
ಪಂಜಶೀರ್(ಸೆ.04): ಆಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ತಜಕಿಸ್ತಾನಕ್ಕೆ ಪರಾರಿಯಾಗಿದ್ದಾರೆ. ತಾಲಿಬಾನ್ ದಾಳಿ ಭೀತಿಯಿಂದ ದೇಶ ತೊರೆದಿದ್ದಾರೆ ಎಂದು ತಾಲಿಬಾನ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವರದಿ ಬೆನ್ನಲ್ಲೇ ಅಮರುಲ್ಲಾ ಸಲೇಹ್ ಆಫ್ಘಾನಿಸ್ತಾನ ತೊರೆದಿರುವ ವರದಿಗೆ ಸ್ಪಷ್ಟನೆ ನೀಡಿದ್ದಾರೆ. ತಾನು ಆಫ್ಘಾನಿಸ್ತಾನದಲ್ಲೇ ಇದ್ದೇನೆ ಎಂದಿದ್ದಾರೆ. ಇದೇ ವೇಳೆ ತಾಲಿಬಾನ್ ಉಗ್ರರು ಹಾಗೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧ ಗುಡುಗಿದ್ದಾರೆ.
ಪಂಜಶೀರ್ ಕಮಾಂಡರ್ ಜೊತೆ ತಜಕಿಸ್ತಾನಕ್ಕೆ ಹಾರಿದ ಆಫ್ಘಾನ್ ಹಂಗಾಮಿ ಅಧ್ಯಕ್ಷ ಸಲೇಹ್; ವರದಿ
ಆಫ್ಘಾನಿಸ್ತಾನ ತೊರೆದಿದ್ದೇನೆ ಅನ್ನೋ ವರದಿ ಸತ್ಯಕ್ಕೆ ದೂರವಾಗಿದೆ. ನಾನು ಎಲ್ಲೂ ಹೋಗಿಲ್ಲ, ಪಂಜಶೀರ್ ಕಣಿವೆಯಲ್ಲಿದ್ದೇನೆ. ಸದ್ಯ ಪರಿಸ್ಥಿತಿ ಉತ್ತಮವಾಗಿಲ್ಲ ಅನ್ನೋದು ನಿಜ. ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಉಗ್ರರ ಕೈವಶದಲ್ಲಿದ್ದೇವೆ. ಆದರೆ ಅಂತಿಮ ಕ್ಷಣದವರೆಗೆ ಹೋರಾಡುತ್ತೇನೆ. ನನ್ನ ನೆಲದಲ್ಲಿ ನಿಂತು ಹೋರಾಡುತ್ತೇನೆ ಎಂದು ಅಮರುಲ್ಲಾ ಸಲೇಹ್ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಅಮರುಲ್ಲಾ ಸಲೇಹ್ ಪಂಜಶೀರ್ ಕಣಿವೆಯಿಂದ ವಿಡಿಯೋ ಸಂದೇಶವನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದ ಹಿಂದೆ ಪಾಕಿಸ್ತಾನದ ನೇರವ ಕೈವಾಡವಿದೆ ಅನ್ನೋದನ್ನು ಮತ್ತೊಮ್ಮೆ ಹೇಳಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಕಾಬೂಲ್ ದಾಳಿಗೂ ಮುನ್ನ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವಿನ ಮಾತುಕತೆ ಕೂಡ ಬಹಿರಂಗವಾಗಿದೆ. ಈ ಮಾತುಕತೆಯಲ್ಲಿ ಅಶ್ರಫ್ ಘನಿ ಇದೇ ಮಾತನ್ನು ಹೇಳಿದ್ದಾರೆ. ಪಾಕಿಸ್ತಾನ ಬೆಂಬಲಿತ 10 ರಿಂದ 15,000 ಉಗ್ರರು ತಾಲಿಬಾನ್ ಜೊತೆ ಸೇರಿಕೊಂಡಿದ್ದಾರೆ. ಪಾಕಿಸ್ತಾನದ ನೇರ ಕೈವಾಡವಿದೆ ಎಂದು ಬೈಡನ್ ಜೊತೆ ಹೇಳಿದ್ದರು.
ಪಾಕ್ ಸೂಚನೆ ಬೆನ್ನಲ್ಲೇ ವರಸೆ ಬದಲಿಸಿದ ತಾಲಿಬಾನ್: ಕಾಶ್ಮೀರ ಮುಸ್ಲಿಮರಿಗೆ ಉಗ್ರರ ಬೆಂಬಲ!
ತಾಲಿಬಾನ್ ಅಟ್ಟಹಾಸ, ಆಫ್ಘಾನಿಸ್ತಾನದಲ್ಲಿ ಅಮಾಯಕರ ಸಾವು ಹಾಗೂ ಅತಂತ್ರ ಸ್ಥಿತಿಗೆ ಪಾಕಿಸ್ತಾನದ ನೇರ ಕೈವಾಡವಿದೆ ಅನ್ನೋದು ರಹಸ್ಯವಾಗಿರುವ ಮಾಹಿತಿಯಲ್ಲ. ಕಾಬೂಲ್ ಕೈವಶಕ್ಕೂ ಮುನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು ಇಲ್ಲಿ ಗಮನಿಸಬಹದು. ಆಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ಸರ್ಕಾರ ತೊಲಗಿ ತಾಲಿಬಾನ್ ಸರ್ಕಾರ ರೂಪುಗೊಂಡರೆ ಎಲ್ಲವೂ ಶಾಂತವಾಗಲಿದೆ ಎಂದು ಇಮ್ರಾನ್ ಖಾನ್ ಹೇಳಿದ್ದರು.
ತಾಲಿಬಾನ್ ಗೆಲುವು ಆಚರಿಸುವ ಭಾರತೀಯ ಮುಸ್ಲಿಮರು ಅಪಾಯಕಾರಿ; ನಾಸಿರುದ್ದೀನ್ ಶಾ!
ಆಗಸ್ಟ್ 15 ರಂದು ತಾಲಿಬಾನ್ ಉಗ್ರರು ಕಾಬೂಲ್ ಕೈವಶ ಮಾಡಿದ ಬೆನ್ನಲ್ಲೇ ಅಧ್ಯಕ್ಷ ಅಶ್ರಫ್ ಘನಿ ದಿಢೀರ್ ತಜಕಿಸ್ತಾನಕ್ಕೆ ತೆರಳಿದರು. ಅಲ್ಲಿಂದ ಯುಎಇ ಮಾನವೀಯತೆ ಆಧಾರದ ಮೇಲೆ ಅಶ್ರಫ್ ಘನಿಗೆ ಆಶ್ರಯ ನೀಡಿತು. ಘನಿ ನಿರ್ಗಮಿಸಿದ ಬಳಿಕ ಅಮರುಲ್ಲಾ ಸಲೇಹ ಹಂಗಾಮಿ ಅಧ್ಯಕ್ಷರಾಗಿದ್ದರು. ತಾಲಿಬಾನ್ ಅತೀಯಾದ ಒತ್ತಡಿಂದ ಸಲೇಹ್ ಪಂಜಶೀರ್‌ನ ಕಮಾಂಡೋಗಳ ಜೊತೆ 2 ವಿಮಾನದಲ್ಲಿ ತಜಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಅನ್ನೋ ವರದಿ ಪ್ರಕಟವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ