ಉಕ್ರೇನ್‌ಗೆ ಹೀನಾಯ ಸ್ಥಿತಿ: ರಷ್ಯಾ ವಿರುದ್ಧದ ಯುದ್ಧಕ್ಕೆ ಹಣ ಹೊಂದಿಸಲು ಬ್ಲೂಫಿಲಂ ಉದ್ಯಮ ಸಕ್ರಮ

Published : Sep 08, 2026, 08:11 AM IST
Ukraine

ಸಾರಾಂಶ

ರಷ್ಯಾ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಲು, ಉಕ್ರೇನ್ ಸರ್ಕಾರವು ಪೋರ್ನೋಗ್ರಫಿ ಉದ್ಯಮವನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸುವ ಬಗ್ಗೆ ಪರಿಶೀಲಿಸುತ್ತಿದೆ. ಈ ಕ್ರಮದಿಂದ ವಾರ್ಷಿಕ 236 ಕೋಟಿ ರೂ. ತೆರಿಗೆ ಸಂಗ್ರಹಿಸಿ, ಸುಮಾರು 30,000 ಡ್ರೋನ್‌ಗಳನ್ನು ಖರೀದಿಸಬಹುದು ಎಂದು ಸಂಸದರೊಬ್ಬರು ಪ್ರಸ್ತಾಪಿಸಿದ್ದಾರೆ.

ಕೀವ್: ರಷ್ಯಾ ಜೊತೆಗಿನ ಯುದ್ಧಕ್ಕೆ ಬೇಕಿರುವ ಹಣ ಹೊಂದಿಸಲು ಉಕ್ರೇನ್‌ ಸರ್ಕಾರ ಇದೀಗ ಪೋರ್ನೋಗ್ರಫಿ ಉದ್ಯಮವನ್ನು ಸಕ್ರಮಗೊಳಿಸಿ ಅದರ ಮೇಲೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ವಿಚಾರವು ಉಕ್ರೇನ್‌ಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಸಾಂಪ್ರದಾಯಿಕ ದೇಶಗಳು ಮರುಕ ವ್ಯಕ್ತಪಡಿಸಿವೆ.

ಪೋರ್ನೋಗ್ರಫಿ (ಅ*ಶ್ಲೀಲ ಚಿತ್ರಗಳು) ಮೂಲಕ ದೇಶಕ್ಕೆ ವಾರ್ಷಿಕ 236 ಕೋಟಿ ರು. ತೆರಿಗೆ ಸಂಗ್ರಹ ಆಗಲಿದೆ. ಇದರಿಂದ ರಷ್ಯಾ ಜತೆಗಿನ ಯುದ್ಧಕ್ಕೆ 30 ಸಾವಿರ ಡ್ರೋನ್‌ಗಳನ್ನು ಖರೀದಿಸಬಹುದು ಎಂಬ ಚಿಂತನೆ ಇದೆ. ಪೋರ್ನೋಗ್ರಫಿಗೆ ಸದ್ಯ ಉಕ್ರೇನ್‌ನಲ್ಲಿ ನಿಷೇಧ ಹೇರಲಾಗಿದೆ. ಬ್ಲೂಫಿಲಂ ನಿರ್ಮಾಣ, ಹಂಚಿಕೆ 7 ವರ್ಷಗಳ ವರೆಗೆ ಶಿಕ್ಷಾರ್ಹ ಅಪರಾಧ. ಆದರೆ ನಿರ್ಬಂಧದ ಹೊರತಾಗಿಯೂ ದೇಶದ ಪೋರ್ನೋಗ್ರಫಿ ಉದ್ಯಮ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಹೀಗಾಗಿ ಉಕ್ರೇನ್‌ ಸರ್ಕಾರವು ಅದನ್ನು ಸಕ್ರಮಗೊಳಿಸಿ ಅಶ್ಲೀಲ ಕಂಟೆಂಟ್‌ ಸೃಷ್ಟಿಸುವವರಿಂದ ತೆರಿಗೆ ಸಂಗ್ರಹಿಸಲು ಮುಂದಾಗಿದೆ.

ಯಾರೊಬ್ಬರೂ ಘೋಷಣೆ ಮಾಡಿಕೊಳ್ಳುತ್ತಿಲ್ಲ

ಆದರೆ, ಸದ್ಯ ಯಾರೂ ತಾವು ಅಶ್ಲೀಲ ಕಂಟೆಂಟ್‌ಗಳಿಂದ ಆದಾಯಗಳಿಸುತ್ತಿದ್ದೇವೆ ಎಂದು ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕಾನೂನು ಪ್ರಕಾರ ಅಶ್ಲೀಲ ಕಂಟೆಂಟ್‌ ಸೃಷ್ಟಿ ಶಿಕ್ಷಾರ್ಹ ಅಪರಾಧವಾಗಿದೆ.

ಈ ಹಿನ್ನೆಲೆಯಲ್ಲಿ ಉಕ್ರೇನ್‌ ಸಂಸದ ಯಾರೋಸ್ಲಾವ್ ಝೆಲೆಜ್ನ್ಯಾಕ್ ಅವರು ಪೋರ್ನೋಗ್ರಫಿಯನ್ನು ಕಾನೂನುಬದ್ಧಗೊಳಿಸಬೇಕು ಮತ್ತು ಉದ್ದಿಮೆಯನ್ನು ಸಾಮಾನ್ಯ ಆರ್ಥಿಕತೆ ಜತೆ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದ ವಾರ್ಷಿಕ 236 ಕೋಟಿ ರು. ತೆರಿಗೆ ಸಂಗ್ರಹ ಆಗಲಿದೆ. ಇಷ್ಟು ಹಣದಿಂದ 30 ಸಾವಿರ ಡ್ರೋನ್‌ಗಳನ್ನು ಖರೀದಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೃಷ್ಣಂ ವಂದೇ ಜಗದ್ಗುರುಂ: ಪಾಕಿಸ್ತಾನದಲ್ಲಿ ಜನಸಾಗರ, ಈ ಸಂಭ್ರಮ ನೋಡಿದ್ರೆ ಶಾಕ್ ಆಗ್ತೀರಿ - VIDEO
ಇತ್ತ ಬಿಗ್ ಬಾಸ್ ಶೋ ಆರಂಭದ ಬೆನ್ನಲ್ಲೇ, ಅತ್ತ ರಿಯಾಲಿಟಿ ಶೋನಲ್ಲಿ ಕಾಲು ಮುರಿದುಕೊಂಡು ವಿಕಲಾಂಗನಾದ ಯುವಕ!