ಅಮೆರಿಕ-ಚೀನಾ ತೆರಿಗೆ ಯುದ್ಧ ಬೆನ್ನಲ್ಲೇ ಮಸ್ಕ್‌ನಿಂದ ಟ್ರಂಪ್‌ಗೆ ವ್ಯಾಪಾರ ಸಲಹೆ: ಏನಿದು ಹೊಸ ಪ್ಲಾನ್?

ಅಮೆರಿಕ ಮತ್ತು ಯುರೋಪ್ ನಡುವೆ ಶೂನ್ಯ ಸುಂಕದ ವ್ಯಾಪಾರ ವಲಯವನ್ನು ರಚಿಸುವ ಮೂಲಕ ವ್ಯಾಪಾರವನ್ನು ಸುಲಭಗೊಳಿಸಬಹುದು ಎಂದು ಎಲೋನ್ ಮಸ್ಕ್ ಸಲಹೆ ನೀಡಿದ್ದಾರೆ. ಟ್ರಂಪ್ ಅವರ ಸುಂಕ ನೀತಿಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಇದು ಒಂದು ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಪ್ರಪಂಚದಾದ್ಯಂತ ದೇಶಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವ್ಯಾಪಾರ ಯುದ್ಧವನ್ನು ಮುಂದುವರಿಸಿರುವ ಈ ಸನ್ನಿವೇಶದಲ್ಲಿ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ವ್ಯಾಪಾರ ಜಗತ್ತಿಗೆ ಕೇವಲ ಒಗಟಲ್ಲದೆ, ಭವಿಷ್ಯದ ಸಾಧ್ಯತೆಗಳನ್ನು ತೆರೆಯುವ ಒಂದು ದಾರ್ಶನಿಕ ದೃಷ್ಟಿಕೋನವಾಗಿದೆ. ಅದೇನೆಂದು ಇಲ್ಲಿ ತಿಳಿಯೋಣ.

ಎಲೋನ್ ಮಸ್ಕ್ ಅವರ ಪ್ರಸ್ತಾಪ

Latest Videos

ಇತ್ತೀಚೆಗೆ ಇಟಲಿಯ ಲೀಗ್ ಪಕ್ಷದ ನಾಯಕ ಮ್ಯಾಟಿಯೊ ಸಾಲ್ವಿನಿ ಅವರೊಂದಿಗೆ ಮಾತನಾಡುತ್ತಾ, ಎಲೋನ್ ಮಸ್ಕ್ ಅವರು ಯುಎಸ್ ಮತ್ತು ಯುರೋಪ್ ನಡುವಿನ ವ್ಯಾಪಾರವು ಸಂಪೂರ್ಣವಾಗಿ ಮುಕ್ತವಾಗಿರಬೇಕು ಎಂದು ಪ್ರತಿಪಾದಿಸಿದರು. ಅಂದರೆ, ಶೂನ್ಯ ಸುಂಕದ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಎರಡೂ ಖಂಡಗಳ ನಡುವೆ 'ಮುಕ್ತ ವ್ಯಾಪಾರ ವಲಯ' ರಚಿಸಬಹುದು ಎಂಬುದು ಅವರ ಕಲ್ಪನೆ. ಇದು ಅಮೆರಿಕ ಮತ್ತು ಯುರೋಪ್ ನಡುವಿನ ವ್ಯಾಪಾರವನ್ನು ಹೆಚ್ಚು ಸುಲಭ, ಪಾರದರ್ಶಕ ಮತ್ತು ಪರಸ್ಪರ ಪ್ರಯೋಜನಕಾರಿಯಾಗಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Trump tax war: ತೆರಿಗೆ ಏರಿಕೆ ಮೊದಲೇ ವಸ್ತುಗಳ ಖರೀದಿಗೆ ಮುಗಿಬಿದ್ದ ಅಮೆರಿಕನ್ನರು!

ಮಸ್ಕ್ ಅವರ ಮಾತುಗಳಲ್ಲಿ ಹೇಳುವುದಾದರೆ, 'ಅಮೆರಿಕ ಮತ್ತು ಯುರೋಪ್ ನಡುವೆ ಶೂನ್ಯ ಸುಂಕದ ಒಪ್ಪಂದವಾಗುವ ಸಾಧ್ಯತೆ ಇದೆ ಎಂದು ನಾನು ಭಾವಿಸುತ್ತೇನೆ. ಇದು ಎರಡೂ ಪ್ರದೇಶಗಳಲ್ಲಿ ವ್ಯಾಪಾರಕ್ಕೆ ಹೊಸ ಉತ್ತೇಜನ ನೀಡುತ್ತದೆ. ಇದರ ಜೊತೆಗೆ, ಎರಡೂ ಕ್ಷೇತ್ರಗಳಲ್ಲಿ ಜನರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ದೊರೆತರೆ, ಅದು ಮತ್ತೊಂದು ಪ್ರಗತಿಶೀಲ ಹೆಜ್ಜೆಯಾಗಲಿದೆ ಎಂದು ಅವರು ನಂಬಿದ್ದಾರೆ. ಈ ಸಲಹೆಯನ್ನು ಅವರು ಅಧ್ಯಕ್ಷ ಟ್ರಂಪ್ ಅವರ ಮುಂದೆಯೂ ಮಂಡಿಸಿದ್ದಾಗಿ ಎಂದು ಮಸ್ಕ್ ತಿಳಿಸಿದ್ದಾರೆ.

ಟ್ರಂಪ್ ಅವರ ವ್ಯಾಪಾರ ನೀತಿಯ ಪರಿಣಾಮವೇನು?

ಡೊನಾಲ್ಡ್ ಟ್ರಂಪ್ ಅವರು ಇಟಲಿ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದಾರೆ. ಈ ಕ್ರಮವು ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಇದು ಯುರೋಪಿಯನ್ ದೇಶಗಳೊಂದಿಗಿನ ವ್ಯಾಪಾರ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಸುಂಕಗಳಿಂದಾಗಿ ಭವಿಷ್ಯದಲ್ಲಿ ಯುರೋಪ್ ಮತ್ತು ಅಮೆರಿಕ ನಡುವಿನ ವ್ಯಾಪಾರ ಚಟುವಟಿಕೆಗಳು ಕುಂಠಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಸವಾಲಿನಿಂದ ಹೊರಬರಲು ಶೂನ್ಯ ಸುಂಕ ನೀತಿಯನ್ನು ಅಳವಡಿಸಿಕೊಳ್ಳುವುದು ಒಂದು ಪರಿಹಾರವಾಗಬಹುದು ಎಂದು ಮಸ್ಕ್ ಸೂಚಿಸುತ್ತಾರೆ. ಇದು ವ್ಯಾಪಾರವನ್ನು ಉತ್ತೇಜಿಸುವುದರ ಜೊತೆಗೆ ಎರಡೂ ಪಕ್ಷಗಳಿಗೆ ಆರ್ಥಿಕ ಪ್ರಯೋಜನವನ್ನು ಒದಗಿಸುತ್ತದೆ ಎಂಬುದು ಅವರ ವಾದ.

ಎಲೋನ್ ಮಸ್ಕ್ ಮತ್ತು ಯುರೋಪಿಯನ್ ಬಲಪಂಥೀಯ ಪಕ್ಷಗಳ ಸಂಬಂಧ

ಎಲೋನ್ ಮಸ್ಕ್ ಅವರು ಯುರೋಪಿನ ಬಲಪಂಥೀಯ ಪಕ್ಷಗಳಾದ ಇಟಲಿಯ 'ಬ್ರದರ್ಸ್ ಆಫ್ ಇಟಲಿ', ಮ್ಯಾಟಿಯೊ ಸಾಲ್ವಿನಿಯ 'ಲೀಗ್ ಪಾರ್ಟಿ' ಮತ್ತು ಜರ್ಮನಿಯ 'ಅಫ್‌ಡಿ' ಪಕ್ಷಗಳನ್ನು ಬೆಂಬಲಿಸುತ್ತಿರುವುದು ಸುದ್ದಿಯಾಗಿದೆ. ಈ ಪಕ್ಷಗಳ ಕಟ್ಟುನಿಟ್ಟಾದ ವಲಸೆ ನೀತಿಗಳು ಮತ್ತು ರಾಷ್ಟ್ರೀಯತೆಯ ಒತ್ತು ವಿವಾದಾತ್ಮಕವಾಗಿದ್ದರೂ, ಮಸ್ಕ್ ಅವರು ಈ ದೇಶಗಳೊಂದಿಗಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಮೂಲಕ ಆರ್ಥಿಕ ಚೇತರಿಕೆ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ-ಚೀನಾ ಟ್ರೇಡ್‌ ವಾರ್‌ ನಡುವೆ, ಮೂರು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾತೈಲದ ಬೆಲೆ!

ಮುಂದೇನು?

ಟ್ರಂಪ್ ಅವರ ಸುಂಕ ನೀತಿಯು ಜಾಗತಿಕ ವ್ಯಾಪಾರದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿರುವಾಗ, ಎಲೋನ್ ಮಸ್ಕ್ ಅವರ ಶೂನ್ಯ ಸುಂಕದ ಮುಕ್ತ ವ್ಯಾಪಾರ ಪ್ರಸ್ತಾಪವು ಯುರೋಪ್ ಮತ್ತು ಅಮೆರಿಕ ನಡುವಿನ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡುತ್ತದೆ. ಈ ಕಲ್ಪನೆಯು ಯಶಸ್ವಿಯಾದರೆ, ಎರಡೂ ಖಂಡಗಳ ಆರ್ಥಿಕತೆಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ. ಆದರೆ, ಇದಕ್ಕೆ ರಾಜಕೀಯ ಒಪ್ಪಿಗೆ ಮತ್ತು ಸಹಕಾರ ಅಗತ್ಯವಾಗಿದೆ, ಇದು ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಒಳಗೊಂಡಿದೆ.

click me!