
ಫ್ರಾನ್ಸ್(ನ.05): ಶಾಲಾ ಶಿಕ್ಷಕನ ರುಂಡ ಕತ್ತರಿಸಿ ವಿಕೃತಿ ಮೆರೆದ ಇಸ್ಲಾಂ ಉಗ್ರವಾದ ವಿರುದ್ಧ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಫೈನಾನ್ಶಿಯಲ್ ಟೈಮ್ಸ್ , ಫ್ರಾನ್ಸ್ ಅಧ್ಯಕ್ಷಕರು ಇಸ್ಲಾಂ ವಿರುದ್ಧ ಹೇಳಿಕೆ ನೀಡಿದ್ದಾರೆ ಅನ್ನೋ ಸುದ್ದಿ ಪ್ರಕಟಗೊಂಡಿತ್ತು. ಇದು ಮತ್ತೆ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತು. ಇದರ ಬೆನ್ನಲ್ಲೇ ಮ್ಯಾಕ್ರೋನ್, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಶಿಕ್ಷಕನ ಶಿರಚ್ಛೇದ ಮಾಡಿದ ಮುಸ್ಲಿಂ ಬಾಲಕ: ಫ್ರೆಂಚ್ ಅಧ್ಯಕ್ಷರ ಬೆಂಬಲಕ್ಕೆ ನಿಂತ ಭಾರತ.
ಫ್ರಾನ್ಸ್ ಹೋರಾಟ ಇಸ್ಲಾಂ ಉಗ್ರವಾದ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧ ಅಲ್ಲ ಎಂದು ಮ್ಯಾಕ್ರೋನ್ ಸ್ಪಷ್ಟಪಡಿಸಿದ್ದಾರೆ. ಫ್ರಾನ್ಸ್ ಮುಸ್ಲಿಮರ ವಿರುದ್ಧವಿದೆ, ಮುಸ್ಲಿಮರ ವಿರುದ್ಧ ವರ್ಣಭೇಧ ನೀತಿ ಅನುಸರಿಸುತ್ತಿದೆ ಅನ್ನೋ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮ್ಯಾಕ್ರೋನ್ ಹೇಳಿದ್ದಾರೆ. ಇದೇ ವೇಳೆ ಇಸ್ಲಾಮಿಕ್ ಪ್ರತ್ಯೇಕತಾ ವಾದವನ್ನು ಖಂಡಿಸುವುದರೊಂದಿಗೆ ಫ್ರಾನ್ಸ್ ಬಿಕ್ಕಟ್ಟಿದೆ ಮ್ಯಾಕ್ರೋನ್ ಕಾರಣರಾಗಿದ್ದಾರೆ ಎಂದು ವರದಿಯಲ್ಲಿ ಹೇಳಿತ್ತು.
ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮುಂಬೈನಲ್ಲಿ ಪ್ರೊಟೆಸ್ಟ್! ಭಯೋತ್ಪಾದಕ ಕೃತ್ಯ ಎಂದಿದ್ದೆ ತಪ್ಪಾ?.
ಮ್ಯಾಕ್ರೋನ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಫೈನಾನ್ಶಿಯಲ್ ಟೈಮ್ಸ್‌ನಿಂದ ಈ ವರದಿಯನ್ನು ತೆಗೆದುಹಾಕಲಾಗಿದೆ. ಇನ್ನು 2015ರಿಂದ ಫ್ರಾನ್ಸ್‌ನಲ್ಲಿ ಇಸ್ಲಾಂ ಉಗ್ರವಾದ ದಾಳಿ ನಡೆಯುತ್ತಿದೆ. ಇದರ ಬೇರನ್ನೇ ಕಿತ್ತುಹಾಕಬೇಕು ಎಂದು ಮ್ಯಾಕ್ರೋನ್ ಹೇಳಿದ್ದಾರೆ. ಕೆಲ ಶಾಲೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳಿಗೆ ಇಸ್ಲಾಂ ಉಗ್ರವಾದ ಹೇಳಿಕೊಡಲಾಗುತ್ತಿದೆ. ಈ ಮೂಲಕ ನಮ್ಮ ಮಕ್ಕಳನ್ನು ಬಲಿಕೊಡಲಾಗುತ್ತಿದೆ. ನಮ್ಮ ಹೋರಾಟ ಇಂತಹ ಉಗ್ರವಾದ ವಿರುದ್ಧ ನಮ್ಮ ಹೋರಾಟ ನಿರಂತವರಾಗಿ ನಡಯಲಿದೆ ಎಂದಿದ್ದಾರೆ.
ದೇಶದ ಕಾನೂನನ್ನು ಗೌರವಿಸದವರ ವಿರುದ್ಧ, ಹಿಂಸಾತ್ಮಕ ದಾರಿ ಹಿಡಿಯುವವರ ವಿರುದ್ಧ, ಮತಾಂಧತೆ, ವಂಚನೆ ವಿರುದ್ಧ ಫ್ರಾನ್ಸ್ ಹೋರಾಟ ಮಾಡಲಿದೆ. ಆದರೆ ನಮ್ಮ ಹೋರಾಟ ಎಂದಿಗೂ ಇಸ್ಲಾಂ ವಿರುದ್ಧವಲ್ಲ ಎಂದು ಮ್ಯಾಕ್ರೋನ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ