ಇಂಗ್ಲೆಂಡ್‌ ಪ್ರಜೆಗಳು ತಾಯ್ನಾಡಿಗೆ ಮರಳಲು ವಿಶೇಷ ವಿಮಾನ ವ್ಯವಸ್ಥೆ!

Published : Apr 11, 2020, 07:52 AM ISTUpdated : Apr 11, 2020, 07:55 AM IST
ಇಂಗ್ಲೆಂಡ್‌ ಪ್ರಜೆಗಳು ತಾಯ್ನಾಡಿಗೆ ಮರಳಲು ವಿಶೇಷ ವಿಮಾನ ವ್ಯವಸ್ಥೆ!

ಸಾರಾಂಶ

ಇಂಗ್ಲೆಂಡ್‌ ಪ್ರಜೆಗಳು ತಾಯ್ನಾಡಿಗೆ ಮರಳಲು ವಿಶೇಷ ವಿಮಾನ ವ್ಯವಸ್ಥೆ| ಭಾರತದಲ್ಲಿರುವ ತನ್ನ ಪ್ರಜೆಗಳ ತವರಿಗೆ ಕರೆಸಿಕೊಳ್ಳಲು ಇಂಗ್ಲೆಂಡ್‌ ಸರ್ಕಾರ ವಿಶೇಷ ಕಾಳಜಿ| ತನ್ನ ಪ್ರಜೆಗಳ ಕರೆಸಿಕೊಳ್ಳಲು ಇಂಗ್ಲೆಂಡ್‌ ಸರ್ಕಾರದಿಂದ ವಿಮಾನ ಬುಕ್ಕಿಂಗ್‌| ಈಗಾಗಲೇ (ಏ.8) 300 ಮಂದಿ ತವರಿಗೆ| ವಾರಾಂತ್ಯದೊಳಗೆ 12 ವಿಶೇಷ ವಿಮಾನ ಹಾರಾಟ ಖಚಿತ

ಬೆಂಗಳೂರು(ಏ.11): ಕೊರೋನಾ ಹರಡುವಿಕೆ ತಪ್ಪಿಸಲು ಕೇಂದ್ರ ಸರ್ಕಾರವೂ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದ್ದು, ಇದರ ನಡುವೆ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಸಿಲುಕಿರುವ ಬ್ರಿಟಿಷ್‌ ಪ್ರಜೆಗಳನ್ನು ತಾಯ್ನಾಡಿಗೆ ವಾಪಸ್‌ ಕರೆಸಿಕೊಳ್ಳಲು ವಿಶೇಷ ವಿಮಾನಗಳನ್ನು ಕಳಿಸಲು ಇಂಗ್ಲೆಂಡ್‌ ಮುಂದಾಗಿದೆ.

ಬೆಂಗಳೂರು, ಚೆನ್ನೈ, ಕೊಚ್ಚಿ ಹೈದರಾಬಾದ್‌ ಮತ್ತು ತಿರುವನಂತಪುರಂ ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಸಿಲುಕಿರುವ 3 ಸಾವಿರಕ್ಕೂ ಬ್ರಿಟಿಷ್‌ ಪ್ರಜೆಗಳನ್ನು 12 ಹೆಚ್ಚುವರಿ ವಿಶೇಷ ವಿಮಾನದ ಮೂಲಕ ಕರೆಸಿಕೊಳ್ಳಲು ಇಂಗ್ಲೆಂಡ್‌ ಬುಕ್ಕಿಂಗ್‌ ಆರಂಭಿಸಿದೆ.

ಏ.5ರಂದು ಗೋವಾ, ಮುಂಬೈ ಮತ್ತು ದೆಹಲಿ ಸೇರಿದಂತೆ ವಿವಿಧೆಡೆಯಿಂದ 19 ವಿಶೇಷ ವಿಮಾನಗಳ ಮೂಲಕ 5 ಸಾವಿರ ಬ್ರಿಟಿಷ್‌ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಬುಕ್ಕಿಂಗ್‌ ಆರಂಭಿಸಿದ್ದ ಇಂಗ್ಲೆಂಡ್‌, ಇದೀಗ ಏ.8 ರಿಂದ 20ರ ನಡುವೆ ತನ್ನ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳುತ್ತಿದೆ. ಮೊದಲ ವಿಶೇಷ ವಿಮಾನ ಗುರುವಾರ ಬೆಳಗ್ಗೆ ಲಂಡನ್‌ ತಲುಪಿದ್ದು, 317 ಬ್ರಿಟಿಷ್‌ ಪ್ರಜೆಗಳು ಇಂಗ್ಲೆಂಡ್‌ ಮುಟ್ಟಿದ್ದಾರೆ.

ಹಠಾತ್‌ ಮಳೆ,ಸಜ್ಜಾಗದ ಬೆಸ್ಕಾಂ: ವರ್ಕ್‌ ಫ್ರಂ ಹೋಂಗೆ ಪವರ್‌ ಕಟ್‌ ಕಾಟ!

ಇಂಗ್ಲೆಡಿನ ದಕ್ಷಿಣ ಏಷ್ಯಾ ಹಾಗೂ ಕಾಮನ್‌ವೆಲ್ತ್‌ ರಾಜ್ಯ ಖಾತೆ ಸಚಿವ ಲಾರ್ಡ್‌ಅಹ್ಮದ್‌ ಈ ಕುರಿತು ಹೇಳಿಕೆ ನೀಡಿದ್ದು, ಸಾವಿರಾರು ಬ್ರಿಟಿಷ್‌ ಪ್ರಜೆಗಳನ್ನು ಭಾರತದಿಂದ ವಾಪಸ್‌ ಕರೆಸಿಕೊಳ್ಳಲು ತಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಇದೊಂದು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಭಾರತ ಸರ್ಕಾರದೊಂದಿಗೆ ಸತತ ಮಾತುಕತೆ ಮೂಲಕ ನಮ್ಮ ಪ್ರಜೆಗಳನ್ನು ವಾಪಸ್‌ ಕರೆತರುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. 300ಕ್ಕೂ ಹೆಚ್ಚು ಪ್ರಜೆಗಳು ಗುರುವಾರ ಬೆಳಗ್ಗೆ ಗೋವಾದಿಂದ ತಾಯ್ನಾಡಿಗೆ ಬಂದಿಳಿದಿದ್ದಾರೆ. 1400ಕ್ಕೂ ಹೆಚ್ಚು ಪ್ರಜೆಗಳನ್ನು ಈ ವಾರಾಂತ್ಯದೊಳಗೆ 12 ವಿಶೇಷ ವಿಮಾನಗಳ ಮೂಲಕ ಹಾಗೂ ಮುಂದಿನ ವಾರವೂ ಸಾವಿರಾರು ಪ್ರಜೆಗಳನ್ನು ವಾಪಸ್‌ ಕರೆತರುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿರುವ ಪ್ರಭಾರಿ ಹೈಕಮಿಷನರ್‌ ನಾನ್‌ ಥಾಮ್ಸನ್‌ ಈ ಕುರಿತು ಹೇಳಿಕೆ ನೀಡಿದ್ದು, ಈಗಾಗಲೇ 12 ವಿಶೇಷ ವಿಮಾನಗಳ ಹಾರಾಟವು ಖಚಿತವಾಗಿದೆ. ಈ ದಿಶೆಯಲ್ಲಿ ನಾವು ಭಾರತ ಸರ್ಕಾರದ ಸಹಕಾರಕ್ಕೆ ಚಿರಋುಣಿಯಾಗಿದ್ದೇವೆ. ನಮ್ಮ ಪ್ರಜೆಗಳನ್ನು ಆದಷ್ಟುಬೇಗ ವಾಪಸ್‌ ತಾಯ್ನಾಡಿಗೆ ಕರೆಸಿಕೊಳ್ಳಲು ಪ್ರಕ್ರಿಯೆ ಇಂಗ್ಲಿಷ್‌ ಸರ್ಕಾರ ಪ್ರಾಧಾನ್ಯತೆ ನೀಡಿದೆ ಎಂದು ತಿಳಿಸಿದರು.

ಸೆಪ್ಟೆಂಬ​ರ್‌ಗೆ ಕೊರೋನಾ ತುತ್ತ​ತು​ದಿ​: ಪಂಜಾಬ್‌ ಸಿಎಂ ಸ್ಫೋಟಕ ಮಾಹಿ​ತಿ

ದಕ್ಷಿಣ ಭಾರತ ವಿವಿಧ ನಗರಗಳಿಂದ ಇಂಗ್ಲೆಂಡ್‌ಗೆ ತೆರಳಲಿರುವ ವಿಮಾನಗಳ ವೇಳಾಪಟ್ಟಿಬಿಡುಗಡೆ ಮಾಡಿದ್ದು, ಏ.20ರಂದು ಚೆನೈನಿಂದ ಬೆಂಗಳೂರು ಮಾರ್ಗವಾಗಿ ಇಂಗ್ಲೆಂಡ್‌ಗೆ ವಿಶೇಷ ವಿಮಾನ ಪ್ರಯಾಣಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಈ 6 ದೇಶಗಳಲ್ಲಿ ‘ಧುರಂಧರ್’ ಬ್ಯಾನ್; ಆದ್ರೂ ಕಲೆಕ್ಷನ್‌ಗೆ ಸ್ವಲ್ಪವೂ ಹೊಡೆತವಿಲ್ಲ, ಅದು ಹೇಗೆ..!
ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!