ಏರ್ ಶೋದಲ್ಲಿ ದುರಂತವೊಂದು ಸಂಭವಿಸಿದ್ದು, ಫೈಟರ್ ಜೆಟ್ಟೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಫೈಟರ್ ಪೈಲಟ್‌ಗಳು ಸಾವಿಗೀಡಾದ ಘಟನೆ ನಡೆದಿದೆ.
ಅರ್ಜೆಂಟೀನಾದಲ್ಲಿ ನಡೆಯುತ್ತಿದ್ದ ಏರ್ ಶೋದಲ್ಲಿ ಫೈಟರ್ ಜೆಟ್ಟೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಫೈಟರ್ ಪೈಲಟ್‌ಗಳು ಸಾವಿಗೀಡಾದ ಘಟನೆ ನಡೆದಿದೆ. ಏರ್ ಶೋದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಫೈಟರ್ ಜೆಟ್ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಸ್ಪಾನಿಷ್ ಮಾಧ್ಯಮಗಳ ವರದಿ ಪ್ರಕಾರ, ಅರ್ಜೆಂಟೀನಾದ ಸಾಂಟಾ ಫೆ ಪ್ರಾಂತ್ಯದ ವಿಲ್ಲಾ ಕೆನಾಸ್‌ನಲ್ಲಿ ನಡೆಯುತ್ತಿದ್ದ ಏರ್‌ಶೋದಲ್ಲಿ ಈ ದುರಂತ ನಡೆದಿದೆ. ದುರಂತಕ್ಕೂ ಮೊದಲು ಈ ಸೇನಾ ತರಬೇತಿ ಜೆಟ್ ಏರ್ ಶೋ ಭಾಗವಾಗಿ ಬಾನಂಗಳದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನೀಡುತ್ತಿತ್ತು.
ಈ ದುರಂತರದಲ್ಲಿ ಈ ಫೈಟರ್ ಜೆಟ್‌ನ್ನು ನಿರ್ವಹಿಸುತ್ತಿದ್ದ ಪೈಲಟ್‌ಗಳಾದ ಗ್ಯಾಸ್ಟನ್ ವನೂಸಿ ಮತ್ತು ನಿಕೋಲಸ್ ಸ್ಕೇರ್ಸ್ ಸಾವಿಗೀಡಾಗಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ತಲುಪುವ ಮೊದಲೇ ಇವರಿಬ್ಬರು ಪ್ರಾಣ ಬಿಟ್ಟಿದ್ದರು. ಈ ಭಯಾನಕ ದುರಂತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಇವರು ಜನಸಮೂಹಕ್ಕೆ ಹತ್ತಿರದಿಂದ ಕಾಣಿಸುವಂತೆ ತುಂಬಾ ಕೆಳಮಟ್ಟದಲ್ಲಿ ವೈಮಾನಿಕ ಪ್ರದರ್ಶನ ನೀಡಿದ್ದರು.
Aero India 2023 ಈ ಬಾರಿಯ ಏರ್ ಶೋನಲ್ಲಿತ್ತು ಹಲವು ವಿಶೇಷತೆ, ಸಾಹಸ ಪ್ರದರ್ಶನದ ನಡುವೆ ವಹಿವಾಟು ದಾಖಲೆ!
ದುರಂತಕ್ಕೂ ಮೊದಲು ಈ ನತದೃಷ್ಟ ವಿಮಾನ ನಡೆಸಿದ ವೈಮಾನಿಕ ಪ್ರದರ್ಶನ ನೋಡುಗರ ಮೈ ರೋಮಾಂಚನಗೊಳಿಸಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಈ ವಿಮಾನ ನೆಲಕ್ಕೆ ಬಿದ್ದು ಬೆಂಕಿಗಾಹುತಿಯಾಗಿದೆ. ಜನರಿದ್ದ ರಸ್ತೆಯಿಂದ ಕೇವಲ ಮೀಟರ್ ದೂರದಲ್ಲಿರುವ ಹೊಲಕ್ಕೆ ಅಪ್ಪಳಿಸಿದ ವಿಮಾನ ನಂತರ ಬೆಂಕಿಗೆ ಆಹುತಿಯಾಗಿದೆ.
ವರದಿಗಳ ಪ್ರಕಾರ, ವಿಮಾನವು ಸೋವಿಯತ್ ಕಾಲದ L29 ಡಾಲ್ಫಿನ್ ಮಿಲಿಟರಿ ತರಬೇತಿ ಜೆಟ್ ಆಗಿತ್ತು. ಸಾರ್ವಜನಿಕರು ಏರ್ ಶೋ ವೀಕ್ಷಿಸುತ್ತಿದ್ದ ಸ್ಥಳದಿಂದ ಕೆಲವು ಮೀಟರ್‌ಗಳ ದೂರದಲ್ಲಿ ಈ ವಿಮಾನ ಅಪಘಾತಕ್ಕೀಡಾಗಿದೆ ಎಂದು ವಿಲ್ಲಾ ಕ್ಯಾನಸ್ ಅಗ್ನಿಶಾಮಕ ಮುಖ್ಯಸ್ಥ ಹೊರಾಸಿಯೊ ಪೆರೇರಾ ಅವರು ಹೇಳಿದ್ದಾರೆ. ಇದೊಂದು ಯುದ್ಧ ವಿಮಾನವಾಗಿದ್ದು, ತಿರುವು ಪಡೆದ ಕೆಲ ಕ್ಷಣದಲ್ಲೇ ಪತನಗೊಂಡಿತು. ರಷ್ಯನ್ ವಿಮಾನವಾಗಿದ್ದು, ಇಬ್ಬರು ಪೈಲಟ್‌ಗಳಿದ್ದರು ಎಂದು ಪ್ರದರ್ಶನ ಆಯೋಜಿಸಿದ ಏರ್ ಕ್ಲಬ್‌ನ ಅಧಿಕಾರಿಗಳು ಹೇಳಿದ್ದಾರೆ. ನಾವೆಲ್ಲರೂ ಈ ಘಟನೆಯಿಂದ ವಿಚಲಿತಗೊಂಡೆವು.
Airshow: ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿ ಗಮನಸೆಳೆದ ವಾಯುಸೇನೆಯ ಐಶ್ವರ್ಯ, ಗೋಕುಲ್ ವಾಸು
ಈ ಕಾರ್ಯಕ್ರಮದಲ್ಲಿದ್ದ ಪ್ರತಿಯೊಬ್ಬರೂ ವಿಮಾನವು ಹೇಗೆ ಬಿದ್ದಿತು ಎಂಬುದನ್ನು ನೋಡಿ ಆಶ್ಚರ್ಯಚಕಿತರಾದರು ಎಂದು ವಿಲ್ಲಾ ಕೆನಾಸ್ ಮೇಯರ್ ನಾರ್ಬರ್ಟೊ ಗಿಜ್ಜಿ ಹೇಳಿದ್ದಾರೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಪೈಲಟ್‌ಗೆ ಅರ್ಜೆಂಟೀನಾ ಏರ್ ಕ್ಲಬ್ ಸಂತಾಪ ವ್ಯಕ್ತಪಡಿಸಿದೆ. ದುರಂತ ಎಂದರೆ ದುರಂತಕ್ಕೊಳಗಾದ ಈ L-29 ಜೆಟ್ ಈ ಏರ್ ಶೋದ ಪ್ರಮುಖ ಆಕರ್ಷಣೆ ಆಗಿತ್ತು. ಈ ಮಾದರಿಯೂ 60 ರ ದಶಕದ ಶೀತಲ ಸಮರದ ಮಧ್ಯದಲ್ಲಿ ವಿನ್ಯಾಸಗೊಳಿಸಲಾದ ಮಿಲಿಟರಿ ತರಬೇತಿ ವಿಮಾನವಾಗಿದೆ.