ಈಡಿಸ್ ಈಜಿಪ್ಟಿ ಸೊಳ್ಳೆಯು ಕಚ್ಚಿ ಡೆಂಘೀ ವೈರಾಣುವನ್ನು ಮಾನವರಿಗೆ ಸೇರ್ಪಡೆ ಮಾಡುತ್ತದೆ. ಆನಂತರ ಮಾನವರಲ್ಲಿ ಅತಿಯಾದ ಜ್ವರ, ಕೀಲುನೋವು, ಮಾಂಸಖಂಡಗಳ ನೋವು, ಸುಸ್ತು, ಆಯಾಸ ಕಂಡು ಬರುತ್ತದೆ ಎಂದು ವಿಶ್ವಾದ್ಯಂತ ವೈದ್ಯರು ಹೇಳುತ್ತಾರೆ. ಆದರೆ ಲೈಂಗಿಕ ಕ್ರಿಯೆ ಮೂಲಕವೂ ಡೆಂಘೀ ಹರಡುತ್ತದೆ ಎಂಬುದು ಅಚ್ಚರಿಗೆ ಕಾರಣವಾಗಿದೆ.
ಮ್ಯಾಡ್ರಿಡ್ (ನ. 11): ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚಿದರೆ ಡೆಂಘೀ ಬರುವುದೆಂದು ಬಹುತೇಕರಿಗೆ ಗೊತ್ತು. ಆದರೆ ಈ ಸೊಳ್ಳೆಯೊಂದೇ ಅಲ್ಲ, ಡೆಂಘೀಪೀಡಿತ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆ ನಡೆಸಿದರೂ ವೈರಾಣು ಹಬ್ಬುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಲೈಂಗಿಕ ಕ್ರಿಯೆ ಮೂಲಕ ಹರಡಲ್ಪಟ್ಟ ವಿಶ್ವದ ಮೊದಲ ಡೆಂಘೀ ಪ್ರಕರಣವನ್ನು ಸ್ಪೇನ್ ವೈದ್ಯರು ಪತ್ತೆ ಮಾಡಿದ್ದಾರೆ.
ಮಂಗಳೂರು: ಡೆಂಘೀ, ಮಲೇರಿಯಾ ಉಲ್ಬಣಕ್ಕೆ ಕಾಂಗ್ರೆಸ್ ಕಾರಣವಂತೆ..!
ಈಡಿಸ್ ಈಜಿಪ್ಟಿ ಸೊಳ್ಳೆಯು ಕಚ್ಚಿ ಡೆಂಘೀ ವೈರಾಣುವನ್ನು ಮಾನವರಿಗೆ ಸೇರ್ಪಡೆ ಮಾಡುತ್ತದೆ. ಆನಂತರ ಮಾನವರಲ್ಲಿ ಅತಿಯಾದ ಜ್ವರ, ಕೀಲುನೋವು, ಮಾಂಸಖಂಡಗಳ ನೋವು, ಸುಸ್ತು, ಆಯಾಸ ಕಂಡು ಬರುತ್ತದೆ ಎಂದು ವಿಶ್ವಾದ್ಯಂತ ವೈದ್ಯರು ಹೇಳುತ್ತಾರೆ. ಆದರೆ ಲೈಂಗಿಕ ಕ್ರಿಯೆ ಮೂಲಕವೂ ಡೆಂಘೀ ಹರಡುತ್ತದೆ ಎಂಬುದು ಅಚ್ಚರಿಗೆ ಕಾರಣವಾಗಿದೆ.
ಮ್ಯಾಡ್ರಿಡ್‌ನ 41 ವರ್ಷದ ಪುರುಷರೊಬ್ಬರು ತಮ್ಮ ಪುರುಷ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದರು. ಆನಂತರ ಅವರಿಗೆ ಡೆಂಘೀ ಕಾಣಿಸಿಕೊಂಡಿತ್ತು. ಈ ವ್ಯಕ್ತಿಯ ಸಂಗಾತಿಗೆ ಕ್ಯೂಬಾ ಪ್ರವಾಸದಲ್ಲಿದ್ದಾಗ ಡೆಂಘೀ ವೈರಾಣು ಸೋಂಕು ತಗುಲಿತ್ತು ಎಂದಿದ್ದಾರೆ ಮ್ಯಾಡ್ರಿಡ್‌ನ ಆರೋಗ್ಯ ಇಲಾಖೆ ಅಧಿಕಾರಿಗಳು.
ಗೊತ್ತೇ ಇರಲಿಲ್ಲ: ಕಳೆದ ಸೆಪ್ಟೆಂಬರ್‌ನಲ್ಲಿ 41 ವರ್ಷದ ವ್ಯಕ್ತಿಯಲ್ಲಿ ಡೆಂಘೀ ಕಾಣಿಸಿಕೊಂಡು, ದೃಢಪಟ್ಟಿತ್ತು. ಅವರಿಗೆ ಹೇಗೆ ವೈರಾಣು ಸೋಂಕು ತಗುಲಿತು ಎಂದು ಅಧಿಕಾರಿಗಳಿಗೆ ಗೊತ್ತಾಗಲಿಲ್ಲ. ಏಕೆಂದರೆ, ಆ ವ್ಯಕ್ತಿ ಜ್ವರ ಪತ್ತೆಯಾದ ಪ್ರದೇಶಗ ಳಲ್ಲಿ ವಾಸಿಸಿರಲಿಲ್ಲ. ವೈರಾಣುಗಳು ಹೆಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿದ್ದರಾದರೂ, ಅಲ್ಲೂ ಅವರಿಗೆಸೋಂಕು ಅಂಟಿರಲಿಲ್ಲ. ಕೊನೆಗೆ ಕೂಲಂಕಷವಾಗಿ ಪರಿಶೀಲಿಸಿದಾಗ, ಪುರುಷ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸಿ ದಾಗ ವೈರಾಣು ಹಬ್ಬಿರುವ ಸಾಧ್ಯತೆ ಕಂಡುಬಂತು.
ಛಾನ್ಸೇ ಇಲ್ಲ ಅಂದವರಿಗೆ ಬಂತು ಡೆಂಗ್ಯೂ; ಕೊನೆಗೂ ಯಕ್ಷಪ್ರಶ್ನೆಗೆ ಉತ್ತರ ಸಿಕ್ತು!
ಆ ಪುರುಷ ಸಂಗಾತಿಗೆ 10 ದಿನ ಮೊದಲೇ ಡೆಂಘೀ ಲಕ್ಷಣಗಳು ಕಂಡುಬಂದಿದ್ದವು. ಆತ ಕ್ಯೂಬಾ ಹಾಗೂ ಡೊಮಿನಿಕ್ ರಿಪಬ್ಲಿಕ್ ದೇಶಕ್ಕೆ ಹೋಗಿ ಬಂದಿದ್ದ. ಆತನ ವೀರ‌್ಯಾಣು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ ಡೆಂಘೀ ವೈರಾಣು ಇದ್ದವು. ವೈರಾಣುಗಳೇ ಅವಾಗಿದ್ದವು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.