್ತಾರೆ.  ಸಿಂಧೂ ನದಿಯಲ್ಲಿನ ನೀರು ಕಡಿಮೆಯಾದ ಚಿನ್ನಕ್ಕಾಗಿ ಹುಡುಕಾಟ  ನಡೆಸಲಾಗುತ್ತದೆ. ಈ ಸಂಪೂರ್ಣ ಪ್ರದೇಶದಲ್ಲಿ 9 ಬ್ಲಾಕ್‌ಗಳಿವೆ ಮತ್ತು ಅತಿದೊಡ್ಡ ಬ್ಲಾಕ್‌ನಲ್ಲಿ 155 ಶತಕೋಟಿ ಮೌಲ್ಯದ ಚಿನ್ನ ಇರಬಹುದು ಎಂದು ಮುರಾದ್ ಹೇಳುತ್ತಾರೆ.

ಇದನ್ನೂ ಓದಿ: ಪಾಪರ್ ಆಗೋ ಭೀತಿಯಲ್ಲಿದ್ದ ಪಾಕ್‌ಗೆ ಬಂಪರ್! ವಿಭಜನೆಗೂ ಮುಂಚೆ ಭಾರತದಲ್ಲಿದ್ದ ಅತ್ಯಮೂಲ್ಯ ಸಂಪತ್ತು ಪಾಕ್ ಪಾಲು!

click me!