ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ 20 ಕೋಟಿ ರು.ದಂಡ!

By Kannadaprabha News  |  First Published Nov 9, 2019, 2:35 PM IST

2016 ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಚಾರಿಟೇಬಲ್ ಫೌಂಡೇಶನ್‌ನ ಹಣ ದುರುಪಯೋಗ ಮಾಡಿಕೊಂಡಿದ್ದಕ್ಕೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೋರ್ಟ್ 20 ಕೋಟಿ ರು. ದಂಡ ವಿಧಿಸಿದೆ.


ನ್ಯೂಯಾರ್ಕ್ (ನ. 09): 2016 ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಚಾರಿಟೇಬಲ್ ಫೌಂಡೇಶನ್‌ನ ಹಣ ದುರುಪಯೋಗ ಮಾಡಿಕೊಂಡಿದ್ದಕ್ಕೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೋರ್ಟ್ 20 ಕೋಟಿ ರು. ದಂಡ ವಿಧಿಸಿದೆ.

ಚೀನಾ, ಪಾಕ್ ಆಯ್ತು: ಭಾರತದೊಂದಿಗಿನ ಗಡಿ ಕ್ಯಾತೆಗೆ ನೇಪಾಳ ಸೇರಿತು!

Tap to resize

Latest Videos

ಆದರೆ ದುರುಪಯೋಗಪಡಿಸಿದ ಹಣವನ್ನು ಹಿರಿಯ ನಾಗರಿ ಕರ ಕ್ಷೇಮಾಭಿವೃದ್ಧಿಗೆ ಬಳಸಿದ್ದ ಹಿನ್ನೆಲೆ 20 ಕೋಟಿ ರು. ಪೈಕಿ 14 ಕೋಟಿ ರು. ಮಾತ್ರ ದಂಡ ಕಟ್ಟಿದರೆ ಸಾಕು ಎಂದು ನ್ಯಾಯಾಲಯ ತಿಳಿಸಿದೆ. ರಾಜ್ಯ ಅಟಾರ್ನಿ ಜನರಲ್ ಸಲ್ಲಿಸಿದ ದೂರಿನ ಆದಾರ ಮೇಲೆ ಮ್ಯಾನ್‌ಹಟನ್ ನ್ಯಾಯಾಲಯ ಈ ತೀರ್ಪು ನೀಡಿದ್ದು, 8 ಎನ್‌ಜಿಒಗಳಿಗೆ ದಂಡ ಪಾವತಿ ಮಾಡಬೇಕೆಂದು ಆದೇಶಿಸಿದೆ.

ತೀರ್ಪಿನ ಬಳಿಕ ಟ್ರಂಪ್ ತಮ್ಮ ತಪ್ಪನ್ನು ಸಮರ್ಥಿಸಿಕೊಂಡಿದ್ದು, ಸಣ್ಣದೊಂದು ಯಡವಟ್ಟು ಮಾತ್ರ ಆಗಿದೆ ಎಂದಿದ್ದಾರೆ. ಜೇಮ್ಸ್ ಹಾಗೂಟ್ರಂಪ್, ಟ್ರಂಪ್ ಫೌಂಡೇಶನ್‌ನ ಹಣ ದುರ್ಬಳಕೆ ಮಾಡಿಕೊಂಡಿದ್ದರು ಎಂದು ದೂರಲಾಗಿತ್ತು. 

 

click me!