ತಾಯಿ ಆನೆ ಫುಟ್ಬಾಲ್ ಆಡಲು ನಿರಾಸಕ್ತಿ ತೋರಿದೆ.ಅದೆಷ್ಟೇ ಪ್ರಯತ್ನ ಪಟ್ಟರೂ ತಾಯಿ ಆನೆ ಮಾತ್ರ ದೂರ ದೂರ ಸರಿದಿದೆ.ಬೇಸತ್ತ ಮರಿ ಆನೆ ನೀರಿನಲ್ಲಿ ಆಟವಾಡಿದ ಮುದ್ದಾದ ದೃಶ್ಯ ಸೆರೆಯಾಗಿದೆ.
ಆನೆ ಕುಟುಂಬ ಜೀವಿ. ಅದರಲ್ಲೂ ತಾಯಿ ಆನೆ ಹಾಗೂ ಮರಿ ಆನೆಯ ನಡುವಿನ ಬಾಂಧವ್ಯ ಗಟ್ಟಿಯಾಗಿರುತ್ತದೆ. ಮರಿ ಆನೆಗೆ ತಾಯಿ ಅತ್ಯಂತ ಗರಿಷ್ಠ ಭದ್ರತೆ ಸುರಕ್ಷತೆ ಒದಗಿಸುತ್ತದೆ. ಇನ್ನು ಮರಿ ಆನೆಯ ತುಂಟಾಟವೇ ಎಲ್ಲಿಕ್ಕಿಂತ ಮುದ್ದು. ಹೀಗೆ ಸಂರಕ್ಷಿತ ಪಾರ್ಕ್‌ನಲ್ಲಿ ಮರಿ ಆನೆ ತಾಯಿ ಜೊತೆ ಫುಟ್ಬಾಲ್ ಆಡಲು ಪ್ರಯತ್ನಿಸಿದೆ. ಆದರೆ ತಾಯಿ ಆನೆ ಮಾತ್ರ ನಿರಾಸಕ್ತಿ ತೋರಿದೆ. ಮರಿ ಆನೆ ಫುಟ್ಬಾಲ್ ಮತ್ತೆ ಮತ್ತೆ ತಾಯಿ ಆನೆಯತ್ತ ತಳ್ಳುತ್ತಿದ್ದರೂ ತಾಯಿ ಮಾತ್ರ ದೂರ ಸರಿದಿದೆ. ಇದರಿಂದ ಬೇಸತ್ತ ಮರಿ ಆನೆ ನೀರಾಟವಾಡಿದ ದೃಶ್ಯವೊಂದು ಸೆರೆಯಾಗಿದೆ.
ಥಾಯ್ಲೆಂಡ್‌ನ ಎಲಿಫೆಂಟ್ ನೇಚರ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಆನೆಗಳ ಕೇಂದ್ರದಲ್ಲಿ ಕೆಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಮರಿ ಆನೆಗಳಿಗೆ ಆಟವಾಡಲು ನೀರು, ದೊಡ್ಡ ಗಾತ್ರದ ಫುಟ್ಬಾಲ್ ಸೇರಿದಂತೆ ಇತರ ವ್ಯವಸ್ಥೆ ಮಾಡಲಾಗಿದೆ. ತುಂಟ ಮರಿ ಆನೆ ಫುಟ್ಬಾಲ್ ಆಡಲು ಬಯಸಿದೆ. ಆದರೆ ತಾಯಿ ಆನೆಗೆ ಆಸಕ್ತಿ ಇಲ್ಲ.
undefined
ಕೊಳದಲ್ಲಿದ್ದ ಮರಿ ಆನೆ ಮೇಲೆ ದಾಳಿಗೆ ಬಂದ ದೈತ್ಯ ಮೊಸಳೆ, ಹೋರಾಡಿ ರಕ್ಷಿಸಿದ ತಾಯಿ ಆನೆ!
ತಾಯಿ ಜೊತೆ ಫುಟ್ಬಾಲ್ ಆಡಲು ಮರಿ ಆನೆ ಹಲವು ಪ್ರಯತ್ನ ಮಾಡಿದೆ. ಸೊಂಡಿಲಿನಿಂದ, ಕಾಲಿನಿಂದ ಬಾಲ್‌ನ್ನು ತಾಯಿ ಬಳಿ ತಳ್ಳಿದೆ. ಆದರೆ ತಾಯಿ ಆನೆ ಮಾತ್ರ ದೂರ ದೂರ ಸರಿದಿದೆ. ಇದು ಮರಿ ಆನೆಯ ಬೇಸರಕ್ಕೆ ಕಾರಣವಾಗಿದೆ. ಮತ್ತೊಂದು ಆಕ್ರೋಶವೂ ಹೆಚ್ಚಾಗಿದೆ. ನೀರಿನ ಕೊಳದ ಬಳಿ ತೆರಳಿದ ತಾಯಿ ಆನೆ ಬಳಿ ಫುಟ್ಬಾಲ್ ತಳ್ಳಿ ನೇರವಾಗಿ ನೀರಿಗೆ ಇಳಿದಿದೆ. ರಭಸದಿಂದ ನೀರಿಗೆ ಇಳಿದು ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಈ ವಿಡಿಯೋವನ್ನು ಥಾಯ್ಲೆಂಡ್ ಎಲಿಫೆಂಟ್ ನೇಚರ್ ಪಾರ್ಕ್ ಮಾಲೀಕ ಲೇಕ್ ಚೈಲರ್ಟ್ ಹಂಚಿಕೊಂಡಿದ್ದಾರೆ. ಮರಿ ಆನೆಯ ಬೇಸರ, ಆಕ್ರೋಶ ಹಾಗೂ ತುಂಟಾ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಮರಿ ಆನೆಯ ತುಂಟಾಟವೇ ಅತ್ಯಂತ ಮುದ್ದಾಗಿದೆ. ಮರಿ ಆನೆ ನೀರಿನಲ್ಲಿ ಆಟವಾಡುತ್ತಿದೆ. ಇದು ನಮ್ಮ ಬಾಲ್ಯದ ನೆನಪನ್ನು ಕಟ್ಟಿಕೊಡುತ್ತಿದೆ. ಮಳೆಯಲ್ಲಿ, ನೀರಿನಲ್ಲಿ ಆಟವಾಡಿದ ದಿನಗಳನ್ನ ನೆನೆಪಿಸಿದೆ ಎಂದಿದ್ದಾರೆ.
ಮಾವುತನ ಪ್ರೀತಿಗೆ ಮಗುವಾದ ದೈತ್ಯ ಆನೆ, ಬಾಂಧವ್ಯದ ವಿಡಿಯೋ ಹಂಚಿಕೊಂಡ ಅಧಿಕಾರಿ!
ಸ್ವಚ್ಚಂದವಾಗಿ ಮರಿ ಆನೆ ಆಟವಾಡುತ್ತಿರುವುದು ನೋಡಲು ಖುಷಿಯಾಗುತ್ತಿದೆ. ಭಾನುವಾರದ ದಿನ ಮನಸ್ಸು ಪ್ರಶಾಂತವಾಗಿದೆ. ಈ ವಿಡಿಯೋದಿಂದ ಜೀವನದಲ್ಲಿ ಉತ್ಸಾಹ, ಆಸಕ್ತಿ ಹೆಚ್ಚಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.