5 ನಿಮಿಷದಲ್ಲಿ ₹51 ಕೋಟಿ ಚಿನ್ನದ ಟಾಯ್ಲೆಟ್ ಕಳ್ಳತನ! 5 ವರ್ಷದ ಬಳಿಕ ನಾಲ್ವರ ಬಂಧನ

Published : May 25, 2025, 01:16 PM IST
gold toilet America

ಸಾರಾಂಶ

ಯುಕೆ ಬ್ಲೆನ್‌ಹೈಮ್ ಅರಮನೆಯಲ್ಲಿ 51 ಕೋಟಿ ರೂ. ಮೌಲ್ಯದ ಚಿನ್ನದ ಟಾಯ್ಲೆಟ್ ಕಳ್ಳತನವಾಗಿದೆ. ಮೂವರು ಕಳ್ಳರು ಕೇವಲ 5 ನಿಮಿಷಗಳಲ್ಲಿ ಈ ಕೃತ್ಯ ಎಸಗಿದ್ದಾರೆ

ಕಳ್ಳತನ ಮಾಡುವುದಕ್ಕೆ ಬಂದವರಲ್ಲಿ ಕೆಲವರು ಬಂಗಾರ, ಬೆಳ್ಳಿ, ನಗದು ಹಣವನ್ನು ಮಾತ್ರ ಕದಿಯುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಕಂಡಿದ್ದನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಮೂವರು ಕಳ್ಳರು ಸೇರಿಕೊಂಡು ಮನೆಯಲ್ಲಿ 51 ಕೋಟಿ ರೂ. ಮೌಲ್ಯದ ಚಿನ್ನದ ಟಾಯ್ಲೆಟ್ ಅನ್ನು ಕದ್ದೊಯ್ದಿದ್ದಾರೆ. ಅರಮನೆಯೊಳಗೆ ನುಗ್ಗಿದ ಕಳ್ಳರು 5 ನಿಮಿಷದಲ್ಲಿ ಬಂಗಾರದ ಟಾಯ್ಲೆಟ್ ಅನ್ನು ಕದ್ದು ಪರಾರಿ ಆಗಿದ್ದಾರೆ.

ಈ ಘಟನೆ 2019 ಸೆಪ್ಟೆಂಬರ್ 14 ರಂದು ಮುಂಜಾನೆ ಯುಕೆ, ಆಕ್ಸ್‌ಫರ್ಡ್‌ಶೈರ್‌ನ ಐತಿಹಾಸಿಕ ಬ್ಲೆನ್‌ಹೈಮ್ ಅರಮನೆಯಲ್ಲಿ ನಡೆದಿದೆ. ಬೆಳಗಾಗುವ ಕೆಲವೇ ಗಂಟೆಗಳ ಮುನ್ನ ಕತ್ತಲಲ್ಲಿ ನುಸುಳಿದ ಮೂವರು ಕೇವಲ 5 ನಿಮಿಷಗಳಲ್ಲಿ ತಮ್ಮ ಕೆಲಸವನ್ನು ಮುಗಿಸಿ ತಾವು ಬಂದ ಕಾರುಗಳಲ್ಲಿ ಹೊರಟುಹೋದರು. ಅವರ ಜೊತೆಗೆ ಅರಮನೆಯಲ್ಲಿದ್ದ ಪ್ರಪಂಚದ ಅತ್ಯಂತ ಬೆಲೆಬಾಳುವ ಯುರೋಪಿಯನ್ ಟಾಯ್ಲೆಟ್ (₹51 ಕೋಟಿ ಬೆಲೆಬಾಳುವ, 18 ಕ್ಯಾರೆಟ್ ಚಿನ್ನದಿಂದ ಮಾಡಲ್ಪಟ್ಟ ಟಾಯ್ಲೆಟ್) ಅನ್ನು ಕದ್ದುಕೊಂಡು ಹೋಗಿದ್ದಾರೆ.

ಅರಮನೆಯಲ್ಲಿ ಕಳ್ಳತನದ ಘಟನೆ ನಡೆದು 5 ವರ್ಷಗಳ ನಂತರ, ಬ್ರಿಟಿಷ್ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. 2019 ರಲ್ಲಿ ಪ್ರಪಂಚದಾದ್ಯಂತ ಸುದ್ದಿಯಾದ ಈ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರ ವಿರುದ್ಧ ಪೊಲೀಸರು ಆರೋಪ ಹೊರಿಸಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಕಳ್ಳತನದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ ಚಿನ್ನವನ್ನು ಕರಗಿಸಿ ಮಾರಾಟ ಮಾಡಲು ಸಹಾಯ ಮಾಡಿದ ವ್ಯಕ್ತಿ ಫ್ರೆಡ್ರಿಕ್ ಡೋಯ್ (36) ಜೈಲು ಶಿಕ್ಷೆಯಿಂದ ಕೋರ್ಟ್ ಮುಕ್ತಗೊಳಿಸಿದೆ. ಉಳಿದ ಮೂವರಿಗೆ ಶಿಕ್ಷೆ ವಿಧಿಸಲಾಗಿದೆ.

2019ರ ಸೆಪ್ಟೆಂಬರ್ 14 ರಂದು ಬೆಳಿಗ್ಗೆ 4 ಗಂಟೆಗೆ, ಅರಮನೆಯ ಸಿಬ್ಬಂದಿಯಾದ ಎಲೀನರ್ ಪೇಸ್ ಜೋರಾದ ಶಬ್ದಕ್ಕೆ ಎಚ್ಚರಗೊಂಡರು. ಏನೋ ಬಿದ್ದಿದೆ ಎಂದು ಅವರು ಭಾವಿಸಿದರು. ಆದರೆ, ತಕ್ಷಣವೇ ಅರಮನೆಯ ಭದ್ರತಾ ಎಚ್ಚರಿಕೆಯ ಗಂಟೆಯನ್ನು ಬಾರಿಸಿದರು. ಏನೋ ತಪ್ಪಾಗಿದೆ ಎಂದು ಅರಿತ ಎಲೀನರ್ ಅಮೂಲ್ಯ ಕಲಾಕೃತಿಗಳನ್ನು ಇರಿಸಲಾಗಿದ್ದ ಕೋಣೆಗೆ ಧಾವಿಸಿದರು. ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ವಿನ್ಯಾಸಗೊಳಿಸಿದ 'ಅಮೆರಿಕ' ಎಂಬ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಕಾಣೆಯಾಗಿತ್ತು. ಇದು ಈಗಲೂ ಕಾರ್ಯ ನಿರ್ವಹಿಸುತ್ತಿತ್ತು.

ಕಳ್ಳರು ಬಂದು ಬೆಲೆಬಾಳುವ ಅರಮನೆಯ ಯಾವುದೇ ಕಲಾಕೃತಿಗಳನ್ನು ಕದ್ದೊಯ್ಯದೇ ಚಿನ್ನದ ಟಾಯ್ಲೆಟ್ ಅನ್ನು ಕದ್ದೊಯ್ದ ಘಟನೆಯನ್ನು ನೋಡಿದ ಪೊಲೀಸರು ಆಶ್ಚರ್ಯಚಕಿತರಾದರು. ಕಾರುಗಳಲ್ಲಿ ಬಂದ ಮೂವರು ವ್ಯಕ್ತಿಗಳು ಕೇವಲ ಐದು ನಿಮಿಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಟಾಯ್ಲೆಟ್ ಕದ್ದೊಯ್ದಿದ್ದರು. ಆದರೆ, ಪೊಲೀಸರ ತನಿಖೆಯ ವೇಳೆ ಒಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿತು. ಅಷ್ಟೊಂದು ಬೆಲೆಬಾಳುವ ಟಾಯ್ಲೆಟ್ ಇದ್ದ ಕೋಣೆಯಲ್ಲಿ ಭದ್ರತಾ ಸಿಬ್ಬಂದಿ ಅಥವಾ ಸಿಸಿಟಿವಿ ಕ್ಯಾಮೆರಾಗಳಿರಲಿಲ್ಲ. ಕತ್ತಲು ಮತ್ತು ಭದ್ರತಾ ಲೋಪಗಳು ಕಳ್ಳರಿಗೆ ಅನುಕೂಲವಾಯಿತು ಎಂದು ಪತ್ತೆ ಮಾಡಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿದರು. ಆದರೆ, ಅರಮನೆಯಿಂದ ಕಳ್ಳತನವಾಗಿದ್ದ ಚಿನ್ನದ ಟಾಯ್ಲೆಟ್‌ನ ಕಲಾಕೃತಿ ಮಾತ್ರ ಸಿಗಲಿಲ್ಲ. ಆದರೆ, ಜೇಮ್ಸ್ ಶೀನ್ ಅವರ ಡಿಎನ್ಎ ಸ್ಯಾಂಪಲ್ ಸಿಕ್ಕಿತು. ಟಾಯ್ಲೆಟ್ ಕರಗಿಸಿ ಹಣ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೈಕೆಲ್ ಜಾನ್ಸ್ (39) ಮತ್ತು ಜೇಮ್ಸ್ ಶೀನ್ (40)ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಫ್ರೆಡ್ರಿಕ್ ಡೋಯ್‌ಗೆ ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಬೋರಾ ಗುಕ್‌ಚುಕ್ (39) ಖುಲಾಸೆಗೊಂಡಿದ್ದಾರೆ.

ಈ ಕಳ್ಳತನದ ಪ್ರಕರಣದ ಆರೋಪಿಗಳನ್ನು 2025ರ ಫೆಬ್ರವರಿಯಲ್ಲಿ ಪೊಲೀಸರು ಬಂಧಿಸಿದ್ದರು. ಈ ಕಳ್ಳರ ಬಗ್ಗೆ ಚಾರ್ಜ್‌ಶೀಟ್ ವರದಿ ಸಲ್ಲಿಕೆಯಾದ ನಂತರ ಇದೀಗ ಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌