10 ನಿಮಿಷದ ರಸ್ತೆಗೆ 18 ಸಾವಿರ ರೂಪಾಯಿ ಕೇಳಿದ ಟ್ಯಾಕ್ಸಿ ಚಾಲಕ

Published : Jun 12, 2025, 01:59 PM IST
Taxi

ಸಾರಾಂಶ

10 ನಿಮಿಷದ ಟ್ಯಾಕ್ಸಿ ಸವಾರಿಗೆ ₹18,000 ಬೆಲೆ ಕೇಳಿದ ಚಾಲಕನ ಬಗ್ಗೆ ಆಶಾ ಮತ್ತು ಕಿರಣ್ ವಿಡಿಯೋ ಹಂಚಿಕೊಂಡಿದ್ದಾರೆ.

ಬೆಂಗಳೂರು: ನೀವು ಯಾವುದೇ ಸ್ಥಳಕ್ಕೆ ಹೋಗುತ್ತಿದ್ರೆ ಮೊದಲು ಅಲ್ಲಿಯ ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಪ್ರವಾಸ ಮಾಡುವ ಸಂದರ್ಭದಲ್ಲಿ ನಾವು ಭೇಟಿ ನೀಡುವ ಸ್ಥಳದ ಬಗ್ಗೆ ಮಾಹಿತಿ ಹೊಂದಿದ್ದರೆ ಮೋಸ ಹೋಗುವುದನ್ನು ತಪ್ಪಿಸಬಹುದು. ಭಾರತದ ಟ್ರಾವೆಲ್ ಕಪಲ್ ಎಂದೇ ಫೇಮಸ್ ಆಗಿರುವ ಕನ್ನಡಿಗರಾದ ಆಶಾ-ಕಿರಣ್‌ ಪ್ರಪಂಚದ ಮೂಲೆ ಮೂಲೆಯನ್ನು ಸುತ್ತುತ್ತಿರುತ್ತಾರೆ. ತಾವು ಭೇಟಿ ನೀಡಿದ ಸ್ಥಳದ ವಿಡಿಯೋಗಳನ್ನು ಫ್ಲೈಯಿಂಗ್ ಪಾಸ್‌ಪೋರ್ಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಆಶಾ ಮತ್ತು ಕಿರಣ್ ಕೊರಿಯಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ನಗರವೊಂದರಲ್ಲಿ ಕೇವಲ 10 ನಿಮಿಷದ ಪ್ರಯಾಣಕ್ಕೆ ಟ್ಯಾಕ್ಸಿ ಚಾಲಕ ಬರೋಬ್ಬರಿ 18 ಸಾವಿರ ರೂಪಾಯಿ ಕೇಳಿದ್ದಾನೆ.

18 ಸಾವಿರ ಕೇಳಿದ ಚಾಲಕ!

ಆಶಾ ಮತ್ತು ಕಿರಣ್ ಸೌಥ್ ಕೊರಿಯಾದ ಸಿಯೋಲ್ ನಗರಕ್ಕೆ ಭೇಟಿ ನೀಡಿದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಯೋಲ್ ನಗರದ ರೈಲು ನಿಲ್ದಾಣದಿಂದ 6 ಕಿಲೋ ಮೀಟರ್ ದೂರದಲ್ಲಿರುವ ಹೋಟೆಲ್‌ಗೆ ಆಶಾ-ಕಿರಣ್ ತೆರಳಬೇಕಿತ್ತು. ರೈಲು ನಿಲ್ದಾಣದ ಬಳಿಯಲ್ಲಿದ್ದ ಟ್ಯಾಕ್ಸಿಯನ್ನು ವಿಚಾರಿಸಿದಾಗ ಚಾಲಕ ಬರೋಬ್ಬರಿ 18,000 ರೂಪಾಯಿ ಹಣ ಕೇಳಿದ್ದಾನೆ. ಇದನ್ನು ಕೇಳಿದ ಕಿರಣ್‌, ಸಾರಿಗೆ ಬಸ್‌ಗೆ ಹೋಗುವುದು ಉತ್ತಮ ಎಂದು ಹೇಳಿದ್ದಾರೆ.

ಬಸ್ ಟಿಕೆಟ್ ದರ ಎಷ್ಟು?

ಟ್ಯಾಕ್ಸಿ ದುಬಾರಿಯಾದ ಕಾರಣ ಆಶಾ ಮತ್ತು ಕಿರಣ್‌ ಸಿಯೋಲ್‌ ಸಾರಿಗೆ ಬಸ್‌ನಲ್ಲಿ ತೆರಳಿದ್ದಾರೆ. ರೈಲು ನಿಲ್ದಾಣದಿಂದ ಹೋಟೆಲ್‌ಗೆ ತೆರಳಲು ಬಸ್‌ನಲ್ಲಿ ಒಬ್ಬರಿಗೆ 100 ರೂಪಾಯಿ ತೆಗೆದುಕೊಳ್ಳಲಾಗಿದೆ. ಸಿಯೋಲ್ ರಸ್ತೆಗಳಲ್ಲಿ ಬೆಂಗಳೂರಿನಂತೆಯೇ ಟ್ರಾಫಿಕ್ ಇದೆ ಎಂದು ಆಶಾ ಮತ್ತು ಕಿರಣ್ ತಮ್ಮ ವೀಕ್ಷಕರಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಸಿಯೋಲ್ ನಗರ ತುಂಬಾ ದುಬಾರಿಯಾಗಿದ್ದು, ಒಂದು ರಾತ್ರಿ ವಾಸ್ತವ್ಯಕ್ಕೆ 8 ಸಾವಿರ ರೂಪಾಯಿ ತೆಗೆದುಕೊಂಡಿದ್ದಾರೆ. ಹೋಟೆಲ್ ಕೋಣೆಯೂ ತುಂಬಾ ಚಿಕ್ಕದಾಗಿದೆ ಎಂದ ಕಿರಣ್, ಅಲ್ಲಿ ನೀಡಲಾಗಿರುವ ವ್ಯವಸ್ಥೆಯ ಮಾಹಿತಿ ನೀಡಿದ್ದಾರೆ.

18 ಸಾವಿರ ಟ್ಯಾಕ್ಸಿ ಚಾರ್ಜ್ ಕೇಳಿ ನೆಟ್ಟಿಗರು ಹೇಳಿದ್ದೇನು?

ಸಿಯೋಲ್ ಮಹಾನಗರದ ಪರಿಚಯ. ಬಸ್ ದರಕ್ಕೂ ಟ್ಯಾಕ್ಸಿ ದರಕ್ಕೂ ಅಗಾಧ ಅಂತರ. ರೈಲು ನಿಲ್ದಾಣದ ನೋಟ ಚೆನ್ನಾಗಿತ್ತು. ವಿಡಿಯೋ ಚೆನ್ನಾಗಿದೆ. ಜೀವನದಲ್ಲಿ ಎಲ್ಲರಿಗೂ ಈ ಭಾಗ್ಯ ಪ್ರಪಂಚ ಸುತ್ತುವುದು ನೋಡುವುದು ಸಿಗೋಲ್ಲ ಸುಖಾವಾಗಿರೀ ಆರಾಮವಾಗಿರಿ ಧನ್ಯವಾದಗಳು ವಿದೇಶೀ ದೇಶಗಳನ್ನು ತೋರಿಸಿದ್ದಕ್ಕೆ good luck ಎಂದು ಶುಭ ಹಾರೈಸಿದ್ದಾರೆ.

ಸೌಥ್ ಕೊರಿಯಾ ವೆಜ್ ಸ್ಟ್ರೀಟ್

ಸೌಥ್ ಕೊರಿಯಾದ ಬಹುತೇಕರು ಮಾಂಸಹಾರಿಗಳು. ಸಾಮಾನ್ಯವಾಗಿ ಎಲ್ಲರೂ ನಾನ್ ವೆಜ್ ಫುಡ್ ಸಿಗುವ ಪ್ರದೇಶವನ್ನು ತೋರಿಸುತ್ತಾರೆ. ಆಶಾ-ಕಿರಣ್ ಸಹ ಈ ಮಾಂಸಾಹಾರ ಸಿಗುವ ಅಂಗಡಿಗಳನ್ನು ತೋರಿಸಿದ್ದಾರೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಫ್ಲೈಯಿಂಗ್ ಪಾಸ್‌ಪೋರ್ಟ್‌ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಹೊಂದಿರುವ ಆಶಾ ಮತ್ತು ಕಿರಣ್ ಪ್ರವಾಸದ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ವಿಡಿಯೋ ಜೊತೆಯಲ್ಲಿ ತಾವು ಭೇಟಿ ನೀಡಿರುವ ಸ್ಥಳದ ಪರಿಚಯವನ್ನು ಆಶಾ-ಕಿರಣ್ ಮಾಡಿಕೊಡಿರುತ್ತಾರೆ. ತಾವು ಭೇಟಿ ನೀಡುವ ಪ್ರತಿ ದೇಶದಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಮರೆಯುತ್ತಿರುತ್ತಾರೆ. ಸುಮಾರು 200ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿರುವ ಆಶಾ ಮತ್ತು ಕಿರಣ್ ಪ್ರವಾಸದ ಪ್ರತಿಯೊಂದು ಕ್ಷಣವನ್ನು ಮುಚ್ಚುಮರೆ ಇಲ್ಲದೇ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲಿಯೇ ನಿದ್ದೆ ಮಾಡಿರುವ ವಿಡಿಯೋಗಳನ್ನ ಶೇರ್ ಮಾಡಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ