ರಕ್ಕಸನಾದ ಅಪ್ಪ: ಹೆಂಡತಿ ಇಲ್ಲದಾಗ ಮಗಳ ಮೇಲೆ ರೇಪ್: ಮಗುವಿಗೆ ಜನ್ಮ ಕೊಟ್ಟ ಬಾಲಕಿ!
* ರಕ್ಷಕನಾಗಬೇಕಿದ್ದ ಅಪ್ಪನೇ ರಕ್ಕಸನಾದ
* ತಾಯಿ ಇಲ್ಲದಾಗ, ತಂದೆಯಿಂದ ಅತ್ಯಾಚಾರ
* ಮಗುವಿಗೆ ಜನ್ಮ ಕೊಟ್ಟ ಹತ್ತೊಂಭತ್ತರ ಹುಡುಗಿ
ಅಹಮದಾಬಾದ್(ಜೂ.13): ಮಗಳೊಬ್ಬಳಿಗೆ ಅಪ್ಪ ಅಂದ್ರೆ ರಕ್ಷಕ, ಅಪ್ಪ ಜೊತೆಗಿದ್ದರೆ ಅದೊಂದು ಬಗೆಯ ಧೈರ್ಯ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳ ಪಾಲಿಗೆ ರಕ್ಕಸನಾಗಿದ್ದಾನೆ. ಹೆಂಡತಿ ಇಲ್ಲದ ಸಮಯದಲ್ಲಿ ತನ್ನ ಮಗಳ ಮೇಲೆರಗುತ್ತಿದ್ದ ತಂದೆ, ಕಳೆದೊಂದು ವರ್ಷದಿಂದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಪತಿ ಜೊತೆ ಕಲಹ : 5 ಹೆಣ್ಣು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ತಾಯಿ
ಹೌದು ಇಂತಹುದ್ದೊಂದು ಶಾಕಿಂಗ್ ಘಟನೆ ನಡೆದಿದ್ದು, ಗುಜರಾತ್‌ನ ಶಿಹೋರ್ ನಗರದಲ್ಲಿ. ಇಲ್ಲೊಬ್ಬ ತಂದೆ ತನ್ನ 19 ವರ್ಷದ ಅವಿವಾಹಿತ ಮಗಳ ಮೇಲೆ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸುತ್ತಾ ಬಂದಿದ್ದಾನೆ. ಆಧರೆ ಬುಧವಾರ ಅಚಾನಕ್ಕಾಗಿ ಬಾಲಕಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಆಕೆ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಬುಧವಾರ ಹತ್ತೊಂಭತ್ತು ವರ್ಷದ ಬಾಲಕಿ ಆರೋಗ್ಯ ಸರಿ ಇಲ್ಲ ಎಂದು ಮನೆಯಲ್ಲಿ ತಿಳಿಸಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಆಕೆ ಮಗುವೊಂದಕ್ಕೆ ಜನ್ಮ ನೀಡಿದ್ದು, ಇದನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಈ ಮಗುವಿನ ತಂದೆ ಯಾರು ಎಂದು ಬಾಲಕಿಯನ್ನು ಪ್ರಶ್ನಿಸಲಾಗಿದ್ದು, ಈ ವೇಳೆ ಆಕೆ ಎಲ್ಲಾ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ತನ್ನ ತಂದೆ ಕಳೆದೊಂದು ವರ್ಷದಿಂದ ಅತ್ಯಾಚಾರ ನಡೆಸುತ್ತಿದ್ದಾರೆ. ತಾಯಿ ಮನೆಯಲ್ಲಿ ಇಲ್ಲದಾಗ, ತಾನು ಮಲಗಿದ್ದಾಗ ಹೀಗೆ ತಂದೆ ತನಗೆ ಮನಸಾದಾಗೆಲ್ಲಾ ರಕ್ಕಸನಂತೆ ಮೇಲೆರಗುತ್ತಿದ್ದರು. ಹೀಗಾಗೇ ತಾನು ಗರ್ಭಿಣಿಯಾದೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
10 ವರ್ಷದ ಬಾಲಕಿ ಮೇಲೆ ಎರಗಿದ 8 ಕಾಮುಕರು; ಇದರಲ್ಲಿ 7 ಮಂದಿ ಅಪ್ರಾಪ್ತರು!
ವಿಚಾರಣೆ ನಡೆಸಿದ ಪೊಲೀಸರು ಈ ಪ್ರಕರಣವನ್ನು ಮಹಿಳಾ ಆಯೋಗಕ್ಕೆ ವಹಿಸಿದ್ದಾರೆ. ಅಲ್ಲದೇ ಬಾಲಕಿ ಹಾಗೂ ಮಗುವನ್ನು ಸುರಕ್ಷಿತ ಕೇಂದ್ರಕ್ಕೆ ರವಾನಿಸಿದ್ದಾರೆ. ಇನ್ನು ಆರೋಪಿಗೆ ಒಟ್ಟು ನಾಲ್ವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಮೂವರಿಗೆ ಮದುವೆಯಾಗಿದ್ದು, ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಉಳಿದೊಬ್ಬಳು ಮಗಳು ಹಾಗೂ ಹೆಂಡತಿಯೊಂದಿಗೆ ಆರೋಪಿ ಶಿಹೋರ್‌ನ ಸ್ಲಂ ಏರಿಯಾದಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.