FlyDubai: ಪ್ರಾರ್ಥನೆ ಮಾಡಲು ನಿಂತವ ದಿಢೀರ್‌...,: ನೆತನ್ಯಾಹು ಮುಂದೆ ಭೀಕರತೆ ವಿವರಿಸಿದ ಪೈಲಟ್ ಸ್ಮಿತ್‌ ಮಚ್ಛರ್

Published : Oct 04, 2026, 08:31 AM IST
flydubai flight captain smit machhar cockpit attack plane hijack attempt

ಸಾರಾಂಶ

ಫ್ಲೈದುಬೈ ವಿಮಾನ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಸಹಪೈಲಟ್‌ ಹಮಾಮ್‌ ತಮ್ಮ ಮೇಲೆ ಮಾಡಿದ ದಾಳಿಯ ಬಗ್ಗೆ ಪೈಲಟ್ ಸ್ಮಿತ್‌ ಮಚ್ಛರ್‌ ವಿವರಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಪೈಲಟ್ ಅವರನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಭಾರತದ ಪ್ರಧಾನಿ ಮೋದಿ ಶ್ಲಾಘಿಸಿ ಧೈರ್ಯ ತುಂಬಿದ್ದಾರೆ.

ಅಬುಧಾಬಿ: ಫ್ಲೈದುಬೈ ವಿಮಾನ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಸೆ.30ರಂದು ಕಾಕ್‌ಪಿಟ್‌ನಲ್ಲಿ ಸಹಪೈಲಟ್‌ ಹಮಾಮ್‌ ತಮ್ಮ ಮೇಲೆ ದಾಳಿ ಮಾಡಿದ ಸಂದರ್ಭವನ್ನು ಪೈಲಟ್ ಸ್ಮಿತ್‌ ಮಚ್ಛರ್‌ ಅವರು ಸವಿವರವಾಗಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರೆದುರು ಬಿಚ್ಚಿಟ್ಟಿದ್ದಾರೆ.

‘ಪ್ರಾರ್ಥನೆ ಮಾಡಲೆಂದು ಹಮಾಮ್‌ ಎದ್ದುನಿಂತಾಗ, ಗೌರವಸೂಚಕವಾಗಿ ನಾನು ತಿರುಗಿ ನೋಡಲಿಲ್ಲ. ಕೆಲ ನಿಮಿಷಗಳಾದ ಬಳಿಕ ಏನೋ ಆದಂತಾಗಿ, ವಿಮಾನಕ್ಕೇನಾದರೂ ಆಯಿತೇ ಎಂದುಕೊಂಡೆ. ನನಗೆ ಇನ್ನೊಂದು ಪೆಟ್ಟು ಬಿದ್ದಾಗ, ಆತನೇ ಹೊಡೆಯುತ್ತಿದ್ದ ಎಂದು ತಿಳಿಯಿತು. ಕೂಡಲೇ ಕಾಕ್‌ಪಿಟ್‌ನ ಬಾಗಿಲು ತೆರೆದೆ. ಆದರೆ ಅವನು ಅದನ್ನು ಮುಚ್ಚಿಬಿಟ್ಟ ಪರಿಣಾಮ ನಾನು ನೆಲಕ್ಕೆ ಬಿದ್ದೆ. ಅದಾಗಿಯೂ ಆ ಬಾಗಿಲನ್ನು ಮತ್ತೆ ತೆರೆಯುವ ಅವಕಾಶವಿದೆ ಎಂಬುದನ್ನು ಮನಗಂಡು ಅಂತೆ ಮಾಡಿದಾಗ, ಒಳಬರಲೆಂದು ಜನ ಕಾಯುತ್ತಾ ನಿಂತಿದ್ದುದು ಕಾಣಿಸಿತು’ ಎಂದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಯೇ ಸ್ಮಿತ್‌ ವಿವರಿಸಿದ್ದಾರೆ.

ಇಡೀ ವಿಶ್ವಕ್ಕೆ ಹೀರೋ

ಈ ವೇಳೆ ಮಚ್ಛರ್‌ರನ್ನು ‘ನೀವು ಇಸ್ರೇಲ್‌, ಭಾರತ ಮತ್ತು ಇಡೀ ವಿಶ್ವಕ್ಕೇ ಹೀರೋ’ ಎಂದು ನೆತನ್ಯಾಹು ಕೊಂಡಾಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಪೈಲಟ್‌ಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫ್ರಾನ್ಸನಲ್ಲೂ ಜೆನ್‌ಝೀ ದಂಗೆ! ಭಾರತದ ಜಿರಳೆ ಪಕ್ಷ ರೀತಿ ವಿದ್ಯಾರ್ಥಿಗಳು ಬೀದಿಗೆ
2026ರ ನವೆಂಬರ್​ 13 ಮಹಾ ಕಂಟಕ! ಮೂವರು ವಿಜ್ಞಾನಿಗಳ ಭವಿಷ್ಯವಾಣಿ ತಂದಿದೆ ಭಾರಿ ಆತಂಕ