ಅಮ್ಮನ ಜೊತೆ ಅಪ್ಪನ ನೋಡಲು ಹೊರಟಿದ್ದವು ಈ ಪುಟ್ಟ ಕಂದಮ್ಮಗಳು. ಅದೇನಾಯ್ತೋ, ಹೋಗುತ್ತಿದ್ದ ಕಾಪರ್ ಅಮೇಜಾನ್ ದಟ್ಟರಾರಣ್ಯದಲ್ಲಿ ಕ್ರ್ಯಾಶ್ ಆಯಿತು. ಮಕ್ಕಳು ಬದುಕಿದ ಕುರುಹು ಇತ್ತು. ಬರೋಬ್ಬರಿ 40 ದಿನಗಳ ನಂತರ ಸಿಕ್ಕಿವೆ ಪುಟ್ಟ ಕಂದಮ್ಮಗಳು.
ಕೊಲಂಬಿಯಾ ದೇಶದ ಮಗ್ದಾಲೆನಾ ಮಾಕ್ಯುಟಿ ತನ್ನ ನಾಲ್ವರು ಮಕ್ಕಳೊಂದಿಗೆ ಸಣ್ಣ ವಿಮಾನದಲ್ಲಿ ಪತಿಯ ಭೇಟಿಗೆಂದು ಬಾಗೋಟಗೆ ಹೊರಟಿದ್ದಳು. ಆಕೆ ಹೊರಟಿದ್ದ ವಿಮಾನ ಕ್ರಾಶ್ ಆಗಿ ಬಿದ್ದಿದ್ದು ಅಮೆಜಾನ್ ಎಂಬ ದಟ್ಟಕಾರಣ್ಯದಲ್ಲಿ. ತಾಯಿ, ಪೈಲಟ್ ಸೇರಿದಂತೆ ಮೂವರು ಮೃತಪಟ್ಟಿದ್ದರೆ, ಮಾಕ್ಯುಟಿಯ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದವು. ಅಷ್ಟಕ್ಕೂ ಆ ಮಕ್ಕಳು 40 ದಿನ ಬದುಕಿದ್ದು ಹೇಗೆ? ಅಮೆಜಾನ್ ಎಂಬ ರಕ್ಕಸ ಕಾಡಿನಲ್ಲಿ ಬದುಕುಳಿದಿದ್ದು ಹೇಗೆ ಎಂಬ ಹತ್ತಾರು ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಹಿರಿಯ ಮಗುವಿಗೆ 13 ವರ್ಷ, ಎರಡನೆಯದ್ದು,9, ಮೂರನೆಯದ್ದಕ್ಕೆ4 ವರ್ಷ ನಾಲ್ಕನೆಯದ್ದು 11 ತಿಂಗಳ ಕಂದಮ್ಮ.
13, 9 ಮತ್ತು 4 ವರ್ಷದ ಮಕ್ಕಳು 11 ತಿಂಗಳ ಮಗುವನ್ನು ಎತ್ತಿಕೊಂಡು ದಕ್ಷಿಣ ಕಾಕ್ವೆಟಾದ ದಟ್ಟಾರಣ್ಯದಲ್ಲಿ ಅಲೆದಾಡಿದ್ದರು. ಮಕ್ಕಳ ಪತ್ತೆಗೆ ಸ್ನಿಫರ್ ಶ್ವಾನ ಪಡೆಯ ಜತೆಗೆ 100ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು ವಿಮಾನ ಕ್ರಾಶ್ ಆದ ಸ್ಥಳದಲ್ಲಿ . ಸ್ಥಳದಲ್ಲಿ ಕತ್ತರಿ, ಶೂಗಳು, ಮಗುವಿನ ಹಾಲು ಕುಡಿಯುವ ಬಾಟಲಿ, ಅರ್ಧ ತಿಂದು ಬಿಟ್ಟ ಕೊಳೆತ ಹಣ್ಣುಗಳು ದೊರಕಿದ್ದವು. ಮಕ್ಕಳೆಲ್ಲಿದ್ದಾರೆ ಎಂದು ಮಿಲಿಟರಿ ಶೋಧ ಶುರು ಮಾಡಿತ್ತು. ದಟ್ಟಾರಣ್ಯದ ಮೇಲಿಂದ ವಿಮಾನ ಹಾರಿಸಿ, ಮಕ್ಕಳ ಪತ್ತೆಗೆ ಮುಂದಾದ ಕೊಲಂಬಿಯಾ ಸೇನೆ, ಮಕ್ಕಳ ಅಜ್ಜಿಯನ್ನು ಪತ್ತೆ ಹಚ್ಚಿ, ಆಕೆಯಿಂದ ಆಡಿಯೋ ರೆಕಾರ್ಡ್ ಮಾಡಿಕೊಂಡಿತ್ತು.
ವಿಮಾನ ಪತನದಲ್ಲೂ ಬದುಕುಳಿದ ಮಕ್ಕಳು, ಅಮೆಜಾನ್ ಕಾಡಿನಲ್ಲಿ 17 ದಿನದ ಬಳಿಕ ಪವಾಡ..!
‘ಮಕ್ಕಳೇ ಎಲ್ಲೂ ಹೋಗ್ಬೇಡಿ, ಅಲ್ಲೇ ಇರಿ’ ಎಂಬ ಅಜ್ಜಿಯ ಆಡಿಯೋವನ್ನು ಕಾಡಿನೊಳಗೆ ಪ್ಲೇ ಮಾಡುತ್ತಾ, ಕಾರ್ಯಾಚರಣೆ ನಡೆಸಿದ್ರು.
ಮಕ್ಕಳು ಹುಟಿಟೋ ಕಮ್ಯುನಿಟಿಯವರು. ಹುಟಿಟೋ ಜನರಿಗೆ ಕಾಡೆಂದರೆ ಡೋಂಟ್ ಕೇರ್ ಮನೋಭಾವ. ಹೀಗಾಗಿ ಮಕ್ಕಳು ಅಮೆಜಾನ್ ಎಂಬ ಕಾಡಿಗೆ, ಅದರ ಭೀಕರತೆಗೆ ಹೆದರಲ್ಲ, ಬೆದರಲ್ಲ ಅನ್ನೋದು ಸೇನೆಯ ನಂಬಿಕೆಯಾಗಿತ್ತು. ಆ ನಂಬಿಕೆ ಹುಸಿಯಾಗಿಲ್ಲ.
undefined
ಆ ನಾಲ್ಕೂ ಮಕ್ಕಳು ಅಮೇಜಾನ್ ಕಾಡೊಳಗೆ ಪತ್ತೆಯಾಗಿದ್ದಾರೆ. ಮಕ್ಕಳ ಜೊತೆ ಇರುವ ಫೋಟೋಗಳನ್ನು ಕೊಲಂಬಿಯಾ ಸೇನೆ ಪ್ರಕಟಿಸಿದೆ.
ಮಕ್ಕಳು ಕ್ಷೇಮವಾಗಿ ಸಿಕ್ಕರು ಅಂತ ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೋ ಸಂಭ್ರಮಿಸಿದ್ದಾನೆ.
ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ, ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು 40 ದಿನ ಬಳಿಕ ಜೀವಂತ ಪತ್ತೆ!
ಟThese children are today the children of peace and the children of Colombia,' ಅಂತ ಅಧ್ಯಕ್ಷ ಪೆಟ್ರೋ ಒಬ್ಬನೇ ಸಂಭ್ರಮಿಸಿಲ್ಲ, ಇಡೀ ಜಗತ್ತನೇ ಅಚ್ಚರಿಗೆ ತಳ್ಳಿದ್ದಾರೆ ಆ ನಾಲ್ವರೂ ಮಕ್ಕಳು. 40 ದಿನ ಕಾಡಿನಲ್ಲಿ ಅದೇನು ತಿಂದರೋ ? ಅದು ಹೇಗೆ ಬದುಕಿದರೋ ? 11 ತಿಂಗಳ ಕಂದಮ್ಮನನ್ನು ಅದೇಗೆ ಕಾಪಾಡಿದರೋ ? ಎಲ್ಲವೂ ಒಂದೊಂದಾಗಿ ಹೊರಬೀಳಬೇಕಿದೆ. ಸರಿಯಾದ ಆಹಾರವಿಲ್ಲದೇ ಕೃಶವಾಗಿರೋ ಮಕ್ಕಳಿಗೆ ತಕ್ಷಣಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
4 ಮಕ್ಕಳ 40 ದಿನಗಳ ಅಮೆಜಾನ್ ಕಾಡಿನ ವನವಾಸದ ಕಥೆ ಇನ್ನಷ್ಟೇ Amazing ಆಗಿಯೇ ಇರುತ್ತದೆ. ಮಕ್ಕಳ ಕಾಡಿನ ಕಥೆ ಕೇಳಲು ಇಡೀ ಜಗತ್ತು ತುದಿಗಾಲಲ್ಲಿ ನಿಂತಿದೆ.