ತನ್ನ ಮಾನಸಿಕ ಆರೋಗ್ಯ ಹಾಗೂ ಸುರಕ್ಷತೆ ಕುರಿತು ಜನರು ಕಳವಳ ವ್ಯಕ್ತಪಡಿಸುತ್ತಿದ್ದರೂ ತನ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಆಲೋಚನೆ ಇಲ್ಲ ಎಂದು ಎಲಾನ್ ಮಸ್ಕ್ ಟ್ವಿಟ್ಟರ್ ಸ್ಪೇಸ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಜಗತ್ತಿನ ನಂ. 1 ಶ್ರೀಮಂತ ಅಂದರೆ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಸ್ವಾಧೀನಪಡಿಸಿಕೊಂಡ ಬಳಿಕ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಸಾವಿರಾರು ಟ್ವಿಟ್ಟರ್ ಸಿಬ್ಬಂದಿಯನ್ನು ಕಿತ್ತೊಗೆದಿದ್ದು, ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲು ಹೊರಟ ಕಾರಣಕ್ಕೂ ಟೀಕೆ ವ್ಯಕ್ತವಾಗುತ್ತಿದೆ. ಬ್ಲೂ ಟಿಕ್ (Blue Tick) ಹೊಂದಿರುವವರಿಗೆ ಶುಲ್ಕ ವಿಧಿಸುವ ವಿಚಾರದಲ್ಲೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ಅವರ ಮಾನಸಿಕ ಆರೋಗ್ಯ (Mental Health) ಹಾಗೂ ಇತರೆ ವಿಚಾರಗಳಲ್ಲೂ ಎಲಾನ್ ಮಸ್ಕ್ ಮೇಲೆ ಹಲವರು ನಾನಾ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರ ಈ ಊಹಾಪೋಹಗಳಿಗೆ ಹಾಗೂ ತನ್ನ ಮಾನಸಿಕ ಆರೋಗ್ಯದ ಬಗ್ಗೆ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್ ಸ್ಪಷ್ಟನೆ ನೀಡಿದ್ದಾರೆ.
ತನ್ನ ಮಾನಸಿಕ ಆರೋಗ್ಯ ಹಾಗೂ ಸುರಕ್ಷತೆ ಕುರಿತು ಜನರು ಕಳವಳ ವ್ಯಕ್ತಪಡಿಸುತ್ತಿದ್ದರೂ ತನ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಎಲಾನ್ ಮಸ್ಕ್ ಟ್ವಿಟ್ಟರ್ ಸ್ಪೇಸ್‌ನಲ್ಲಿ (Twitter Space) ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ಸ್ಪೇಸ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಕೇಳುಗರನ್ನು ಹೊಂದಿದ್ದ ವೇಳೆ, ಒಬ್ಬರು ಟ್ವಿಟ್ಟರ್‌ನ ಹೊಸ ಬಾಸ್ ಅನ್ನು ನೀವು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ (Suicidal) ಹೊಂದಿದ್ದೀರಾ ಅಥವಾ ಪ್ರವೃತ್ತಿ ಹೊಂದಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಎಲಾನ್ ಮಸ್ಕ್, ನನಗೆ ಯಾವುದೇ ಆತ್ಮಹತ್ಯೆಯ ಆಲೋಚನೆಗಳಿಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದು ನಿಜವಲ್ಲ ಎಂದು ಉತ್ತರಿಸಿದ್ದಾರೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ' ದಿ ಟ್ವಿಟರ್ ಫೈಲ್ಸ್' (The Twitter Files) ವಿವಾದದ ನಡುವೆ ಬಿಲಿಯನೇರ್ ಸುರಕ್ಷತೆಯ ಬಗ್ಗೆ ಕಳವಳಗಳು ಹುಟ್ಟಿಕೊಂಡ ಬೆನ್ನಲ್ಲೇ ವ್ಯಕ್ತಿಯೊಬ್ಬರು ಇಂತಹ ಪ್ರಶ್ನೆ ಕೇಳಿದ್ದಾರೆ.
undefined
ಇದನ್ನು ಓದಿ: ಎಲಾನ್ ಮಸ್ಕ್ ಹೊಸ ಸಾಹಸ, ಮಾನವನ ಮೆದುಳಿಗೆ ಚಿಪ್!
ಟ್ವಿಟ್ಟರ್ ಸ್ಪೇಸ್‌ನಲ್ಲಿ ಲೈವ್ ಪ್ರಶ್ನೋತ್ತರದ ಸಮಯದಲ್ಲಿ, ಸೆನ್ಸಾರ್‌ಶಿಪ್ ವಿಚಾರಕ್ಕೆ ಬಂದಾಗ ರಿಪಬ್ಲಿಕನ್ನರಿಗಿಂತ ಟ್ವಿಟ್ಟರ್ ಡೆಮೋಕ್ರಾಟ್‌ಗಳಿಗೆ ಒಲವು ತೋರುತ್ತದೆ ಎಂದು ಟ್ವಿಟ್ಟರ್ ಬಾಸ್ ಎಲಾನ್ ಮಸ್ಕ್ ಸೂಚಿಸಿದ್ದರು. ಇದು ಖಂಡಿತವಾಗಿಯೂ ವಾಸ್ತವ ಸಂಗತಿಯಾಗದಿರಬಹುದು. ಆದರೂ, ಟ್ವಿಟ್ಟರ್‌ನಲ್ಲಿ ಡೆಮೋಕ್ರಾಟ್‌ಗಳು ಮತ್ತು ಲೆಫ್ಟಿಸ್ಟ್‌ಗಳನ್ನು ಸೆನ್ಸಾರ್ ಮಾಡದಿದ್ದರೂ, ರಿಪಬ್ಲಿಕನ್ ಮತ್ತು ರೈಟಿಸ್ಟ್‌ಗಳನ್ನು ಸೆನ್ಸಾರ್ ಮಾಡುವ ಸಮಯವಿತ್ತು ಎಂದು ಟ್ವಿಟ್ಟರ್ ಬಾಸ್ ಹೇಳಿದ್ದಾರೆ. ಈ ವಿಷಯಗಳ ಕುರಿತು ಟ್ವಿಟ್ಟರ್ ಈ ಹಿಂದೆ ಫಾಲೋ ಮಾಡುತ್ತಿದ್ದ ಡಬಲ್ ಸ್ಟ್ಯಾಂಡರ್ಡ್ ಕುರಿತೂ ಅವರು ಮಾತನಾಡಿದ್ದರು.
ಇನ್ನು, ಎಲಾನ್ ಮಸ್ಕ್, ಈ ಹಿಂದೆಯೂ ತಾನು ನಿಗೂಢ ಸನ್ನಿವೇಶಗಳಿಂದ ಸಾಯುವ ಕುರಿತು ಸಹ ಮಾತನಾಡಿದ್ದರು. ನಾನು ನಿಗೂಢ ಸಂದರ್ಭಗಳಲ್ಲಿ ಸತ್ತರೆ, ನಿಮಗೆ ತಿಳಿದಿರುವುದು ಸಂತೋಷವಾಗಿದೆ ಎಂದೂ ಎಲಾನ್ ಮಸ್ಕ್ ಈ ವರ್ಷದ ಮೇ ತಿಂಗಳಲ್ಲೇ ಟ್ವೀಟ್ ಮಾಡಿದ್ದು, ಹಲವರ ಅಚ್ಚರಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಟ್ವಿಟರ್ ಖರೀದಿಸಿ ಸಂಭ್ರಮಿಸಿದ ಮಸ್ಕ್‌ಗೆ ಶಾಕ್, 2022ರಲ್ಲಿ ಪ್ರತಿ ದಿನ 2,500 ಕೋಟಿ ರೂ ಲಾಸ್!
ಮಾಜಿ ಒಲಿಂಪಿಯನ್ ಕೈಟ್ಲಿನ್ ಜೆನ್ನರ್ (Caitlyn Jenner) ಅವರು ಟ್ವೀಟ್‌ನಲ್ಲಿ ಎಲಾನ್ ಮಸ್ಕ್ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದವರಲ್ಲಿ ಒಬ್ಬರು: “ನೀವು ಭಾರಿ ಭದ್ರತೆಯಿಂದ ಸುತ್ತುವರೆದಿರುವಿರಿ ಮತ್ತು ಅತ್ಯಂತ ಸುರಕ್ಷಿತವಾದ ಬಹಿರಂಗಪಡಿಸದ ಸ್ಥಳದಲ್ಲಿರುತ್ತೀರಿ ಎಂದು ನಾನು ಭಾವಿಸುತ್ತೇನೆ - ನೀವು ಕೆಲವು ಕೆಟ್ಟ ಜನರಿಗೆ ಸಾರ್ವಜನಿಕ ಶತ್ರುವಾಗಿ ನಂಬರ್ ಒನ್ ಆಗಿದ್ದೀರಿ, ನಾನು ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಮತ್ತು ನಿಮ್ಮ ಧೈರ್ಯಕ್ಕಾಗಿ ಧನ್ಯವಾದಗಳು! ನಮ್ಮ ಸಮಾಜದಲ್ಲಿ ನಮಗೆ ಹೆಚ್ಚು ಎಲಾನ್ ಮಸ್ಕ್ ರಂತಹವರು ಬೇಕು ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಹಂಟರ್ ಬಿಡೆನ್ ಅವರ ಲ್ಯಾಪ್‌ಟಾಪ್‌ಗೆ ಸಂಬಂಧಿಸಿದ ಸುದ್ದಿಗಳನ್ನು ಸೆನ್ಸಾರ್ ಮಾಡುವ ನಿರ್ಧಾರದ ಹಿಂದಿನ ಚಿಂತನೆಯನ್ನು ವಿವರಿಸುವ ಟ್ವೀಟ್‌ಗಳ ಸರಣಿಯನ್ನು 'ದಿ ಟ್ವಿಟ್ಟರ್ ಫೈಲ್‌ಗಳು’ ಎಂಬ ಖಾತೆಯಲ್ಲಿ ಸ್ವತಂತ್ರ ಲೇಖಕ ಮತ್ತು ಪತ್ರಕರ್ತ ಮ್ಯಾಟ್ ತೈಬ್ಬಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Twitterಗೆ ಮತ್ತಷ್ಟು ಜನ ವಿದಾಯ: ಹಲವು ಕಡೆ ಕಚೇರಿಗಳೇ ಬಂದ್..!