*ಹೊಸ ಸಂಗಾತಿ ಹುಡುಕುತ್ತಿರುವ ಕಡಲು ಕೋಳಿಗಳು
*ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ ಅಧ್ಯಯನ
ಲಂಡನ್(ನ.29):ಹವಾಮಾನ ವೈಪರೀತ್ಯವು ಪಕ್ಷಿಗಳ (Birds) ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತಿದ್ದು ಅವುಗಳ ನಡುವೆ ವಿಚ್ಛೇದನಕ್ಕೆ ಕಾರಣವಾಗುತ್ತಿದೆ ಎಂಬ ಆಘಾತಕಾರಿ ವಿಷಯೊವಂದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ. ‘ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ (Proceedings of Royal Society)’ ಪ್ರಕಟಿಸಿದ ಅಧ್ಯಯನದ ಪ್ರಕಾರ ಹವಾಮಾನದ ಬದಲಾವಣೆಯು ದಕ್ಷಿಣ ಅಟ್ಲಾಂಟಿಕ್ (South Atlantic) ಫಾಕ್‌ಲ್ಯಾಂಡ್ ದ್ವೀಪದ ಕಪ್ಪು-ಕಂದು ಕಡಲುಕೋಳಿಗಳ ( black-browed albatrosses) ಸಂತಾನೋತ್ಪತ್ತಿಯಲ್ಲಿ ವೈಫಲ್ಯ ಪ್ರಮುಖ ಕಾರಣವಾಗಿದೆ.
ಸಾಮಾನ್ಯವಾಗಿ ದೀರ್ಘಕಾಲ ಏಕ ಸಂಗಾತಿ ಸಂಬಂಧ ಹೊಂದುವ ಕಡಲುಕೋಳಿಗಳು ಸಂತಾನೋತ್ಪತ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸನ್ನು ಪಡೆಯಲು ಹೊಸ ಸಂಗಾತಿಯನ್ನು ಹುಡುಕುತ್ತಿವೆ. ಇದು ಪಕ್ಷಿ ಜೋಡಿಗಳ ನಡುವೆ ವಿಚ್ಛೇದನಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಅಧ್ಯಯನದಲ್ಲಿ 2003ರಿಂದ ಫಾಕ್‌ಲ್ಯಾಂಡ್ ದ್ವೀಪದಲ್ಲಿ ವಾಸವಾಗಿರುವ ಸುಮಾರು 15,500 ಜೋಡಿ ಕಡಲುಕೋಳಿಗಳ ಸಂತಾನೋತ್ಪತ್ತಿ ನಡುವಳಿಕೆಯನ್ನು ಸಂಗ್ರಹಿಸಲಾಗಿದೆ.
Orange Dog: ನಾಯಿ ಫೋಟೋಶೂಟ್, ಕಲರಿಂಗ್‌ಗೆ ಖರ್ಚು ಮಾಡಿದ್ದು 5 ಲಕ್ಷ
ಅಧ್ಯಯನದ ನಡೆಸಿದ ಪಕ್ಷಿಗಳಲ್ಲಿ "ವಿಚ್ಛೇದನ ದರ" ವರ್ಷಗಳಲ್ಲಿ ಗಣನೀಯವಾಗಿ ಬದಲಾಗಿದೆ ಮತ್ತು ತಾತ್ಕಾಲಿಕ ಪರಿಸರದ ವ್ಯತ್ಯಾಸದಿಂದ ನೇರವಾಗಿ ಮಾರ್ಪಟ್ಟಿದೆ ಎಂದು ಅಧ್ಯಯನವು ಹೇಳುತ್ತದೆ. ಕಡಿಮೆ-ಗುಣಮಟ್ಟದ ವರ್ಷಗಳಲ್ಲಿ ಹೆಚ್ಚಿನ "ವಿಚ್ಛೇದನ ದರಗಳು" ದಾಖಲಾಗಿವೆ . "ವಿಚ್ಛೇದನ" ಸಂತಾನೋತ್ಪತ್ತಿ ವೈಫಲ್ಯದಿಂದ ಪ್ರಚೋದಿಸಲ್ಪಟ್ಟಿದೆ ಎಂದು ಸ್ಥಿರವಾಗಿ ಅಳವಡಿಸಿಕೊಂಡ ಎಲ್ಲಾ ಮಾಡೆಲಿಂಗ್ ತಂತ್ರಗಳು (modelling techniques ) ತೋರಿಸುತ್ತವೆ ಎಂದು ಸಾಬೀತುಪಡಿಸಿವೆ. "ಆದರೆ, ನಿರ್ಣಾಯಕವಾಗಿ, ಇದು ಹವಾಮಾನ ಬದಲಾವಣೆಯಿಂದ ಕೂಡ ಉತ್ತೇಜಿಸಲ್ಪಟ್ಟಿದೆ" ಎಂದು ಅಧ್ಯಯನ ತಿಳಿಸಿದೆ
ನಾಲ್ಕೂ ಕಾಲು ಕಳೆದುಕೊಂಡಿದ್ದ ಶ್ವಾನ ಮೋನಿಕಾಗೆ ಮರು ಜೀವ ಕೊಟ್ಟ ವೈದ್ಯರು!
ಕಿಡಿಗೇಡಿಗಳ ಅಮಾನವೀಯ ಕೃತ್ಯದಿಂದ ತನ್ನ ನಾಲ್ಕೂ ಕಾಲುಗಳನ್ನು ಕಳೆದುಕೊಂಡಿದ್ದ ರಷ್ಯಾದ ತನಿಖಾ ನಾಯಿ (Rescue Dog) ಈಗ ಶಸ್ತ್ರಚಿಕಿತ್ಸೆ (Operation) ಮೂಲಕ ಕೃತಕ ಕಾಲುಗಳನ್ನು (Artificial Leg) ಪಡೆದಿದೆ. ಕ್ರೌಡ್ ಫಂಡಿಂಗ್ (Crowd Funding) ಅಭಿಯಾನದ ಮೂಲಕ ಹಣ ಸಂಗ್ರಹಿಸಿ ನಾಯಿಗೆ ನಾಲ್ಕು ಕೃತಕ ಟೈಟಾನಿಯಂ (Titaniam) ಕಾಲುಗಳನ್ನು ಅಳವಡಿಸಲಾಗಿದೆ. ಹಾಗಾಗಿ ರಷ್ಯಾದ (Russia) ನಾಯಿ ಮೋನಿಕಾ (Monika) ತನ್ನ ಹೊಸ ಜೀವನಕ್ಕೆ ಸಿದ್ಧವಾಗಿದೆ. ಎರಡು ವಾರಗಳ ಚಿಕಿತ್ಸೆ ನಂತರ ನಾಯಿ ಇನ್ನೂ ದುರ್ಬಲವಾಗಿದ್ದು ಸ್ವಲ್ಪ ದಣಿದಂತೆ ಕಾಣುತ್ತಿದೆ, ಆದರೆ ಅವಳು ಮತ್ತೆ ತನ್ನ ಕಾಲುಗಳ ಮೇಲೆ ಮರಳಿದ್ದಾಳೆ.
30 ಕ್ಕೂ ಹೆಚ್ಚು ಪ್ರಾಣಿಗಳಿಗೆ ಕೃತಕ ಅಂಗ!
"ಅದೃಷ್ಟ (luck) ಮತ್ತು ಅನುಭವವು (experience) ಅದರ ಪಾತ್ರವನ್ನು ವಹಿಸಿದೆ" ಎಂದು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ ಪ್ರಾಣಿ ವೈದ್ಯ (veterinary doctor) ಸೆರ್ಗೆಯ್ ಗೋರ್ಶ್ಕೋವ್ (Sergei Gorshkov) ಹೇಳಿದ್ದಾರೆ. ಸೈಬೀರಿಯನ್ ನಗರದ ನೊವೊಸಿಬಿರ್ಸ್ಕ್‌ನ 33 ವರ್ಷದ ವೈದ್ಯ ಬೆಕ್ಕಿಗೂ (cat) ನಾಲ್ಕು ಕಾಲು ಕಸಿ ಸೇರಿದಂತೆ 30 ಕ್ಕೂ ಹೆಚ್ಚು ರೋಗದಿಂದ ಬಳಲುತ್ತಿದ್ದ ಪ್ರಾಣಿಗಳಿಗೆ (Animal) ಕೃತಕ ಅಂಗಗಳನ್ನು (Body parts) ಅಳವಡಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಾಯಿಯ ಮೇಲೆ ಆಪರೇಷನ್ ಮಾಡಲು ಸೆರ್ಗೆಯ್ ಪ್ರಯತ್ನಿಸಿದ್ದರು.
Lifestyle; ನಿಮ್ಮನೆ ಶ್ವಾನ ಮಂಕಾಗಿದೆಯಾ.. ಪರಿಹಾರಕ್ಕೆ ಈ ವಾಹಿನಿ ತೋರಿಸಿ!
ಜೀವನವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಗಾಗಿ ಮೋನಿಕಾಳನ್ನು ದೂರದ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಗೋರ್ಷ್ಕೋವ್‌ನ ಚಿಕಿತ್ಸಾಲಯದಿಂದ 4,000 ಕಿಲೋಮೀಟರ್ (2,485 ಮೈಲುಗಳು) ದೂರದಲ್ಲಿರುವ ದಕ್ಷಿಣ ರಷ್ಯಾದ ಕ್ರಾಸ್ನೋಡರ್ (Krasnodar) ಬಳಿಯ ಕಾಡಿನಲ್ಲಿ ಸ್ವಯಂಸೇವಕರಿಗೆ ಅಕೆ ಸಿಕ್ಕಿದ್ದಳು.ಅಲ್ಲಿಂದ ಸ್ವಯಂಸೇವಕರು ಆಕೆಯನ್ನು ದೂರದ ಆಸ್ಪತ್ರೆಗೆ ಕರೆದೊಯ್ದಿದ್ದರು.