ದಿಢೀರ್ 300 ವಿಮಾನ ಹಾರಾಟ ರದ್ದು, ಯುಕೆ ಏರ್ ಟ್ರಾಫಿಕ್ ಸಿಸ್ಟಮ್ ಸಮಸ್ಯೆಯಿಂದ ಕೋಲಾಹಲ

Published : Sep 08, 2026, 10:49 PM IST
UK Flight Disruption Over 300 Flights Cancelled

ಸಾರಾಂಶ

ಬರೋಬ್ಬರಿ 300 ವಿಮಾನ ಹಾರಾಟ ರದ್ದಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆ ಎದುರಾಗಿದೆ. ಇದೇ ವೇಳೆ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಲಂಡನ್ (ಸೆ.08) ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಪರಿಣಾಮ ಯುಕೆಯಲ್ಲಿ ದಿಢೀರ್ 300 ವಿಮಾನ ಹಾರಾಟಗಳು ರದ್ದಾಗಿದೆ. ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಯುಕೆ ವಿಮಾನ ಪ್ರಯಾಣ ಅಸ್ತವ್ಯಸ್ತಗೊಂಡಿದೆ. ಆತಂಕ ತೀವ್ರಗೊಂಡಿದೆ. ಬ್ರಿಟನ್ ನ್ಯಾಷನ್ ಏರ್ ಟ್ರಾಫಿಕ್ ಕೇಂದ್ರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆ ಪರಿಹರಿಸುತ್ತಿರುವುದಾಗಿ ಹೇಳಿದೆ.

ಪ್ರಯಾಣಿಕರಿಂದ ತುಂಬಿ ತುಳುಕಿದ ವಿಮಾನ ನಿಲ್ದಾಣ

ಯುಕೆಯಲ್ಲಿ ಎದುರಾಗಿರುವ ವಿಮಾನ ಹಾರಾಟ ರದ್ದು ಸಮಸ್ಯೆ ಕುರಿತು ಫ್ಲೈಟ್ ರೆಡಾರ್ 24 ವರದಿ ಮಾಡಿದೆ. ಹಲವು ಏರ್‌ಲೈನ್ ಸಂಸ್ಥಗಳ ವಿಮಾನ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬ್ರಿಟಿಷ್ ಏರ್‌ವೇಸ್, ಈಸಿ ಜೆಟ್, ಕೆಎಲ್ಎಂ, ಲುಫ್ತಾನ್ಸ ಸೇರಿದಂತೆ ಹಲವು ಏರ್‌ಲೈನ್ಸ್ ವಿಮಾನ ಹಾರಾಟಗಳು ಸ್ಥಗಿತಗೊಂಡಿದೆ ಎಂದು ಫ್ಲೈಟ್ ರೇಡಾರ್ 24 ವರದಿ ಮಾಡಿದೆ. ಯುಕೆಯ ಪ್ರಮುಖ ವಿಮಾನ ನಿಲ್ದಾಣಗಳು ಇದೀಗ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಹಾರಾಟ ರದ್ದಾಗಿರುವ ಕಾರಣ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿ ಕೊಂಡಿದ್ದಾರೆ.

ಪ್ರಯಾಣಿಕರಲ್ಲಿ ಮನವಿ

ಲಂಡನ್‌ನ ಹೀಥ್ರೋ, ಸ್ಟಾನ್‌ಸ್ಟೆಡ್, ಸಿಟಿ ವಿಮಾನ ನಿಲ್ದಾಣಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಇನ್ನು ಮ್ಯಾಂಚೆಸ್ಟರ್, ಬರ್ಮಿಂಗ್‌ಹ್ಯಾಮ್ ಸೇರಿದಂತೆ ಯುಕೆಯ ಬಹುತೇಕ ವಿಮಾನ ನಿಲ್ದಾಣಗಲ್ಲಿ ಸಮಸ್ಯೆ ತಲೆದೋರಿದೆ. ತಾಂತ್ರಿಕ ಅಡಚಣೆಯಿಂದ ಆಗಿದೆ ಎಂದು ಯುಕೆ ಅದಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಪ್ರಯಾಣಿಕರು ತಮ್ಮ ಫ್ಲೈಟ್ ಸ್ಟೇಟಸ್ ಪರಿಶೀಲಿಸಿ ಪ್ರಯಾಣ ಬೆಳೆಸಿ ಎಂದು ಸೂಚಿಸಿದೆ.

ಸಿಸ್ಟಮ್ ಫೈಲ್ಯೂರ್‌ನಿಂದ ವಿಮಾನ ಹಾರಾಟ ಸ್ಥಗಿತಗೊಂಡಿದೆ ಎಂದು ಹಲವು ಪ್ರಯಾಣಿಕರಿಗೆ ಏರ್‌ಲೈನ್ಸ್ ಸೂಚನೆ ನೀಡಿದೆ. ಆದರೆ ಹಲವು ಸಂಸ್ಥೆಗಳು ಯಾವುದೇ ಮಾಹಿತಿ ನೀಡಿಲ್ಲ, ಪರಿಣಾಮ ಪ್ರಯಾಣಿಕರು ಮಾಹಿತಿ ಸಿಗದೆ ಪರದಾಡುವಂತಾಗಿದೆ. ಟೆಕ್ನಿಕಲ್ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿದೆ. ದಿಢೀರ್ ಈ ರೀತಿಯ ತಾಂತ್ರಿಕ ಅಡಚಣೆ ಹಿಂದೆ ಬೇರೆ ಕಾರಣಗಳು ಇದೆಯಾ ಅನ್ನೋ ಅನುಮಾನಗಳು ತೀವ್ರಗೊಂಡಿದೆ. ವಿಮಾನ ಹಾರಾಟ ರದ್ದು ಕುರಿತು ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಅಧಿಕಾರಿಗಳು ಸಮಸ್ಯೆಗೆ ಮೂಲ ಕಾರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಉದ್ಭವಿಸಿರುವ ವಿಮಾನ ಹಾರಾಟ ರದ್ದು ಯುಕೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೋರಿಯನ್ ಮದ್ವೆಯಲ್ಲಿ ಭಾರತೀಯ ಯುವತಿಗೆ ಊಟ ನೀಡದೇ ನಿಲ್ಲಿಸಿದ್ದರು; ಕಾರಣ ಕ್ಯೂಟ್ ಆಗಿದೆ
ವಿದೇಶದಲ್ಲಿ ಸೆಪ್ಟೆಂಬರ್‌ ಬರುತ್ತಿದ್ದಂತೆ ಕಿಟಕಿ ಮೇಲೆ ಉಪ್ಪಿನ ಬಟ್ಟಲು ಇಡಲು ಮನೆಮಂದಿಗೆ ಸೂಚನೆ ನೀಡೋದ್ಯಾಕೆ?