ಚೀನಾ ರೀತಿ ಹಬ್ಬಿದ್ದರೆ 77000 ಭಾರತೀಯರಿಗೆ ಕೊರೋನಾ ಬರ್ತಿತ್ತು!

Published : Mar 16, 2020, 10:19 AM ISTUpdated : Mar 16, 2020, 03:28 PM IST
ಚೀನಾ ರೀತಿ ಹಬ್ಬಿದ್ದರೆ 77000 ಭಾರತೀಯರಿಗೆ ಕೊರೋನಾ ಬರ್ತಿತ್ತು!

ಸಾರಾಂಶ

ಸ್ಪೇನ್‌, ಇರಾನ್‌ನಲ್ಲಿ ಒಂದೇ ದಿನ ತಲಾ 100 ಸಾವು| 6000 ಗಡಿ ದಾಟಿದ ಸಾವು| ಚೀನಾ ರೀತಿ ಹಬ್ಬಿದ್ದರೆ 77000 ಭಾರತೀಯರಿಗೆ ಕೊರೋನಾ ಬರ್ತಿತ್ತು!

ನವದೆಹಲಿ[ಮಾ.16]: ಚೀನಾ ರೀತಿ ಏನಾದರೂ ಕೊರೋನಾ ವೈರಸ್‌ ಭಾರತದಲ್ಲೂ ವ್ಯಾಪಿಸಿದ್ದರೆ ದೇಶದಲ್ಲಿ ಈವರೆಗೆ ಕನಿಷ್ಠ 77,583 ಮಂದಿಗೆ ಸೋಂಕು ತಗುಲಬೇಕಿತ್ತು ಎಂದು ತಜ್ಞರು ಅಂದಾಜಿಸಿದ್ದಾರೆ.

"

ಚೀನಾದಲ್ಲಿ ಪ್ರತಿ 10 ಲಕ್ಷ ಜನರ ಪೈಕಿ ಸರಾಸರಿ 56 ಮಂದಿಯಲ್ಲಿ ಕೊರೋನಾ ಕಂಡುಬಂದಿದೆ. ಆದರೆ ಭಾರತದಲ್ಲಿ ಈ ಪ್ರಮಾಣ ಇನ್ನೂ 1ರ ಗಡಿಗೂ ಬಂದಿಲ್ಲ. ಚೀನಾದಷ್ಟುಜನರನ್ನು ವ್ಯಾಪಿಸಿದ್ದರೆ ಭಾರತದಲ್ಲಿ ಅನಾಹುತವಾಗಿಬಿಡುತ್ತಿತ್ತು ಎಂದು ಹೇಳಲಾಗಿದೆ.

ಕೊರೋನಾ ಅಟ್ಟಹಾಸಕ್ಕೆ ಜಗತ್ತೇ ತಲ್ಲಣ! ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6000 ಗಡಿ ದಾಟಿದ ಸಾವು

ವಿಶ್ವಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 6000ದ ಗಡಿ ದಾಟಿದ್ದು, 6036ಕ್ಕೇರಿಕೆಯಾಗಿದೆ. 1,59,844 ವ್ಯಕ್ತಿಗಳಲ್ಲಿ ಸೋಂಕು ಕಂಡುಬಂದಿದೆ. ಭಾನುವಾರ ಒಂದೇ ದಿನ ಇರಾನ್‌ನಲ್ಲಿ 113 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ ಆ ದೇಶದಲ್ಲಿ ಮೃತರ ಸಂಖ್ಯೆ 724ಕ್ಕೇರಿಕೆಯಾಗಿದೆ.

ಇದೇ ವೇಳೆ, ಸ್ಪೇನ್‌ನಲ್ಲಿ 105 ಮಂದಿ ಸಾವನ್ನಪ್ಪಿದ್ದು, ಬಲಿಯಾದವರ ಸಂಖ್ಯೆ 288ಕ್ಕೆ ತಲುಪಿದೆ. ಚೀನಾದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, 3199 ಮಂದಿ ನಿಧನರಾಗಿದ್ದಾರೆ. ನಂತರದ ಸ್ಥಾನದಲ್ಲಿ 1907 ಸಾವುಗಳೊಂದಿಗೆ ಇಟಲಿ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?