ಅಮೆರಿಕಾದಲ್ಲಿ ಕೊರೋನಾ ವೈರಸ್‌ಗೆ ಬಲಿಯಾಗುತ್ತಿದ್ದವರ ಸಂಖ್ಯೆ ಏರುತ್ತಲೇ ಇದೆ. ಡೋನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕ್ರಮಗಳು ಪರಿಣಾಮಕಾರಿಯಾಗುತ್ತಿಲ್ಲ. ಇತ್ತ ಪ್ರತಿ ದಿನ ಸಾವನ್ನಪ್ಪುತ್ತಿರುವರಿಗೆ ಅಮೆರಿಕದ ಬೋಸ್ಟನ್ ಗ್ಲೋಬ್ ಪತ್ರಿಕೆ ಶ್ರದ್ದಾಂಜಲಿ ಅರ್ಪಿಸುತ್ತಿದೆ. ಇದೀಗ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪತ್ರಿಕೆ 15 ಪುಟವನ್ನು ಶ್ರದ್ದಾಂಜಲಿಗೆ ಮೀಸಲಿಟ್ಟಿದೆ.
ಅಮೆರಿಕ(ಏ.20): ಕೊರೋನಾ ವೈರಸ್‌ಗೆ ಅಮೆರಿಕ ತತ್ತರಿಸಿದೆ. ಸಾವಿನ ಸಂಖ್ಯೆ ಏರುತ್ತಿದೆ. ಇತ್ತ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ನಿನ್ನೆ(ಏ.19) ಒಂದೇ ದಿನ ಅಮೆರಿಕಾದಲ್ಲಿ 33,400 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿತ್ತು. ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ದಿಕ್ಕೇ ತೋಚದಂತಾಗಿದೆ. ಈಗಾಗಲೇ ಅಮೆರಿಕಾದಲ್ಲಿ 41,114 ಜನ ಕೊರೋನಾ ವೈರಸ್‌ಗೆ ಸಾವನ್ನಪ್ಪಿದ್ದಾರೆ. ಇದೀಗ ಅಮೆರಿಕಾದ ಬೋಸ್ಟನ್ ಗ್ಲೋಬ್ ಪತ್ರಿಕೆ 15 ಪುಟಗಳನ್ನು ಶ್ರದ್ದಾಂಜಲಿಗೆ ಮೀಸಲಿಟ್ಟಿದೆ.
ಚೀನಾ ಲ್ಯಾಬ್‌ನಿಂದಲೇ ವೈರಸ್ ಲೀಕ್: ಏಡ್ಸ್ ಔಷಧ ತಯಾರಿ ವೇಳೆ ಎಡವಟ್ಟು!.
ಅಮೆರಿಕದ ಪ್ರಖ್ಯಾತ ಪತ್ರಿಕೆ ಬೋಸ್ಟನ್ ಗ್ಲೋಬ್ ಭಾನವಾರ 15 ಪುಟಗಳನ್ನು ಶ್ರದ್ದಾಂಜಲಿಗೆ ಮೀಸಲಿಟ್ಟಿದೆ. ಪತ್ರಿಕೆಯ 13ನೇ ಪುಟದಿಂದ 28ನೇ ಪುಟದವರಿಗೆ ಪ್ರತಿ ದಿನ ಕೊರೋನಾ ವೈರಸ್‌ಗೆ ಬಲಿಯಾದರಿಗೆ ಶ್ರದ್ದಾಂಜಲಿ ಅರ್ಪಿಸಿದೆ. ಅಮೆರಿಕಾದ ಮೆಸಾಚುಸೆಟ್ಸ್, ರೊಡೆ ಐಸ್‌ಲ್ಯಾಂಡ್, ಮೈನೆ, ನ್ಯೂ ಹ್ಯಾಂಪ್‌ಶೈರ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಮೆರಿಲ್ಯಾಂಡ್, ಮಿಚಿಗನ್, ನ್ಯೂಜರ್ಸಿ, ನ್ಯೂಯಾರ್ಕ್, ನಾರ್ತ್ ಕೆರೋಲಿನಾ, ಟೆಕ್ಸಾಸ್ ಸೇರಿದಂತೆ ಎಲ್ಲಾ ಭಾಗದಲ್ಲಿ ಕೊರೋನಾಗೆ ಮಡಿವರಿಗೆ ಶ್ರದ್ದಾಂಜಲಿ ಅರ್ಪಿಸುತ್ತಿದೆ.
ಬೋಸ್ಟನ್ ಗ್ಲೋಬ್ ದಿನಪತ್ರಿಕೆಯ ಶ್ರದ್ದಾಂಜಲಿ ಪುಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ಹಂಚಿಕೊಂಡಿದ್ದಾರೆ. ಭಾನುವಾರ ಹೆಟ್ಟಾಗಿ 4 ರಿಂದ 5 ಪುಟಗಳ ಶ್ರದ್ದಾಂಜಲಿ ನೋಡಿದ್ದೇವೆ. ಆದರೆ ಈ ಸಂದರ್ಭದಲ್ಲಿ ಬೋಸ್ಟನ್ ಗ್ಲೋಬ್ ಪತ್ರಿಕೆ 15 ಪುಟಗಳನ್ನು ಮೀಸಲಿಟ್ಟಿರುವುದು ನಿಜಕ್ಕೂ ಗ್ರೇಟ್ ಎಂದು ಓದುಗರು ಪ್ರತಿಕ್ರಿಯಿಸಿದ್ದಾರೆ.
15 pages of obituaries in The Boston Globe today. pic.twitter.com/DdcWiy2hvx
— Nancy Palmer (@npalmerrothman)ಕಳೆದ ತಿಂಗಳು ಇಟಲಿಯ ಬರ್ಗಾಮೊ ಪತ್ರಿಕೆ 15 ಪುಟಗಳನ್ನು ಶ್ರದ್ದಾಂಜಲಿಗೆ ಮೀಸಲಿಟ್ಟಿತ್ತು.
a month ago a video from Bergamo Italy showed page after page of obituaries ... Boston Globe Obituaries April 19, 2020
15 Pages.
and we are not yet at the point on the curve that Bergamo was when the video was made https://t.co/zuJplodb85 pic.twitter.com/9kkVhBm7SK