ಚೀನಾಗೆ 130 ಬಿಲಿಯನ್ ಪೌಂಡ್ ಕೊರೋನಾ ನಷ್ಟ ಪರಿಹಾರ ಬಿಲ್ ಕಳುಹಿಸಿದ ಜರ್ಮನಿ!

By Suvarna NewsFirst Published Apr 20, 2020, 10:07 PM IST
Highlights

ಚೀನಾದಲ್ಲಿ ಬಿರುಗಾಳಿಯಿಂದ ಎದ್ದ ಕೊರೋನಾ ವೈರಸ್ ಇದೀಗ ಸುನಾಮಿಯಂತೆ ವಿಶ್ವದೆಲ್ಲಡೆ ತನ್ನ ಆರ್ಭಟ ಮುಂದುವರಿಸಿದೆ. ಕೊರೋನಾ ಕಾರಣ ವಿಶ್ವವೇ ಸ್ಥಗಿತಗೊಂಡಿದೆ. ವೈರಸ್‌ಗೆ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ದೇಶದ ಆರ್ಥಿಕತೆ ಕುಸಿದಿದೆ. ಜರ್ಮನಿಯಲ್ಲೂ ಪರಿಸ್ಛಿತಿ ಗಂಭೀರವಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಜರ್ಮಿ ಚೀನಾ ಕಾರಣದಿಂದ ಜರ್ಮನಿಗೆ  ತನಗಾಗಿರುವ ನಷ್ಟದ ಮೊತ್ತದ ಬಿಲ್‌ನ್ನು ಚೀನಾಗೆ ಕಳುಹಿಸಿದೆ.

ಬರ್ಲಿನ್(ಏ.20): ಕೊರೋನಾ ವೈರಸ್‌ಗೆ ತುತ್ತಾದ ದೇಶಗಳಲ್ಲಿ ಜರ್ಮನಿ ಕೂಡ ಒಂದು. ಚೀನಾದಿಂದ ಜರ್ಮನಿಗೆ ವೈರಸ್ ಹರಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಬರೋಬ್ಬರಿ 1.45 ಲಕ್ಷ ಜನರಿಗೆ ಕೊರೋನಾ ಮಹಾಮಾರಿ ತಗುಲಿತ್ತು. ಹೀಗಾಗಿ ಇತರ ದೇಶಕ್ಕಿಂತ ಮೊದಲೇ ಜರ್ಮನಿಯಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಹೀಗಾಗಿ ಜರ್ಮನಿ ಬಹುಬೇಗನೆ ಚೇತರಿಸಿಕೊಂಡಿತು. ಇದೀಗ ಕೆಲ ಭಾಗದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ.

ಚೀನಾ ಲ್ಯಾಬ್‌ನಿಂದಲೇ ವೈರಸ್ ಲೀಕ್: ಏಡ್ಸ್‌ ಔಷಧ ತಯಾರಿ ವೇಳೆ ಎಡವಟ್ಟು!

ಚೇತರಿಕೆ ಕಾಣುತ್ತಿದ್ದಂತೆ ಜರ್ಮನಿ ಆರೋಗ್ಯ ತುರ್ತು ಪರಿಸ್ಥಿತಿ, ಜನರ ಜೀವದ ಜೊತೆ ಚೆಲ್ಲಾಟ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾದ ಚೀನಾ ವಿರುದ್ಧ ಗುಡುಗಿದೆ. ಜರ್ಮನಿಯ ಪ್ರಸಿದ್ದ ಪತ್ರಿಕೆಯೊಂದು ಕೊರೋನಾ ವೈರಸ್ ಹಾವಳಿಯಿಂದ ಜರ್ಮನಿಗೆ  12,41,22,12,53 ರೂಪಾಯಿ(130 ಬಿಲಿಯನ್ ಪೌಂಡ್) ನಷ್ಟವಾಗಿದೆ. ಯಾವ ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ನಷ್ಟವಾಗಿದೆ ಅನ್ನೋ ಸಂಪೂರ್ಣ ವಿವದ ಬಿಲ್‌ನ್ನು ಪ್ರಕಟಿಸಿದೆ. ಇಷ್ಟೇ ಅಲ್ಲ ಈ ಬಿಲ್ ಬೀಜಿಂಗ್‌ಗೆ ಕಳುಹಿಸುತ್ತಿದ್ದೇವೆ ಎಂದು ಪ್ರಕಟಿಸಿದೆ.

ವುಹಾನ್‌ ಲ್ಯಾಬ್‌ನ ಶಾಕಿಂಗ್ ಫೋಟೋ ರಿವೀಲ್: ವೈರಸ್ ಇಟ್ಟಿದ್ದ ಫ್ರಿಡ್ಜ್ ಒಮ್ಮೆ ನೋಡಿ

ಜಗತ್ತಲ್ಲೇ ಇಲ್ಲದ ಹೊಸ ರೋಗ ಹುಟ್ಟಿಸಿ ವಿಶ್ವಕ್ಕೆ ಮಾರಕವಾದ ಚೀನಾ ವಿರುದ್ಧ ಇದೀಗ ಹಲವ ದೇಶಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ. ಅಮೆರಿಕಾ ಈಗಾಗಲೇ ಚೀನಾ ವೈರಸ್, ವುಹಾನ್ ವೈರಸ್ ಎಂದು ನೇರ ಆರೋಪ ಮಾಡಿದೆ. ಇತ್ತ ಯುರೂಪಿಯನ್ ಹಲವು ದೇಶಗಳು ಚೀನಾ ವಿರುದ್ದ ಕೆಂಡ ಕಾರಿವೆ. ಜರ್ಮನಿ ಪತ್ರಿಕೆ ಇದೀಗ ಚೀನಾ ವಿರುದ್ಧ ಹರಿಹಾಯ್ದಿದೆ. ಪತ್ರಿಕೆ ಸವಿಸ್ತರವಾದ ಬಿಲ್ ವಿವರ ಇಲ್ಲಿದೆ.

ಜರ್ಮನಿ ಟೂರಿಸಂ ನಷ್ಟ = 27 ಬಿಲಿಯನ್ ಯುರೋ
ಜರ್ಮನಿ ಸಿನಿಮಾ ಕ್ಷೇತ್ರದ ನಷ್ಟ = 7.2 ಬಿಲಿಯನ್ ಯೂರೋ
ಜರ್ಮನ್ ಏರ್‌ಲೈನ್ ನಷ್ಟ = ಮಿಲಿಯನ್ ಯುರೂ
ಜರ್ಮನ್ ಸಣ್ಣ ಕೈಗಾರಿಕೆ ನಷ್ಟ = 50 ಬಿಲಿಯನ್ ಯೂರೋ
ಜರ್ಮನ್ ಜಿಡಿಪಿ 4.2 ರಷ್ಟು ಕುಸಿತು
ಜರ್ಮನಿ ಪ್ರತಿ ಪ್ರಜೆಗೆ 1,784 ಯೂರೋ ನಷ್ಟ

ಹೀಗೆ ಎಲ್ಲಾ ನಷ್ಟಗಳನ್ನು ಲೆಕ್ಕಹಾಕಿರುವ ಪತ್ರಿಕೆ ಒಟ್ಟು 130 ಬಿಲಿಯನ್ ಪೌಂಡ್ ಹಣ ಚೀನಾ ನೀಡಬೇಕು ಎಂದು ವರದಿ ಪ್ರಕಟಿಸಿದೆ. ಇದೀಗ ಈ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

click me!