ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮನೆ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ ‘ಸಾಕ್ಷ್ಯ’ ಬಿಡುಗಡೆ

Mahmad Rafik   | Kannada Prabha
Published : Jan 01, 2026, 08:45 AM IST
putin

ಸಾರಾಂಶ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ನಿವಾಸದ ಮೇಲೆ ನಡೆದಿದೆ ಎನ್ನಲಾದ ಡ್ರೋನ್ ದಾಳಿಯ ವಿಡಿಯೋವನ್ನು ರಷ್ಯಾ ಬಿಡುಗಡೆ ಮಾಡಿದೆ. ಮತ್ತೊಂದೆಡೆ, ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದ ಬಾಂಗ್ಲಾದೇಶದ ಹತ್ಯೆ ಆರೋಪಿಯೊಬ್ಬ ದುಬೈನಿಂದ ವಿಡಿಯೋ ಸಂದೇಶ ಕಳುಹಿಸಿ, ತಾನು ನಿರಪರಾಧಿ ಎಂದಿದ್ದಾನೆ.

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಮನೆ ಮೇಲೆ ಡಿ.28-29ರ ರಾತ್ರಿ ಉಕ್ರೇನ್‌ ಡ್ರೋನ್ ದಾಳಿಗೆ ಯತ್ನಿಸಿದ ವಿಡಿಯೋವನ್ನು ರಷ್ಯಾ ಬುಧವಾರ ಬಿಡುಗಡೆ ಮಾಡಿದೆ.

ಪುಟಿನ್‌ ಮನೆ ಮೇಲೆ ಉಕ್ರೇನ್‌ 91 ಡ್ರೋನ್ ಬಳಸಿ ದಾಳಿಗೆ ಯತ್ನಿಸಿದೆ. ಎಲ್ಲ ಡ್ರೋನ್‌ ನಾಶಪಡಿಸಿದ್ದಾಗಿ ಎಂದು ರಷ್ಯಾ ಆರೋಪಿಸಿತ್ತು. ಆದರೆ ಉಕ್ರೇನ್‌ ಇದನ್ನು ‘ಸುಳ್ಳು’ ಎಂದು ಸಾರಾಸಗಟಾಗಿ ತಿರಸ್ಕರಿಸಿತ್ತು. ಇದು ಉಭಯ ದೇಶಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.

ಇದೀಗ ಉಕ್ರೇನ್‌ನ ದಾಳಿಗೆ ಸಾಕ್ಷಿಯಾಗಿ, ತನ್ನ ಪ್ರತಿದಾಳಿಗೆ ಡ್ರೋನ್‌ ಪತನವಾಗಿರುವ ವಿಡಿಯೋವನ್ನು ರಷ್ಯಾ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ.ಇದರಲ್ಲಿ ಹಿಮಪಾತವಾದ ಸ್ಥಳದಲ್ಲಿ ಡ್ರೋನ್‌ ಧ್ವಂಸವಾಗಿದ್ದು ಕಂಡುಬರುತ್ತದೆ. ‘ಅತ್ಯಂತ ಯೋಜಿತವಾಗಿ ಉಕ್ರೇನ್‌ ದಾಳಿ ನಡೆಸಿದ್ದಕ್ಕೆ ಇದು ಸಾಕ್ಷಿ’ ಎಂದಿದೆ.

ಆದರೆ ದಾಳಿಯ ವೇಳೆ ಪುಟಿನ್‌ ಮನೆಯಲ್ಲೇ ಇದ್ದರೆ ಎಂಬುದನ್ನು ಮಾತ್ರ ರಷ್ಯಾ ಹೇಳಿಲ್ಲ.

 

 

ನಾನು ಭಾರತದಲ್ಲಿ ಇಲ್ಲ ಎಂದ ಹದಿ ಹ*ತ್ಯೆ ಆರೋಪಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಹಾಗೂ ಭಾರತ ವಿರೋಧಿ ಸಂಘರ್ಷಕ್ಕೆ ಕಾರಣವಾದ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಹ*ತ್ಯೆ ಆರೋಪಿಗಳು ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಬಾಂಗ್ಲಾ ಪೊಲೀಸರು ಆರೋಪಿಸಿದಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿ ಫೈಸಲ್ ಕರೀಂ ಮಸುದ್, ತಾನು ದುಬೈನಲ್ಲಿರುವುದಾಗಿ ವಿಡಿಯೋ ಸಂದೇಶ ಕಳಿಸಿದ್ದಾನೆ. ಆದರೆ ಹದಿ ಹತ್ಯೆಯಲ್ಲಿ ತನ್ನ ಪಾತ್ರ ಇಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಮಸೂದ್‌ನ ಈ ವಿಡಿಯೋ ಬಾಂಗ್ಲಾ ಸರ್ಕಾರಕ್ಕೆ ಮುಖಭಂಗ ಉಂಟುಮಾಡಿದೆ.

ಮಸೂದ್ ದುಬೈನಿಂದ ವಿಡಿಯೋ ಸಂದೇಶ ಕಳಿಸಿದ್ದು, 'ನಾನು ಹದಿಯನ್ನು ಕೊಂದಿಲ್ಲ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೊಲೀಸ್ ಬೇಟೆಯಿಂದ ನನ್ನನ್ನು ರಕ್ಷಿಸಿಕೊಳ್ಳಲು ದುಬೈಗೆ ಬಂದಿದ್ದೇನೆ ಎಂದಿದ್ದಾನೆ. ಈ ಹಿಂದೆ ಬಾಂಗ್ಲಾ ಪೊಲೀಸರು, ಫೈಸಲ್ ಮತ್ತು ಇನ್ನೊಬ್ಬ ಆರೋಪಿ ಅಲಂಗೀರ್‌ಶೇಖ್, ಹಲುವಾಘಾಟ್ ಮೂಲಕ ಭಾರತದ ಮೇಘಾಲಯವನ್ನು ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಗಲ್ಫ್‌ ಸುಲ್ತಾನರ ನಡುವೆ ಬಿರುಕು: ಒಂದಾಗಿದ್ದ ಸೌದಿ-ಯುಎಇ ಶತ್ರುಗಳಾಗಿದ್ದು ಹೇಗೆ? ಎರಡು ಮುಸ್ಲಿಂ ರಾಷ್ಟ್ರಗಳ ಅಸಲಿ ಯುದ್ಧಕ್ಕೆ ಕಾರಣವೇನು ಗೊತ್ತಾ?

ಇದನ್ನೂ ಓದಿ: ಅಣ್ಣನ ಮಗನನ್ನೇ ಅಳಿಯ ಮಾಡಿಕೊಂಡ ಪಾಕ್‌ ಆರ್ಮಿ ಚೀಫ್‌ ಆಸೀಮ್‌ ಮುನೀರ್‌, ಸೇನಾ ಕಚೇರಿಯಲ್ಲೇ ಮದುವೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷ ಪಾರ್ಟಿಯಲ್ಲಿದ್ದ ಜನರಿಗೆ ಭೂಕಂಪದ ಶಾಕ್, ನೋಡಾ ನಗರದಲ್ಲಿ 6.0 ತೀವ್ರತೆ ಕಂಪನ
ಗಲ್ಫ್‌ ಸುಲ್ತಾನರ ನಡುವೆ ಬಿರುಕು: ಒಂದಾಗಿದ್ದ ಸೌದಿ-ಯುಎಇ ಶತ್ರುಗಳಾಗಿದ್ದು ಹೇಗೆ? ಎರಡು ಮುಸ್ಲಿಂ ರಾಷ್ಟ್ರಗಳ ಅಸಲಿ ಯುದ್ಧಕ್ಕೆ ಕಾರಣವೇನು ಗೊತ್ತಾ?