ಪುಟಾಣಿ ಮಕ್ಕಳ ಡೇ ಕೇರ್ ಸೆಂಟರ್ ಮೇಲೆ ಮಾಜಿ ಪೊಲೀಸ್ ಗುಂಡಿನ ದಾಳಿ, 34 ಮಂದಿ ಸ್ಥಳದಲ್ಲೇ ಸಾವು!

By Chethan KumarFirst Published Oct 6, 2022, 3:31 PM IST
Highlights

ಮಾಜಿ ಪೊಲೀಸ್ ಅಧಿಕಾರಿ ತನ್ನಲ್ಲಿದ್ದ ರಿವಾಲ್ವರ್‌ನಿಂದ ಏಕಾಏಕಿ ಮಕ್ಕಳ ಡೇ ಕೇರ್ ಸೆಂಟರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ 22 ಪುಟಾಣಿ ಮಕ್ಕಳು, ಶಿಕ್ಷಕಿಯರು ಸೇರಿ 34 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಥಾಯ್ಲೆಂಡ್(ಅ.6):  ಇದು ಅತ್ಯಂತ ಭೀಕರ ದಾಳಿ. ಹಾಲುಗಲ್ಲದ ಪುಟಾಣಿ ಮಕ್ಕಳ ಡೇ ಕೇರ್ ಸೆಂಟರ್ ಮೇಲೆ ಮಾಜಿ ಪೊಲೀಸ್ ಅಧಿಕಾರಿ ಗುಂಡಿನ ದಾಳಿ ನಡೆಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ 22 ಪುಟಾಣಿ ಮಕ್ಕಳು, ಶಿಕ್ಷಕಿಯರು, ಸಿಬ್ಬಂದಿಗಳು ಸೇರಿ 34 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದಾರೆ. ಈ ಘಟನೆ ನಡೆದಿರುವುದು ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಡೇ ಕೇರ್ ಸೆಂಟರ್‌ಗೆ ನುಗ್ಗಿದ ಮಾಜಿ ಪೊಲೀಸ್ ಅಧಿಕಾರಿ ಮುಗ್ದ ಮಕ್ಕಳನ್ನು ನೋಡದೆ ಗುಂಡಿನ ದಾಳಿ ಮಾಡಿದ್ದಾನೆ. 34 ಮಂದಿಯನ್ನು ಹತ್ಯೆ ಮಾಡಿದ ಬಳಿಕ ತನ್ನ ತಲೆಗೆ ಗುಂಡಿಟ್ಟುಕೊಂಡಿದ್ದಾನೆ. ಈ ಪೊಲೀಸ್ ಅಧಿಕಾರಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಗೆ ಥಾಯ್ಲೆಂಡ್(Thailand) ಸೇರಿದಂತೆ ಜಗತ್ತೇ ಬೆಚ್ಚಿ ಬಿದ್ದಿದೆ. ಘಟನೆಯನ್ನು ಥಾಯ್ಲೆಂಡ್ ಪ್ರಧಾನಿ ಖಂಡಿಸಿದ್ದಾರೆ. ಇಷ್ಟೇ ಅಲ್ಲ ತಕ್ಷಣ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ. ಇಷ್ಟೇ ಇಲ್ಲ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇತ್ತ ಹಲವು ಪ್ರಮುಖ ನಾಯಕರು ಘಟನೆ ಖಂಡಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಥಾಯ್ಲೆಂಡ್ ಈಶಾನ್ಯ ಪ್ರಾಂತ್ಯದಲ್ಲಿನ ಶಾಲಾ ಕಾಲೇಜುಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 

ಮಾಜಿ ಪೊಲೀಸ್ ಅಧಿಕಾರಿ(Police) ಮಾನಸಿಕವಾಗಿ ಯಾವುದೇ ಸಮಸ್ಯೆಗೆ ಒಳಗಾಗಿರುವ ಕುರಿತು ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕ ಹತ್ಯೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಹಿಂದೆ ಯಾರ ಕೈವಾಡವಿದೆ ಅನ್ನೋದು ತನಿಖೆಯಿಂದ ಬಹಿರಂಗವಾಗಲಿದೆ ಎಂದು ಥಾಯ್ಲೆಂಡ್ ಪೊಲೀಸರು ಹೇಳಿದ್ದಾರೆ. 

8 ತಿಂಗಳ ಗರ್ಭಿಣಿ ಕೂಡ ಈ ದಾಳಿಯಲ್ಲಿ ಮೃತರಾಗಿದ್ದಾರೆ. ಮಕ್ಕಳನ್ನು ಡೇ ಕೇರ್‌ನಲ್ಲಿ(Day care Center) ಬಿಟ್ಟಿದ್ದ ಪೋಷಕರು ಇದೀಗ ಆಸ್ಪತ್ರೆ ದೌಡಾಯಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಭದ್ರತಾ ವೈಫಲ್ಯದ(Security)ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳ ಬದುಕಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ. 

ಕಾಬೂಲ್‌ನಲ್ಲಿ ರಷ್ಯಾ ರಾಯಭಾರ ಕಚೇರಿ ಬಳಿ ಆತ್ಮಾಹುತಿ ದಾಳಿ, 2 ಸಾವು
ಅಷ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಬಳಿ ಸೋಮವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ರಾಯಭಾರ ಕಚೇರಿಯ 1 ಸಿಬ್ಬಂದಿ ಹಾಗೂ 1 ನಾಗರಿಕರು ಮೃತಪಟ್ಟಿದ್ದಾರೆ. ರಷ್ಯಾ ರಾಯಭಾರಿ ಸಿಬ್ಬಂದಿ ವೀಸಾ ಅರ್ಜೀದಾರರ ಹೆಸರು ತಿಳಿಸಲು ಕಚೇರಿಯಿಂದ ಹೊರಬಂದಾಗ ದಾಳಿ ನಡೆದಿದೆ ಎಂದು ತಿಳಿಸಿದೆ. ಈ ನಡುವೆ ಆತ್ಮಾಹುತಿ ದಾಳಿಕೋರನ ಮಾಹಿತಿ ಪತ್ತೆಯಾಗಿ ಆತ ಅರ್ಜಿ ಸಲ್ಲಿಸಲು ಬಂದಿದ್ದವರ ಕಡೆಗೆ ತೆರಳುವ ಮುನ್ನವೇ, ಭದ್ರತಾ ಪಡೆಗಳು ದಾಳಿಕೋರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಯತ್ನ ನಡೆಸಿದ್ದಾರೆ. ಆದರೆ ದಾಳಿಗೆ ಮುನ್ನವೇ ಆತ್ಮಾಹುತಿ ದಾಳಿಕೋರ ಸ್ಫೋಟ ನಡೆಸುವಲ್ಲಿ ಯಶಸ್ವಿಯಾದನೇ ಅಥವಾ ಗುಂಡಿನ ದಾಳಿಯಿಂದ ಆತ ಕಟ್ಟಿಕೊಂಡಿದ್ದ ಸ್ಫೋಟಕಗಳು ಸ್ಫೋಟಗೊಂಡವೇ ಎಂಬುದು ಗೊತ್ತಾಗಿಲ್ಲ.

click me!