Flydubai Incident: ವಿಮಾನ ಪ್ರಯಾಣಿಕರಿಗೆ ದೇವರಾದ ಪ್ಲಂಬ್ಲರ್​, ಡೆಂಟಿಸ್ಟ್, ರಿಜ್ವಾನ್​- ಇದು ಇಲ್ಲಿ ಮಾತ್ರ ಸಾಧ್ಯ

Published : Oct 02, 2026, 11:40 AM IST
Flydubai Incident

ಸಾರಾಂಶ

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ಉಗ್ರ ದಾಳಿಯನ್ನು ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಮತ್ತು ಮೂವರು ಇಸ್ರೇಲಿ ಪ್ರಯಾಣಿಕರು ವಿಫಲಗೊಳಿಸಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಇವರು 174 ಪ್ರಯಾಣಿಕರ ಜೀವ ಉಳಿಸಿ ಜಗತ್ತಿನಾದ್ಯಂತ ಹೀರೋಗಳಾಗಿದ್ದಾರೆ.

ಮೊನ್ನೆ ಬುಧವಾರ ಅರ್ಥಾತ್​ ಸೆಪ್ಟೆಂಬರ್​ 30ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ ವಿಮಾನದಲ್ಲಿ (Flydubai Incident) ಏನಾಯಿತು ಎಂಬುದರ ಕುರಿತು ವಿಶ್ವಾದ್ಯಂತ ಚರ್ಚೆ ನಡೆಯುತ್ತಿದೆ. ಇದರಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ 174 ಪ್ರಯಾಣಿಕರ ಪಾಲಿಗೆ ಹೀರೋ ಆಗಿ ಮೆರೆದವರು ಭಾರತೀಯ ಮೂಲಕ ಸ್ಮಿತ್​ ಮಚ್ಚಾರ್​. ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ಆದರೆ, ಈ ಭಯೋತ್ಪಾದನಾ ದಾಳಿಯಲ್ಲಿ, ಪ್ರಯಾಣಿಕರ ಜೀವದ ಜೊತೆಗೆ ಪೈಲೆಟ್​ ಸ್ಮಿತ್​ ಮಚ್ಚಾರ್​ ಅವರ ಜೀವವನ್ನು ಆ ಕ್ಷಣದಲ್ಲಿ ಕಾಪಾಡಲು ಸಹಾಯ ಮಾಡಿದ್ದು, ಇನ್ನೂ ಮೂವರು. ಅವರಲ್ಲಿ ಒಬ್ಬರು ಪ್ಲಂಬ್ಲರ್​, ಇನ್ನೊಬ್ಬರು ಡೆಂಟಿಸ್ಟ್​ ಹಾಗೂ ಮತ್ತೋರ್ವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ. ಅಷ್ಟಕ್ಕೂ ಬೇರೆ ಯಾವುದೋ ಉದ್ಯೋಗದಲ್ಲಿದ್ದುಕೊಂಡು ವಿಮಾನದ ಒಳಹೊರವನ್ನೂ ಅರಿತು, ಆ ಕ್ಷಣದಲ್ಲಿ, ನೆರವಿಗೆ ಧಾವಿಸಿ, ಉಗ್ರ ಕೃತ್ಯವನ್ನು ತಪ್ಪಿಸಲು ಸಾಧ್ಯವಾಗಿಸುವ ಧೈರ್ಯ ತೋರಿಸಲು ಸಾಧ್ಯವಾಗುವುದು ಇಸ್ರೇಲಿಗರಿಗೆ ಮಾತ್ರ ಸಾಧ್ಯ ಎಂದೇ ಹೇಳಲಾಗುತ್ತಿದೆ.

ಅಷ್ಟಕ್ಕೂ ವಿಮಾನದಲ್ಲಿ ಇದ್ದದ ಪ್ರಯಾಣಿಕರ ಪೈಕಿ ಹಲವರು ಇಸ್ರೇಲಿಗರು. ಇಸ್ರೇಲ್​ ದೇಶದಲ್ಲಿ ಪ್ರತಿಯೊಬ್ಬರೂ ಯೋಧರೇ. ಸನ್ನಿವೇಶ ಬಂದರೆ, ಅಲ್ಲಿ ಎಲ್ಲರೂ ಯುದ್ಧಕ್ಕೆ ಇಳಿಯಲು ಸೈ ಎನ್ನಿಸುವಷ್ಟರಮಟ್ಟಿಗೆ ಸನ್ನದ್ಧರಾಗಿರುತ್ತಾರೆ. ದೇಶದ ರಕ್ಷಣೆ ಮಾಡುವವರನ್ನು ನಿಂದಿಸುವುದು, ಪರದೇಶಗಳಿಗೆ ಹೋಗಿ ದೇಶದ ಮರ್ಯಾದೆ ತೆಗೆಯುವುದು, ದೇಶದ ಒಳಗಿದ್ದುಕೊಂಡೇ ದೇಶದ ಬಗ್ಗೆ ಕೆಟ್ಟ ಯೋಚನೆ ಮಾಡುವುದು... ಇವೆಲ್ಲವೂ ಅಲ್ಲಿಯ ಜನರ ರಕ್ತದಲ್ಲಿಯೇ ಇಲ್ಲ. ಇದೇ ಕಾರಣಕ್ಕೆ, ಮೊನ್ನೆ ನಡೆದ ಘಟನೆಯಲ್ಲಿ, ಎಲ್ಲರೂ ಧಾವಿಸಿ, ಪ್ರಯಾಣಿಕರ ಪಾಲಿಗೆ ದೇವರಾಗಿ ಬಂದರು. ಭಾರತೀಯ ಪೈಲಟ್ ಸ್ಮಿತ್​ ಅವರ ಜೊತೆ ನೆರವಾಗಿ, ಉಗ್ರನ ಕೃತ್ಯವನ್ನು ವಿಫಲಗೊಳಿಸುವಲ್ಲಿ ನೆರವಾದವರ ಪೈಕಿ, ಇಸ್ರೇಲಿ ಪ್ಲಂಬ್ಲರ್​ ಯಾನಿವ್ ಹಯೂನ್, ಗಾಯಗೊಂಡ ಪೈಲಟ್‌ಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದ ಇಸ್ರೇಲಿ ದಂತವೈದ್ಯ ಡಾ. ಶೋಟಾ ಮುಸಾಯೆವ್ ಮತ್ತು ಇಸ್ರೇಲಿ ಪ್ರಯಾಣಿಕ ರಿಜ್ವಾನ್.

ಪೈಲಟ್ ಮತ್ತು ಈ ಮೂವರು ಇಸ್ರೇಲಿಗಳ ಧೈರ್ಯವು ವಿಮಾನವನ್ನು ವಿಪತ್ತಿನಿಂದ ರಕ್ಷಿಸಿತು. ಇತರ ಪ್ರಯಾಣಿಕರು ಈ ವೀರರನ್ನು ಹೊಗಳುತ್ತಿದ್ದಾರೆ. ಕೋ ಪೈಲಟ್​ ಚೂರಿಯಿಂದ ಚುಚ್ಚಿದರೂ, ಗಾಯಗೊಂಡ ಸ್ಮಿತ್ ಮಚ್ಚರ್ ಧೈರ್ಯ ಪ್ರದರ್ಶಿಸಿ ವಿಮಾನದ ನಿಯಂತ್ರಣವನ್ನು ಮರಳಿ ಪಡೆದರು. ಅವರ ತಲೆ ಮತ್ತು ಕೈಗಳಿಗೆ ಗಾಯವಾದರೂ ಇನ್ನೂ ವಿಮಾನದ ನಿಯಂತ್ರಣವನ್ನು ಕಾಯ್ದುಕೊಂಡರು. ಗಾಯಗೊಂಡಿದ್ದರೂ ಸಹ ಅವರು ತಮ್ಮ ಉಳಿದಿರುವ ಶಕ್ತಿಯನ್ನು ಬಳಸಿಕೊಂಡು ಕಾಕ್‌ಪಿಟ್ ಬಾಗಿಲು ತೆರೆಯಲು ಬಳಸಿದರು. ಆ ಬಳಿಕ ಬಂದವರು ಪ್ಲಂಬ್ಲರ್​ ಯಾನೀವ್ ಹಯೂನ್. ಕಾಕ್‌ಪಿಟ್‌ಗೆ ಪ್ರವೇಶಿಸಿದ, ಪೈಲಟ್ ಸ್ಮಿತ್​ ಮೇಲೆ ದಾಳಿ ಮಾಡುತ್ತಿದ್ದ ಕೋ- ಪೈಲಟ್‌ನನ್ನು ಬಲವಂತವಾಗಿ ಹತ್ತಿಕ್ಕಿ ಹೊರಗೆ ಎಳೆದಾಡಿದರು ಇವರು. ಇದು ಸ್ಮಿತ್​ ಅವರ ಜೀವವನ್ನು ಉಳಿಸಿತು ಮತ್ತು ಆರಂಭದಲ್ಲಿ ಸುಮಾರು 17,000 ಅಡಿ ಎತ್ತರದಿಂದ ಬಿದ್ದ ವಿಮಾನವನ್ನು ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೆ ಜೀವಂತಗೊಳಿಸಲಾಯಿತು.

ಡೆಂಟಿಸ್ಟ್​ ಸಾಧನೆ

ಬಳಿಕ ಬಂದವರು ಡೆಂಟಿಸ್ಟ್​ ಡಾ. ಶೋಟಾ ಮುಸಾಯೆವ್. ವೃತ್ತಿಯಲ್ಲಿ ಇವರು ಹಲ್ಲಿನ ತಜ್ಞರು. ಆದರೆ, ಇಸ್ರೇಲಿಯವರಾದ ಅವರಿಗೆ ಎಲ್ಲವೂ ತಿಳಿದಿದೆ. ಆದ್ದರಿಂದ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಗಾಯಗೊಂಡ ಪೈಲಟ್‌ಗೆ ತುರ್ತು ಚಿಕಿತ್ಸೆ ನೀಡಿದರು. ಕಿರುಚಾಟ ಕೇಳಿದ 10 ಸೆಕೆಂಡುಗಳಲ್ಲಿ ಅವರು ಸ್ಥಳಕ್ಕೆ ಧಾವಿಸಿದರು. ಅವರು ಅಲ್ಲಿ ಉಗ್ರ ಇದದ್ದೂ ಲೆಕ್ಕಿಸದೇ, ತಮ್ಮ ಪ್ರಾಣಕ್ಕೆ ಅಪಾಯ ಆಗಬಹುದು ಎಂದೂ ಯೋಚಿಸದೇ ಕಾಕ್‌ಪಿಟ್‌ಗೆ ಧಾವಿಸಿದರು ಮತ್ತು ಪೈಲಟ್ ತಲೆಯಿಂದ ಕಾಲಿನವರೆಗೆ ರಕ್ತಸ್ರಾವವಾಗುತ್ತಿರುವುದನ್ನು ನೋಡಿದರು. ವಿಮಾನದಲ್ಲಿದ್ದ ಏಕೈಕ ವೈದ್ಯ ಅವರು. ಅವರು ತಕ್ಷಣ ರಕ್ತಸ್ರಾವವನ್ನು ನಿಲ್ಲಿಸಿ ಪೈಲಟ್‌ನ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತಂದರು. ಕೆಲವು ಧೈರ್ಯಶಾಲಿ ಜನರ ಸಹಾಯದಿಂದ ಸಕಾಲದಲ್ಲಿ ಭೀಕರ ಪರಿಸ್ಥಿತಿಯನ್ನು ತಪ್ಪಿಸಲಾಯಿತು.

ಪ್ರಯಾಣಿಕ ಆಸಿಫ್ ರಿಜ್ವಾನ್

ಇಸ್ರೇಲಿ ಪ್ರಯಾಣಿಕ ಆಸಿಫ್ ರಿಜ್ವಾನ್ ದುರಂತವನ್ನು ತಪ್ಪಿಸಲು ಸಹಾಯ ಮಾಡಿದ ನಾಲ್ಕನೇ ನಾಯಕ. ಈ ಘಟನೆಯಲ್ಲಿ ರಿಜ್ವಾನ್‌ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಕಿರುಚಾಟ ಕೇಳಿದರು ಮತ್ತು ವಿಮಾನ ನಿಯಂತ್ರಣ ತಪ್ಪಲು ಪ್ರಾರಂಭಿಸಿತು ಎಂದು ಹೇಳಿದರು. ಕಾಕ್‌ಪಿಟ್ ಬಾಗಿಲು ತೆರೆದ ತಕ್ಷಣ, ಅವರು ಇತರ ಇಸ್ರೇಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಧಾವಿಸಿ ಬಂದು ಸಹ-ಪೈಲಟ್‌ ಮೇಲೆ ದಾಳಿ ಮಾಡಿದರು. . ದಾಳಿಕೋರನನ್ನು ಸುಮಾರು 55 ನಿಮಿಷಗಳ ಕಾಲ ತಡೆಹಿಡಿದರು. ಇವರೆಲ್ಲರಿಗೂ ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್‌ಸ್ಟಾಗ್ರಾಂ ಕೇವಲ ಹುಡುಗಿಯರಿಗೆ ಮಾತ್ರ, ಎಲನ್ ಮಸ್ಕ್ ಸೃಷ್ಟಿಸಿದ ವಿವಾದ ಎಕ್ಸ್‌ನಲ್ಲಿ ಟ್ರೆಂಡ್
ಮಲೇಷ್ಯಾ ಕನ್ನಡ ಸಂಘದ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ: ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಹೆಜ್ಜೆ