* ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಭಾರೀ ವಂಚನೆ ನಡೆಸಿದ್ದ ಚೋಕ್ಸಿ
* ಮತ್ತೆ ಕಿಡ್ನಾಪ್ ಆಗುವ ಭಯ ವ್ಯಕ್ತಪಡಿಸಿದ ವಂಚಕ
* ಈ ಹಿಂದೆ ತನ್ನನ್ನು ಅಕ್ರಮವಾಗಿ ಗಯಾನಾಗೆ ಕರೆದೊಯ್ಯಲಾಗಿತ್ತು ಎಂದು ಆರೋಪಿಸಿದ ಚೋಕ್ಸಿ
ಆಂಟಿಗುವಾ(ನ.29): ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ (Punjab National Bank Scam) ಭಾರೀ ವಂಚನೆ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi) ಮತ್ತೊಮ್ಮೆ ಅಪಹರಣಕ್ಕೊಳಗಾಗುವ ಭೀತಿ ವ್ಯಕ್ತಪಡಿಸಿದ್ದಾರೆ. ಚೋಕ್ಸಿ ತನ್ನನ್ನು ಮತ್ತೆ ಕಿಡ್ನಾಪ್ ಮಾಡಿ ಗಯಾನಾಗೆ (Guyana) ಕರೆದೊಯ್ಯಬಹುದೆಂಬ ಭಯ ಕಾಡುತ್ತಿದೆ. ಈ ಹಿಂದೆ ತನ್ನನ್ನು ಅಕ್ರಮವಾಗಿ ಗಯಾನಾಗೆ ಕರೆದೊಯ್ಯಲಾಗಿತ್ತು ಎಂದು ಮೆಹುಲ್ ಚೋಕ್ಸಿ ಹೇಳಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚೋಕ್ಸಿ ಈ ವಿಷಯಗಳನ್ನು ಹೇಳಿದ್ದಾರೆ.
'ನನ್ನನ್ನು ಮತ್ತೊಮ್ಮೆ ಕಿಡ್ನಾಪ್ (Kidnap) ಮಾಡಬಹುದು ಮತ್ತು ಭಾರತೀಯ ಉಪಸ್ಥಿತಿಯನ್ನು ಹೊಂದಿರುವ ಗಯಾನಾಕ್ಕೆ ಕರೆದೊಯ್ಯಬಹುದು. ನನ್ನನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ಭಾರತಕ್ಕೆ (India) ಕರೆದೊಯ್ಯಬಹುದು' ಎಂದು ಚೋಕ್ಸಿ ವಿಡಿಯೋದಲ್ಲಿ ಹೇಳಿದ್ದಾರೆ. 'ಸದ್ಯ ನಾನು ಅನಾರೋಗ್ಯದ ಕಾರಣ ಆಂಟಿಗುವಾದಲ್ಲಿರುವ (Antigua) ನನ್ನ ಮನೆಯಲ್ಲಿದ್ದೇನೆ. ಮತ್ತೆ ನನ್ನನ್ನು ಕಿಡ್ನಾಪ್ ಮಾಡಿ ಗಯಾನಾ ಮೂಲಕ ಭಾರತಕ್ಕೆ ಕರೆದೊಯ್ಯಬಹುದು ಎಂಬ ಭಾವನೆ ನನ್ನಲ್ಲಿದೆ ಎಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮೆಹುಲ್ ಚೋಕ್ಸಿ ಆಂಟಿಗುವಾದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸ್ವಲ್ಪ ಸಮಯದ ನಂತರ ಅವರು ಡೊಮಿನಿಕಾದಲ್ಲಿ ಸಿಕ್ಕಿಬಿದ್ದಿದ್ದರು ಎಂಬುವುದು ಉಲ್ಲೇಖನೀಯ.
“ಕಳೆದ ಕೆಲವು ತಿಂಗಳುಗಳಿಂದ ನನಗಾದ ಅನುಭವಗಳಿಂದ ಆಘಾತಕ್ಕೊಳಗಾಗಿದ್ದೇನೆ. ನಿರಂತರ ಭಯದಿಂದ ಕಾಡುತ್ತಿದೆ. ನನ್ನ ಮಾನಸಿಕ ಆರೋಗ್ಯ ಕೆಟ್ಟಿದ್ದು, ಸಹಾಯ ಬೇಕಿದೆ. ನನ್ನ ವೈದ್ಯರ ಶಿಫಾರಸುಗಳ ಹೊರತಾಗಿಯೂ ನಾನು ನನ್ನ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಾನೇಗ ಲೈಮ್‌ಲೈಟ್ ಗೆ ಬರಲು ಇಚ್ಛಿಸುವುದಿಲ್ಲ. ನನ್ನ ಕೆಟ್ಟ ಆರೋಗ್ಯವು ನನಗೆ ಎಲ್ಲಿಯೂ ಹೋಗಿ ಏನನ್ನೂ ಮಾಡಲು ಅನುಮತಿಸುವುದಿಲ್ಲ ಎಂದಿದ್ದಾರೆ ಚೋಕ್ಸಿ.
ನೀರವ್, ಚೋಕ್ಸಿ, ಮಲ್ಯ ಹೆಸರೆತ್ತದೇ ಚಾಟಿ ಬೀಸಿದ ಮೋದಿ!
ಆಂಟಿಗುವಾ ಮತ್ತು ಡೊಮಿನಿಕಾ ಪ್ರಕರಣಗಳಲ್ಲಿ ನನ್ನ ವಕೀಲರು ಕಾನೂನು ಹೋರಾಟ ನಡೆಸುತ್ತಿದ್ದಾರೆ ನಾನು ವಿಜಯಿಯಾಗುವುದು ಖಚಿತ. ಏಕೆಂದರೆ ನಾನು ಆಂಟಿಗುವಾದ ಪ್ರಜೆ, ನನ್ನ ಇಚ್ಛೆಗೆ ವಿರುದ್ಧವಾಗಿ ಅಪಹರಿಸಿ ಬೇರೆ ದೇಶಕ್ಕೆ ಕರೆದೊಯ್ಯಲಾಯಿತು ಎಂದು ಆರೋಪಿಸಿದ್ದಾರೆ ಚೋಕ್ಸಿ.
ಮೆಹುಲ್ ಚೋಕ್ಸಿಯನ್ನು ಸಿಬಿಐ ಮತ್ತು ಇಡಿ ವಾಂಟೆಡ್ ಎಂದು ಘೋಷಿಸಿದೆ. 13,578 ಕೋಟಿ ರೂ.ಗಳ PNB ವಂಚನೆಯಲ್ಲಿ 7,080 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಚೋಕ್ಸಿ ಮೇಲಿದೆ. ಈ ಹಿಂದೆ, ಮೆಹುಲ್ ಚೋಕ್ಸಿಯ ಕುಟುಂಬ ಮತ್ತು ವಕೀಲರು ಆಂಟಿಗುವಾದ ಜಾಲಿ ಹಾರ್ಬರ್ ಪ್ರದೇಶದಿಂದ ಭಾರತೀಯ ಏಜೆನ್ಸಿಗಳ ಮೂಲಕ ಚೋಕ್ಸಿಯನ್ನು ಅಪಹರಿಸಿದ್ದಾರೆ ಮತ್ತು ನಂತರ ಮೇ 23 ರಂದು ಬಲವಂತವಾಗಿ ಡೊಮಿನಿಕಾಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದರು.
ಮೆಹುಲ್ ಚೋಕ್ಸಿ ಪರ ವಕೀಲರು ಹೇಳಿದ್ದೇನು?
ಮೆಹುಲ್ ಚೋಕ್ಸಿ ಅವರ ವಕೀಲ ವಿಜಯ್ ಅಗರ್ವಾಲ್ ಅವರು ವೈದ್ಯಕೀಯ ಕಾರಣಗಳಿಗಾಗಿ ಚೋಕ್ಸಿಗೆ ಜಾಮೀನು ಸಿಕ್ಕಿದೆ ಎಂದು ಹೇಳಿದ್ದಾರೆ. ಮೆಹುಲ್ ಚೋಕ್ಸಿಗೆ 10 ಸಾವಿರ ಕೆರಿಬಿಯನ್ ಡಾಲರ್ ಅಂದರೆ ಸುಮಾರು 2 ಲಕ್ಷದ 75 ಸಾವಿರ ರೂಪಾಯಿಗಳನ್ನು ಜಾಮೀನು ರೂಪದಲ್ಲಿ ಠೇವಣಿ ಇಡುವಂತೆ ಕೋರ್ಟ್ ಆದೇಶಿಸಿತ್ತು.
ಮೆಹುಲ್ ಚೋಕ್ಸಿ ಕೆಲವು ವಾರಗಳ ಕಾಲ ಬಹಳ ಕಷ್ಟಕರವಾದ ಹಂತವನ್ನು ಎದುರಿಸುತ್ತಿದ್ದಾರೆ ಎಂದು ಬ್ಯಾರಿಸ್ಟರ್ ಮೈಕೆಲ್ ಪೊಲಾಕ್ ಹೇಳಿದ್ದರು. ವೈದ್ಯಕೀಯ ಆಧಾರದ ಮೇಲೆ ನ್ಯಾಯಾಲಯದಿಂದ ಪರಿಹಾರ ಪಡೆಯುವುದು ಅಗತ್ಯವಾಗಿತ್ತು. ಇದರಿಂದ ಅವರು ತಮ್ಮ ಚಿಕಿತ್ಸೆಯನ್ನು ಪಡೆಯಬಹುದು ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡಬಹುದು ಎಂದಿತ್ತು.
ಭಾರೀ ವಂಚನೆ ನಡೆಸಿದ್ದ ಚೋಕ್ಸಿ
2013ರಲ್ಲಿ ಶೇರು ಮಾರುಕಟ್ಟೆಯfಲಲಿ ಅಕ್ರ,ಮ ನಡೆಸಿ ಮೆಹುಲ್ ಈ ವಂಚನೆ ಮಾಡಿದ್ದರು. ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ, ಆದರೆ ಈ ಮಧ್ಯೆ ಅವನು ಆಂಟಿಗುವಾಗೆ ಪರಾರಿಯಾಗಿದ್ದರು. ಅವರನ್ನು ಪರಾರಿಯಾಗಿದ್ದಾರೆ ಎಂದು ಘೋಷಿಸಿದ ತನಿಖಾ ಸಂಸ್ಥೆಗಳು ಇದುವರೆಗೆ ಅವರ 2,500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಮೆಹುಲ್ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ಅಲ್ಲಿ ಪೌರತ್ವ ಪಡೆದಿದ್ದಾರೆ. ಹೂಡಿಕೆ ಕಾರ್ಯಕ್ರಮದ ಅಡಿಯಲ್ಲಿ ಕೆರಿಬಿಯನ್ ರಾಷ್ಟ್ರವು ನವೆಂಬರ್ 2017 ರಲ್ಲಿ ಅವರಿಗೆ ಪೌರತ್ವವನ್ನು ನೀಡಿದೆ
ಮಲ್ಯ, ನೀರವ್, ಚೋಕ್ಸಿಯ ಆಸ್ತಿ ಸೀಜ್, 9,371 ಕೋಟಿ ರೂ ಬ್ಯಾಂಕ್‌ಗೆ ಹಸ್ತಾಂತರ!
ಜನವರಿ 2008 ರಲ್ಲಿ ದೇಶವನ್ನು ತೊರೆದರು
ವಜ್ರದ ವ್ಯಾಪಾರಿ ಚಿಕಿತ್ಸೆಗಾಗಿ ಆ್ಯಂಟಿಗುವಾಗೆ ಹೋಗಿದ್ದು, ಪಲಾಯನ ಮಾಡಿಲ್ಲ ಎಂದು ಮೆಹುಲ್ ಚೋಕ್ಸಿ ಅವರ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಜೂನ್ 2017 ರಂದು ಸ್ಪಷ್ಟಪಡಿಸಿದ್ದರು. ಚೋಕ್ಸಿ ಅವರು ತಮ್ಮ ವಕೀಲ ವಿಜಯ್ ಅಗರ್ವಾಲ್ ಮೂಲಕ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಜನವರಿ 2018 ರಲ್ಲಿ ದೇಶವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ. ಇದರ ನಂತರ, ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಮೆಹುಲ್ ಭಾರತಕ್ಕೆ ಮರಳಲು ಅಸಮರ್ಥತೆಯನ್ನು ವ್ಯಕ್ತಪಡಿಸುವುದನ್ನು ಮುಂದುವರೆಸಿದರು. ಚೋಕ್ಸಿ ಹೊರತಾಗಿ ಅವರ ಸೋದರಳಿಯ ನೀರವ್ ಮೋದಿ ಕೂಡ ಪಿಎನ್‌ಬಿ ಹಗರಣದ ಆರೋಪಿಯಾಗಿದ್ದಾರೆ.