257 ಪ್ರಯಾಣಿಕರನ್ನು ಹೊತ್ತ ವಿಮಾನ ಹಾರಾಟ ಆರಂಭಿಸಿದೆ. ಮಧ್ಯ ದಾರಿ ನಡುವೆ ಪೈಲೆಟ್ ಕಂಟ್ರೋಲ್ ರೂಂ ಜೊತೆ ಮಾತನಾಡಿ ಪಾಸ್‌ಪೋರ್ಟ್ ಒಂದು ವಿಚಾರ ಹೇಳಿದ್ದಾನೆ. ಇಷ್ಟೇ ಅಲ್ಲ ಅಲ್ಲಿಂದಲೇ ವಿಮಾನ ಮರಳಿದೆ. ಚೀನಾದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಸ್ಯಾನ್ ಫ್ರಾನ್ಸಿಸ್ಕೋ(ಮಾ.25) ಪ್ರಯಾಣಿಕರ ಕಾರಣ, ತಾಂತ್ರಿಕ ಕಾರಣದಿಂದ ವಿಮಾನ ನಿಗಿದತ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡದೇ ಬೇರೆ ನಿಲ್ದಾಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದ ಹಲವು ಉದಾಹರಣೆಗಳಿವೆ. ಆದರೆ ಇದೀಗ ಅಚ್ಚರಿ ಘಟನೆ ನಡೆದಿದೆ. ಪೈಲೆಟ್ ಪಾಸ್‌ಪೋರ್ಟ್ ಕಾರಣದಿಂದ ಚೀನಾದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಕೊನೆಗೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಈ ತುರ್ತು ಭೂಸ್ಪರ್ಶಕ್ಕೆ ಮುಖ್ಯ ಕಾರಣ ಪೈಲೆಟ್ ಪಾಸ್‌ಪೋರ್ಟ್ ಮಾತ್ರ. ಇದರಿಂದ ವಿಮಾನ ಪ್ರಯಾಣಿಕರು ಪರದಾಡುವಂತಾಗಿದೆ. ಬಳಿಕ ಸ್ಯಾನ್ ಫ್ರಾನ್ಸಿಕೋದಿಂದ ಬೇರೆ ವಿಮಾನದಲ್ಲಿ ಪ್ರಯಾಣಿಕರು ಚೀನಾಗೆ ಪ್ರಯಾಣ ಬೆಳೆಸಿದ್ದಾರೆ.
257 ಪ್ರಯಾಣಿಕರಿದ್ದ ವಿಮಾನ
ಅಮೆರಿಕದ ಲಾಸ್ ಎಂಜಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ವಿಮಾನ 198 ಹಾರಾಟಕ್ಕೆ ಸಜ್ಜಾಗಿದೆ. 257 ಪ್ರಯಾಣಿಕರು ಆಸಿಸೀನರಾಗಿದ್ದಾರೆ. ಗಗನಸಖಿಯರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ವಿಮಾನದ ಪೈಲೆಟ್ ವಿಶೇಷ ಘೋಷಣೆಯನ್ನೂ ಮಾಡಿದ್ದಾರೆ. ಸುಖಕರ ಪ್ರಯಾಣಕ್ಕೆ ಶುಭಕೋರಿದ ಪೈಲೆಟ್ ಹಾರಾಟ ಆರಂಭಿಸಿದ್ದಾನೆ. ಅಮೆರಿಕದ ಲಾಸ್ ಎಂಜಲ್ಸ್‌ನಿಂದ ಹೊರಟ ವಿಮಾನ ಕೆಲ ಹೊತ್ತಿನ ಬಳಿಕ ಅಮೆರಿಕ ಆಕಾಶ ಗಡಿ ದಾಟಿ ಸಾಗಿದೆ. ಇನ್ನು ಚೀನಾ ಗಡಿ ತಲುಪಿಲ್ಲ. ಅಷ್ಟರಲ್ಲೇ ಪೈಲೆಟ್‌ಗೆ ಥಟ್ಟನೆ ತನ್ನ ಪಾಸ್‌ಪೋರ್ಟ್ ನೆನಪಾಗಿದೆ.
ಏರ್ ಇಂಡಿಯಾದಿಂದ ಭರ್ಜರಿ ಕೊಡುಗೆ, ಟಿಕೆಟ್ ಬೆಲೆ ಕೇವಲ 599 ರೂ ಆರಂಭ
ಯುನೈಟೆಡ್ ಫ್ಲೈಟ್ 198 ವಿಮಾನದ ಪೈಲೆಟ್ ತನ್ನ ಪಾಸ್‌ಪೋರ್ಟ್ ಮರೆತೆ ಬಿಟ್ಟಿದ್ದಾನೆ. ಲಾಸ್ ಎಂಜಲ್ಸ್‌ನಿಂದ ಹೊರಡುವಾಗ ಪಾಸ್‌ಪೋರ್ಟ್ ತೆಗೆದುಕೊಳ್ಳಲು ಮರೆತಿದ್ದಾನೆ. ಹೀಗಾಗಿ ಪ್ರಯಾಣದ ನಡುವೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಅತ್ತ ಅಮೆರಿಕ ವಿಮಾನಯಾನ ವಿಭಾಗ ತಕ್ಷಣವೇ ವಿಮಾನವನ್ನು ಯೂ ಟೂರ್ನ್ ಮಾಡಲು ಸೂಚಿಸಿದ್ದಾರೆ.ಬಳಿಕ ಹತ್ತಿರದ ಅಮೆರಿಕ ವಿಮಾನ ನಿಲ್ದಾಣವಾಗಿರುವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲ್ಯಾಂಡಿಂಗ್ ಮಾಡುವಂತೆ ಸೂಚಿಸಿದ್ದಾರೆ.
ಪೈಲೆಟ್‌ಗೂ ಪಾಸ್‌ಪೋರ್ಟ್ ಕಡ್ಡಾಯ
ಪ್ರಯಾಣಿಕರಿಗೆ ಪಾಸ್‌ಪೋರ್ಟ್ ಹೇಗೆ ಅಗತ್ಯವೋ, ಪೈಲೆಟ್‌ಗೂ ಪಾಸ್‌ಪೋರ್ಟ್ ಅಷ್ಟೇ ಅಗತ್ಯ. ಪಾಸ್‌ಪೋರ್ಟ್ ಇಲ್ಲದೆ ಮತ್ತೊಂದು ದೇಶಕ್ಕೆ ಎಂಟ್ರಿಕೊಟ್ಟರೆ ಕಾನೂನು ತೊಡಕು ಎದುರಾಗಲಿದೆ. ಹೀಗಾಗಿ ಈ ಅಪಾಯ ತಪ್ಪಿಸಲು ಚೀನಾದ ಶಾಂಘೈನಲ್ಲಿ ಇಳಿಯಬೇಕಿದ್ದ ವಿಮಾನವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಳಿಸಲಾಗಿದೆ.
ಹೀಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಳಿದ 257 ಪ್ರಯಾಣಿಕರು ಬೇರೆ ವಿಮಾನ ಮೂಲಕ ಚೀನಾಗೆ ಪ್ರಯಾಣ ಮಾಡಿದ್ದಾರೆ. ಇತ್ತ ಪೈಲೆಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವಿಮಾನ ಸಂಸ್ಥೆ ಮುಂದಾಗಿದೆ.
ಜಗತ್ತಿನ ಮೊದಲ ವಿಮಾನ ಹಾರಾಟದ ಟಿಕೆಟ್ ದರ ಎಷ್ಟಿತ್ತು ಗೊತ್ತಾ?