
ಮಿಸಿಸಿಪ್ಪಿ(ಸೆ.13): ಅಮೆರಿಕದ ಬೇಟೆಗಾರ 13 ಅಡಿ ಉದ್ದದ ಮೊಸಳೆಯನ್ನು ಬೇಟೆಯಾಡಿದ್ದಾರೆ. ಆದರೆ ನೀರಿನಲ್ಲಿರುವ ಈ ಅತ್ಯಂತ ಅಪಾಯಕಾರಿ ಪ್ರಾಣಿಯ ಹೊಟ್ಟೆಯನ್ನು ಸೀಳಿದಾಗ ಒಳಗಿರುವುದನ್ನು ಕಂಡು ಒಂದು ಕ್ಷಣ ದಿಗ್ಭ್ರಾಂತನಾಗಿದ್ದಾನರ. ಇವರ ಸಹ ಬೇಟೆಗಾರ ಜಾನ್ ಹ್ಯಾಮಿಲ್ಟನ್ ದೈತ್ಯ ಮೊಸಳೆಯ ಹೊಟ್ಟೆ ಸೀಳಲು ಅಮೆರಿಕನ್ ಬೇಟೆಗಾರ ಶೇನ್ ಸ್ಮಿತ್ ಅವರ ಬಳಿ ತಂದಿದ್ದಾರೆ. ಇಬ್ಬರು ಮೊಸಳೆಯನ್ನು ಕತ್ತರಿಸಿದಾಗ, ಹೊಟ್ಟೆಯೊಳಗೆ ಅತ್ಯಂತ ಪುರಾತನ ಬಾಣ ಹಾಗೂ Plummet ಪತ್ತೆಯಾಗಿದೆ.
5,000 ರಿಂದ 6,000 ವರ್ಷ ಹಳೆಯ ಉಪಕರಣಗಳು
ತನಗೆ ಹೂಡಿದ ಬಾಣವನ್ನು ಮೊಸಳೆ ತಿಂದಿರಬಹುದು/ನುಂಗಿರಬಹುದು ಎಂಬುವುದು ಶೇನ್ ಊಹೆ. AL ವರದಿಯ ಪ್ರಕಾರ, ಮಿಸ್ಸಿಸ್ಸಿಪ್ಪಿ ರಾಜ್ಯದ ಭೂವಿಜ್ಞಾನಿಗಳು ಅಧ್ಯಯನ ಮಾಡಿದ್ದು, ಈ ವಸ್ತುಗಳು ಸುಮಾರು 5000 ರಿಂದ 6000 ವರ್ಷಗಳಷ್ಟು ಹಳೆಯದು ಮತ್ತು ಬಹುಶಃ ನೆಲದ ಮೇಲೆ ಬಿದ್ದಿರಬಹುದೆಂದು ಅಂದಾಜಿಸಿದ್ದಾರೆ. ಶೇನ್‌ನ ಪ್ಲಾಂಟ್ ರೆಡ್ ಆಂಟ್ಲರ್ ಪ್ರೊಸೆಸಿಂಗ್ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದಿದ್ದು 'ನಾವು ಅವುಗಳ ಹೊಟ್ಟೆಯಲ್ಲಿ ಏನಿದೆ ಎಂದು ನೋಡಲು ಕೆಲವು ದೊಡ್ಡ ಮೊಸಳೆಗಳನ್ನು ಕತ್ತರಿಸುತ್ತಿದ್ದೇವೆ ಎಂದಿದೆ.
ಮೀನುಗಾರಿಕೆಗೆ ಬಳಸುವ ಉಪಕರಣಗಳು
ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ಇಲ್ಲಿಯವರೆಗೆ ಎಲ್ಲರಿಂದಲೂ ಆಸಕ್ತಿದಾಯಕ ಸಂಗತಿಗಳು ಮಾತ್ರ ಹೊರಬಂದಿವೆ. ಜಾನ್ ಹ್ಯಾಮಿಲ್ಟನ್ ಇಂದು 13 ಅಡಿ ಐದು ಇಂಚು ಉದ್ದದ ಮೊಸಳೆಯನ್ನು ತಂದಿದ್ದಾರೆ, ಇದು ತುಂಬಾ ಆಘಾತಕಾರಿಯಾಗಿತ್ತು. ಇತಿಹಾಸಕಾರರು ಹೇಳುವಂತೆ ಮುರಿದ ಬಾಣದ ತುದಿ ಮತ್ತು Plummet ಪ್ರಾಚೀನ ಕಾಲದಲ್ಲಿ ಸ್ಥಳೀಯ ಅಮೆರಿಕನ್ನರು ಬಳಸುತ್ತಿದ್ದ ಮೀನುಗಾರಿಕಾ ಸಾಧನಗಳಾಗಿವೆ. ಮೊಸಳೆಯ ಹೊಟ್ಟೆಯಲ್ಲಿ ಮೀನಿನ ಮೂಳೆಗಳು, ರೆಕ್ಕೆಗಳು, ಕೂದಲು ಮತ್ತು ದುರ್ವಾಸನೆ ಬೀರುವ ದ್ರವದ ಜೊತೆಗೆ ಕೆಲವು ಪುರಾತನ ವಾದ್ಯಗಳಿದ್ದವು ಎಂದಿದ್ದಾರೆ.
ಶೋಧ ಕಾರ್ಯ ನಡೆಸುತ್ತಿರುವ ಜಗತ್ತಿನ ಏಕೈಕ ವ್ಯಕ್ತಿ
'ನಾನು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದಿಲ್ಲ ಎಂದು ಮೊದಲು ಭಾವಿಸಿದ್ದೆ ಏಕೆಂದರೆ ಯಾರೂ ಅದನ್ನು ನಂಬುವುದಿಲ್ಲ' ಎಂದು ಶೇನ್ ಮಿಸ್ಸಿಸ್ಸಿಪ್ಪಿ ಕ್ಲಾರಿಯನ್ ಲೆಡ್ಜರ್‌ಗೆ ಹೇಳಿದ್ದಾರೆ. ಆದರೆ ಕೂಡಲೇ ಅವರು ತಮ್ಮ ಮನಸ್ಸನ್ನು ಬದಲಾಯಿಸಿ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಅಲಲ್ಲದೇ 'ಬಹುಶಃ ಭೂಮಿಯ ಮೇಲೆ ಮೊಸಳೆಯ ಹೊಟ್ಟೆಯಿಂದ ಬಾಣ ಹೊರತೆಗೆದ ಏಕೈಕ ವ್ಯಕ್ತಿ ನಾನು' ಎಂದು ತಮಾಷೆ ಮಾಡಿದ್ದಾರೆ. ಮೊಸಳೆ ಜೀರ್ಣಕ್ರಿಯೆಗೆ ಸಹಾಯ ಮಾಡಲು ವಸ್ತುಗಳನ್ನು ತಿನ್ನಿರಬಹುದು ಎಂಬುವುದು ಎಂದು ಶೆನ್ ಊಹೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ