
ವಾಷಿಂಗ್ಟನ್(ಏ.09): ವಿಶ್ವದಾದ್ಯಂತ ಕೊರೋನಾ ಅಬ್ಬರಕ್ಕೆ ಅಪಾರ ಸಾವು ನೋವು ಸಂಭವಿಸಿದೆ. ಚೀನಾದ ವುಹಾನ್ ಎಂಬ ನಗರದಿಂದ ಉಟ್ಟಿಕೊಂಡ ಈ ಡೆಡ್ಲಿ ವೈರಸ್ ಯಾರನ್ನೂ ಬಿಟ್ಟಿಲ್ಲ. ಪುಟ್ಟ ರಾಷ್ಟ್ರ ಇಟಲಿಯನ್ನು ನಲುಗಿಸಿದ ಈ ಕೊರೋನಾ ವಿಶ್ವದ ದೊಡ್ಡಣ್ಣ ಅಮೆರಿಕನ್ನೂ ಕಂಗೆಡಿಸಿದೆ. ಪ್ರತಿ ದಿನ ಸಾವಿರಕ್ಕೂ ಅಧಿಕ ಮಂದಿ ಈ ಕೊರೋನಾಗೆ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಲಾರಂಭಿಸಿದೆ. ಹೀಗಿರುವಾಗ ಕೊರೋನಾ ಅಬ್ಬರದ ನಡುವೆ ಸಮಾಧಾನಕರ ವಿಚಾರವೂ ಬಂದೆರಗಿದೆ. ಕೊರೋನಾ ಸಾವಿನ ನಡುವೆ ಅನೇಕ ಮಂದಿ ಈ ವಿಚಾರವನ್ನೇ ಗಮನಿಸಲು ಮರೆತಿದ್ದಾರೆ.
ಹೌದು ವಿಶ್ವದಾದ್ಯಂತ ಬರೋಬ್ಬರಿ 1,519,571 ಮಂದಿಗೆ ಈ ಸೋಂಕು ತಗುಲಿದ್ದು, 88,550 ಮಂದಿ ಮೃತಪಟ್ಟಿದ್ದಾರೆ. ಹೀಗಿದ್ದರೂ ಈ ಸೋಂಕು ತಗುಲಿ ಗುಣಮುಖರಾದವರ ಸಂಖ್ಯೆ 331,011 ಇದೆ ಎಂಬುವುದದು ಅನೇಕರ ಗಮಗನಕ್ಕೆ ಬಂದಿಲ್ಲ. ಮೂರು ಲಕ್ಷಕ್ಕೂ ಅಧಿಕ ಮಂದಿ ಸಮರ್ಥವಾಗಿ ಕೊರೋನಾವನ್ನು ಎದುರಿಸಿ, ಅದನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್‌ಡೌನ್ ಮಧ್ಯೆ ಕಾಲ್‌ಗರ್ಲ್ಸ್ ಜೊತೆ ಸೆಕ್ಸ್ ಪಾರ್ಟಿ: ಬಯಲಾಯ್ತು 'ಸ್ಟಾರ್' ಬಂಡವಾಳ!
ಭಾರತದಲ್ಲಿ ಗುಣಮುಖರಾದವರೆಷ್ಟು?
ಇನ್ನು ಭಾರತದ ಪರಿಸ್ಥಿತಿ ಹೇಗಿದೆ ಎಂಬುವುದನ್ನು ಗಮನಿಸುವುದಾದರೆ, ಇಲ್ಲಿ 5734 ಪ್ರಕರಣಗಳು ದಾಖಲಾಗಿದ್ದು, 166 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ 472 ಮಂದಿ ಗುಣಮುಖರಾಗಿದ್ದಾರೆಂಬುವುದು ಗಮನಾರ್ಹ.
ಭಾರತ ಸೇರಿದಂತೆ ವಿಶ್ವದಾದ್ಯಂತ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ದೇಶ ವಾಸಿಗಳು ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದ ಬೆನ್ನಲ್ಲೇ ದೇಶದಾದ್ಯಂತ ಲಾಕ್‌ಡೌನ್ ಹೇರಿವೆ. ಈ ಮೂಲಕ ಜನರು ಓಡಾಡದಂತೆ ನಿಗಾ ವಹಿಸಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಖಡಕ್ ಆದೇಶ ನೀಡಲಾಗಿದೆ.
ಹಸಿವು ತಾಳಲಾರದೆ ಪಿಎಂ ಮೋದಿಗೆ ಫೋನ್ ಮಾಡಿದ ಅನಾಥರು: ಓಡೋಡಿ ಬಂದ ಅಧಿಕಾರಿಗಳು!
ಇಷ್ಟೇ ಅಲ್ಲದೇ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ವೈದ್ಯರು ಹಾಗೂ ದಾದಿಯರು ಹಗಲಿರುಳೆಂಬಂತೆ ಸೇವೆ ಸಲ್ಲಿಸುತ್ತಿದ್ದು, ಸೋಂಕಿತರು ಶೀಘ್ರ ಗುಣಮುಖರಾಗುವಲ್ಲಿ ಗಮನವಹಿಸುತ್ತಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ