France Riots: 'ಒಂದೇ ದಿನಕ್ಕೆ ಯೋಗಿ ಅವರನ್ನು ಫ್ರಾನ್ಸ್‌ಗೆ ಕಳಿಸಿ..' ಯುರೋಪ್‌ನ ವೈದ್ಯ ಈ ಬೇಡಿಕೆ ಇಟ್ಟಿದ್ದೇಕೆ?

Published : Jul 01, 2023, 12:20 PM IST
France Riots: 'ಒಂದೇ ದಿನಕ್ಕೆ ಯೋಗಿ ಅವರನ್ನು ಫ್ರಾನ್ಸ್‌ಗೆ ಕಳಿಸಿ..' ಯುರೋಪ್‌ನ ವೈದ್ಯ ಈ ಬೇಡಿಕೆ ಇಟ್ಟಿದ್ದೇಕೆ?

ಸಾರಾಂಶ

Riots in France: ಫ್ರಾನ್ಸ್‌ ಸತತ ನಾಲ್ಕನೇ ದಿನ ಕೋಮು ಗಲಭೆಯಲ್ಲಿ ಬೇಯುತ್ತಿದೆ. ಈ ನಡುವೆ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌, ಗಲಭೆ ಮಾಡುತ್ತಿರುವ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಿ ಎಂದು ಗಲಭೆಕೋರರ ತಂದೆ ತಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಜು.1): ಫ್ರಾನ್ಸ್‌ನಲ್ಲಿ ಆಗುತ್ತಿರುವ ಕೋಮು ಗಲಭೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜೂನ್‌ 27 ರಂದು ಫ್ರಾನ್ಸ್‌ನ ಟ್ರಾಫಿಕ್‌ ಪೊಲೀಸ್‌, 17 ವರ್ಷದ ಅಲ್ಜೀರಿಯಾ ದೇಶದ ಬಾಲಕ ನಹೇಲ್ ಎಂ ಎನ್ನುವವನ್ನು ಗುಂಡಿಟ್ಟು ಕೊಂದಿತ್ತು. ಟ್ರಾಫಿಕ್‌ ಪೊಲೀಸ್‌ ವಾಹನವನ್ನು ನಿಲ್ಲುಸುವಂತೆ ಹೇಳಿದ್ದರೂ, ಪೊಲೀಸರಿಗೆ ಕ್ಯಾರೇ ಎನ್ನದೆ ಮುನ್ನುಗ್ಗಿದ್ದ ಕಾರಣಕ್ಎ ನಹೇಲ್‌ಗೆ ಗುಂಡು ಹಾಕಲಾಗಿತ್ತು. ಇದರ ಬೆನ್ನಲ್ಲಿಯೇ ಆರಂಭವಾದ ಗಲಭೆಗೆ ಫ್ರಾನ್ಸ್‌ ನಲುಗಿ ಹೋಗಿದೆ. ಈವರೆಗೂ 875 ಜನರನ್ನು ಫ್ರಾನ್ಸ್‌ ಪೊಲೀಸರು ಬಂಧಿಸಿದ್ದಾರೆ. 500ಕ್ಕೂ ಅಧಿಕ ಪೊಲೀಸರಿಗೆ ಗಾಯವಾಗಿದೆ. 500ಕ್ಕೂ ಅಧಿಕ ಮನೆಗಳನ್ನು ಧ್ವಂಸ ಮಾಡಲಾಗಿದೆ. ಈ ನಡುವೆ ಯುರೋಪ್‌ನ ಪ್ರಸಿದ್ಧ ವೈದ್ಯರಾದ ಎನ್‌.ಜಾನ್‌ ಕಾಮ್‌, ಗಲಭೆಯನ್ನು ನಿಯಂತ್ರಿಸಲು ಭಾರತದ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಅವರು ಬೇಡಿಕೆಯನ್ನೂ ಇರಿಸಿ ಟ್ವೀಟ್‌ ಮಾಡಿದ್ದಾರೆ. ಫ್ರಾನ್ಸ್‌ನಲ್ಲಿ ಆಗುತ್ತಿರುವ ಗಲಭೆಯನ್ನು ನಿಯಂತ್ರಿಸಲು ಭಾರತವು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್‌ ಅವರನ್ನು ತುರ್ತಾಗಿ ಫ್ರಾನ್ಸ್‌ಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಯೋಗಿ ಆದಿತ್ಯನಾಥ್‌ ಅವರ ಕಚೇರಿ ಕೂಡ ಪ್ರತಿಕ್ರಿಯೆ ನೀಡಿದೆ. 'ಜಗತ್ತಿನ ಯಾವುದೇ ಭಾಗದಲ್ಲಿ ಉಗ್ರವಾದವು ಗಲಭೆಗಳು, ಅವ್ಯವಸ್ಥೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ಉಂಟಾದಾಗ, ಜಗತ್ತು ಸಾಂತ್ವನವನ್ನು ಹುಡುಕುತ್ತದೆ ಮತ್ತು ಉತ್ತರ ಪ್ರದೇಶದಲ್ಲಿ ಮಹಾರಾಜ್ ಜಿ ಸ್ಥಾಪಿಸಿದ ಕಾನೂನು ಮತ್ತು ಸುವ್ಯವಸ್ಥೆಯ ಪರಿವರ್ತಕ "ಯೋಗಿ ಮಾದರಿ" ಗಾಗಿ ಹಾತೊರೆಯುತ್ತದೆ' ಎಂದು ಟ್ವೀಟ್‌ ಮಾಡಿದೆ.

24 ಗಂಟೆಯೊಳಗೆ ಭಾರತ ಸಿಎಂ ಯೋಗಿಯನ್ನು ಫ್ರಾನ್ಸ್‌ಗೆ ಕಳುಹಿಸಬೇಕು’ ಎಂದು ಯುರೋಪಿಯನ್ ವೈದ್ಯರು ಹೇಳಿದ್ದಾರೆ. ಇದಲ್ಲದೇ, ಸಿಎಂ ಯೋಗಿ ಬುಲ್ಡೋಜರ್ ಇರುವ ಕಾರ್ಟೂನ್ ಫೋಟೋವನ್ನು ಪೋಸ್ಟ್ ಮಾಡಿದ ಪ್ರೊ.ಎನ್ ಜಾನ್ ಕ್ಯಾಮ್, 'ಭಾರತವನ್ನು ಆಳಲು ಮತ್ತು ಕಾನೂನು/ಸುವ್ಯವಸ್ಥೆ ಕಾಪಾಡಲು ಇದೊಂದೇ ದಾರಿ. ಉಳಿದೆಲ್ಲವೂ ಅಸಂಬದ್ಧ' ಎಂದಿದ್ದಾರೆ.

ಕಳೆದ 4 ದಿನಗಳಿಂದ ಫ್ರಾನ್ಸ್ ಭೀಕರ ಕೋಮು ಗಲಭೆಗಳನ್ನು ಎದುರಿಸುತ್ತಿದೆ. ಇದಕ್ಕಾಗಿ, ಫ್ರಾನ್ಸ್‌ನಲ್ಲಿ ನಡೆದ ಗಲಭೆಗಳನ್ನು ಎದುರಿಸಲು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು  ನಿಯೋಜಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಶುಕ್ರವಾರ (ಜೂನ್ 30) ಸಂಜೆ 45,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಫ್ರೆಂಚ್ ಗೃಹ ಸಚಿವ ಜೆರಾಲ್ಡ್ ಡಾರ್ಮಾನಿನ್ ಬ್ರಾಡ್‌ಕಾಸ್ಟರ್ ಟಿಎಫ್‌1 ಗೆ ತಿಳಿಸಿದ್ದಾರೆ. ಅಲ್ಜೀರಿಯಾ ಮೂಲದ ಹುಡುಗನನ್ನು ಫ್ರಾನ್ಸ್‌ನಲ್ಲಿ ಗುಂಡಿಕ್ಕಿ ಕೊಂದ ನಂತರ ಫ್ಯಾಷನ್ ರಾಜಧಾನಿ ಪ್ಯಾರಿಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಪ್ರಾರಂಭವಾದವು. ಇದು ಇಡೀ ಫ್ರಾನ್ಸ್ ಅನ್ನು ಆವರಿಸಿದೆ.  ಭದ್ರತೆಗೆ ಬಂದ ಪೊಲೀಸರಿಗೆ ಗಲಭೆಕೋರರು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಬಾಲಕನ ಹತ್ಯೆ ಖಂಡಿಸಿ ಫ್ರಾನ್ಸಲ್ಲಿ ಭಾರಿ ಹಿಂಸೆ: ನೂರಾರು ವಾಹನಕ್ಕೆ ಬೆಂಕಿ; 200 ಪೊಲೀಸರಿಗೆ ಗಾಯ, ನೂರಾರು ಜನ ಸೆರೆ

ಸಾಮಾಜಿಕ ಜಾಲತಾಣಗಳಲ್ಲಿ ದಾಳಿ: ಸಾಮಾಜಿಕ ಮಾಧ್ಯಮಗಳು ಹಿಂಸೆಯನ್ನು ಉತ್ತೇಜಿಸುತ್ತಿವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಸ್ನ್ಯಾಪ್‌ಚಾಟ್ ಮತ್ತು ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳಿಂದ ಸೂಕ್ಷ್ಮ ವಿಷಯಗಳನ್ನು ಶೀಘ್ರದಲ್ಲೇ ತೆಗೆದುಹಾಕಬೇಕು ಎಂದು ಅವರು ಏಜೆನ್ಸಿಗಳಿಗೆ ಹೇಳಿದರು. ಬಾಲಾಪರಾಧಿ ಸಾವಿನ ಪ್ರಕರಣದಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಅವರು ಖಂಡಿಸಿದ್ದಾರೆ. ಗಲಭೆ ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ