ಪಾಕಿಸ್ತಾನ ಏರ್‌ಬೇಸ್‌ ಮೇಲೆ ಭಯೋತ್ಪಾದಕ ದಾಳಿ, 40ಕ್ಕೂ ಅಧಿಕ ಯುದ್ಧವಿಮಾನಗಳಿಗೆ ಬೆಂಕಿ!

Published : Nov 04, 2023, 11:10 AM IST
ಪಾಕಿಸ್ತಾನ ಏರ್‌ಬೇಸ್‌ ಮೇಲೆ ಭಯೋತ್ಪಾದಕ ದಾಳಿ, 40ಕ್ಕೂ ಅಧಿಕ ಯುದ್ಧವಿಮಾನಗಳಿಗೆ ಬೆಂಕಿ!

ಸಾರಾಂಶ

ಮತ್ತೊಮ್ಮೆ ಪಾಕಿಸ್ತಾನದ ಏರ್‌ಬೇಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಗೆ ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಆರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಪ್ರವೇಶಿಸಿದ್ದಾರೆ. ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.

ಇಸ್ಲಾಮಾಬಾದ್‌ (ನ.4):  ಪಾಕಿಸ್ತಾನದ ವಾಯುಸೇನೆ ನೆಲೆಯ ಮೇಲೆ ಮತ್ತೊಮ್ಮೆ ಉಗ್ರರು ದಾಳಿ ನಡೆಸಿದ್ದಾರೆ. ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಗೆ ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಆರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ನುಗ್ಗಿದ್ದಾರೆ. ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಅದರ ವಿಡಿಯೋ ಕೂಡ ಹೊರಬಿದ್ದಿದೆ. ವಾಯುನೆಲೆಯೊಳಗೆ ಭಾರಿ ಬೆಂಕಿ ಕೂಡ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಮೂವರು ದಾಳಿಕೋರನನ್ನು ಕೊಲ್ಲಲಾಗಿದೆ. ಈ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಎಂಬ ಸಂಘಟನೆ ಹೊತ್ತುಕೊಂಡಿದೆ.  ಈ ದಾಳಿಯ ಕುರಿತು ಪಾಕಿಸ್ತಾನ ಸೇನೆ (ISPR) ಹೇಳಿಕೆ ನೀಡಿದ್ದು, '2023ರ ನವೆಂಬರ್ 4ರ ಮುಂಜಾನೆ ಪಾಕಿಸ್ತಾನದ ವಾಯುಪಡೆಯ ಮಿಯಾನ್‌ವಾಲಿ ತರಬೇತಿ ವಾಯುನೆಲೆಯಲ್ಲಿ ವಿಫಲ ಭಯೋತ್ಪಾದಕ ದಾಳಿಯನ್ನು ನಡೆಸಲಾಯಿತು. ಸೇನೆಯ ತಕ್ಷಣದ ಪ್ರತಿಕ್ರಿಯೆಯಿಂದ ದಾಳಿಯನ್ನು ವಿಫಲಗೊಳಿಸಲಾಯಿತು, ಸಿಬ್ಬಂದಿ ಮತ್ತು ಆಸ್ತಿಯ ರಕ್ಷಿಸಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಅಸಾಧಾರಣ ಧೈರ್ಯ ಪ್ರದರ್ಶಿಸಿ 3 ಭಯೋತ್ಪಾದಕರನ್ನು ಅವರು ನೆಲೆಯನ್ನು ಪ್ರವೇಶಿಸುವ ಮೊದಲೇ ಕೊಂದಿದ್ದಾರೆ. ಉಳಿದ 3 ಭಯೋತ್ಪಾದಕರನ್ನು ಸೈನಿಕರು ಸುತ್ತುವರೆದಿದ್ದಾರೆ ಎಂದು ತಿಳಿಸಿದೆ.

ಸೇನೆಯ ಹೇಳಿಕೆಯ ಪ್ರಕಾರ, ದಾಳಿಯ ಸಮಯದಲ್ಲಿ ಅಲ್ಲಿಯೇ ನಿಂತಿದ್ದ 40ಕ್ಕೂ ಅಧಿಕ ಯುದ್ಧ ವಿಮಾನಗಳು ಮತ್ತು ಇಂಧನ ಬೌಸರ್‌ಗೆ ಹಾನಿಯಾಗಿದೆ. ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ವಕ್ತಾರ ಮುಲ್ಲಾ ಮುಹಮ್ಮದ್ ಖಾಸಿಮ್, ಮಿಯಾನ್‌ವಾಲಿ ವಾಯುನೆಲೆ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಮತ್ತು ಹಲವಾರು ಆತ್ಮಹತ್ಯಾ ಬಾಂಬರ್‌ಗಳೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಸ್ಥಳೀಯರು ದಾಳಿಯನ್ನು ದೃಢಪಡಿಸುವ ವೀಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಭಯೋತ್ಪಾದಕ ಗುಂಪು ವಾಯುನೆಲೆಯಲ್ಲಿದ್ದ ಟ್ಯಾಂಕ್ ಅನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ.

ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಯ ಬೇಲಿಯಿಂದ ಸುತ್ತುವರಿದ ಗೋಡೆಗಳನ್ನು ದಾಟಲು ಭಯೋತ್ಪಾದಕರು ಏಣಿಗಳನ್ನು ಬಳಸಿದರು. ಆ ಬಳಿಕ ಒಳಗೆ ಪ್ರವೇಶಿಸಿ ದಾಳಿಯನ್ನು ಪ್ರಾರಂಭಿಸಿದರು ಮತ್ತು ಹಲವಾರು ಬಾಂಬ್ ಸ್ಫೋಟಗಳನ್ನು ಸಹ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯಾ ಬಾಂಬರ್‌ಗಳ ವಿರುದ್ಧ ಪಾಕಿಸ್ತಾನಿ ಸೇನೆಯ ಕಾರ್ಯಾಚರಣೆ ನಡೆಯುತ್ತಿದ್ದು, ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ.  ಇಮ್ರಾನ್ ಖಾನ್ ಅವರ ಬಂಧನದ ನಂತರ ಪಕ್ಷದ ಬೆಂಬಲಿಗರು ಇದೇ ವಾಯುನೆಲೆಯ ಮೇಲೆ ದಾಳಿ ಮಾಡಿದ್ದರು. ಆದರೆ, ಒಳಗೆ ಹೋಗಲು ಅವಕಾಶ ಸಿಗದ ಹಿನ್ನಲೆಯಲ್ಲಿ ವಾಯುನೆಲೆಯ ಹೊರಗಡೆ ಇದ್ದ ಯುದ್ಧವಿಮಾನದ ಮಾದರಿಗೆ ಬೆಂಕಿ ಹಚ್ಚಿದ್ದರು.

ಮನಮೋಹನ್‌ ಸಿಂಗ್‌ ರೀತಿ ಹಮಾಸ್ ವಿರುದ್ಧ ಇಸ್ರೇಲ್‌ ಸುಮ್ಮನಿರಬೇಕಿತ್ತು: ಅಮೆರಿಕದ ಖ್ಯಾತ ಲೇಖಕ

ಇದಕ್ಕೂ ಮುನ್ನ ಶುಕ್ರವಾರ ದಾರ್‌ನಲ್ಲಿ ಭದ್ರತಾ ಪಡೆಗಳನ್ನು ಸಾಗಿಸುತ್ತಿದ್ದ ಎರಡು ವಾಹನಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ ಕನಿಷ್ಠ 14 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಭದ್ರತಾ ಬೆಂಗಾವಲು ಪಡೆ ಗ್ವಾದರ್ ಜಿಲ್ಲೆಯ ಪಾಸ್ನಿಯಿಂದ ಒರ್ಮಾರಾ ಕಡೆಗೆ ಚಲಿಸುತ್ತಿದ್ದಾಗ ಈ ದುರದೃಷ್ಟಕರ ಘಟನೆ ಸಂಭವಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯಲ್ಲಿ ತಿಳಿಸಿದೆ.

 

Breaking: ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ನಿರ್ವಹಣೆ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜುಮಾಮ್‌ ರಾಜೀನಾಮೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ