ಹೊಸ ವರ್ಷ ಪಾರ್ಟಿಯಲ್ಲಿದ್ದ ಜನರಿಗೆ ಭೂಕಂಪದ ಶಾಕ್, ನೋಡಾ ನಗರದಲ್ಲಿ 6.0 ತೀವ್ರತೆ ಕಂಪನ

Published : Dec 31, 2025, 11:10 PM IST
earthquake

ಸಾರಾಂಶ

ಹೊಸ ವರ್ಷ ಪಾರ್ಟಿಯಲ್ಲಿದ್ದ ಜನರಿಗೆ ಭೂಕಂಪದ ಶಾಕ್, ನೋಡಾ ನಗರದಲ್ಲಿ 6.0 ತೀವ್ರತೆ ಕಂಪನ, ಇದೇ ವೇಳೆ ಭಾರಿ ಭೂಕಂಪದ ಎಚ್ಚರಿಕೆಯನ್ನು ನೀಡಲಾಗಿದೆ. ಸಂಭ್ರಮಾಚರಣೆಯಲ್ಲಿದ್ದವರು ಆತಂಕಗೊಂಡಿದ್ದಾರೆ. 

ನೋಡಾ (ಡಿ.31) ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಸದ್ದು ಮಾಡುತ್ತಿದೆ. ಪಾರ್ಟಿಗಳು ಜೋರಾಗಿ ನಡೆಯುತ್ತಿದೆ. ಇದರ ನಡುವೆ ಜಪಾನ್‌ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಜಪಾನ್‌ನ ನೋಡಾ ನಗರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿದೆ. ಭೂಕಂಪ ಭಾರಿ ಎಚ್ಚರಿಕೆ ನಡುವೆ 6.0 ತೀವ್ರತೆಯಿಂದ ಭೂಮಿ ಕಂಪಿಸಿದೆ. ಮನೆ, ಕಟ್ಟಡಗಳು ಅಲುಗಾಡಿದೆ. ಜನರು ಭಯಗೊಂಡ ಹೊರಗೆ ಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು ನೋವಿನ ಮಾಹಿತಿಯಿಲ್ಲ.

ಹೊಸ ವರ್ಷ ಸ್ವಾಗತಿಸುವ ಅರ್ಧ ಗಂಟೆ ಮೊದಲು ಭೂಕಂಪ

ಜಪಾನ್‌ಲ್ಲಿ ಇಂದು (ಡಿ.31) ರಾತ್ರಿ 11.30ರ ವೇಳೆಗೆ (ಜಪಾನ್ ಸಮಯ) ಭೂಮಿ ಕಂಪಿಸಿದೆ. ಟೋಕಿಯೋ ಸೇರಿದಂತೆ ಜಪಾನ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ಬೆನ್ನಲ್ಲೇ ಭೂಮಿ ಕಂಪಿಸಿದೆ. ಹೊಸ ವರ್ಷವನ್ನು ಜಪಾನ್ ಜನರು ಬರಮಾಡಿಕೊಳ್ಳಲು ಕೇವಲ 24 ನಿಮಿಷಗಳು ಮಾತ್ರ ಬಾಕಿ ಇತ್ತು. ಈ ವೇಳೆ ಭೂಮಿ ಕಂಪಿಸಿ ಆತಂಕದ ವಾತಾವರಣ ನಿರ್ಮಾಾಣವಾಗಿದೆ.

ನೋಡಾ ನಗರದಿಂದ ಪೂರ್ವ ದಿಕ್ಕಿನಲ್ಲಿ 91 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು. 13.1 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ನೋಡಾ ನಗರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದೆ. ನೋಡಾ ನಗರದಲ್ಲಿ ಸುನಾಮಿ ಎಚ್ಚರಿಕೆ ನೀಡಿರುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕಾರಣ ಜಪಾನ್‌ನಲ್ಲ ಸುನಾಮಿ ಎಚ್ಚರಿಕೆ ನೀಡಿದ ಸಂದರ್ಭಗಳಲ್ಲಿ ಅನಾಹುತಗಳು ಸಂಭವಿಸಿದೆ. ಡಿಸೆಂಬರ್ ತಿಂಗಳ ಆರಂಬದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಉತ್ತರ ಜಪಾನ್ ಭಾಗದಲ್ಲಿ ಭೂಕಂಪ ಸಂಭವಿಸಿ 23 ಜನರು ಗಾಯಗೊಂಡಿದ್ದರು.

ನೋಡಾ ನಗರದಲ್ಲಿ ಸಂಭವಿಸಿದ ಭೂಕಂಪನ ಕರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮನೆಗಳು ಅಲುಗಾಡಿತು. ಗೋಡೆಗಳು ಬಿರುಕು ಬಿಟ್ಟಿತು. ಮೇಲ್ಚಾವಣಿಗಳು ಕುಸಿತ ಕಂಡಿತು. ಕುಟುಂಬ ಸದಸ್ಯರನ್ನು ಎಬ್ಬಿಸಿ ಹೊರಗೋಡಿದ್ದೇವೆ. ಹಲವರು ಹೊರಬಂದಿದ್ದಾರೆ. ಕಟ್ಟಡಗಳು ಅಲುಗಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಲೇಹ್ ಲಡಾಖ್‌ನಲ್ಲಿ 3.4 ತೀವ್ರತಯೆ ಕಂಪನ

ಭಾರತದ ಲೇಹ್ ಲಡಾಖ್‌ನಲ್ಲಿ ಇಂದು ಸಂಜೆ 7.35ರ ವೇಳೆಗೆ ಲಘುವಾಗಿ ಭೂಮಿ ಕಂಪಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಗಳು ಆರಂಭಗೊಂಡ ಬೆನ್ನಲ್ಲೇ ಲಡಾಖ್‌ನಲ್ಲಿ ಭೂಮಿ ಕಂಪಿಸಿತ್ತು. ಆದರೆ ಇದು ಲುಘು ಭೂಕಂಪನವಾಗಿತ್ತು. ಹೀಗಾಗಿ ಯಾವುದೇ ಪರಿಣಾಮ ಬೀರಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಲ್ಫ್‌ ಸುಲ್ತಾನರ ನಡುವೆ ಬಿರುಕು: ಒಂದಾಗಿದ್ದ ಸೌದಿ-ಯುಎಇ ಶತ್ರುಗಳಾಗಿದ್ದು ಹೇಗೆ? ಎರಡು ಮುಸ್ಲಿಂ ರಾಷ್ಟ್ರಗಳ ಅಸಲಿ ಯುದ್ಧಕ್ಕೆ ಕಾರಣವೇನು ಗೊತ್ತಾ?
37ರ ಪತ್ನಿಯ ಜೊತೆ 92ರ ಹರೆಯದಲ್ಲಿ ಮಗುವಿಗೆ ತಂದೆಯಾದ ವೈದ್ಯ