ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!

By Suvarna News  |  First Published Oct 15, 2023, 8:18 PM IST

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ದಾಳಿ ನಡೆಸಿ ಮಾರಣಹೋಮ ನಡೆಸಿತ್ತು. ಈ ವೇಳೆ ಹಲವರು ತಮ್ಮ ಮನೆಯಲ್ಲಿನ ಸೀಕ್ರೆಟ್ ಬಂಕರ್ ಒಳಗೆ ಬಚ್ಚಿಕೊಂಡಿದ್ದರು. ಈ ಪೈಕಿ ಹಲವರನ್ನು ಹುಡುಕಿ ಹಮಾಸ್ ಉಗ್ರರು ಹತ್ಯೆ ಮಾಡಿದ್ದರು. ಬದುಕುಳಿದ ಹಲವರು ಅನ್ನ ನೀರಿಲ್ಲದೆ ಅತ್ತ ಹೊರಬರಲು ಸಾಧ್ಯವಾಗದೇ ಸಾವು ಬದುಕಿನ ಹೋರಾಡುತ್ತಿದ್ದ ಕುಟುಂಬಗಳನ್ನು ಇಸ್ರೇಲ್ ಡಾಗ್ ಸ್ಕ್ವಾಡ್ ರಕ್ಷಿಸಿದೆ.ಈ ವಿಡಿಯೋವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ.


ಇಸ್ರೇಲ್(ಅ.15)  ಹಮಾಸ್ ಉಗ್ರರ ಭೀಕರ ದಾಳಿಗೆ ಸಿಲುಕಿ ಹತ್ಯೆಯಾದ ಇಸ್ರೇಲ್ ನಾಗರೀಕರ, ಕುಟುಂಬಸ್ಥರ ಸ್ಥಿತಿ ಹೇಳತೀರದು. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಉಗ್ರರು ಇಸ್ರೇಲ್ ಒಳನುಗ್ಗಿ ಸಿಕ್ಕ ಸಿಕ್ಕವರನ್ನು ಹತ್ಯೆ ಮಾಡಿತ್ತು. ಮನೆಯೊಳಕ್ಕೆ ನುಗ್ಗಿ ಪ್ರಾರ್ಥನೆಯಲ್ಲಿದ್ದ ನಾಗರೀಕರ ಮೇಲೆ ಗುಂಡಿನ ಮಳೆ ಸುರಿಸಿತ್ತು. ಮಕ್ಕಳ ಶಿರಚ್ಛೇಧ ನಡೆಸಿತ್ತು. ಹಲವರನ್ನು ವಶಕ್ಕೆ ಪಡೆದು ಗಾಜಾಗೆ ಕರೆದೊಯ್ದಿತ್ತು. ಈ ವೇಳೆ ಹಮಾಸ್ ಉಗ್ರರಿಂದ ಜೀವ ಉಳಿಸಿಕೊಳ್ಳಲು ಕೆಲವರು ತಮ್ಮ ಮನೆಯಲ್ಲಿದ್ದ ಬಂಕರ್, ರಹಸ್ಯ ಸ್ಥಳದಲ್ಲಿ ಅಡಗಿದ್ದರು. ಹಲವರನ್ನು ಹುಡುಕಿ ಹತ್ಯೆ ಮಾಡಲಾಗಿದ್ದರೆ, ಮತ್ತೆ ಕೆಲವರು ಅತ್ತ ಹೊರಬರಲು ಸಾಧ್ಯವಾಗದೆ ಸಾವು ಬದುಕಿನ ಹೋರಾಟ ನಡೆಸಿದ್ದರು. ಇಂತಹ ಹಲವು ಕುಟುಂಬಗಳನ್ನು ಇಸ್ರೇಲ್ ಸೇನೆ ಪತ್ತೆ ಹಚ್ಚಿ ರಕ್ಷಣೆ ಮಾಡಿದೆ.

ಇಸ್ರೇಲ್ ಡಾಗ್ ಸ್ಕ್ವಾಡ್ ಇದೀಗ ಹಮಾಸ್ ಉಗ್ರರು ದಾಳಿ ನಡೆಸಿದ ಮನೆ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಗುಂಡಿನ ದಾಳಿ ನಡೆಸಿದ ಮನೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಇಸ್ರೇಲ್ ಸೇನೆ ಹಾಗೂ ವಿಶೇಷ ಡಾಗ್ ಸ್ಕ್ವಾಡ್ ಹಲವು ಕುಟುಂಬಗಳ ರಕ್ಷಣೆ ಮಾಡಿದೆ. ಹೀಗೆ ಹಮಾಸ್ ಉಗ್ರರ ಗುಂಡಿನ ದಾಳಿಯಿಂದ ಜೀವ ರಕ್ಷಿಸಲು ಮನೆಯೊಳಗಿನ ಸೀಕ್ರೆಟ್ ಬಂಕರ್ ಸೇರಿದ್ದರು. ಹೀಗೆ ಬಂಕರ್ ಒಳಗೆ ಸೇರಿದ್ದ ತಾಯಿ ಹಾಗೂ ಮಕ್ಕಳನ್ನು ಇಸ್ರೇಲ್ ಸೇನೆ ಹಾಗೂ ವಿಶೇಷ ಡಾಗ್ ಸ್ಕ್ವಾಡ್ ರಕ್ಷಣೆ ಮಾಡಿದೆ.

Tap to resize

Latest Videos

ಗಾಜಾ ನಾಗರೀಕರಿಗೆ ನೀಡಿದ್ದ ಗಡುವು ಅಂತ್ಯ, ಗಡಿಯತ್ತ ನುಗ್ಗಿದ ಇಸ್ರೇಲ್ ಟ್ಯಾಂಕರ್!

ಇಸ್ರೇಲ್ ಸೇನೆ ಮನೆಯೊಳಗೆ ಪ್ರವೇಶಿಸಿ ಇಲ್ಲಿ ಯಾರಾದರೂ ಇದ್ದಾರೋ ಎಂದು ಕೇಳಿದರೂ ಯಾವುದೇ ಮನೆಯಲ್ಲಿ ಸದ್ದೇ ಇರಲಿಲ್ಲ. ಇದು ಇಸ್ರೇಲ್ ಸೇನೆ, ಯಾರಾದರೂ ಇದ್ದರೆ ನಾವು ರಕ್ಷಣೆ ಮಾಡುತ್ತೇವೆ, ಭಯಪಡಬೇಡಿ ಎಂದು ಇಸ್ರೇಲ್ ಕೂಗಿ ಕೂಗಿ ಹೇಳಿದೆ.ಆದರೆ ಇಸ್ರೇಲ್ ಡಾಗ್ ಸ್ಕ್ವಾಡ್ ಮನೆಯೊಳಗೆ ಅವಿತಿದ್ದ ಹಲವು ಕುಟುಂಬಗಳನ್ನು ಪತ್ತೆ ಹಚ್ಚಿದೆ.

 

After hours locked in the shelter throughout the Hamas massacre, our special unit "Oketz" delivered the news to this mother and son that they’re safe. pic.twitter.com/aByAejb0ia

— Israel Defense Forces (@IDF)

 

ಹೇಗಿದ್ದೀರಿ? ಭಯಪಡಬೇಡಿ. ಇದು ಇಸ್ರೇಲ್ ಸೇನೆ. ನಿಮ್ಮ ಜೊತೆ ಇನ್ನು ಯಾರಾದರೂ ಇದ್ದಾರೋ? ಅನ್ನೋ ಪ್ರಶ್ನೆ ನನ್ನ ಮಗನಿದ್ದಾನೆ ಎಂದು ಮಹಿಳೆ ಉತ್ತರಿಸಿದ್ದಾರೆ. ಬಳಿಕ ತಾಯಿ ಹಾಗೂ ಮಗನನ್ನು ಇಸ್ರೇಲ್ ಸೇನೆ ರಕ್ಷಿಸಿದೆ. ಗಾಜಾ ಗಡಿಯಿಂದ ಕೆಲ ದೂರಗಳಲ್ಲಿದ್ದ ಈ ಮನೆಯಿಂದ ತಾಯಿ ಮಗನ ರಕ್ಷಿಸಿ ಬೇರಡೆಗೆ ಸ್ಥಳಾಂತರಿಸಲಾಗಿದೆ. ಈ ವಿಡಿಯೋಗಳನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ. 

ಇಸ್ರೇಲ್‌ ಯುದ್ಧಭೂಮಿಯಿಂದ ವರದಿಗಾರಿಕೆ ನಡುವೆ ತೂರಿ ಬಂತು ಹಮಾಸ್ ಉಗ್ರರ ರಾಕೆಟ್!

click me!