Ukraine Crisis 2ಸಾವಿರ ಕೋಟಿ ರೂ ನಗದು ಜೊತೆ ಉಕ್ರೇನ್‌ನಿಂದ ಮಾಜಿ ಸಂಸದನ ಪತ್ನಿ ಪಲಾಯನಕ್ಕೆ ಯತ್ನ, ಬಂಧನ!

Published : Mar 23, 2022, 05:59 PM IST
Ukraine Crisis  2ಸಾವಿರ ಕೋಟಿ ರೂ ನಗದು ಜೊತೆ ಉಕ್ರೇನ್‌ನಿಂದ ಮಾಜಿ ಸಂಸದನ ಪತ್ನಿ ಪಲಾಯನಕ್ಕೆ ಯತ್ನ, ಬಂಧನ!

ಸಾರಾಂಶ

ಉಕ್ರೇನ್ ಮೇಲೆ ಯುದ್ಧ ತೀವ್ರಗೊಳಿಸಿದ ರಷ್ಯಾ ಉಕ್ರೇನ್‌ ಸ್ಥಳೀಯರು ನೆರೆ ರಾಷ್ಟ್ರಗಳಿಗೆ ಪಲಾಯನ  ಅಪಾರ ನಗದು ಮೂಲಕ ಪಲಾಯನಕ್ಕೆ ಯತ್ನಿಸಿದ ಮಾಜಿ ಸಂಸಜನ ಪತ್ನಿ

ಹಂಗೇರಿ(ಮಾ.23): ಉಕ್ರೇನ್ ಮೇಲಿನ ಯುದ್ಧ ತೀವ್ರಗೊಳಿಸಿರುವ ರಷ್ಯಾ ಒಂದೊಂದೆ ನಗರಗಳನ್ನು ವಶಕ್ಕೆ ಪಡೆಯುತ್ತಿದೆ. ನಾಗರೀಕರ ಕಟ್ಟದ ಮೇಲೂ ರಷ್ಯಾ ದಾಳಿ ನಡೆಯುತ್ತಿದೆ. ಈಗಾಗಲೇ 35 ಲಕ್ಷಕ್ಕೂ ಅಧಿಕ ಮಂದಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಇದೀಗ ಉಕ್ರೇನ್ ಮಾಜಿ ಸಂಸದನ ಪತ್ನಿ ಪಲಾಯನ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ರಷ್ಯಾ ದಾಳಿಗೆ ಹೆದರಿ ಪ್ರಾಣ ಉಳಿಸಿಕೊಳ್ಳಲು ಕೊಟ್ಟವಸ್ಕಿಯ ಸಂಸದನ ಪತ್ನಿ 28 ಮಿಲಿಯನ್ ಅಮೆರಿಕನ್ ಡಾಲರ್ ನಗದು ಹಾಗೂ 1.3 ಮಿಲಿಯನ್ ಯೂರೋ ಮೊತ್ತವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಉಕ್ರೇನ್ ತೊರೆದಿದ್ದಾರೆ. ಝಕರ್‌ಪಟಿಯ ಪ್ರಾಂತ್ಯದ ಮೂಲಕ ಹಂಗೇರಿ ತಲುಪಿದ ಮಾಜಿ ಸಂಸದನ ಪತ್ನಿಯನ್ನು ಹಂಗೇರಿ ಬಾರ್ಡರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಷ್ಯಾ ಉಕ್ರೇನ್‌ ಸಮರದಲ್ಲಿ ಭಾರತದ ನಿಲುವು ಅಸ್ಥಿರ: ಕ್ವಾಡ್, ನ್ಯಾಟೋ ಶ್ಲಾಘಿಸಿದ ಜೋ ಬೈಡೆನ್‌!‌

ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 2,13,90,46,000 ಕೋಟಿ ರೂಪಾಯಿ ಹಾಗೂ 10,90,66,408 ಕೋಟಿ  ರೂಪಾಯಿ ಹಣವನ್ನು 7 ಸೂಟ್‌ಕೇಸ್‌ಗಳಲ್ಲಿ ತುಂಬಿ ಪಲಾಯನಕ್ಕೆ ಯತ್ನಿಸಿದ್ದಾರೆ. ಆದರೆ ಹಂಗೇರಿ ಬಾರ್ಡರ್ ಪೊಲೀಸರು ಮಾಜಿ ಸಂಸದನ ಪತ್ನಿ ವಶಕ್ಕೆ ಪಡೆದು ಹಣಕ್ಕೆ ದಾಖಲೆ ಹಾಗೂ ಮೂಲ ಒದಗಿಸುವಂತೆ ಸೂಚಿಸಿದ್ದಾರೆ. ಆದರೆ ಇಷ್ಟು ಹಣಕ್ಕೆ ದಾಖಲೆ ಒದಗಿಸಲು ವಿಫಲವಾದ ಉಕ್ರೇನ್ ಮಾಜಿ ಸಂಸದನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಷ್ಟೇ ಅಲ್ಲ ಹಣವನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.

ಯುದ್ಧನಾಡಿನಿಂದ ಜೀವ ಉಳಿಸಿಕೊಳ್ಳಲು ಪಲಾಯನ ಮಾಡಿರುವುದಾಗಿ ಸಂಸದನ ಪತ್ನಿ ಪೊಲೀಸರಲ್ಲಿ ಹೇಳಿದ್ದಾರೆ. ನನ್ನ ಕುಟುಂಬ ಹಾಗೂ ಮಕ್ಕಳ ಜೊತೆ ಸುರಕ್ಷಿತ ತಾಣದಲ್ಲಿ ಬದುಕಲು ಹಣ ಅನಿವಾರ್ಯವಾಗಿದೆ. ಹೀಗಾಗಿ ಹಣದೊಂದಿದೆ ಪಲಾಯನ ಮಾಡುತ್ತಿದ್ದೇನೆ. ಅನುಮತಿ ನೀಡಲು ಕೇಳಿಕೊಂಡಿದ್ದಾರೆ. ಆದರೆ ದಾಖಲೆ ಇಲ್ಲದ ಕಾರಣ ಸಂಸದನ ಪತ್ನಿ ಮಾತನ್ನು ಪೊಲೀಸರು ಕಿವಿಗೆ ಹಾಕಿಕೊಂಡಿಲ್ಲ.

ಅಮೆರಿಕ ಜೊತೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳುವುದಾಗಿ ರಷ್ಯಾ ಎಚ್ಚರಿಕೆ!

ಉಕ್ರೇನ್‌ನಿಂದ 35 ಲಕ್ಷ ಜನರ ವಲಸೆ: ವಿಶ್ವಸಂಸ್ಥೆ
ರಷ್ಯಾ ಆಕ್ರಮಣ ಆರಂಭವಾದಾನಿಂದ ಈವರೆಗೆ ಉಕ್ರೇನಿನಿಂದ ಸುಮಾರು 35 ಲಕ್ಷ ಜನರು ಗುಳೆ ಹೋಗಿದ್ದಾರೆ. ಇದು ಎರಡನೇ ಮಹಾಯುದ್ಧನ ನಂತರ ಯುರೋಪಿನಲ್ಲಿ ನಡೆದ ಅತ್ಯಂತ ಕೆಟ್ಟಮಹಾ ವಲಸೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಿಳಿಸಿದೆ. ಯುದ್ಧಪೀಡಿತ ಉಕ್ರೇನಿನ ಮರಿಯುಪೋಲ್‌ನಿಂದ 40,000ಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬರ್ಡಿಯನ್ಸ್‌$್ಕನಿಂದ ಝಪೊರಿಝಿಯಾ ಮಾನವೀಯ ಕಾರಿಡಾರ್‌ ಬಳಸಿ ಸುಮಾರು 8000 ವಾಹನಗಳಲ್ಲಿ 39,426 ನಾಗರಿಕರು ಸುರಕ್ಷಿತವಾಗಿ ಸ್ಥಳಾಂತರ ಹೊಂದಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಅಮೆರಿಕ ಉಕ್ರೇನ್‌ಗೆ ಮಿಲಿಟರಿ ಸಹಾಯ ಒದಗಿಸುತ್ತಿದೆ. ಈ ಬಾರಿ ಅಮೆರಿಕ ಒದಗಿಸಿರುವ ಮಿಲಿಟರಿ ಸಹಾಯ ರಷ್ಯಾದ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ರಷ್ಯಾದ ತಂತ್ರಜ್ಞಾನವನ್ನು ತಿಳಿದುಕೊಳ್ಳಲು ಗುಪ್ತವಾಗಿ ಇತರ ದೇಶಗಳಿಂದ ಅಮೆರಿಕ ಪಡೆದುಕೊಂಡಿದ್ದ ರಷ್ಯಾದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಪೂರೈಸುತ್ತಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ರಷ್ಯಾದ ಮಿಲಿಟರಿ ತಂತ್ರಜ್ಞಾನವನ್ನು ಅಧ್ಯಯನ ಮಾಡುವ ಉದ್ದೇಶದಿಂದ ರಷ್ಯಾ ಇತರ ದೇಶಗಳಿಂದ ಗುಪ್ತವಾಗಿ ಖರೀದಿಸಿತ್ತು.

ಉಕ್ರೇನ್‌ ರಾಜಿ ಮಾತುಕತೆ ನಡೆಸಲು ಸಿದ್ಧ: ಜೆಲೆನ್‌ಸ್ಕಿ
ಕದನ ವಿರಾಮ ಘೋಷಣೆ, ರಷ್ಯಾ ಪಡೆಗಳ ವಾಪಸಾತಿ ಹಾಗೂ ಉಕ್ರೇನಿಗೆ ಭದ್ರತೆಯ ಖಾತರಿ ನೀಡಿದರೆ ಅದರ ಬದಲಾಗಿ ಉಕ್ರೇನ್‌ ನ್ಯಾಟೋ ಸದಸ್ಯತ್ವವನ್ನು ಪಡೆಯದಿರುವುದರ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿರುವುದಾಗಿ ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಸೋಮವಾರ ಘೋಷಿಸಿದ್ದಾರೆ.‘ನ್ಯಾಟೋ ಸದಸ್ಯತ್ವವನ್ನು ಉಕ್ರೇನಿಗೆ ನೀಡಬೇಕೋ ಎಂಬುದನ್ನು ತಿಳಿಯದ ಪಶ್ಚಿಮ, ಭದ್ರತೆಯ ಖಾತರಿ ಪಡೆದುಕೊಳ್ಳಲು ಬಯಸುವ ಉಕ್ರೇನ್‌ ಹಾಗೂ ನ್ಯಾಟೋದ ವಿಸ್ತರಣೆಯ ಮೇಲೆ ನಿರ್ಬಂಧ ಹೇರಬಯಸುವ ರಷ್ಯಾ. ಈ ಪರಿಸ್ಥಿತಿಯಲ್ಲಿ ಎಲ್ಲರೊಂದಿಗೆ ಈ ಮೂಲಕ ರಾಜಿಮಾಡಿಕೊಳ್ಳಲು ಬಯಸುತ್ತೇವೆ’ ಎಂದು ಜೆಲೆನ್‌ಸ್ಕಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ