ಹೋರಾಡಿ ಸತ್ತರೆ ಇತಿಹಾಸ ಎಂದ ಪಂಜಶೀರ್ ನಾಯಕನ ಹತ್ಯೆಗೈದ ತಾಲಿಬಾನ್!

Published : Sep 06, 2021, 05:27 PM IST
ಹೋರಾಡಿ ಸತ್ತರೆ ಇತಿಹಾಸ ಎಂದ ಪಂಜಶೀರ್ ನಾಯಕನ ಹತ್ಯೆಗೈದ ತಾಲಿಬಾನ್!

ಸಾರಾಂಶ

ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಆಫ್ಘಾನಿಸ್ತಾನ ವಕ್ತಾರನ ಹತ್ಯೆ ದೇಶಕ್ಕಾಗಿ ಹೋರಾಡಿ ಮರಣವನ್ನಪ್ಪಿದರೆ ಇತಿಹಾಸ ಎಂದಿದ್ದ ವಕ್ತಾರ ಪಂಜಶೀರ್‌ನ ಫಾಹಿಮ್ ಡಾಶ್ಟಿ ಹತ್ಯೆಗೈದ ತಾಲಿಬಾನ್

ನವದೆಹಲಿ(ಸೆ.05): ತಾಲಿಬಾನ್ ವಿರುದ್ಧ ದಶಕಗಳಿಂದ ಹೋರಾಡುತ್ತಿರುವ ಪಂಜಶೀರ್‌ನ ನ್ಯಾಶನಲ್ ರೆಸಿಸ್ಟೆನ್ಸ್  ಫ್ರಂಟ್ ಆಫ್ ಆಫ್ಘಾನಿಸ್ತಾನ(NRFA) ಹೋರಾಡುತ್ತಿದೆ. ಇದೀಗ ತಾಲಿಬಾನ್ ಅಟ್ಟಹಾಸದ ನಡುವೆ ಹಲವು ನಾಯಕರಿಗೆ ಆಶ್ರಯ ನೀಡಿ ತಾಲಿಬಾನ್ ವಿರುದ್ಧವೇ ತೊಡೆತಟ್ಟಿರುವ ಪಂಜಶೀರ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ NRFA ವಕ್ತಾರ ಫಾಹಿಮ್ ಡಾಶ್ಟಿ ಹತ್ಯೆಯಾಗಿದ್ದಾರೆ.

ಗಾಯಗೊಂಡರೆ ತಲೆಗೆ ಗುಂಡಿಕ್ಕಿ ಆದರೆ ತಾಲಿಬಾನ್‌ಗೆ ಶರಣಾಗಲ್ಲ;ಸಿಬ್ಬಂದಿಗೆ ಅಮರುಲ್ಲಾ ಸಲೇಹ್ ಸೂಚನೆ!

ಕಾಬೂಲ್ ಕೈವಶ ಮಾಡಿದ ಬಳಿಕ ತಾಲಿಬಾನ್ ವಿರುದ್ದ ಆಕ್ರೋಶ ಹೊರಹಾಕಿದ್ದ ಫಾಹಿಮ್ ಡಾಶ್ಟಿ, ದೇಶಕ್ಕಾಗಿ ಹೋರಾಡಿ ವೀರಮರಣನ್ನಪ್ಪಿದರೆ ಇತಿಹಾಸ ನಿರ್ಮಾಣವಾಗುತ್ತದೆ. ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ಮುಂದುವರಿಯುತ್ತದೆ. ಅಮಾಯಕ ಜನರಿಗೆ ಸ್ವಾತಂತ್ರ್ಯ ಬೇಕಿದೆ. ತಾಲಿಬಾನ್‌ನಿಂದ ದೇಶ ಮುಕ್ತವಾಗುವ ವರೆಗೂ ಹೋರಾಟ ನಡೆಯಲಿದೆ ಎಂದು ಫಾಹಿಮ್ ಡಾಶ್ಟಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಇದೇ ಫಾಹಿಮ್ ತಾಲಿಬಾನ್ ದಾಳಿಗೆ ಹತ್ಯೆಯಾಗಿದ್ದಾರೆ.

ಫಾಹಿಮ್ ಹತ್ಯೆಯನ್ನು ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಆಫ್ಘಾನಿಸ್ತಾನ ಮುಖ್ಯಸ್ಥ ಅಹಮ್ಮದ್ ಮಸೂದ್ ಟ್ವೀಟರ್ಮೂಲಕ ಹೇಳಿಕೊಂಡಿದ್ದಾರೆ. ಫಾಹಿಮ್ ಉತ್ತಮ ಸ್ನೇಹಿತ ಹಾಗೂ ಸಹೋದರ. ದೂರ ದೃಷ್ಟಿ ಹೊಂದಿದ್ದ ಫಾಹಿಮ್, ವಾಕ್ಚಾತುರ್ಯ ಹಾಗೂ ಆದರ್ಶದ ವ್ಯಕ್ತಿ. ತಾಯ್ನಾಡಿಗೆ ಹೋರಾಟ ವೀರಣಮರಣವನ್ನಪ್ಪಿದರು ಎಂದು ಅಹಮ್ಮದ್ ಮಸೂದ್ ಟ್ವೀಟ್ ಮಾಡಿದ್ದಾರೆ.

 

ತಾಲಿಬಾನ್ ಸರ್ಕಾರದಲ್ಲಿ ಕೈಜೋಡಿಸುವಂತೆ ಫಾಹಿಮ್ ಡಾಶ್ಟಿಗೆ ಉಗ್ರರು ಮನವಿ ಮಾಡಿದ್ದರು. ಆದರೆ ಉಗ್ರರಿಗೆ ನಮ್ಮ ಬೆಂಬಲವಿಲ್ಲ ಎಂದಿದ್ದ ಪಾಹಿಮ್ ಇದೀಗ ಹತ್ಯೆಯಾಗಿದ್ದಾರೆ. ಪಂಜಶೀರ್ ಮೇಲೆ 10 ಸಾವಿರಕ್ಕೂ ಹೆಚ್ಚು ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ.

ಬಿಬಿಸಿ ವಿಶ್ವಾಸಾರ್ಹತೆಗೆ ಕಪ್ಪುಚುಕ್ಕೆ: ಅಪ್ಘಾನಿಸ್ತಾನದಲ್ಲಿ ಪಾಕ್‌ ಕುತಂತ್ರ ಹೊಗಳಿದ ನಿರೂಪಕಿ!

ಪಂಜಶೀರ್ ಕಮಾಂಡೋಸ್ ಕೂಡ ಪ್ರತಿದಾಳಿ ನಡೆಸಿದ್ದಾರೆ. ಆದರೆ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಸೇನೆ ನೆರವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ವಾಯುಸೇನೆಯನ್ನೂ ಬಳಸಿಕೊಂಡು ಪಂಜಶೀರ್ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ