ಯುಕೆ ಕನ್ನಡಿಗರಿಂದ ಕೆಯುಕೆ ಆಟಂ ಕ್ರಿಕೆಟ್ ಲೀಗ್ 2023: ಮಲೆನಾಡು ಮಾರ್ಷಲ್ ತಂಡಕ್ಕೆ ವಿಜಯದ ಮಾಲೆ!

By Asianet Kannada  |  First Published Sep 22, 2023, 6:23 AM IST

ಯುಕೆ ಕನ್ನಡಿಗರು ಅವರು ಹಮ್ಮಿಕೊಂಡಿದ್ದಂತಹ ಮೊದಲನೇ ಆವೃತ್ತಿಯ ಕೆಯುಕೆ ಆಟಂ ಕ್ರಿಕೆಟ್ ಲೀಗ್ 2023 ಸಮಾರೋಪಗೊಂಡಿತು. ಸೆಪ್ಟೆಂಬರ್ 16 ಮತ್ತು 17ರಂದು ನಡೆದ ಈ ಪಂದ್ಯಾವಳಿ ಹಲವು ವಿಶೇಷತೆಗಳಿಂದ ಕೂಡಿತ್ತು. 


ಲಂಡನ್ (ಸೆ.22): ಯುಕೆ ಕನ್ನಡಿಗರು ಅವರು ಹಮ್ಮಿಕೊಂಡಿದ್ದಂತಹ ಮೊದಲನೇ ಆವೃತ್ತಿಯ ಕೆಯುಕೆ ಆಟಂ ಕ್ರಿಕೆಟ್ ಲೀಗ್ 2023 ಸಮಾರೋಪಗೊಂಡಿತು. ಸೆಪ್ಟೆಂಬರ್ 16 ಮತ್ತು 17ರಂದು ನಡೆದ ಈ ಪಂದ್ಯಾವಳಿ ಹಲವು ವಿಶೇಷತೆಗಳಿಂದ ಕೂಡಿತ್ತು. ಆಟಗಾರರ ಹರಾಜು, ನೇರ ಪ್ರಸಾರದಂತಹ ಆಧುನಿಕತೆಗಳನ್ನು ಒಳಗೊಂಡು ಪ್ರತಿಭಾಶಾಲಿ ಆಟಗಾರರಿಂದ ಕೂಡಿದ್ದ ತಂಡಗಳು ಉತ್ತಮ ಪ್ರದರ್ಶನಗಳನ್ನು ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು.

ಪಂದ್ಯಾವಳಿಯ  ತಂಡಗಳನ್ನು ವಿಶೇಷವಾಗಿ ವಿಂಗಡಿಸಲಾಗಿತ್ತು.  ಕರಾವಳಿಯ ಕರ್ನಾಟಕವನ್ನು ಪ್ರತಿನಿಧಿಸುತ್ತ ಕರಾವಳಿ ನೈಟ್ ರೈಡರ್ಸ್, ನಮ್ಮ ಹೆಮ್ಮೆಯ ಬಯಲು ಸೀಮೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬಯಲುಸೀಮೆ ಬ್ರಿಗೇಡಿಯಾರ್ಸ್, ಮಲೆನಾಡಿನ ಪ್ರತಿನಿಧಿಯಾಗಿ ಮಲೆನಾಡು ಮಾರ್ಶಲ್ಸ್,  ಮೈಸೂರು ರಾಯಲ್ಸ್ ನಮ್ಮ ಸಂಸ್ಕೃತಿಯ ನಾಡು ಕರ್ನಾಟಕದ ಕಂಪನ್ನು ಸಾರಿ ಸಾರಿ ಪಸರಿಸುತ್ತಿದ್ದವು. ಇದೇ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಗೆ ಕೂಡ ವಿಶೇಷ ಪ್ರೋತ್ಸಾಹವನ್ನು ನೀಡಲು ಮಹಿಳಾ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು.  

Tap to resize

Latest Videos

undefined

ಅಮಿತ್ ಶಾ ಜೊತೆ ಇಂದು ‘ದಳ’ಪತಿಗಳ ಮೈತ್ರಿ ಚರ್ಚೆ?: ಹಾಸನ, ಮಂಡ್ಯ, ತುಮಕೂರು ಕ್ಷೇತ್ರ ಜೆಡಿಎಸ್‌ಗೆ?

ಓಬವ್ವ ಫಿಯರ್ ಫೈಟರ್ಸ್ ಮತ್ತು ಚೆನ್ನಮ್ಮ ಸ್ಟಾರ್ ಸ್ಟ್ರೈಕರ್ಸ್ ನಡುವೆ ನಡೆದ ಪಂದ್ಯದಲ್ಲಿ ಚೆನ್ನಮ್ಮ ಸ್ಟಾರ್ ಸ್ಟ್ರೈಕರ್ಸ್ ಗೆದ್ದರು. ಈ ಪಂದ್ಯದಲ್ಲಿ ಯುವ ಹೆಣ್ಣು ಮಕ್ಕಳು ತಮ್ಮ ಆಟದ ಗುಣಮಟ್ಟ ಮತ್ತು ಪ್ರದರ್ಶನದಿಂದ ಪ್ರೇಕ್ಷಕರ ಮನ ಗೆದ್ದರು.  ಹಾಗೂ ತಂಡದ ಉಳಿದ ಆಟಗಾರ್ತಿಯರ ಹುಮ್ಮಸ್ಸು ಅತ್ಯಂತ ಸ್ಪೂರ್ತಿದಾಯಕವಾಗಿತ್ತು. 17 ಸಪ್ಟೆಂಬರ್ ನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ರೂಬಿ ಅಹುಜಾ ಯುಕೆ ಶೋಕೇಸ್ ಎಂಟರ್ಟೈನ್ಮೆಂಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕರು, ಪ್ರೀತಂ ಶರ್ಮಾ ಹಿರೇಮಠ Uxbridge ಕ್ರಿಕೆಟ್ ಕ್ಲಬ್ ನ ಚೇರ್ಮೆನ್ ರವರು, ತಂಡದ ಪ್ರಾಯೋಜಕರಾದ ಲಿಲ್ಲ್ಯಾನ್ ಜಮಾತ್, ಸಬಿ ಯುನೈಟೆಡ್ ಕಿಂಗ್ಡಮ್ ನ ಪ್ರತಿನಿಧಿ ಹಾಗೂ ವಿನಯ್ ರೆಡ್ಡಿ, ಪ್ಯಾರಡೈಸ್ ಬಿರಿಯಾನಿ ವತಿಯಿಂದ ಹಾಜರಿದ್ದರು. 

ಪಂದ್ಯಾವಳಿಯ ವಿಜೇತ ತಂಡವಾದ ಮಲೆನಾಡು ಮಾರ್ಷಲ್ ತಂಡಕ್ಕೆ ಮತ್ತು ರನ್ನರಪ್ ಅದ  ಬಯಲುಸೀಮೆ ಬ್ರಿಗೇಡಿಯಾರ್ಸ್ ತಂಡಗಳಿಗೆ ಪದಕಗಳು ಮತ್ತು ಟ್ರೋಫಿಯನ್ನು ಕೊಟ್ಟು ಗೌರವಿಸಲಾಯಿತು . ಪಂದ್ಯಾವಳಿಯ ಸರಣಿ ಶ್ರೇಷ್ಠ ಮತ್ತು ಉತ್ತಮ ಎಸೆತಗಾರ ಪ್ರಶಸ್ತಿಯನ್ನು ರಾಯಚೂರು ಮೂಲದ ಆಶೀಶ್ ಪಡಕಿ ತಮ್ಮದಾಗಿಸಿಕೊಂಡರು. ಉತ್ತಮ ಬ್ಯಾಟ್ಸ್ಮನ್ ಆಗಿ ದಿನೇಶ್ ಅವರು ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪಂದ್ಯಾವಳಿಯ ತೀರ್ಪುಗಾರರಾದ ಶ್ರೀ ಮಧುರ್ ಹೆಂನಾನೀ, ಡಿಗ್ಬಿ, ವೀರೇಂದ್ರ ಕೋಲಾರ, ವಿಜಯ್ ದ್ವಾರಕಾನಾಥರವರುಗಳ ಅಂತರಾಷ್ಟ್ರೀಯ ಗುಣಮಟ್ಟದ ನಿರ್ವಹಣೆಗಾಗಿ, ಹಾಗೂ ಸ್ಕೋರರ್ಸ್ ಆದ  ಹಿಮಾನಿ, ವಿಜಯ್, ಸೌಭಾಗ್ಯ, ಸೀತಾರಾಮ ಹೆಗಡೆ ಮತ್ತು ಮನೀಶ್ ಭಟ್ ರವರಿಗೆ  ಆಯೋಜನ ಸಮಿತಿಯ ವತಿಯಿಂದ ಗಣಪತಿ ಭಟ್ ರವರು ಕಿರು ಕಾಣಿಕೆ ಯೊಂದಿಗೆ ಧನ್ಯವಾದಗಳನ್ನು ತಿಳಿಸಿದರು. 

ತಾಂತ್ರಿಕ ವಿಘ್ನ, ಆಸ್ತಿ ನೋಂದಣಿಗೆ ಭಾರಿ ರಶ್‌: ಕಾವೇರಿ-2 ಸರ್ವರ್‌ ಕ್ರ್ಯಾಶ್!

ಗಣಪತಿ ಭಟ್, ಶ್ರೀಹರ್ಶಾ ಬಾಲಾಜಿ, ರವಿ ಜವಿ, ರಮೇಶ್ ಪ್ರಭು, ಕುಶಾಗ್ರ ಸುಂದರ್, ಸಾಗರ್ ಹಳೆಅಂಗಡಿ ಅವರುಗಳಿಗೆ ಕನ್ನಡಿಗರು ಯುಕೆಯ ಸದಸ್ಯರ ಪರವಾಗಿ ಹಾಗೂ ಆಟಗಾರರ ಪರವಾಗಿ ಮತ್ತು ಈ ವಿಶೇಷ ಪಂದ್ಯಾವಳಿಯ ಆಯೋಜನೆಗೆ ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸೀತಾರಾಮ ಹೆಗಡೆ ಅವರು ಧನ್ಯವಾದವನ್ನು ಅರ್ಪಿಸಿದರು. ಅಖಿಲಾ ರಾವ್ (ಆರ್ ಜೆ) ಅವರು ಕೂಡ ಪಂದ್ಯದ ಪ್ರಶಸ್ತಿ ಸಮಾರಂಭವನ್ನು ಸುಂದರವಾಗಿ ನಡೆಸಿಕೊಟ್ಟರು.  ಪಂದ್ಯಾವಳಿಯು ಪ್ರೇಕ್ಷಕರಲ್ಲಿ ಮುಂದಿನ ಆವೃತ್ತಿಯ ನಿರೀಕ್ಷೆಗಳನ್ನು ಹೆಚ್ಚಿಸಿ ಮುಕ್ತಾಯಗೊಂಡಿತು.

click me!