ಸತ್ಯ ನಾಡೆಲ್ಲಾ ಭಾಷಣಕ್ಕೆ ಅಡ್ಡಿಪಡಿಸಿ ಧ್ವನಿ ಎತ್ತಿದ ಮೈಕ್ರೋಸಾಫ್ಟ್‌ ಉದ್ಯೋಗಿ ವಜಾ!

Published : May 25, 2025, 10:16 AM IST
Satya Nadella

ಸಾರಾಂಶ

ಮೈಕ್ರೋಸಾಫ್ಟ್‌ನ 'ಬಿಲ್ಡ್ 2025' ಸಮ್ಮೇಳನದಲ್ಲಿ ಪ್ಯಾಲೆಸ್ಟೀನ್ ಪರ ಘೋಷಣೆ ಕೂಗಿದ ಉದ್ಯೋಗಿಯನ್ನು ವಜಾಗೊಳಿಸಲಾಗಿದೆ. ಈ ಘಟನೆ ಕಂಪನಿಯೊಳಗೆ ಆಂತರಿಕ ಪ್ರತಿಭಟನೆ ಮತ್ತು ಚರ್ಚೆಗೆ ಕಾರಣವಾಗಿದೆ. ಇಸ್ರೇಲಿ ಸೇನೆಗೆ ತಂತ್ರಜ್ಞಾನ ನೆರವು ನೀಡುವ ಕಂಪನಿಯ ನಿಲುವನ್ನು ಪ್ರಶ್ನಿಸಲಾಗುತ್ತಿದೆ.

ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ಅವರು 'ಬಿಲ್ಡ್ 2025' ವಾರ್ಷಿಕ ಡೆವಲಪರ್ ಸಮ್ಮೇಳನದ ಮುಖ್ಯ ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಪ್ಯಾಲೆಸ್ಟೀನ್ ಪರ ಧ್ವನಿಯೆತ್ತಿದ ಘಟನೆಯೊಂದು ನಡೆಯಿತು. ಸಾಫ್ಟ್‌ವೇರ್ ಎಂಜಿನಿಯರ್ ಜೋ ಲೋಪೆಜ್ ಎಂಬಾತ "ಫ್ರೀ ಪ್ಯಾಲೆಸ್ಟೈನ್" ಎಂದು ಘೋಷಣೆ ಕೂಗಿ ಕಂಪನಿಯು ಇಸ್ರೇಲಿ ಸೇನೆಗೆ ನೀಡುತ್ತಿರುವ ತಂತ್ರಜ್ಞಾನ ಸಹಾಯವನ್ನು ವಿರೋಧಿಸಿದನು.

ಸಿಯಾಟಲ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಬೃಹತ್ ಸಮ್ಮೇಳನದಲ್ಲಿ ಲೋಪೆಜ್ ವೇದಿಕೆಗೆ ಆಹ್ವಾನಿತನಾಗಿರಲಿಲ್ಲ ಆದರೂ ಧೈರ್ಯದಿಂದ ಕೂಗಿ "ಮೈಕ್ರೋಸಾಫ್ಟ್ ಪ್ಯಾಲೆಸ್ಟೀನಿಯನ್ನರನ್ನು ಹೇಗೆ ಕೊಲ್ಲುತ್ತಿದೆ ಎಂಬುದನ್ನು ನೀವು ಅವರಿಗೆ ಹೇಗೆ ತೋರಿಸುತ್ತೀರಿ? ಇಸ್ರೇಲಿ ಯುದ್ಧ ಅಪರಾಧಗಳಲ್ಲಿ ಅಜೂರ್ ತಂತ್ರಜ್ಞಾನ ಹೇಗೆ ಬಳಕೆಯಾಗುತ್ತಿದೆ ಎಂಬುದನ್ನು ನೀವು ಅವರಿಗೆ ಹೇಗೆ ತೋರಿಸುತ್ತೀರಿ?" ಎಂದು ಜೋರಾಗಿ ಕೂಗಿದ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಸಭಾಂಗಣದಿಂದ ಹೊರಗೆ ಎಳೆದೊಯ್ದರು. ಆ ವೇಳೆ ಕೂಡ ಲೋಪೆಜ್ "ಒಬ್ಬ ಮೈಕ್ರೋಸಾಫ್ಟ್ ಉದ್ಯೋಗಿಯಾಗಿರುವ ನಾನು, ಈ ನರಮೇಧದಲ್ಲಿ ಭಾಗಿಯಾಗುವುದಿಲ್ಲ." ಎಂದು ಕೂಗಿಕೊಂಡರು.

ಉದ್ಯೋಗಿ ವಜಾ , ಆಂತರಿಕ ಪ್ರತಿಭಟನೆ

ಲೋಪೆಜ್ ಈ ಘೋಷಣೆ ಕೂಗಿದ ತಕ್ಷಣ ಆತನನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಪ್ರತಿಭಟನೆಯ ನಂತರ ಜೋ ಲೋಪೆಜ್ ತಮ್ಮ ಸಹೋದ್ಯೋಗಿಗಳಿಗೆ ಇಮೇಲ್ ಮೂಲಕ ಪತ್ರ ಕಳಿಸಿ, ಗಾಜಾದಲ್ಲಿ ಅಜೂರ್ ಕ್ಲೌಡ್ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಪ್ರಶ್ನಿಸಿದ್ದಾನೆ. "ನಮ್ಮ ನಾಯಕತ್ವ ಗಾಜಾದಲ್ಲಿ ನಾಗರಿಕರನ್ನು ಗುರಿಯಾಗಿಸಲು ಅಜೂರ್ ಬಳಸಲಾಗುತ್ತಿದೆ ಎಂಬ ಸಾಧ್ಯತೆಯನ್ನು ನಿರಾಕರಿಸುತ್ತಿದೆ. ಆದರೆ ನಮಗೆ ಗೊತ್ತಿರುವಷ್ಟು ದೂರ, ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಡೇಟಾ. ಹೆಚ್ಚಿನ ಎಲ್ಲವನ್ನೂ ಅಕ್ರಮವಾಗಿ ಕಣ್ಗಾವಲು ಮೂಲಕ ಪಡೆದಿರುವುದು. ಇದನ್ನು ಪ್ಯಾಲೆಸ್ಟೀನಿಯನ್ನರ ವಿರುದ್ಧದ ಹಿಂಸೆಗೆ ಬಳಸಲಾಗುತ್ತಿದೆ."

ಉದ್ಯೋಗಿಗಳ ಅಸಮಾಧಾನ, ಹಲವರ ವಜಾ

ಬಿಲ್ಡ್ 2025 ಸಮ್ಮೇಳನದಲ್ಲಿ ಇಂತಹ ಆಂತರಿಕ ಪ್ರತಿಭಟನೆಗಳು ಇದೇ ಮೊದಲೇನಲ್ಲ. ಕನಿಷ್ಠ ಮೂರು ಕಾರ್ಯಕಾರಿ ಅಧಿವೇಶನಗಳಲ್ಲಿ ಇದೇ ರೀತಿ ಅಡ್ಡಿಯಾಗಿದೆ. ಕೆಲವು ನೇರಪ್ರಸಾರಗಳನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ, ಮತ್ತು ಕಾರ್ಯಕ್ರಮ ನಡೆಯುತ್ತಿದ್ದ ಹೊರಭಾಗದಲ್ಲಿ ಪ್ಯಾಲೆಸ್ಟೀನ್ ಪರ ಧ್ವನಿಗಳೊಂದಿಗೆ ಮೆರವಣಿಗೆಗಳು ನಡೆದಿವೆ. ಹೆಚ್ಚುವರಿ ಘಟನೆಯೊಂದರಲ್ಲಿ, ಮೈಕ್ರೋಸಾಫ್ಟ್‌ನ AI ಭದ್ರತಾ ಮುಖ್ಯಸ್ಥೆ ನೇತಾ ಹೈಬಿ ಅವರ ಅಧಿವೇಶನವನ್ನೂ ಮೊಟಕುಗೊಳಿಸಿದ್ದರು. ಇದಕ್ಕೂ ಮುನ್ನ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವನಿಯಾ ಅಗರ್ವಾಲ್ ಮತ್ತು ಹೊಸಾಮ್ ನಾಸ್ರ್ ಎಂಬವರನ್ನು ಕಂಪನಿಯಿಂದ ವಜಾ ಮಾಡಲಾಗಿತ್ತು.

ನಿರಾಕರಣೆ, ಆದರೆ ಆತಂಕ ಮುಂದುವರಿದಂತಿದೆ

ಮೈಕ್ರೋಸಾಫ್ಟ್ ಇತ್ತೀಚೆಗಷ್ಟೇ ಇಸ್ರೇಲಿ ಸೇನೆಗೆ AI ಸೇವೆಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದೆ. ಆದರೆ ಕಂಪನಿಯು ಗಾಜಾದಲ್ಲಿ ನಾಗರಿಕರನ್ನು ನೇರವಾಗಿ ಗುರಿಯಾಗಿಸಲು ತನ್ನ ತಂತ್ರಜ್ಞಾನ ಬಳಕೆಯಾಗಿದೆಯೆಂದು ಯಾವುದೇ ಪುರಾವೆ ಇಲ್ಲವೆಂದು ಹೇಳಿದೆ. ಈ ವಿಚಾರದಲ್ಲಿ ಕಂಪನಿಯೊಳಗಿನ ವಿರೋಧ ಭಿನ್ನಾಭಿಪ್ರಾಯದ ರೂಪದಲ್ಲೇ ಮುಂದುವರಿದಿದೆ. ಕಂಪನಿಯೊಳಗಿನ ಕೆಲ ಆಂತರಿಕ ಇಮೇಲ್‌ಗಳಲ್ಲಿ “ಪ್ಯಾಲೆಸ್ಟೈನ್” ಮತ್ತು “ಗಾಜಾ” ಎಂಬ ಪದಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ ಎಂದು ಕೆಲ ಉದ್ಯೋಗಿಗಳು ಹೇಳಿದ್ದಾರೆ. ಇದನ್ನು ‘ಮತಭೇದದ ಸ್ವಾತಂತ್ರ್ಯದ ಮೇಲಿನ ಕಪ್ಪು ಬಟ್ಟೆ’ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.

ಮುಗಿಯದ ಪ್ರಶ್ನೆಗಳು, ಮುಂದುವರಿಯುವ ಚರ್ಚೆಗಳು

ಈ ಘಟನೆಯಿಂದ ಒಂದು ದೊಡ್ಡ ಪ್ರಶ್ನೆ ಉದ್ಭವಿಸಿದೆ. ಉದ್ಯೋಗಿಗಳಿಗೆ ತಮ್ಮ ಮೌಲ್ಯಗಳು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಲು ಇರುವ ಸ್ವಾತಂತ್ರ್ಯ ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಕಂಪನಿಯ ಪ್ರತಿಕ್ರಿಯೆ, ಉದ್ಯೋಗಿಗಳ ಸಾಥ್ ಮತ್ತು ಸಾರ್ವಜನಿಕ ಅಭಿಪ್ರಾಯ ಹೇಗೆ ಇರಲಿದೆ ಎಂಬುದರ ಆಧಾರದಲ್ಲಿ ಉತ್ತರಗಳು ಸ್ಪಷ್ಟವಾಗಲಿವೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!