ಕಾಲೇಜಿನಲ್ಲಿ ಹುಡುಗ, ಹುಡುಗಿಯರ ಪ್ರತ್ಯೇಕಿಸಲು ಕರ್ಟನ್, ತಾಲಿಬಾನ್ ಉಗ್ರ ಹಕ್ಕಾನಿ ಆದೇಶ!

By Suvarna NewsFirst Published Sep 6, 2021, 6:08 PM IST
Highlights
  • ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ, ಕಟ್ಟುನಿಟ್ಟಿನ ನಿಯಮ ಜಾರಿ
  • ಒಂದೇ ಕೋಣೆಯಲ್ಲಿ ಒಟ್ಟಿಗೆ ಹುಡುಗ ಹುಡುಗಿ ಅಭ್ಯಾಸ ಮಾಡುವಂತಿಲ್ಲ
  • ಜೊತೆಯಾಗಿ ಹೋಗುವಂತಿಲ್ಲ, ಕ್ಯಾಂಪಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವಂತಿಲ್ಲ
  • ಕೋಣೆಗಳಿಲ್ಲದ ಕಾರಣ ಕರ್ಟನ್ ಮೂಲಕ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನ ಪ್ರತ್ಯೇಕಿಸಿದ ಕಾಲೇಜು

ಕಾಬೂಲ್(ಸೆ.06): ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ದಿನಕ್ಕೊಂದರಂತೆ ರೂಲ್ಸ್ ಜಾರಿಯಾಗುತ್ತಿದೆ. ಮಹಿಳೆಯರು, ಮಕ್ಕಳಿಗೆ ಅಕ್ಷರಶಃ ನರಕವಾಗಿದೆ. ಇದು ತಾಲಿಬಾನ್ ಉಗ್ರರ ಆಡಳಿತದ ಪರಿಣಾಮ. ತಾಲಿಬಾನ್ ಉಗ್ರ ಸಂಘಟನೆ ಮುಖ್ಯಸ್ಥ ಅಬ್ದುಲ್ ಬಖಿ ಹಕ್ಕಾನಿ ಆದೇಶದಿಂದ ಇದೀಗ ವಿಶ್ವವಿದ್ಯಾಲಯದಲ್ಲಿ ಹುಡುಗ ಹುಡುಗಿಯರನ್ನು ಕರ್ಟನ್ ಮೂಲಕ ಪ್ರತ್ಯೇಕಿಸಿ ತರಗತಿ ಆರಂಭಿಸಲಾಗಿದೆ.

ಹೋರಾಡಿ ಸತ್ತರೆ ಇತಿಹಾಸ ಎಂದ ಪಂಜಶೀರ್ ನಾಯಕನ ಹತ್ಯೆಗೈದ ತಾಲಿಬಾನ್!

ತಾಲಿಬಾನ್ ಉಗ್ರರ ಹೊಸ ನಿಯಮದಲ್ಲಿ ಹುಡುಗಿಯರ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಹುಡುಗರ ಜೊತೆ ಒಂದೇ ತರಗತಿಯಲ್ಲಿ ಅಭ್ಯಾಸ ಮಾಡುವಂತಿಲ್ಲ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಜೊತೆ ಕಾಣಿಸಿಕೊಳ್ಳುವಂತಿಲ್ಲ. ಜೊತೆಯಾಗಿ ಓಡಾಡುವಂತಿಲ್ಲ. ತರಗತಿ ಬಳಿಕ ನೇರವಾಗಿ ಮನೆ ತಲುಪಬೇಕು ಎಂದು ಹಂಗಾಮಿ ಶಿಕ್ಷಣ ಸಚಿವ, ಉಗ್ರ ಹಕ್ಕಾನಿ ಆದೇಶ ಹೊರಡಿಸಿದ್ದಾನೆ.. ಆದರೆ ಹುಡುಗಿಯರಿಗೆ ಪ್ರತ್ಯೇಕ ಶಿಕ್ಷಣ ನೀಡಲು ಆಫ್ಘಾನಿಸ್ತಾನದಲ್ಲಿರುವ ಕಾಲೇಜುಗಳಲ್ಲಿ ಕೋಣೆಗಳೇ ಇಲ್ಲ. ಹೀಗಾಗಿ ಇರುವ ತರಗತಿಗಳಲ್ಲಿ ಕರ್ಟನ್ ಹಾಕಿ ಹುಡುಗ, ಹುಡುಗಿಯರನ್ನು ಪ್ರತ್ಯೇಕಿಸಲಾಗಿದೆ.

 

The beginning of universities under the Government of the Taliban regime in Kabul pic.twitter.com/gChPmr1Ctf

— Nadia Momand (@NadiaMomand)

ಆಫ್ಘಾನಿಸ್ತಾನದ ಹಲವು ವಿಶ್ವವಿದ್ಯಾಲಯದ ತರಗತಿಗಳು ಆರಂಭಗೊಂಡಿದೆ. ಕೋಣೆಗಳು, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರ್ಟನ್ ಹಾಕಲಾಗಿದೆ. ಇನ್ನು ಕೆಲ ಕಾಲೇಜುಗಳಲ್ಲಿ ಹಲಗೆ, ಶೀಟ್‌ಗಳನ್ನು ಅಡ್ಡಲಾಗಿ ಹಾಕಿ ತರಗತಿ ಆರಂಭಿಸಿದೆ.

ಗಾಯಗೊಂಡರೆ ತಲೆಗೆ ಗುಂಡಿಕ್ಕಿ ಆದರೆ ತಾಲಿಬಾನ್‌ಗೆ ಶರಣಾಗಲ್ಲ;ಸಿಬ್ಬಂದಿಗೆ ಅಮರುಲ್ಲಾ ಸಲೇಹ್ ಸೂಚನೆ!

ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಹಂಗಾಮಿ ಶಿಕ್ಷಣ ಸಚಿವ ಹಕ್ಕಾನಿ, ಇಸ್ಲಾಂ ನಿಯಮದ ಪ್ರಕಾರ ಕೋ ಎಜುಕೇಶನ್ ಸಾಧ್ಯವಿಲ್ಲ. ಭವಿಷ್ಯದಲ್ಲೂ ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಶ್ವವಿದ್ಯಾಲಯಗಳು ಈ ನಿಯಮ ಅನುಸರಿಸಬೇಕು ಎಂದು ಆದೇಶ ಹೊರಡಿಸಿದ್ದಾನೆ.

 

First day of Ibn-e- Sina University in Kabul under Taliban.
But Dear Talibans please provide them separate campused SEKHO KUCH ISLAMIC SAY 🙂 pic.twitter.com/fj8xfmrfxo

— مہوش (@_Mehvish__)

ಗುಂಡು ಹಾರಿಸಿ ತಾಲಿಬಾನ್‌ ವಿಜಯೋತ್ಸವ: ಮಕ್ಕಳು ಸೇರಿ 17 ಸಾವು!

ಹಕ್ಕಾನಿ ಆದೇಶದ ಬಳಿಕ ಕಾಲೇಜು ಆರಂಭಗೊಂಡಿದೆ. ಆದರೆ ಬೆರಳೆಣಿಕೆ ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗಿದ್ದಾರೆ. ಹುಡುಗಿಯರು, ಮಹಿಳೆಯರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಹೊರಬಂದರೆ ಸಣ್ಣ ತಪ್ಪು ಹುಡುಗಿ ಅಲ್ಲೆ ಹತ್ಯೆ ಮಾಡುವ ಭಯದಿಂದ ಕಾಲೇಜು, ಶಿಕ್ಷಣದಿಂದ ದೂರ ಉಳಿದಿದ್ದಾರೆ.

click me!