
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದೆ. ಇದೀಗ ಯುವ ಸಮೂಹಕ್ಕೆ ಯಾವ ಕೋರ್ಸ್ ಕಲಿಯಬೇಕು ಅನ್ನೋ ಗೊಂದಲ ಹೆಚ್ಚಾಗುತ್ತಿದೆ. ಎಐ ಹಾಗೂ ಮಶಿನ್ ಲರ್ನಿಂಗ್, ಸೈನ್ಸ್, ಕಾಮರ್ಸ್, ಆರ್ಟ್ಸ್, ಐಟಿ, ಡಿಪ್ಲಾಮಾ ಸೇರಿದಂತೆ ಹಲವು ಶೈಕ್ಷಣಿಕ ಕೋರ್ಸ್‌ಗಳು, ವೃತ್ತಿ ಆಧಾರಿತ ಡಿಪ್ಲೋಮಾ ಕೋರ್ಸ್ ಸೇರಿದಂತೆ ಹಲವು ಕೋರ್ಸ್‌ಗಳಲ್ಲಿ ಎಐ ಕಾಲದಲ್ಲಿ ಉದ್ಯೋಗ ಸಿಗಲು ಯಾವ ಕೋರ್ಸ್ ಮಾಡಬೇಕು ಅನ್ನೋ ಕುರಿತು ಶ್ರೀಮಂತ ಉದ್ಯಮಿ ಎಲನ್ ಮಸ್ಕ್ ಮಹತ್ವದ ಸಲಹೆ ನೀಡಿದ್ದಾರೆ. 20ರ ಹರೆಯದ ಯುವ ಸಮೂಹಕ್ಕೆ ಮಸ್ಕ್ ಕೆಲ ಟಿಪ್ಸ್ ನೀಡಿದ್ದಾರೆ.
ಕೋರ್ಸ್ ಕಲಿಯುವಾಗ ಒಂದೇ ಕೋರ್ಸ್ ಅಥವಾ ಸ್ಪೆಷಲೈಸೇಶನ್ ಕೋರ್ಸ್‌ಗಿಂತ ವಿಶಾಲವಾಗಿ ಕಲಿಯಿರಿ. ಆರ್ಟ್ಸ್, ಸೈಸನ್, ಕಾಮರ್ಸ್, ಎಂಜಿನೀಯರಿಂಗ್, ಜನರಲ್ ಸಬ್ಜೆಕ್ಟ್ ಸೇರಿದಂತೆ ವಿಶಾಲವಾದ ವಿಷಗಳನ್ನು ಆಯ್ಕೆ ಮಾಡಿಕೊಂಡು ಕಲಿಯಬೇಕು. ಒಂದೇ ಕೋರ್ಸ್, ಒಂದು ವಿಷಯದ ಕುರಿತು ಹೆಚ್ಚಿನ ಜ್ಞಾನ ಅಗತ್ಯ, ಆದರೆ ಇತರ ವಿಷಗಳ ಬಗ್ಗೆಯೂ ಗೊತ್ತಿರಬೇಕು. ಎಲ್ಲಾ ಕೆಲಸವನ್ನು ಎಐ ಮಾಡುವಾಗ ನಾವು ಅದೇ ವೇಗದಲ್ಲಿ ಹೋಗಬೇಕು. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆಯೂ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ವಿಷದ ಕಲಿಕೆ ಅಗಾಧವಾಗಿರಬೇಕು, ಒಂದೇ ವಿಷಯಕ್ಕೆ ಸೀಮಿತಗೊಳಿಸಬೇಡಿ ಎಂದು ಮಸ್ಕ್ ಸಲಹೆ ನೀಡದ್ದಾರೆ.
ಹಲವು ವಿಷಗಳ ಬಗ್ಗೆ ಜ್ಞಾನ ಹೊಂದಿರುವ ವ್ಯಕ್ತಿ ಯಾವುದೇ ವಿಚಾರವನ್ನು ಯೋಚಿಸಿ, ಇತರೆಡೆಗಳಿಂದ ಮಾಹಿತಿ ಕಲೆಹಾಕಿ ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯ. ಎಐ ಎಲ್ಲಾ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತದೆ. ಆದರೆ ಎಐ ನಿರ್ವಹಣೆ ಮಾಡುವಾಗ, ಎಐ ನೀಡುವ ಉತ್ತರಗಳು, ಎಐ ಮಾಡುವ ಕೆಲಸಗಳು ಸರಿಯಾದ ಪ್ರಮಾಣದಲ್ಲಿ ಆಗಿದೆಯಾ ಅನ್ನೋ ಪರಿಶೀಲನೆಗೆ ಮಾನವನ ಅಗತ್ಯತೆ ಸಾಕಷ್ಟಿದೆ. ಹೀಗಾಗಿ ಕೋರ್ಸ್ ಜೊತೆ ವಿಶೇಷ ಕೌಶಲ್ಯಗಳುನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಯಾವುದೇ ವಿಷಯವನ್ನು ಆರಿಸಿಕೊಂಡರೂ ಸ್ಪೆಷಲೇಸೇಶನ್‌ಗಿಂತ ಎಲ್ಲಾ ವಿಷಗಳ ಅಧ್ಯಯನ ಮುಖ್ಯ ಎಂದು ಮಸ್ಕ್ ಹೇಳಿದ್ದಾರೆ.
ಯುವ ಸಮೂಹ ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳಲು ಒಂದು ಕೋರ್ಸ್ ಪಡೆದು ಅದನ್ನೇ ಅದ್ಯಯನ ಮಾಡಿ ಪರಿಣಿತಿ ಪಡೆದರೆ ನೀವು ವೃತ್ತಿ ಆರಂಭಿಸುವ ಹೊತ್ತಿಗೆ ಅಪ್ರಸ್ತುತವಾಗಬಹುದು. ಇದರಿಂದ ಉದ್ಯೋಗ ಸಿಗದೇ ಇರಬಹುದು, ಅಥವಾ ಸಿಕ್ಕರೂ ಬೇಡಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ವಿಷಯದ ಜೊತೆಗೆ ಸಮಸ್ಯೆಗಳನ್ನು ಗುರುತಿಸಲು, ಪರಿಹರಿಸುವ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು,. ಸುತ್ತಲಿನ ಪ್ರಪಂಚ, ಜ್ಞಾನವನ್ನು ಅರಿತುಕೊಳ್ಳಿ ಎಂದು ಮಸ್ಕ್ ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ