ಇಸ್ರೇಲ್ ಮೇಲೆ ಇರಾನ್ ದಾಳಿಗೆ ಜಾಗತಿಕ ಖಂಡನೆ

By Kannadaprabha NewsFirst Published Apr 15, 2024, 6:32 AM IST
Highlights

ಮಧ್ಯಪ್ರಾಚ್ಯದಲ್ಲಿ ಇರಾನ್‌ ಮತ್ತು ಇಸ್ರೇಲ್‌ ನಡುವೆ ಯುದ್ಧ ಆರಂಭವಾಗಿರುವ ನಡುವೆಯೇ ಜಾಗತಿಕ ಸಮುದಾಯದಿಂದ ಇಸ್ರೇಲ್‌ಗೆ ಬೆಂಬಲ ವ್ಯಕ್ತವಾಗಿದ್ದು, ಇರಾನ್‌ ದಾಳಿಗೆ ಖಂಡನೆ ವ್ಯಕ್ತವಾಗಿದೆ. ಇರಾನ್‌ ಕ್ಷಿಪಣಿ ದಾಳಿಯನ್ನು ನಿಗ್ರಹಿಸಲು ಅಮೆರಿಕ, ಯುಕೆ ಮುಂತಾದ ರಾಷ್ಟ್ರಗಳು ಶಸ್ತ್ರಾಸ್ತ್ರ ಒದಗಿಸುವ ಮೂಲಕ ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿವೆ.

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಇರಾನ್‌ ಮತ್ತು ಇಸ್ರೇಲ್‌ ನಡುವೆ ಯುದ್ಧ ಆರಂಭವಾಗಿರುವ ನಡುವೆಯೇ ಜಾಗತಿಕ ಸಮುದಾಯದಿಂದ ಇಸ್ರೇಲ್‌ಗೆ ಬೆಂಬಲ ವ್ಯಕ್ತವಾಗಿದ್ದು, ಇರಾನ್‌ ದಾಳಿಗೆ ಖಂಡನೆ ವ್ಯಕ್ತವಾಗಿದೆ. ಇರಾನ್‌ ಕ್ಷಿಪಣಿ ದಾಳಿಯನ್ನು ನಿಗ್ರಹಿಸಲು ಅಮೆರಿಕ, ಯುಕೆ ಮುಂತಾದ ರಾಷ್ಟ್ರಗಳು ಶಸ್ತ್ರಾಸ್ತ್ರ ಒದಗಿಸುವ ಮೂಲಕ ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಾತನಾಡಿ, ‘ಇಸ್ರೇಲ್‌ಗೆ ನಾವು ಉಕ್ಕಿನಷ್ಟೇ ಗಟ್ಟಿಯಾದ ಬದ್ಧತೆ ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ನಮ್ಮ ಸೇನಾಪಡೆಗಳನ್ನು ಕಳುಹಿಸಿ ಇರಾನ್‌ ಕ್ಷಿಪಣಿ ದಾಳಿಯನ್ನು ನಿಗ್ರಹಿಸಲು ಸಹಾಯ ಮಾಡಿದ್ದೇವೆ. ಇಷ್ಟೇ ಅಲ್ಲದೆ ಜಿ-7 ರಾಷ್ಟ್ರಗಳ ನಾಯಕರ ಜೊತೆ ಸಮಾಲೋಚಿಸಿ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುತ್ತದೆ’ ಎಂದಿದ್ದಾರೆ.

ಇರಾನ್‌ ದಾಳಿಯನ್ನು ಇಸ್ರೇಲ್‌ ಹಿಮ್ಮೆಟ್ಟಿಸಿದ್ದು ಹೇಗೆ?

ಬ್ರಿಟನ್‌ ಅಧ್ಯಕ್ಷ ರಿಷಿ ಸುನಕ್‌ ಸಹ ಇಸ್ರೇಲ್‌ಗೆ ತಮ್ಮ ಅತ್ಯಾಧುನಿಕ ವಾಯುನೌಕೆಗಳನ್ನು ಕಳುಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌ ಕೂಡ, ‘ಪ್ರಪಂಚವು ಮತ್ತೊಂದು ಯುದ್ಧವನ್ನು ಬಯಸುತ್ತಿಲ್ಲ’ ಎಂದು ಪರೋಕ್ಷವಾಗಿ ಉಭಯ ರಾಷ್ಟ್ರಗಳಿಗೆ ಶಾಂತಿ ಸಂಧಾನಕ್ಕೆ ಬದ್ಧರಾಗಬೇಕು’ ಎಂದು ತಿಳಿಸಿದ್ದಾರೆ.

click me!