ಎಲೆಕ್ಟ್ರಿಕ್ ಕಾರ್ ಪ್ಲಾಂಟ್‌ ಉದ್ಘಾಟನೆ : ಕುಣ್ಣಿದು ಕುಪ್ಪಳಿಸಿದ ಉದ್ಯಮಿ ಎಲನ್ ಮಸ್ಕ್‌

By Anusha Kb  |  First Published Mar 23, 2022, 12:34 PM IST
  • ಎಲೆಕ್ಟ್ರಿಕ್ ಕಾರ್ ಪ್ಲಾಂಟ್‌ ಉದ್ಘಾಟಿಸಿದ ಟೆಸ್ಲಾ ಸಂಸ್ಥೆ
  • ಕುಣ್ಣಿದು ಕುಪ್ಪಳಿಸಿದ ಉದ್ಯಮಿ ಎಲನ್ ಮಸ್ಕ್‌
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬರ್ಲಿನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮಂಗಳವಾರ ಜರ್ಮಿನಿಯ ಬರ್ಲಿನ್ ಬಳಿ ತಮ್ಮ 'ಗಿಗಾ ಫ್ಯಾಕ್ಟರಿ' ಎಲೆಕ್ಟ್ರಿಕ್ ಕಾರ್ ಪ್ಲಾಂಟ್‌ನ ಉದ್ಘಾಟನೆ ವೇಳೆ ಸಂತೋಷದಿಂದ ನೃತ್ಯ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಎಲೆಕ್ಟ್ರಿಕ್ ಕಾರು ಘಟಕ ಉದ್ಘಾಟನೆ ನಂತರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಡಾಂಕೆ ಡಾಯ್ಚ್ಲ್ಯಾಂಡ್!" (ಧನ್ಯವಾದಗಳು, ಜರ್ಮನಿ) ಎಂದು ಟ್ವಿಟ್ ಮಾಡಿದರು. ಉದ್ಘಾಟನೆ ನಂತರ ಎಲೋನ್‌ ಮಸ್ಕ್‌ ಅವರು ತಮ್ಮ ಹೊಸ ಕಾರುಗಳನ್ನು ಪಡೆಯಲು ಮುಂದಾದ ಮೊದಲ 30 ಚಾಲಕರನ್ನು ಶ್ಲಾಘಿಸುವಲ್ಲಿ ಕಾರ್ಮಿಕರೊಂದಿಗೆ ಸೇರಿಕೊಂಡರು.

2020 ರಲ್ಲಿ ಶಾಂಘೈನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿಯೂ ಎಲೋನ್ ಮಸ್ಕ್‌ ಇದೇ ರೀತಿ ಡಾನ್ಸ್‌ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಅವರು ಮಾಡಿದ ಡಾನ್ಸ್‌ ಕೂಡ ಶಾಂಘೈನಲ್ಲಿ ಅವರು ಮಾಡಿದ ಸ್ವಲ್ಪ ವಿಚಿತ್ರವಾದ ಡಾನ್ಸ್‌ನ್ನು ನೆನಪಿಸಿತ್ತು.

Latest Videos

undefined

ಈ ಕಾರ್ಖಾನೆಯ ಪ್ರಾರಂಭಕ್ಕೆ ಟೆಸ್ಲಾ ಸಂಸ್ಥೆಯೂ ಎರಡು ವರ್ಷಗಳ ಕಾಲ ಅನುಮೋದನೆಗಾಗಿ ಕಾದಿತ್ತು. ಅಲ್ಲದೇ ನಿರ್ಮಾಣ ಪ್ರಕ್ರಿಯೆ ಪ್ರಯಾಸಕರವಾದ ಕಾನೂನು ತೊಡಕನ್ನು ಎದುರಿಸಿತ್ತು. ಟೆಸ್ಲಾ ಸೈಟ್‌ನ ಪರಿಸರ ಪ್ರಭಾವದ ಬಗ್ಗೆ ಸ್ಥಳೀಯರಿಂದ ದೂರುಗಳನ್ನು ಒಳಗೊಂಡಂತೆ ಆಡಳಿತಾತ್ಮಕ ಮತ್ತು ಕಾನೂನು ಅಡಚಣೆಗಳ ಸರಣಿಯನ್ನು ಈ ಘಟಕ ಎದುರಿಸಿತು.

Elon Musk keeps Tesla tradition alive by dancing during Giga Berlin’s first Model Y handovershttps://t.co/B36qx4ACHy by pic.twitter.com/p9VhwKqxOD

— TESLARATI (@Teslarati)

ತನ್ನ ಸ್ವಂತ ಜವಾಬ್ದಾರಿಯಲ್ಲಿ ನಿರ್ಮಾಣವನ್ನು ಪ್ರಾರಂಭಿಸಿದ ಟೆಸ್ಲಾ ಅಂತಿಮವಾಗಿ ಈ ತಿಂಗಳ ಆರಂಭದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಪ್ರಾದೇಶಿಕ ಅಧಿಕಾರಿಗಳಿಂದ ಔಪಚಾರಿಕವಾಗಿ ಅನುಮತಿ ಪಡೆದಿತ್ತು. ಜರ್ಮನಿಯ ಪೂರ್ವ ರಾಜ್ಯವಾದ ಬ್ರಾಂಡೆನ್‌ಬರ್ಗ್‌ನಲ್ಲಿರುವ ಗ್ರುನ್‌ಹೈಡ್‌ನಲ್ಲಿರುವ ಈ 'ಗಿಗಾಫ್ಯಾಕ್ಟರಿ' ಯುರೋಪ್‌ನಲ್ಲಿ ಟೆಸ್ಲಾ ಅವರ ಮೊದಲ ಉತ್ಪಾದನಾ ತಾಣವಾಗಿದೆ. ಸ್ಥಳೀಯ ಅಧಿಕಾರಿಗಳು ಈ ಪ್ರದೇಶವನ್ನು ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಕೇಂದ್ರವಾಗಿ ಇರಿಸಲು ಸಹಾಯ ಮಾಡುತ್ತದೆ ಎಂದು ಆಶಿಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಈ ಕಂಪನಿಯು ಅಂತಿಮವಾಗಿ ಸೈಟ್‌ನಲ್ಲಿ ಸುಮಾರು 12,000 ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ,  ಸಂಸ್ಥೆಯ ಎಲ್ಲಾ ಎಲೆಕ್ಟ್ರಿಕ್, ಕಾಂಪ್ಯಾಕ್ಟ್ SUV ಗಳು ಸೇರಿ ವಾರ್ಷಿಕವಾಗಿ ಸುಮಾರು 500,000 ಮಾಡೆಲ್ Y ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. 

ಸೌರ, ಗಾಳಿ, ಜೊತೆಗೆ ಬ್ಯಾಟರಿ ಸಂಗ್ರಹಣೆ ಮತ್ತು ಎಲೆಕ್ಟ್ರಿಕ್ ವಾಹನಗಳ ಸಂಯೋಜನೆಯೊಂದಿಗೆ ಜಗತ್ತು ಸುಸ್ಥಿರ ಇಂಧನ ಭವಿಷ್ಯಕ್ಕೆ ಪರಿವರ್ತನೆಗೊಳ್ಳಬಹುದು ಎಂದು ನಮಗೆ ಅತ್ಯಂತ ವಿಶ್ವಾಸವಿದೆ ಎಂದು ಈ ಉದ್ಘಾಟನಾ ಸಮಾರಂಭದಲ್ಲಿ ಎಲೋನ್ ಮಸ್ಕ್ ಭಾಷಣದಲ್ಲಿ ಹೇಳಿದರು. ಭವಿಷ್ಯದಲ್ಲಿ ನೀವು ಭರವಸೆ ಹೊಂದಬಹುದು, ಭವಿಷ್ಯದಲ್ಲಿ ನೀವು ಭರವಸೆ ಹೊಂದಿರಬೇಕು ಎಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ ಎಂದು ಅವರು ಹೇಳಿದರು. 

ಚೆಚೆನ್ ರಿಪಬ್ಲಿಕ್ ಮುಖ್ಯಸ್ಥರ ಅಪಹಾಸ್ಯ: ಟ್ವಿಟರ್‌ನಲ್ಲಿ ಹೆಸರು ಬದಲಾಯಿಸಿದ ಎಲಾನ್ ಮಸ್ಕ್

ಟೆಸ್ಲಾ  ಆಗಮನದಿಂದ ಜರ್ಮನಿಯ ಪ್ರಮುಖ ಕಾರು ಉದ್ಯಮ ಕುಂಠಿತವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರತಿಸ್ಪರ್ಧಿಗಳಾದ ವೋಕ್ಸ್‌ವ್ಯಾಗನ್ (Volkswagen), BMW ಮತ್ತು ಮರ್ಸಿಡಿಸ್-ಬೆನ್ಜ್‌ಗಳು (Mercedes-Benz) ಸಾಂಪ್ರದಾಯಿಕ ಇಂಜಿನ್‌ಗಳಿಂದ ಕ್ಲೀನರ್ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವ ಮೂಲಕ ತೀವ್ರ ಸ್ಪರ್ಧೆಗೆ ವೇದಿಕೆಯನ್ನು ಸಿದ್ಧಪಡಿಸುತ್ತಿವೆ. ಆಟೋ ಉದ್ಯಮದಲ್ಲಿ ಹೊಸ ಯುಗ ಈಗ ಜರ್ಮನಿಗೆ ಬಂದಿದೆ ಎಂದು ಸೆಂಟರ್ ಫಾರ್ ಆಟೋಮೋಟಿವ್ ರಿಸರ್ಚ್‌ನ ವಿಶ್ಲೇಷಕ ಫರ್ಡಿನಾಂಡ್ ಡ್ಯೂಡೆನ್‌ಹೋಫರ್ (Ferdinand Dudenhoeffer) ಈ ಸಮಾರಂಭದಲ್ಲಿ ಹೇಳಿದರು.

ಏರುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಜನರು ಎಲೆಕ್ಟ್ರಿಕ್‌ ಕಾರುಗಳತ್ತ ಗಮನ ಹರಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಟೆಸ್ಲಾವೂ 
ಯುರೋಪ್‌ನಲ್ಲಿ ತನ್ನ ಉತ್ಪಾದನೆ ಆರಂಭಿಸಿದೆ. ಗಿಗಾ ಬರ್ಲಿನ್-ಬ್ರಾಂಡೆನ್‌ಬರ್ಗ್" ಎಂಬುದು ಕಳೆದ ದಶಕದಲ್ಲಿ ಟೆಸ್ಲಾದ ಅತ್ಯಂತ ದೊಡ್ಡ ಕಾರ್ಯತಂತ್ರದ ಪ್ರಯತ್ನಗಳಲ್ಲಿ ಒಂದಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಯುರೋಪ್‌ನೊಳಗೆ ತನ್ನ ಮಾರುಕಟ್ಟೆ ಪಾಲನ್ನು ಟೆಸ್ಲಾ ಮತ್ತಷ್ಟು ಹೆಚ್ಚಿಸಬೇಕು, ಏಕೆಂದರೆ ಹೆಚ್ಚಿನ ಗ್ರಾಹಕರು ಆಕ್ರಮಣಕಾರಿಯಾಗಿ ಇಲೆಕ್ಟ್ರಿಕ್‌ ವೆಹಿಕಲ್‌ ಖರೀದಿಸುವ ಹಾದಿಯಲ್ಲಿ ಸಾಗುತ್ತಾರೆ ಎಂದು ಹೂಡಿಕೆ ಸಂಸ್ಥೆ ವೆಡ್‌ಬುಷ್‌ನ ವಿಶ್ಲೇಷಕರು ಹೇಳಿದ್ದಾರೆ. 

Musk vs Putin ಅಮೆರಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರಲ್ಲ ಎಂದ ರಷ್ಯಾ ಎಚ್ಚರಿಕೆಗೆ ಮಸ್ಕ್ ತಿರುಗೇಟು!
 

ಆದರೆ ಟೆಸ್ಲಾ ಪ್ರಮುಖ ಸಾಮಗ್ರಿಗಳ ಕೊರತೆ ಮತ್ತು ಪೂರೈಕೆ ಸರಪಳಿಯ ಅಡೆತಡೆಗಳಿಂದಾಗಿ ಈ ಘಟಕದ ವೇಗದ ಬೆಳವಣಿಗೆ ಸಾಧ್ಯವಿಲ್ಲ. ಇದು ರಷ್ಯಾದ ಉಕ್ರೇನ್‌ನ ನಡುವಿನ ಯುದ್ಧದಿಂದಾಗಿ ಈ ತೊಂದರೆ ಉಂಟಾಗಿದ್ದು, ಇದು ಇತರ ಕಾರು ತಯಾರಕರನ್ನು ಸಹ ಪೀಡಿಸುತ್ತಿದೆ.

ಕಂಪನಿಯು ಕಚ್ಚಾ ವಸ್ತುಗಳು ಮತ್ತು ಲಾಜಿಸ್ಟಿಕ್ಸ್‌ನಲ್ಲಿ  ಇತ್ತೀಚಿನ ಹಣದುಬ್ಬರದ ಒತ್ತಡವನ್ನು ನೋಡುತ್ತಿದೆ ಎಂದು ಮಸ್ಕ್ ಕಳೆದ ವಾರ ಟ್ವೀಟ್ ಮಾಡಿದ್ದರು. ಮಂಗಳವಾರದ ಉದ್ಘಾಟನಾ ಸಮಾರಂಭದಲ್ಲಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ (Olaf Scholz)ಅವರೊಂದಿಗೆ ಭಾಗವಹಿಸಿದ್ದ ಆರ್ಥಿಕ ಸಚಿವ ರಾಬರ್ಟ್ ಹ್ಯಾಬೆಕ್ (Robert Habeck), ಜರ್ಮನಿಯ (Germany) ಚಲನಶೀಲತೆಯ ರೂಪಾಂತರಕ್ಕೆ ಇದು ವಿಶೇಷ ದಿನ ಎಂದು ಹೇಳಿದರು.

click me!