ಅಯ್ಯೋ ಶಿವನೇ..! ದುಬೈನಿಂದ ಟೇಕಾಫ್‌ ಆದ ವಿಮಾನ 13 ಗಂಟೆ ಹಾರಾಡಿ ಮತ್ತೆ ಅಲ್ಲೇ ಲ್ಯಾಂಡ್‌ ಆಯ್ತು..!

Published : Jan 30, 2023, 05:07 PM ISTUpdated : Jan 30, 2023, 05:20 PM IST
ಅಯ್ಯೋ ಶಿವನೇ..! ದುಬೈನಿಂದ ಟೇಕಾಫ್‌ ಆದ ವಿಮಾನ 13 ಗಂಟೆ ಹಾರಾಡಿ ಮತ್ತೆ ಅಲ್ಲೇ ಲ್ಯಾಂಡ್‌ ಆಯ್ತು..!

ಸಾರಾಂಶ

ಪೈಲಟ್ ಸುಮಾರು 9,000-ಮೈಲಿ ಪ್ರಯಾಣವನ್ನು ಪೂರೈಸದೆ ಅರ್ಧದಾರಿಯಲ್ಲೇ ಯು-ಟರ್ನ್ ಮಾಡಿ ಮತ್ತೆ ದುಬೈಗೆ ವಿಮಾನವನ್ನು ಲ್ಯಾಂಡ್‌ ಮಾಡಿದ್ದಾರೆ. 

ದುಬೈ (ಜನವರಿ 30, 2023) : ನ್ಯೂಜಿಲೆಂಡ್‌ಗೆ ಎಮಿರೇಟ್ಸ್‌ ವಿಮಾನದಲ್ಲಿ ಹೊರಟಿದ್ದ ಪ್ರಯಾಣಿಕರು ಶಾಕ್‌ ಆಗಿದ್ದಾರೆ. ಇದಕ್ಕೆ ಕಾರಣ, ಶುಕ್ರವಾರ ಬೆಳಗ್ಗೆ ದುಬೈನಿಂದ ಹೊರಟ ಪ್ರಯಾಣಿಕರು, 13 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ವಿಮಾನವು ಮತ್ತೆ ದುಬೈ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್‌ ಆಗಿರುವ ಅಸಾಮಾನ್ಯ ಘಟನೆ ನಡೆದಿದೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.  EK448 ವಿಮಾನವು ದುಬೈ ಸ್ಥಳೀಯ ಕಾಲಮಾನ ಬೆಳಗ್ಗೆ ಸುಮಾರು 10:30 ಕ್ಕೆ ಟೇಕ್ ಆಫ್ ಆಗಿತ್ತು. ಇನ್ನು, ಪೈಲಟ್ ಸುಮಾರು 9,000-ಮೈಲಿ ಪ್ರಯಾಣವನ್ನು ಪೂರೈಸದೆ ಅರ್ಧದಾರಿಯಲ್ಲೇ ಯು-ಟರ್ನ್ ಮಾಡಿದ್ದಾರೆ. ಅಲ್ಲದೆ, ಶನಿವಾರ ಮಧ್ಯರಾತ್ರಿಯ ಸುಮಾರಿಗೆ ವಿಮಾನವು ಅಂತಿಮವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಫ್ಲೈಟ್‌ ಅವೇರ್‌ ಮಾಹಿತಿ ನೀಡಿದೆ.

ಇದ್ಯಾಕಪ್ಪಾ, ವಿಮಾನದ ಪೈಲಟ್‌ಗಳು (Flight Pilots) ಹೀಗೆ ಮಾಡಿದರು ಅನ್ಕೊಂಡ್ರಾ..? ಈ ವಿಮಾನ ಹೋಗಬೇಕಿದ್ದ ನ್ಯೂಜಿಲೆಂಡ್‌ನ (New Zealand) ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ (Auckland Airport) ತೀವ್ರ ಪ್ರವಾಹ (Flood) ಉಂಟಾಗಿ ವಾರಾಂತ್ಯದಲ್ಲಿ (Weekend) ವಿಮಾನ ನಿಲ್ದಾಣವನ್ನು (Airport) ಮುಚ್ಚಲಾಗಿದೆ. ಈ ಹಿನ್ನೆಲೆ ಎಮಿರೇಟ್ಸ್‌ (Emirates) ವಿಮಾನ ಪುನ: ದುಬೈಗೆ (Dubai) ಮರಳಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ವಿಮಾನ ಹಾರಾಟದಲ್ಲಿ ಸಾಧನೆ ತೋರಿದ ಭಾರತೀಯ ಮಹಿಳೆಯರು…

ಇನ್ನು, ಆಕ್ಲೆಂಡ್‌ ವಿಮಾನ ನಿಲ್ದಾಣ ಮುಚ್ಚಿರುವ ಬಗ್ಗೆ ಆಕ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಇದು ಅತ್ಯಂತ ಹತಾಶಕರ ಪರಿಸ್ಥಿತಿ, ಆದರೆ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಆಕ್ಲೆಂಡ್ ವಿಮಾನ ನಿಲ್ದಾಣವು ನಮ್ಮ ಅಂತಾರಾಷ್ಟ್ರೀಯ ಟರ್ಮಿನಲ್‌ಗೆ ಹಾನಿಯನ್ನು ನಿರ್ಣಯಿಸುತ್ತಿದೆ ಮತ್ತು ದುರದೃಷ್ಟವಶಾತ್ ಇಂದು ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ. ಇದು ಅತ್ಯಂತ ನಿರಾಶಾದಾಯಕವಾಗಿದೆ ಎಂದು ನಮಗೆ ತಿಳಿದಿದೆ, ಆದರೆ ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಇದಲ್ಲದೆ, ಜನವರಿ 29 ರಂದು ಬೆಳಿಗ್ಗೆ 5 ಗಂಟೆಯವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿಂದ ಡಿಪಾರ್ಚರ್‌ ಆಗುವುದಿಲ್ಲ ಎಂದೂ ನ್ಯೂಜಿಲೆಂಡ್‌ನ ಆಕ್ಲೆಂಡ್‌ ವಿಮಾನ ಅಧಿಕಾರಿಗಳು ಹೇಳಿದರು. ಜನವರಿ 29 ರ ಭಾನುವಾರ ಬೆಳಿಗ್ಗೆ 7 ಗಂಟೆಯವರೆಗೆ ಆಕ್ಲೆಂಡ್ ವಿಮಾನ ನಿಲ್ದಾಣಕ್ಕೆ ಯಾವುದೇ ಅಂತರರಾಷ್ಟ್ರೀಯ ಪ್ರಯಾಣಿಕರ ಆಗಮನವಿಲ್ಲ ಎಂದೂ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: IndiGo ವಿಮಾನ ತುರ್ತು ನಿರ್ಗಮನ ದ್ವಾರ ತೆಗೆಯಲು ಹೋದ ಪ್ರಯಾಣಿಕನ ಮೇಲೆ ಕೇಸ್‌ ದಾಖಲು..!

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ವಿಡಿಯೋಗಳ ಪ್ರಕಾರ ವಿಮಾನ ನಿಲ್ದಾಣವು ಸಂಪೂರ್ಣವಾಗಿ ಜಲಾವೃತಗೊಂಡ ನಂತರ ಭಾನುವಾರ ಕಾರ್ಯಾಚರಣೆಯನ್ನು ಪುನಾರಂಭಿಸಿದೆ. ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ನೀರಿಗಿಳಿದಿದ್ದರು. ಇದು ಸಹ ವಿಡಿಯೋದಲ್ಲಿ ಸೆರೆಯಾಗಿತ್ತು.

ಆಕ್ಲೆಂಡ್ ಶುಕ್ರವಾರ ದಾಖಲೆಯ ಅತ್ಯಂತ ಕೆಟ್ಟ ಮಳೆಗೆ ಸಾಕ್ಷಿಯಾಯಿತು ಎಂದು ಬಿಬಿಸಿ ವರದಿ ಮಾಡಿದೆ. ನ್ಯೂಜಿಲೆಂಡ್‌ನ ಅತಿ ದೊಡ್ಡ ನಗರದಲ್ಲಿ ಈ ವಾರ ಹೆಚ್ಚು ಭಾರಿ ಮಳೆಯಾಗುವ ಕಾರಣ ತುರ್ತು ಪರಿಸ್ಥಿತಿ ಮುಂದುವರಿದಿದೆ. ಇಲ್ಲಿನ ಭೀಕರ ಪ್ರವಾಹದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದೂ ತಿಳಿದುಬಂದಿದೆ. ಸೊಂಟದ ಆಳದ ನೀರಿನಲ್ಲಿ ಸಿಲುಕಿರುವ ನಿವಾಸಿಗಳನ್ನು ಕಯಾಕ್‌ಗಳಲ್ಲಿ ರಕ್ಷಣೆ ಮಾಡುತ್ತಿರುವುದನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೊಗಳಲ್ಲಿ ನೋಡಬಹುದಾಗಿದೆ. 

ಇದನ್ನೂ ಓದಿ: ಈ ನಗರದಲ್ಲಿ ಬಸ್ಸೇ ಇಲ್ಲ..ಜನರು ಕಾಲೇಜು, ಕಚೇರಿಗೆ ಹೋಗೋದು ವಿಮಾನದಲ್ಲೇ !

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!