ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್‌? ಟ್ವಿಟರ್‌ಗೆ ಹೊಸ CEO ಹುಡುಕಿದ ಎಲೋನ್ ಮಸ್ಕ್ !

Published : May 03, 2022, 04:09 PM ISTUpdated : May 03, 2022, 04:12 PM IST
 ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್‌? ಟ್ವಿಟರ್‌ಗೆ ಹೊಸ CEO ಹುಡುಕಿದ ಎಲೋನ್ ಮಸ್ಕ್ !

ಸಾರಾಂಶ

* ಟ್ವಿಟರ್‌ ಖರೀದಿಸಿದ ವಿಶ್ವದ ನಂಬರ್ 1 ಶ್ರೀಮಂತ ಎಲೋನ್ ಮಸ್ಕ್' * ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್‌, ಟ್ವಿಟರ್‌ಗೆ ಹೊಸ CEO * ಪರಾಗ್ ಕೆಳಗಿಳಿಸಿದರೆ ಎಲೋನ್ ಮಸ್ಕ್ $ 42 ಮಿಲಿಯನ್ ಪರಿಹಾರವನ್ನು ಪಾವತಿಸಬೇಕಾಗುತ್ತದೆ

ವಾಷಿಂಗ್ಟನ್(ಮೇ.03): ಎಲೋನ್ ಮಸ್ಕ್ ಅವರು ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರನ್ನು ತೆಗೆದುಹಾಕಲು ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ವರದಿಯ ಪ್ರಕಾರ, ಟೆಸ್ಲಾ ಸಿಇಒ ಈ ತಿಂಗಳ ಆರಂಭದಲ್ಲಿ ಟ್ವಿಟರ್ ಅಧ್ಯಕ್ಷ ಬ್ರೆಟ್ ಟೇಲರ್‌ ಬಳಿ ತನಗೆ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿ Twitter ನ ಪ್ರಸ್ತುತ ನಿರ್ವಹಣೆ ಮೇಲೆ ನಂಬಿಕೆ ಇಲ್ಲ ಎಂದಿದ್ದರಂತೆ. ಇನ್ನು ಪರಾಗ್ ಅಗರ್ವಾಲ್ ಕಳೆದ ವರ್ಷ ಟ್ವಿಟರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು ಎಂಬುವುದು ಉಲ್ಲೇಖನೀಯ. ಆದರೆ ಎಲೋನ್ ಮಸ್ಕ್ ಅವರ ಟ್ವಿಟರ್ ಖರೀದಿಯೊಂದಿಗೆ ಎಲೋನ್ ಮಸ್ಟ್ ಅವರಿಇಗೆ ಗೇಟ್‌ಪಾಸ್‌ ನೀಡಲು ಚಿಂತಿಸಿದ್ದಾರೆ. ಮಸ್ಕ್ ಟ್ವಿಟರ್ ಖರೀದಿಸಿದಾಗಿನಿಂದ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್‌ನ ಭಾರತೀಯ ಮೂಲದ ಸಿಇಒ ಬಗ್ಗೆ ನಾನಾ ವದಂತಿಗಳು ಹರಡುತ್ತಿವೆ.

ಹೊಸ ಸಿಇಒ ಹುಡುಕಾಟ ಮುಗಿದಿದೆ

ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿಯ ಪ್ರಕಾರ, ಎಲೋನ್ ಮಸ್ಕ್ ಅವರ ಟ್ವಿಟರ್‌ನೊಂದಿಗೆ $ 44 ಬಿಲಿಯನ್ ಒಪ್ಪಂದ ಪೂರ್ಣಗೊಂಡ ನಂತರ ಪರಾಗ್ ಅಗರ್ವಾಲ್ ಅವರನ್ನು ಟ್ವಿಟರ್ ಸಿಇಒ ಹುದ್ದೆಯಿಂದ ತೆಗೆದುಹಾಕಲಾಗುತ್ತದೆ. ಅಗರ್ವಾಲ್ ಬದಲಿಗೆ ಹೊಸ ವ್ಯಕ್ತಿಗೆ ಟ್ವಿಟರ್ ಸಿಇಒ ಕಮಾಂಡ್ ನೀಡಲಾಗುವುದು. ಟ್ವಿಟರ್‌ನ ಹೊಸ ಸಿಇಒಗಾಗಿ ಎಲೋನ್ ಮಸ್ಕ್ ಹುಡುಕಾಟವನ್ನು ಸಹ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಟ್ವಿಟರ್‌ನ ನೂತನ ಸಿಇಒ ಆಗಲಿರುವ ವ್ಯಕ್ತಿಯ ಹೆಸರನ್ನು ಮಸ್ಕ್ ಈವರೆಗೂ ರಹಸ್ಯವಾಗಿರಿಸಿದ್ದಾರೆ.

Elon Musk Tips ಕಾರ್ಮಿಕರ ದಿನದಂದು ಸಂಪತ್ತು ಹೆಚ್ಚಿಸುವ ಟಿಪ್ಸ್ ನೀಡಿದ ವಿಶ್ವದ ನಂ.1 ಶ್ರೀಮಂತ ಮಸ್ಕ್!

ಎಲೋನ್ ಮಸ್ಕ್ $ 42 ಮಿಲಿಯನ್ ಪರಿಹಾರವನ್ನು ಪಾವತಿಸಬೇಕಾಗುತ್ತದೆ

ಆದಾಗ್ಯೂ, ಪರಾಗ್ ಅಗರ್ವಾಲ್ ಅವರನ್ನು ಟ್ವಿಟರ್‌ನಿಂದ ತೆಗೆದುಹಾಕಿದರೆ ಎಲೋನ್ ಮಸ್ಕ್ ನಷ್ಟವನ್ನು ಭರಿಸಬೇಕಾಗುತ್ತದೆ. ಏಕೆಂದರೆ ನಿಯಮಗಳ ಪ್ರಕಾರ, ಪರಾಗ್ ಅಗರ್ವಾಲ್ ಅವರನ್ನು 12 ತಿಂಗಳ ಮೊದಲು ಅಂದರೆ ನವೆಂಬರ್ 2022 ರ ಮೊದಲು ಟ್ವಿಟರ್ ಸಿಇಒ ಹುದ್ದೆಯಿಂದ ತೆಗೆದುಹಾಕಿದರೆ, ಎಲೋನ್ ಮಸ್ಕ್ ಅವರು ಪರಾಗ್ ಅಗರ್ವಾಲ್‌ಗೆ $ 42 ಮಿಲಿಯನ್ (322 ಕೋಟಿ ರೂ.) ಪರಿಹಾರವನ್ನು ಪಾವತಿಸಬೇಕಾಗುತ್ತದೆ.

ಕಳೆದ ಶುಕ್ರವಾರ ಪರಾಗ್ ಅಗರ್ವಾಲ್ ಟ್ವಿಟರ್ ಉದ್ಯೋಗಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲಿ ಪರಾಗ್ ಅಗರ್ವಾಲ್ ಟ್ವಿಟರ್ ಉದ್ಯೋಗಿಗಳ ಕೋಪಕ್ಕೆ ತುತ್ತಾಗಿದ್ದಾರೆ. ವಾಸ್ತವವಾಗಿ, ಟ್ವಿಟರ್ ಉದ್ಯೋಗಿಗಳು ಪರಾಗ್ ಅಗರ್ವಾಲ್ ಅವರಿಂದ ಟ್ವಿಟರ್‌ನಲ್ಲಿ ನಡೆಯಲಿರುವ ವಜಾಗೊಳಿಸುವ ಪ್ರಕ್ರಿಯೆ ತಡೆಹಹಿಡಿಯಲು ಯಾವ ಕ್ರಮ ಕೈಗೊಒಳ್ಳುತ್ತಾರೆಮದು ತಿಳಿಯಲು ಇಚ್ಚಿಸಿದ್ದರು.  ಎಲೋನ್ ಮಸ್ಕ್ ಟ್ವಿಟರ್ ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ವಜಾಗೊಳಿಸಲು ಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ. ಇದರೊಂದಿಗೆ ಟ್ವಿಟರ್ ಎಕ್ಸಿಕ್ಯೂಟಿವ್ ಮತ್ತು ಆಡಳಿತ ಮಂಡಳಿಯ ವೇತನವನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಇದರಿಂದ 3 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ ಎಂದು ಅವರು ನಂಬಿದ್ದಾರೆ.

ಭಾರತದ ಎಲಾನ್ ಮಸ್ಕ್ ಯಾರು? ಇಲ್ಲಿದೆ ನೋಡಿ ಸ್ನ್ಯಾಪ್ ಡೀಲ್ ಸಿಇಒ ಕುನಾಲ್ ಬಹ್ಲ್ ನೀಡಿರುವ ಉತ್ತರ

 3.3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸಿದ ವಿಶ್ವದ ನಂ.1 ಕುಬೇರ

ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್‌ ಅನ್ನು ಖರೀದಿಸಲು ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್‌್ಕ ಒಪ್ಪಂದ ಮಾಡಿಕೊಂಡಿದ್ದಾರೆ. 3.3 ಲಕ್ಷ ಕೋಟಿ ರು.ಗಳಿಗೆ ಮಸ್‌್ಕ ಅವರು ಟ್ವೀಟರ್‌ ಅನ್ನು ಖರೀದಿಸುತ್ತಿದ್ದು, ಷೇರುಪೇಟೆಯಲ್ಲಿ ನೋಂದಣಿಯಾದ ಕಂಪನಿಯೊಂದು ಈ ಮೊತ್ತಕ್ಕೆ ಬಿಕರಿಯಾಗಿದ್ದು ಇದೇ ಮೊದಲು ಎಂಬ ಇತಿಹಾಸ ಸೃಷ್ಟಿಯಾಗಿದೆ.

ಟ್ವೀಟರ್‌ನಲ್ಲಿ ಎಲಾನ್‌ ಮಸ್‌್ಕ ಶೇ.9.1ರಷ್ಟುಷೇರುಗಳನ್ನು ಹೊಂದಿದ್ದರು. ತನ್ಮೂಲಕ ಆ ಕಂಪನಿಯ ಅತಿದೊಡ್ಡ ಷೇರುದಾರ ಆಗಿದ್ದರು. ಈ ನಡುವೆ, ಇಡೀ ಕಂಪನಿಯನ್ನೇ ಖರೀದಿಸುವ ಸಲುವಾಗಿ ಅವರು ಟ್ವೀಟರ್‌ಗೆ ಆಫರ್‌ ನೀಡಿದ್ದರು. ಶೇ.91ರಷ್ಟುಷೇರುಗಳನ್ನು ತಲಾ 4150 ರು.ನಂತೆ ಖರೀದಿಸುವುದಾಗಿ ಹೇಳಿದ್ದರು. ಇದೀಗ ನಿರಂತರ ಮಾತುಕತೆ ನಡೆದು, ಮಸ್‌್ಕ ಹೇಳಿದ ದರಕ್ಕೆ ಕಂಪನಿ ಮಾರಾಟ ಮಾಡಲು ಟ್ವೀಟರ್‌ ಒಪ್ಪಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಲಾನ್‌ ಮಸ್‌್ಕ, ವಾಕ್‌ ಸ್ವಾತಂತ್ರ್ಯದ ವೇದಿಕೆಯಾಗಿರುವ ಟ್ವೀಟರ್‌ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅನ್ನಿಸಿದ್ದರಿಂದ ಅದನ್ನು ಖರೀದಿಸಲು ಮುಂದಾದೆ. ಜನರ ವಿಶ್ವಾಸ ಗಳಿಸಿ, ಉತ್ತಮವಾಗಿ ಸೇವೆ ಸಲ್ಲಿಸಲು ಇನ್ನು ಮುಂದೆ ಟ್ವೀಟರ್‌ ಅನ್ನು ಖಾಸಗಿ ಕಂಪನಿಯಾಗಿ ರೂಪಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ, ಖರೀದಿ ವ್ಯವಹಾರ ಪೂರ್ಣಗೊಂಡ ಬಳಿಕ ಟ್ವೀಟರ್‌ ಎಂಬುದು ಖಾಸಗಿ ಒಡೆತನದ ಕಂಪನಿಯಾಗಿರಲಿದೆ ಎಂದು ಟ್ವೀಟರ್‌ ಕೂಡ ಹೇಳಿಕೊಂಡಿದೆ. ಟ್ವೀಟರ್‌ಗೆ ಉದ್ದೇಶವಿದೆ, ಅದರ ಅಸ್ತಿತ್ವ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ಮೂಲದ ಸಿಇಒ ಪರಾಗ್‌ ಅಗ್ರಾವಾಲ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು
ಅಮೆರಿಕ ಬೆದರಿಕೆ ಬೆನ್ನಲ್ಲೇ ಇರಾನ್‌ ಸಮರಾಭ್ಯಾಸ