'ಎಐ'ನಿಂದ ಸೂಪರ್‌ಮ್ಯಾನ್ ಸೃಷ್ಟಿಯಾದರೆ, ಇಡೀ ಮಾನವ ಕುಲವನ್ನೇ ನಾಶ ಮಾಡುತ್ತದೆ; ಸಂಶೋಧಕ ಜಾಕೋಬ್ ಎಚ್ಚರಿಕೆ!

Sathish Kumar KH   | Kannada Prabha
Published : Sep 10, 2026, 06:26 AM IST
Anthropic Jacob Coxon

ಸಾರಾಂಶ

ಎಐ ಕಂಪನಿ ಆ್ಯಂಥ್ರೋಪಿಕ್‌ಗೆ ರಾಜೀನಾಮೆ ನೀಡಿದ ಸಂಶೋಧಕ ಜಾಕೋಬ್, ಕೃತಕ ಬುದ್ಧಿಮತ್ತೆಯಿಂದ ಮಾನವಕುಲಕ್ಕೆ ಎದುರಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ. ಈ ದಶಕದ ಅಂತ್ಯದೊಳಗೆ ಎಐ ಮಾನವರನ್ನು ನಾಶಪಡಿಸುವ ಸಾಮರ್ಥ್ಯ ಹೊಂದಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದು, ಇದಕ್ಕೆ ಅವರ ಸಹೋದ್ಯೋಗಿಯೂ ದನಿಗೂಡಿಸಿದ್ದಾರೆ.

ವಾಷಿಂಗ್ಟನ್‌: ಎಐ(ಕೃತಕಬುದ್ಧಿಮತ್ತೆ) ಕಂಪನಿಗಳು ಶಕ್ತಿ ಶಾಲಿ ವ್ಯವಸ್ಥೆ(ಅತಿಮಾನವ)ಗಳ ಕಡೆಗೆ ವೇಗವಾಗಿ ಸಾಗುತ್ತಿದ್ದು, ಅದನ್ನು ನಿಯಂತ್ರಿಸುವುದು ಅಸಾಧ್ಯವಾಗಲಿದೆ. ಈ ದಶಕದ ಅಂತ್ಯದ ವೇಳೆ ಮಾನವರನ್ನೇ ಕೃತಕಬುದ್ಧಿಮತ್ತೆ ನಾಶಮಾಡಬಹುದು ಎಂದು ಎಐಯನ್ನು ಅಭಿವೃದ್ಧಿಪಡಿಸುತ್ತಿರುವ ಕ್ಷೇತ್ರದಲ್ಲಿ ದುಡಿಯುತ್ತಿರುವವರೇ ಹೇಳುತ್ತಿದ್ದಾರೆ ಎಂದು ಎಐ ಸಂಶೋಧಕ ಜಾಕೋಬ್‌ ಕಾಕ್ಸೋನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಆ್ಯಂಥ್ರೋಪಿಕ್‌ ಸಂಸ್ಥೆಯಲ್ಲಿ ಮೂರು ವರ್ಷದಿಂದ ಎಐ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಇಂಥದ್ದೊಂದು ಆತಂಕ ಹೊರಹಾಕಿದ್ದಾರೆ. ಎಐ ಕಂಪನಿಗಳ ಎಕ್ಸಿಕ್ಯುಟಿವ್‌ಗಳು ಮತ್ತು ಹಿರಿಯ ಸಂಶೋಧಕರು ಮಾಧ್ಯಮಗಳ ಮುಂದೆ ಆಡುವ ಮಾತೇ ಬೇರೆ. ಆದರೆ, ಖಾಸಗಿಯಾಗಿ ಅವರಲ್ಲಿ ಕೆಲವರು ಇಂಥ ಆತಂಕ ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ. ಬೇರಿನ್ಯಾವ ಮಾನವ ಚಟುವಟಿಕೆಯೂ ಇಷ್ಟೊಂದು ದೊಡ್ಡ ಬೆದರಿಕೆ ಒಡ್ಡಲಿಕ್ಕಿಲ್ಲ ಎಂದು ಜಾಕೋಬ್‌ ತಿಳಿಸಿದ್ದಾರೆ.

ಜಾಕೋಬ್‌ ಅವರ ಆತಂಕಕ್ಕೆ ಸಹೋದ್ಯೋಗಿ, ಆ್ಯಂಥ್ರೋಪಿಕ್‌ನ ಸೇಫ್ಟಿ ಲೀಡ್‌ ಆಗಿರುವ ಈವನ್‌ ಹುಬಿಂಜರ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಾಕೋಬ್‌ ಹೇಳಿದ್ದು ನಿಜ. ಎಐ ಮಾವರನ್ನು ಹತ್ಯೆ ಮಾಡಲಿದೆ ಎಂದು ನಾವೂ ನಂಬಿದ್ದೇವೆ. ಆ್ಯಂಥ್ರೋಪಿಕ್‌ ಸಂಸ್ಥೆಯು ಅತಿಮಾನವ ಎಐಗಳನ್ನು ನಿಯಂತ್ರಣ ವಿಚಾರದಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದೆ. ಆದರೆ, ಈವರೆಗೆ ಅತಿಯಾದ ಬುದ್ಧಿವಂತಿಕೆಯ ಅಲೈನ್‌ಮೆಂಟ್‌ ಅನ್ನು ಪರಿಹರಿಸಲು ನಮ್ಮ ಬಳಿ ಯಾವುದೇ ಯೋಜನೆ ಇಲ್ಲ, ಈ ವಿಚಾರದಲ್ಲಿ ನಾವು ಸರಿಯಾದ ದಾರಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಜಾಕೋಬ್‌ ಹೇಳಿದ್ದೇನು?:

ಎಐ ಕಂಪನಿಗಳು ಮಾನವರಿಗೆ ನಿಯಂತ್ರಿಸಲು ಅಸಾಧ್ಯವಾದ ವ್ಯವಸ್ಥೆಯತ್ತ ತೀವ್ರ ವೇಗವಾಗಿ ಹೆಜ್ಜೆಹಾಕುತ್ತಿವೆ. ತಂತ್ರಜ್ಞಾನದ ಶಕ್ತಿಯನ್ನು ಕೀಳಂದಾಜು ಮಾಡಬೇಡಿ. ಎಐ ಸೂಪರ್‌ಹ್ಯೂಮನ್‌ ವ್ಯವಸ್ಥೆಯಾಗಿ ಬದಲಾಗಲಿದ್ದು, ಅದು ಯಾವುದನ್ನು ಬೇಕಾದರೂ ಹ್ಯಾಕ್‌ ಮಾಡಬಹುದು, ಯಾವುದೇ ಕ್ಷೇತ್ರದಲ್ಲಿ ರಾತ್ರೋರಾತ್ರಿ ಕ್ರಾಂತಿ ಮಾಡಬಹುದು. ಸರ್ಕಾರಗಳು ಹಾಗೂ ಎಐ ಕಂಪನಿಗಳು ಜತೆಯಾಗಿ ಈ ಸ್ಪರ್ಧೆಗೆ ಮಿತಿ ಹಾಕುವ ಕೆಲಸ ಮಾಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಕ್ಷಿಣ ಬ್ರೆಜಿಲ್‌ನಲ್ಲಿ ಅಪರೂಪದ ಪಳೆಯುಳಿಕೆ ಪತ್ತೆ: ಡೈನೋಸಾರ್‌ಗಳ ಆರಂಭಿಕ ವಿಕಾಸದ ಹೊಸ ರಹಸ್ಯ ಬೆಳಕಿಗೆ!
​"ಇನ್ನು ಎರಡೇ ವರ್ಷ ಆಯಸ್ಸು ಎಂದಿದ್ದ ವೈದ್ಯರು! ಆದರೆ 8 ವರ್ಷಗಳ ನಂತರವೂ ಈ ಕ್ಯಾನ್ಸರ್ ರೋಗಿ ಬದುಕಿದ್ದು ಹೇಗೆ?"